Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಜ್ಯದಲ್ಲಿ ವಾಸಿಸುವ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಟ್ಟು ಉತ್ತಮ ಆಡಳಿತ ನೀಡಿದ ಮುಖ್ಯಮಂತ್ರಿಯಂದರೆ ಅದು ಬಿ.ಎಸ್. ಯಡಿಯೂರಪ್ಪನವರು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ೮೩ ನೇ ಹುಟ್ಟು ಹಬ್ಬವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಆಚರಣೆ ಮಾಡಿ ನಂತರ ಸರಕಾರಿ ದವಾಖಾನೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಆಹಾರ ಪದಾರ್ಥ ಹಂಚಿ ಮಾತನಾಡಿದರು.ಸಂಘ ಪರಿವಾರದ ವ್ಯಕ್ತಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಕೋಟ್ಯಾಂತರ ಕಾರ್ಯಕರ್ತರ ಬಲವನ್ನು ಸಂಘಟಿಸಿ ಮೊಟ್ಟ ಮೊದಲ ಬಾರಿಗೆ ದಕ್ಷೀಣ ಭಾರತದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣೆ ಹಿಡಿಯಲು ಕಾರಣಿಕರ್ತರಾದವರು ಎಂದರು.ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಅನೀಲಕುಮಾರ ಗಾಣಿಗೇರ, ಎಸ್.ಎಮ್. ಪಾಟೀಲ, ಇಸ್ಮಾಯಿಲಸಾಬ ತಹಶೀಲ್ದಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಈರಯ್ಯ ಹಲಗಯ್ಯ ಮಠಪತಿ, ಮಳೆಪ್ಪ ಬರಗಿ, ಸಂಗಪ್ಪ ಅಥಣಿ, ಶೇಖರಯ್ಯ ಮಠಪತಿ, ರಮೇಶ ಗಣಿ, ಮಲ್ಲಪ್ಪ ಬಾಟಿ ಅನೇಕರು ಇದ್ದರು.

Read More

ದಕ್ಷಿಣ ರಾಜ್ಯಗಳ ಜತೆ ಮಾತುಕತೆ | ಜೀತದಾಳುಗಳಂತೆ ಬಾಯಿಗೆ ಬೀಗ ಹಾಕಿಕೊಂಡಿರುವ ಬಿಜೆಪಿ-ಜೆಡಿಎಸ್ ಸಂಸದರು | ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಬೆಂಗಳೂರು: ಕೇಂದ್ರದ ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸಂಸದರು ಜೀತದಾಳುಗಳಂತೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಬಳಿಕ ದಕ್ಷಿಣ ಭಾರತದ ರಾಜ್ಯಗಳ ಒಂದೇ ಒಂದು ಕ್ಷೇತ್ರ ಸಹ ಕಡಿಮೆಯಾಗಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.ಕೇಂದ್ರ ಗೃಹ ಸಚಿವರ ಈ ಹೇಳಿಕೆಯನ್ನು ನೋಡಿದರೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಿಂದ ಐದು ಕಿ.ಮಿ.ದೂರದ ಹಳೇ ಕೊಲ್ಹಾರ ಕೃಷ್ಣಾ ನದಿ ತಟದಲ್ಲಿರುವ ಶೀಲವಂತ ಹಿರೇಮಠದಲ್ಲಿ ಮಹಾ ಶಿವರಾತ್ರಿ ಜಾಗರಣೆ ನಿಮಿತ್ಯವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಹು ವಿಜ್ರಂಭಣೆಯಿಂದ ಜರುಗಿದವು.ಮಠದಲ್ಲಿರುವ ಒಂದು ಸಾವಿರದಾ ಎಂಟು ಶಿವಲಿಂಗಗಳ ದರುಶನವನ್ನು ನೂರಾರು ಭಕ್ತರು ಪಡೆದುಕೊಂಡು ರಥೋತ್ಸವದಲ್ಲಿ ಪಾಲ್ಗೋಂಡರು ವಿವಿದ ಗ್ರಾಮಗಳಿಂದ ಆಗಮಿಸಿದ ಶ್ರಿಗಳ ಹಾಗೂ ಕೈಲಾಸನಾಥ ಮಹಾಸ್ವಾಮಿಗಳ ಅಮೃತ ವಾಣಿಯಿಂದ ವೇದ ಮಂತ್ರಗಳು ನುಡಿಯಲ್ಪಟ್ಟವು ಆಗಮಿಸಿದ ಮುತೈದೆಯರಿಗೆ ಉಡಿ ತುಂಬುವದು ಹಾಗೂ ನೆರೆದ ಭಕ್ತಾಧಿಗಳು ಬಾಳೆಹಣ್ಣು, ಖರ್ಜೂರ, ಶೇಂಗಾ, ದ್ರಾಕ್ಷಿ ಇನ್ನಿತರ ಉಪವಾಸ ಆಚರಣೆಯ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಮಾಡಿ ಭಕ್ತರು ಕೂಡಾ ಸೇವಿಸಿದರು.