ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಡಚಣ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸೋಮಶೇಖರ ಪಟ್ಟಣಶೆಟ್ಟಿ ಇವರು ಬಡ ಮಕ್ಕಳ ಆಹಾರ ಮೊಟ್ಟೆ ಕಳ್ಳತನ ಮಾಡಿ ಮಾಡುತ್ತಿರುವ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವೇತನ ತಡೆಹಿಡಿಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುತ್ತಿ ಬಸವೇಶ್ವರ ಮ್ಯಾನ್ ಪವರ್ ಏಜೆನ್ಸಿ ಮೂಲಕ ಮಕ್ಕಳಿಗೆ ನೀಡುವ ಮೊಟ್ಟೆ ಕಳ್ಳತನ ಮಾಡಿರುತ್ತಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದರು ಮಾಹಿತಿ ನೀಡಿರುವುದಿಲ್ಲ. ಉಪ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ ನಂತರ ಉಪ ನಿರ್ದೇಶಕರಿಗೆ ೭ ದಿನಗಳಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶ ಮಾಡಿರುತ್ತಾರೆ. ತಿಂಗಳು ಕಳೆದರೂ ಮಾಹಿತಿ ನೀಡಿದೆ ಇದ್ದ ಕಾರಣ ದಿನಾಂಕ. ೧೮/೦೨/೨೦೨೫ ರಂದು ಕೆ.ಆರ್.ಎಸ್ ಪಕ್ಷದ ಚಡಚಣ ತಾಲೂಕು ಅಧ್ಯಕ್ಷ ಚಂದ್ರಕಾಂತ ನಗರೆ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಣಚಣ ಸೇರಿದಂತೆ ೫ ಜನ ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಹೋಗಿ ಇನ್ನೂ ಮಾಹಿತಿ ನೀಡಿಲ್ಲ ಯಾಕೆ ಎಂದು ಅಲ್ಲಿನ ಮೇಲ್ವಿಚಾರಕರನ್ನು ಕೇಳಿದ್ದಾಗ sಸಿ.ಡಿ.ಪಿ.ಓ. ಅವರನ್ನೇ ಕೆಳಿ ಎಂದು ಹೇಳಿದ್ದರು ಸಿ.ಡಿ.ಪಿ.ಓ. ಅವರಗೆ ಗೆ ಕರೆ ಮಾಡಿ ಕೇಳಿದಾಗ ಮಾಹಿತಿ ಕಳಿಸಿದ್ದೇನೆ ಎಂದು ಸುಳ್ಳು ಹೇಳಿದ್ದರು. ಕರೆ ಕಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕಚೇರಿ ಒಳಗೆ ಸೋಮಶೇಖರ್ ಪಟ್ಟಣಶೆಟ್ಟಿ ಎನ್ನುವ ಒಬ್ಬ ಬಾಡಿಗೆ ಗೂಂಡಾ ಬರುತ್ತಾನೆ ಬಂದವ್ನೆ ಯಾವುದೇ ಮಾಹಿತಿ ಕೇಳಬೇಡಿ ಮತ್ತು ಯಾವುದೇ ಅಂಗನವಾಡಿಗೆ ಭೇಟಿನೀಡಿ ಮೊಟ್ಟೆ ಕಳ್ಳತನದ ಬಗ್ಗೆ ಪ್ರಶ್ನೆ ಮಾಡಬೇಡಿ ಎಂದು ಹೇಳುತ್ತಾನೆ. ಹಣ ಬೇಕಾದರೆ ಕೇಳಿ ೪.೫ ತಿಂಗಳಿಗೆ ನಾನೇ ಕೋಡುತ್ತೆನೆ ತಗೊಂಡು ಸುಮ್ಮನೆ ಹೋಗಬೇಕು ಎಂದು ಬೆದರಿಕೆ ಹಾಕುತ್ತಾನೆ. ಹೀಗೆ ಮುಂದುವರೆದರೆ ನೀವು ಹೋಗುವಾಗ ಲಾರಿ ಹತ್ತಿಸಿ ನಿಮ್ಮ ಕತೆ ಮುಗಿಸಿ ಬಿಡುತ್ತಾರೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ. ಈ ಹಿಂದೆ ಚಡಚಣ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರು ಕೆಆರ್‌ಎಸ್ ಪಕ್ಷದ ಅಣ್ಣಪ್ಪ ಪೂಜಾರಿಗೆ ಕರೆ ಮಾಡಿ ಬೆದರಿಕೆ ಹಾಕಿರುತ್ತಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಸೋಮಶೇಖರ್ ಪಟ್ಟಣಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರಕರಣ ಇತ್ಯರ್ಥ ಆಗುವರೆಗೆ ಚಡಚಣ ಅಂಗನವಾಡಿ ಕಾರ್ಯಕರ್ತೆಯರ ವೇತನ ನೀಡಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ. ಜಿಲ್ಲಾಧಿಕಾರಿಗಳಿಗೆ. ಉಪ ನಿರ್ದೇಶಕರಿಗೆ ಕೆ ಆರ್ ಎಸ್ ಪಕ್ಷದ ತಾಲೂಕು ಅಧ್ಯಕ್ಷ ಚಂದ್ರಕಾಂತ ನಗರೆ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಣಚಣ. ಜಿಲ್ಲಾ ಕಾರ್ಯದರ್ಶಿ ದುರ್ಗಪ್ಪ ಬೂದಿಹಾಳ, ರಮ್ಜಾನ್ ಕೊಂಕಣಿ. ಗೋರ್ಕನಾಥ ಚವಾಣ್. ವಿಕ್ರಂ ವಾಘ್ಮೋರೆ. ಅಣ್ಣಪ್ಪ ಪೂಜಾರಿ. ಸದಾಶಿವ ಹಜೇರಿ, ಮಲ್ಲು ಬಿರಾದಾರ. ರಾವತಪ್ಪಾ ಇನ್ನಿತರರು ಉಪಸ್ಥಿತರಿದ್ದರು.

