Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಂತೋಷ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣ ನಿರ್ಮಾಣ ಹಾಗೂ ಪ್ರೇರಣೆಗೆ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಹೇಳಿದರು.ತಾಲ್ಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಶನಿವಾರ ಜರುಗಿದ ಕಲಕೇರಿ ವಲಯ ಮಟ್ಟದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವು ತರಗತಿಯ ಹೊರಗಡೆ ನಡೆಯುವುದರಿಂದ ಮಕ್ಕಳು ಅತಿ ಸಂತಸದಿAದ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಬಲವರ್ಧನೆಗೆ ಈ ಕಲಿಕಾ ಹಬ್ಬವು ಸಾಕಷ್ಟು ಪರಿಣಾಮಕಾರಿಯಾಗುವುದರ ಜೊತೆಗೆ ಇದು ಸಮುದಾಯದ ಮುಂದೆ ಜರುಗುವುದರಿಂದ ಪೋಷಕರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತಾಗುತ್ತದೆ. ಅಲ್ಲದೇ ಶಾಲೆಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದರು.ಕಲಕೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ನಾಯ್ಕೋಡಿ ಮಾತನಾಡಿ, ಕಲಿಕಾ ಹಬ್ಬದಿಂದ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳು ತಮ್ಮೊಳಗಿನ ಉತ್ತಮ ಹವ್ಯಾಸ ಹಾಗೂ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಾದರಿ ಪ್ರಾಥಮಿಕ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ : ಜೀವನ ಸಾಧನೆಗೆ ಉತ್ತಮ ಗುರಿ ಹೊಂದುವುದು ಇಂದಿನ ಪ್ರತಿಯೊಬ್ಬರ ಅಗತ್ಯತೆಯಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಬಂದೇನವಾಜ್ ಕೋರಬು ಹೇಳಿದರು.ಪಟ್ಟಣದ ಮಹಾತ್ಮಾಗಾಂದಿ ಮೆಮೋರಿಯಲ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ವಾರ್ಷಿಕೋತ್ಸವ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು, ಮಕ್ಕಳಲ್ಲಿ ಅಗಾಧ ಶಕ್ತಿ ಸಾಮರ್ಥ್ಯವಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಓದು ಒಂದೇ ಗುರಿ ಹಾಗೂ ಪರಿಹಾರ ಅದಕ್ಕಾಗಿ ಸದಾ ಅಧ್ಯಯನಶೀಲರಾಗಿ ಮುಂದುವರೆದು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕೆಂದು ಶುಭ ಕೋರಿದರು.ಸಂಸ್ಥೆಯ ಅಧ್ಯಕ್ಷ ಎ.ಎಂ.ತಾಂಬೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆಯಾಗಿದೆ. ಮುಂದಿನ ವರ್ಷದಿಂದ ಪದವಿ ಕಾಲೇಜನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕಬೂಲ್ ಕೊಕಟನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಂತನಶೀಲ ವಿದ್ಯಾರ್ಥಿಗಳಿಂದ…