ನಂತರ ಮಠದ ಆವರಣದಲ್ಲಿ ಜನ ಜಾಗೃತಿ ಧರ್ಮಸಭೆ ಜರುಗಿತು.ಈ ಸಭೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಫಲವತ್ತತೆಯ ಫಲ ಕೊಡುವ ಪ್ರೀತಿಯಿಂದ ಭಕ್ತರ ಕಾಯುವ ಶಕ್ತಿಸ್ವರೂಪಿಣಿ ಪಾರ್ವತಿ ದೇವಿ ಹಾಗೂ ಶಿವನ ದೈವಿಕ ವಿವಾಹ ಗುರುತಿಸುವ ವಿಶೇಷ ದಿನವೇ ಮಹಾಶಿವರಾತ್ರಿಯಾಗಿದೆ ಎಂದರು.ಕತ್ತಲೆ ತುಂಬಿದ ಅಜ್ಞಾನದ ಅಂದಕಾರವನ್ನು ಹೋಗಲಾಡಿಸಿ…

Read More

ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.ಅಲ್ಲಿ ಮಾತನಾಡಿದ ಮುಖಂಡ ಬಸವರಾಜ ಪಾಟೀಲ ಹಂಜಗಿ ಕಾಲುವೆಯ ನೀರು ತಾಂಬಾ ಗ್ರಾಮದ ವರೆಗೆ ಸರಿಯಾಗಿ ಬರುತ್ತದೆ. ನಂತರ ಹಂಜಗಿ ಗ್ರಾಮದ ವರೆಗೆ ಸ್ವಲ್ಪ ಪ್ರಮಾಣದಲ್ಲಿ ಬರುತ್ತದೆ. ಗುತ್ತಿ ಬಸವಣ್ಣ ಕಾಲುವೆಯಲ್ಲಿ ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ತುಂಬಿದೆ. ಗಿಡಗಂಟಿಗಳಿವೆ. ಹೀಗಾಗಿ ನೀರು ಕಾಲುವೆಯಲ್ಲಿ ಹರಿದು ಹೋಗದೆ ಬೇರೆ ಕಡೆಗೆ ಹೋಗುತ್ತದೆ. ಅಧಿಕಾರಿ ಗಳ ನೀರ್ಲಕ್ಷದಿಂದ ನೀರು ಸರಿಯಾಗಿ ಕೊನೆಯ ಭಾಗದ ವರೆಗೂ ಹರಿಯುತ್ತಿಲ್ಲ ಎಂದರು.ಕೆಂಚಪ್ಪ ನಿಂಬಾಳ ಮಾತನಾಡಿದರು.ಪ್ರತಿಭಟನೆಯಲ್ಲಿ ಜಟ್ಟೆಪ್ಪ ಸಾಲೋಟಗಿ, ಲಾಯಪ್ಪ ಉಪ್ಪಾರ, ಸುರೇಶ ಜೇವೂರ, ಹಣಮಂತ ಮಸಳಿ, ಶರಣಪ್ಪ ಗುಂದಗಿ, ಗುರಪ್ಪ ಅಗಸರ, ರಮೇಶ ದಳವಾಯಿ, ಬಾಳು ಕೊಟಗೊಂಡ, ಶ್ರೀಮಂತ ಉಪ್ಪಾರ, ಸಿದ್ದಪ್ಪ ಕರಂಡೆ, ದಯಾನಂದ ಕಂಟಗೊಂಡ, ಜಟ್ಟೆಪ್ಪ ತಳವಾರ ಹಾಗೂ ಅಂಜುಟಗಿ, ಹಿರೇರೂಗಿ,ತಡವಲಗಾ ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಮಾಧ್ಯಮರಂಗ ಫೌಂಡೇಶನ್ ೨ನೇ ವರ್ಷಾಚರಣೆ ನಿಮಿತ್ತ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಡಾ.ಇಲಿಯಾಸ್ ಜಾಲಿಗೇರಿ ಅವರ ಜಾಲಿಗೇರಿ ಆಸ್ಪತ್ರೆ, ಡಾ.ಅರ್ಜುನ ಗೊಟಗುಣಕಿ ಅವರ ಪಾರ್ವತಿ ಲೈಫ್ ಲೈನ್ ಆಸ್ಪತ್ರೆ ಹಾಗೂ ಡಾ.ಚನ್ನಬಸವ ಗೊಟಗುಣಕಿ ಅವರ ಮುಗುಳ್ನಗೆ ಹಲ್ಲಿನ ದವಾಖಾನೆ ಅವರ ಸಹಕಾರೊಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.ಪಟ್ಟಣದ ಬಸವ ಮಂಟಪದಲ್ಲಿ ಫೆ.೨೮, ಶುಕ್ರವಾರ ಬೆಳಿಗ್ಗೆ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ತಪಾಸಣೆ ನಡೆಯಲಿದೆ. ಬಿಪಿ, ಶುಗರ್, ಹೃದಯ ಸಂಬಂಧಿತ ಸಮಸ್ಯೆ, ಸೊಂಟ, ಮೊಳಕಾಲು ನೋವು, ಹಲ್ಲು ಮತ್ತು ವಸಡಿನ ಸಮಸ್ಯೆ ಸೇರಿದಂತೆ ಹಲ್ಲಿಗೆ ಸಂಬಂಧಿಸಿದ ತೊಂದರೆಗಳ ತಪಾಸಣೆಯನ್ನು ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆಯಬೇಕೆಂದು ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ, ಪತ್ರಕರ್ತ ನಾಗೇಶ ತಳವಾರ ತಿಳಿಸಿದ್ದಾರೆ.ಆರೋಗ್ಯ ಶಿಬಿರವನ್ನು ಶ್ರೀ ಮಾತಾ ಆಸ್ಪತ್ರೆಯ ಡಾ.ಶಿವಕುಮಾರ ಪಶುಪತಿಮಠ ಉದ್ಘಾಟಿಸಲಿದ್ದಾರೆ. ಸಂಗಮೇಶ್ವರ ಆಸ್ಪತ್ರೆಯ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಾಚೀನ ಕಾಲದಿಂದಲೂ ಸಿಂದಗಿಗೆ ತನ್ನದೇ ಆದ ಚಾರಿತ್ರಿಕ ಹಿನ್ನಲೆ ಇದೆ. ಸಿಂದಗಿ ಬಹು ಸಂಸ್ಕೃತಿಗಳ ತವರೂರು ಎಂದು ಸಿ.ಎಮ್.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ಥಳಿಯ ಅವ್ವಾ ಫೌಂಡೇಶನ್ ಸಿಂದಗಿ ಹಾಗೂ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ಘಟಕದ ಸಹಯೋಗದಲ್ಲಿ ನಡೆದ ೧೮೨೪ರ ಸಿಂದಗಿ ಬಂಡಾಯದ ೨೦೦ನೇ ವರ್ಷಾಚರಣೆ ಸವಿನೆನಪಿಗಾಗಿ ಸಿಂದಗಿ ಚಾರಿತ್ರಿಕ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಿಂದಗಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಾಲಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಅದರ ಸಾಧಕ ಬಾಧಕಗಳ ಕುರಿತಾಗಿ ಚರ್ಚಿಸಿ ನಶಿಸಿ ಹೋಗುತ್ತಿರುವ ದೇವಾಲಯಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು ಎಂದರು.ಈ ವೇಳೆ ಹುನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಿಂಗರಾಜ ಅಸ್ಕಿ ಮಾತನಾಡಿ, ಸಿಂದಗಿ ಸಮ್ಮಿಶ್ರ ಸಂಸ್ಕೃತಿಯ ತವರು ನೆಲೆ. ಮೌರ್ಯರ ಕಾಲದಿಂದ ಯಾದವರ ಕಾಲದವರೆಗೂ ಸಿಂದಗಿಯನ್ನು ವಿವಿಧ ರಾಜಮನೆತನಗಳು ಆಳಿವೆ ಆದರೆ ರಾಷ್ಟ್ರಕೂಟರ ಕಾಲದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬ ಮಾತಿನಂತೆ ಮಕ್ಕಳಿಗೆ ಸಂಸ್ಕಾರ ನೀಡುವಂತ ಜ್ಞಾನವನ್ನು ನೀಡಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅವರಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸ ಪಿ.ವಿ.ನವಲಿಮಠ ಸಲಹೆ ನೀಡಿದರು.ಪಟ್ಟಣದ ಹೂಗಾರ ಲೇಔಟನಲ್ಲಿರುವ ಸಮತಾ ಸಂಸ್ಥೆಯ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ವಾರ್ಷಿಕ ಕಲರವ ೨ಕೆ೨೫ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಜೀವಿಗಳಿಗಿಂತ ಮನುಷ್ಯ ಬುದ್ದಿಜೀವಿ. ತನಗೆ ಏನು ಬೇಕು ಅದನ್ನು ಸಾಧಿಸುವ ಬುದ್ದಿ ಶಕ್ತಿಯನ್ನು ಹೊಂದಿದ್ದಾನೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತರೆ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನಿಲ್ಲುತ್ತೆ ಎಂದರು.ಕಾರ್ಯಕ್ರಮವನ್ನು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ ವಿ.ಬಿ.ಕುರಡಿ ಅವರು ಸಸಿಗೆ ನೀರೂಣಿಸುವ ಮೂಲಕ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿ ಪತ್ರಕರ್ತ ನಾಗೇಶ ತಳವಾರ ಮಾತನಾಡಿದರು. ಇನ್ನೋರ್ವ ಪಾಲಕ…

Read More

