ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿ ಮೃತರಾದವರ ಸಾಗಾಟಕ್ಕೆ ವಾಹನ ವ್ಯವಸ್ಥೆಯಿಲ್ಲದ ಕಾರಣ ಪುರಸಭೆ ಅಧ್ಯಕ್ಷರಾದ ಶಾಂತವೀರ ಬಿರಾದಾರ ಅವರು ತಮ್ಮ ಅಣ್ಣನಾದ ದಿ.ರವಿಕುಮಾರ ಬಿರಾದಾರ ಅವರ ದ್ವಿತೀಯ ಪುಣ್ಯಸ್ಮರಣೆಯ ನಿಮಿತ್ಯ ಸಿಂದಗಿ ಪುರಸಭೆಗೆ ವೈಯಕ್ತಿಕ ವೆಚ್ಚದಲ್ಲಿ ಮುಕ್ತಿ ವಾಹನ ಕೊಡುಗೆಯಾಗಿ ನೀಡುತ್ತಿದ್ದು, ಈ ವಾಹನವನ್ನು ಫೆ.೨೨ರಂದು ಬೆಳಿಗ್ಗೆ ೧೧ಗಂಟೆಗೆ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಜರುಗುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುರಸಭೆಗೆ ಹಸ್ತಾಂತರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
