ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ
ದೇವರನಾವದಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವರನಾವದಗಿ ಕ್ಲಸ್ಟರ್ ನ ಎಫ್ ಎಲ್ ಎಂ ಕಲಿಕಾ ಹಬ್ಬವನ್ನು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ದಿನಾಂಕ:20/2/2025 ರಂದು ಹೆಚ್ ಪಿಎಸ್ ದೇವರನಾವದಗಿ ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇವರನಾವದಾಗಿ ಕ್ಲಸ್ಟರ್ ಎಲ್ಲ ಸರಕಾರಿ ಶಾಲೆಗಳ ಮಕ್ಕಳು ಓದು ಬರಹ ಗಣಿತ ಹಾಗು ಕಥೆ ಹೇಳುವ ಕಲಿಕಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.
ಕಲಿಕಾ ಹಬ್ಬದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಎನ್ ವಿ. ನಿಂಬರಗಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಲಿಕಾ ಹಬ್ಬವು ಮಕ್ಕಳ ಕಲಿಕೆಯನ್ನು ದೃಢೀಕರಿಸುವ ವೇದಿಕೆಯಾಗಿದ್ದು ಗುಣಾತ್ಮಕ ಶಿಕ್ಷಣ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಲಿಕಾ ಹಬ್ಬವನ್ನು ಬಮ್ಮನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಸ್ ಗೀತಾ ರವರು ಉದ್ಘಾಟಿಸಿದರು. ಶ್ರೀ ಶ್ರೀಮಂತ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ದೇವರ ನಾವದಾಗಿ ಕ್ಲಸ್ಟರನ ಎಲ್ಲ ಮುಖ್ಯ ಗುರುಗಳು ನೋಡಲ್ ಶಿಕ್ಷಕರು ನಿರ್ಣಾಯಕರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು

