ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬ ಮಾತಿನಂತೆ ಮಕ್ಕಳಿಗೆ ಸಂಸ್ಕಾರ ನೀಡುವಂತ ಜ್ಞಾನವನ್ನು ನೀಡಬೇಕು. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅವರಿಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸ ಪಿ.ವಿ.ನವಲಿಮಠ ಸಲಹೆ ನೀಡಿದರು.
ಪಟ್ಟಣದ ಹೂಗಾರ ಲೇಔಟನಲ್ಲಿರುವ ಸಮತಾ ಸಂಸ್ಥೆಯ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ವಾರ್ಷಿಕ ಕಲರವ ೨ಕೆ೨೫ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲ ಜೀವಿಗಳಿಗಿಂತ ಮನುಷ್ಯ ಬುದ್ದಿಜೀವಿ. ತನಗೆ ಏನು ಬೇಕು ಅದನ್ನು ಸಾಧಿಸುವ ಬುದ್ದಿ ಶಕ್ತಿಯನ್ನು ಹೊಂದಿದ್ದಾನೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿತರೆ ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ನಿಲ್ಲುತ್ತೆ ಎಂದರು.
ಕಾರ್ಯಕ್ರಮವನ್ನು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿ ನಿರ್ದೇಶಕ ವಿ.ಬಿ.ಕುರಡಿ ಅವರು ಸಸಿಗೆ ನೀರೂಣಿಸುವ ಮೂಲಕ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪಾಲಕರ ಪ್ರತಿನಿಧಿಯಾಗಿ ಭಾಗವಹಿಸಿ ಪತ್ರಕರ್ತ ನಾಗೇಶ ತಳವಾರ ಮಾತನಾಡಿದರು. ಇನ್ನೋರ್ವ ಪಾಲಕ ಪ್ರತಿನಿಧಿ ರಮೇಶ ಜಿ. ಬಮ್ಮಣ್ಣಿ ಉಪಸ್ಥಿತರಿದ್ದರು. ಸಮತಾ ಸಂಸ್ಥೆಯ ಅಧ್ಯಕ್ಷೆ ಕುಸಮಾ ಯಾಳಗಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಜನಾ ಭಾವಿಮನಿ ವಿದ್ಯಾರ್ಥಿ ಪ್ರತಿನಿಧಿಯಾಗಿ ವೇದಿಕೆ ಮೇಲಿದ್ದರು.
ಮಕ್ಕಳು ಮುದ್ದು ಮುದ್ದಾಗಿ ನೃತ್ಯ ಮಾಡುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಶಿಕ್ಷಕಿ ಸಕ್ಕುಬಾಯಿ ಡಾಂಗಿ ವಾರ್ಷಿಕ ವರದಿ ವಾಚನ ಮಾಡಿದರು. ಶಿಕ್ಷಕಿಯಾದ ದೀಕ್ಷಾ ಕನ್ನೊಳ್ಳಿ ಸ್ವಾಗತಿಸಿದರು. ರೂಪಾ ಸೂರಪ್ಪಗೌಡ, ಪ್ರಗತಿ ಹಿರೇಮಠ ನಿರೂಪಿಸಿದರು. ರಾಧಿಕಾ ಹಿರೇಮಠ ವಂದಿಸಿದರು.
ಶಿಕ್ಷಕರಾದ ರಮೇಶ ಯಾಳಗಿ, ಸಂಜೀವಕುಮಾರ ಡಾಂಗಿ, ವಿಕಾಸ ಚೌರ, ಶಿಕ್ಷಕಿ ಸುಮಾ ಬಿರಾದಾರ, ಸಿಬ್ಬಂದಿ ಶಾಂತಾಬಾಯಿ, ನೀಲಮ್ಮ ಹಾಜರಿದ್ದರು.