ಮಾ.೧ರಿಂದ ೨೦ರವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಇದೇ ಮಾ.೧ರಿಂದ ೨೦ರವರೆಗೆ ಜಿಲ್ಲೆಯ ೬೩ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಸುವ್ಯವಸ್ಥಿತ ಪರೀಕ್ಷೆಗಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶವನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಕಲಂ ೧೬೩ರನ್ವಯ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಇತರರು ಮೊಬೈಲ್ ಫೋನ್‌ನ್ನು ತರುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ ಅಂಗಡಿಗಳು, ಕಂಪ್ಯೂಟರ ಸೆಂಟರ್‌ಗಳು, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ತೆರೆಯದಂತೆ ನಿಷೇಧಿಸಿ ಆದೇಶಿಸಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪುಸ್ತಕಗಳು, ಎಲೆಕ್ಟಾçನಿಕ್ ಗೆಜೆಟ್‌ಗಳನ್ನು, ಮೊಬೈಲ್ ಪೋನ್, ಡಿಜಿಟಲ್ ವಾಚ್ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಹಾಗೂ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿನಾಂಕ ೦೧-೦೩-೨೦೨೫ ರಿಂದ ೨೦-೦೩-೨೦೨೫ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕೆ ಪರೀಕ್ಷೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಹಾಗೂ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುವುದರಿಂದ ನಿರಂತರ ವಿದ್ಯುತ್ ಪೂರೈಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ ಎಂದು ವಿಜಯಪುರ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಿಲ್ಲೆಯ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿರಂತರ ವಿದ್ಯುತ್ ಪೂರೈಸುವತ್ತ ಅಗತ್ಯ ಕ್ರಮವಹಿಸುವಂತೆ ಅವರು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ೨೦೨೫-೨೬ನೇ ಸಾಲಿಗೆ ೧೦ ತಿಂಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂನ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿದೆ.ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಹಾಗೂ ಸ್ವಂತ ಜಮೀನು ಹೊಂದಿರುವ ಹಾಗೂ ತರಬೇತಿ ಪಡೆಯಲಿಚ್ಛಿಸುವವರು ಅರ್ಜಿಗಳನ್ನು ನಗರದ ಹಳೆಯ ಪ್ರವಾಸಿ ಮಂದಿರದಲಿÀ ಪ್ರವಾಸಿ ಪ್ಲಾಜಾದಲ್ಲಿರುವ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ರಾಜ್ಯ ವಲಯ) ಕಚೇರಿಗೆ ಅಥವಾ www.horticulture.kar.nic.in ªÉ¨ÉìöÊnಮೂಲಕ ಡೌನ್‌ಲೋಡ್ ಏಪ್ರಿಲ್ ೦೧ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ ೮ರಂದು ಬೆಳಿಗ್ಗೆ ೧೦ಗಂಟೆಗೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ರಾಜ್ಯ ವಲಯ) ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗುವಂತೆಯೂ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ: ೮೯೭೧೫೧೨೨೮೬ ಮತ್ತು ೯೩೮೦೦೯೮೧೦೩ ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More