ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಎಜುಕೇಶನಲ್ ಅಸೋಸಿಯೇಶನ್ ಆಡಳಿತ ಮಂಡಳಿಯ 2025-2030 ರ ಅವಧಿಗೆ ನಡೆದ ಚುನಾವಣೆಯಲ್ಲಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಚುನಾವಣೆ ನಿರ್ವಾಚಣಾಧಿಕಾರಿ ಅಶೋಕ ಎಚ್. ಮಲಘಾಣ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಅಲ್ಲದೇ, ಉಪಾಧ್ಯಕ್ಷರಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಕೆ ಪಾಟೀಲ, ಪ್ರಧಾನಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿ ಸದಸ್ಯರಾಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಅಶೋಕ ಜಿ. ವಾರದ (ಸಿಂದಗಿ), ಸಂಗಪ್ಪ ಗುರಪ್ಪ ಸಜ್ಜನ (ವಿಜಯಪುರ), ಸಿದ್ದರಾಮಯ್ಯ ನಿಜಗುಣಯ್ಯ ಮಠ ವಕೀಲರು (ವಿಜಯಪುರ), ಅಮಗೊಂಡ ಮದುಗೌಡ ಪಾಟೀಲ (ಬಿಜ್ಜರಗಿ), ಬಾಪುಗೌಡ ಭೀಮನಗೌಡ ಪಾಟೀಲ (ಶೇಗುಣಶಿ), ಡಾ. ಅನಿಲಕುಮಾರ ಬಾಪುಗೌಡ ಪಾಟೀಲ (ಲಿಂಗದಳ್ಳಿ), ಕುಮಾರ ಚಂದ್ರಕಾಂತ ದೇಸಾಯಿ (ಜೈನಾಪುರ), ಕಲ್ಲನಗೌಡ ಕಾಶಿರಾಯಗೌಡ ಪಾಟೀಲ (ತೊರವಿ), ವೀರನಗೌಡ ಶಿವನಗೌಡ ಪಾಟೀಲ (ಬಬಲೇಶ್ವರ), ಮಹೇಶ ಬಾಪುಗೌಡ ಪಾಟೀಲ (ಕುಮಠೆ) ಹಾಗೂ ಬಸನಗೌಡ ಮಲ್ಲನಗೌಡ ಪಾಟೀಲ (ರಾಹುಲ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ನಿರ್ವಾಚಣಾಧಿಕಾರಿ ಅಶೋಕ ಎಚ್. ಮಲಘಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