ಲೇಖನ- ಬಸವರಾಜು ಆರ್ ಪೂಜಾರಹವ್ಯಾಸಿ ಬರಹಗಾರರುಯ ಬೂದಿಹಾಳ ಉದಯರಶ್ಮಿ ದಿನಪತ್ರಿಕೆ ಜಗತ್ತು ಅತ್ಯಂತ ಮುಂದುವರೆದರೂ ಭೂಮಾಪನ ಕಾರ್ಯದಲ್ಲಿ ಅದೇ ಹಳೆ ಪದ್ದತಿಯನ್ನು ಬಳಸುವುದು ಅಮಾನವೀಯ, ಆಧುನಿಕ ಕಾಲದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ರೋವರ್ ಎಂಬ ಆಧುನಿಕ ತಂತ್ರಜ್ಞಾನ ಉಳ್ಳ ಯಂತ್ರವನ್ನು ಭೂಮಾಪನ ಮಾಡಲು ಬಳಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಹೊಸ ಹೆಜ್ಜೆ ಇಟ್ಟಿದ್ದು ಒಂದು ಮೈಲುಗಲ್ಲೆ ಸರಿ. ಈ ರೋವರ್ ಸರ್ವೆಯು ಸೆಟ ಲೈಟ್ ಆಧರಿತವಾದ ಅಳತೆ ಮಾಡುವ ಮಾಪನವಾಗಿದ್ದು .ಇದು ಈ ಹಿಂದೆ ಮಾಡುವ ಚೈನು ಆಧಾರಿತ ಸರ್ವೆಗಿಂತ ಸ್ವಲ್ಪ ಬಿನ್ನವಾಗಿರುತ್ತದೆ. ಚೈನು ಆಧರಿತ ಸರ್ವೆಗೆ ಕನಿಷ್ಠ ಮೂರು ಜನ ಸಿಬ್ಬಂದಿ ಒಳಗೊಂಡಂತೆ ಕನಿಷ್ಠ 50 ರಿಂದ 180 ನಿಮಿಷಗಳು ಬೇಕಾಗುತ್ತಿತ್ತು ತದ ನಂತರ ಸರ್ವೆ ಪೂರ್ಣಗೊಂಡು ಆ ದಾಖಲೆಗಳನ್ನು ತಯಾರಿಸಲು ಕನಿಷ್ಠ ಮೂರು ರಿಂದ ಐದು ಗಂಟೆ ಕಾಲಾವಧಿ ತೆಗೆದುಕೊಳ್ಳುತ್ತಿತ್ತು. ಅನಾವ್ಯಶಕವಾಗಿ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳುವುದು ಮತ್ತು ಸಮಯ ಉಳಿಸಲು ರೋವರ್ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಎಜುಕೇಶನಲ್ ಅಸೋಸಿಯೇಶನ್ ಆಡಳಿತ ಮಂಡಳಿಯ 2025-2030 ರ ಅವಧಿಗೆ ನಡೆದ ಚುನಾವಣೆಯಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಚುನಾವಣೆ ನಿರ್ವಾಚಣಾಧಿಕಾರಿ ಅಶೋಕ ಎಚ್. ಮಲಘಾಣ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಅಲ್ಲದೇ, ಉಪಾಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಕೆ ಪಾಟೀಲ, ಪ್ರಧಾನಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿ ಸದಸ್ಯರಾಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಅಶೋಕ ಜಿ. ವಾರದ (ಸಿಂದಗಿ), ಸಂಗಪ್ಪ ಗುರಪ್ಪ ಸಜ್ಜನ (ವಿಜಯಪುರ), ಸಿದ್ದರಾಮಯ್ಯ ನಿಜಗುಣಯ್ಯ ಮಠ ವಕೀಲರು (ವಿಜಯಪುರ), ಅಮಗೊಂಡ ಮದುಗೌಡ ಪಾಟೀಲ (ಬಿಜ್ಜರಗಿ), ಬಾಪುಗೌಡ ಭೀಮನಗೌಡ ಪಾಟೀಲ (ಶೇಗುಣಶಿ), ಡಾ. ಅನಿಲಕುಮಾರ ಬಾಪುಗೌಡ…
ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅಂಥ ಶ್ವಾನ ಪ್ರದರ್ಶನ ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಶಸಂಸಿದರು.ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾತ್ರಿ ವೇಳೆ ಎಲ್ಲರೂ ನಿದ್ರೆಗೆ ಜಾರಿದ ವೇಳೆ ಶ್ವಾನಗಳು ಸದಾ ಜಾಗೃತಿಯಿಂದಿದ್ದು, ಕುಟುಂಬ ಸದಸ್ಯರನ್ನು ರಕ್ಷಣೆ ಮಾಡುತ್ತವೆ. ಅಂಥ ಶ್ವಾನಗಳೆಂದರೆ ಎಲ್ಲರಿಗೂ ಬಲು ಪ್ರೀತಿ ಎಂದರು.ಆದರೆ ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ವತಿಯಿಂದ ಸಂತಾನಹರಣ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದನ್ನು ಪ್ರಶಂಸಿದರು. ಇಂಥ ಪ್ರದರ್ಶನವನ್ನು ಜಿಲ್ಲಾ ಪಶು…
ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (ಮಿನಿ ಪ್ಲಾನೆಟೇರಿಯಂ) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು ₹56.88 ಕೋಟಿ ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್ಟಿನಲ್ಲೇ ವಿಜಯಪುರವೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ ₹12.88 ಕೋಟಿಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.ವಿಜಯಪುರದಲ್ಲಿ ಈ ಯೋಜನೆಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಅದು ಅಂತಿಂಥಹ ಗೂಳಿಯಲ್ಲ. ಶಿಷ್ಯನನ್ನು ಪರೀಕ್ಷಿಸಿದ ಗೂಳಿ, ಶಿಷ್ಯನಿಂದ ಪರೀಕ್ಷೆಗೆ ಒಳಗಾದ ಗುರುವಿನ ಗೂಳಿ, ಪರೀಕ್ಷೆಯಲ್ಲಿ ಪಾಸಾದ ಪವಾಡ ತೋರಿ ಬಲಾಢ್ಯವಾದ ಗುರುವಿನ ಗೂಳಿ ಲಿಂಗೈಕ್ಯವಾದರೂ ಶಿಷ್ಯ ತೋರಿದ ಗುರುಭಕ್ತಿ ಗುರುವಿನ ಗೂಳಿಗೆ ರಕ್ಷಣೆ ನೀಡಿದ್ದು ಎಂತದ್ಧು ಎಂದರೆ ಲೋಕ ಕಲ್ಯಾಣಕ್ಕಾಗಿ ತಪಸ್ಸುಗೈದ ರುದ್ರ ಭೂಮಿಯಲ್ಲಿ ಸುಮಾರು ೬ ರಿಂದ ೮ ಅಡಿ ಆಳದಲ್ಲಿ ವಿಷಜಂತೂ ಮುಟ್ಟದಂತೆ, ಮಣ ್ಣನ ಭಾರವೂ ಆಗದಂತೆ, ಗಟ್ಟಿಮುಟ್ಟಾದ ಕರಿ ಕಲ್ಲಿನ ಗಚ್ಚಿನ ಗೋಡೆ, ಮೇಲೆ ಕಲ್ಲಿನ ಛಾವಣಿಯ ಛತ್ ನಿರ್ಮಿಸಿ ಲಿಂಗೈಕ್ಯ ಗೂಳಿಗೆ ರಕ್ಷಾ ಕವಚ ನಿರ್ಮಿಸಿದ ಶಿಷ್ಯ ಕೂಗಳತೆಯ ದೂರದಲ್ಲಿ ತಾನೂ ಸಮಾಧಿಸ್ಥನಾಗಿ ಭೂಗರ್ಭದಲ್ಲೂ ಮೊದಲು ಗುರುವಿನ ದರ್ಶನ ನಂತರ ತನ್ನ ದರ್ಶನ ಎಂದು ಗುರುವಿನತ್ತ ಚಿತ್ತ ಹರಿಸಿ ಗುರುಭಕ್ತಿ ಮೆರೆದ ತಾಲ್ಲೂಕಿನ ಲಚ್ಯಾಣ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಕ್ಷೇತ್ರದತ್ತ ಈಗ ಭಕ್ತರ ಚಿತ್ತ ನೆಟ್ಟಿದೆ.ಹೌದು, ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಬಂಥನಾಳದ ಗ್ರಾಮದಲ್ಲಿ ಶ್ರೀ ವೃಷಭಲಿಂಗೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಇದೇ ಫೆಬ್ರುವರಿ 26 ರಿಂದ ಮಾರ್ಚ 1ರ ವರೆಗೆ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.ಫೆ. 26 ರಂದು ಬಂಥನಾಳ ಮಠದ ಪೀಠಾಧೀಶರಾದ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಮಹಾ ಶಿವರಾತ್ರಿ ಯ ಅಂಗವಾಗಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಫೆ.28 ರಂದು ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಲಿದೆ. ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ಸಿಂದಗಿ ಶಾಸಕ ಅಶೋಕ ಮನಗೂಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಡಿ. ಪಾಟೀಲ ಭಾಗವಹಿಸಲಿದ್ದಾರೆ.ತದನಂತರ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಶಾರೀರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಕ್ಕೆ ಜಗದ್ಗುರು ಪೀಠದ ಪೂಜ್ಯರ ತುಲಾಭಾರ ಸೇವೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಗಾಯತ್ರಿ ಜಪ ಯಜ್ಞ ಹಾಗೂ ರಗೂ ಹೊಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ ೩೬ ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಪಿಸಲಾಯಿತು.ಅತ್ಯಂತ ಪ್ರಭಾವಶಾಲಿ, ಪರಮ ಪವಿತ್ರ ಮತ್ತು ಚತುರ್ವೇದ ಸಾರವಾಗಿರುವ ಗಾಯತ್ರಿ ಮಂತ್ರ ನಿತ್ಯ ಪಠಣದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಜೀವನದಲ್ಲಿ ಉತ್ಸಾಹ, ದೇಹದಲ್ಲಿ ಚೈತನ್ಯ, ಮುಖದಲ್ಲಿ ತೇಜಸ್ಸು ಮೂಡುತ್ತದೆ. ಕ್ರೋಧ ನಿಯಂತ್ರಿಸಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ಲüಸುತ್ತದೆ. ದಾರಿ ತಪು$สสತ್ತಿರುವ ಯುವ ಜನತೆಯನ್ನು ಸನ್ಮಾರ್ಗದತ್ತ ತರುವ ಪ್ರಯತ್ನವಾಗಿ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶನಿವಾರ ಬೆಳಗ್ಗೆ ೮ಕ್ಕೆ ಮಹಾರುದ್ರಹೊಮ ಪ್ರಾರಂಭವಾಯಿತು. ೧೧ಜನ ಋತ್ವಿಜರು ಹೊಮದ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪಂ.ಮಧ್ವಾಚಾರ್ಯ ಮೊಕಾಶಿ ನೇತೃವದಲ್ಲಿ ನಡೆದ ಗಾಯತ್ರಿ ಜಪ ಯಜ್ಞದಲ್ಲ್ಲಿ ೨೨ ಜನ ಋತ್ವಿಜರು ಪಾಲ್ಗೊಂಡಿದ್ದರು. ಮಹಿಳೆಯರು ಪಠಿಸಿದ ೧೪…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕ್ದೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜಶೇಖರ ಬಸವಂತಪ್ಪಾ ಹೊಸಮನಿ, ಉಪಾಧ್ಯಕ್ಷರಾಗಿ ಚನಬಸಪ್ಪ ರೇವಣಸಿದ್ದಪ್ಪ ಮಸಳಿ, ನಿದೇಶಕರಾಗಿ ಬಾಬಾಗೌಡ ರುದ್ರಗೌಡ ಪಾಟೀಲ, ಭೀರಪ್ಪ ಪೂಜಪ್ಪ ಪೂಜಾರಿ, ಶರಣಪ್ಪ ಮಲ್ಲಪ್ಪ ಹೊಸಮನಿ, ಸಿದರಾಯ ಘಂಟೆಪ್ಪ ಲೋಣ , ಅಂಬಿಕಾ ಸುನೀಲ ಬಿರಾದಾರ, ಮಹಾದೇವಿ ಜಟ್ಟೆಪ್ಪ ಗೌಡಗಾವಿ, ಶ್ರೀಮಂತ ನಾಗಪ್ಪ ಲೋಣ , ದಯಾನಂದ ಸದಪ್ಪ ಹಟ್ಟಿ ಉರ್ಫ ಹಿರೋಳಿ, ನಿಂಗಪ್ಪ ಯಮನಪ್ಪ ಸಮಗಾರ, ಬಾಲಪ್ಪ ಪೂಜಪ್ಪ ನಾಯಿಕೊಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ ಆಫೀಸರ್ ಕಲ್ಲನಗೌಡ ಪಾಟೀಲ ಮತ್ತು ಮಖ್ಯ ಕಾರ್ಯನಿರ್ವಾಕ ಉಮೇಶ ಹೊಸಮನಿ ಘೋಷಿಸಿದರು.
