ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಿಂದ ಐದು ಕಿ.ಮಿ.ದೂರದ ಹಳೇ ಕೊಲ್ಹಾರ ಕೃಷ್ಣಾ ನದಿ ತಟದಲ್ಲಿರುವ ಶೀಲವಂತ ಹಿರೇಮಠದಲ್ಲಿ ಮಹಾ ಶಿವರಾತ್ರಿ ಜಾಗರಣೆ ನಿಮಿತ್ಯವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಹು ವಿಜ್ರಂಭಣೆಯಿಂದ ಜರುಗಿದವು.
ಮಠದಲ್ಲಿರುವ ಒಂದು ಸಾವಿರದಾ ಎಂಟು ಶಿವಲಿಂಗಗಳ ದರುಶನವನ್ನು ನೂರಾರು ಭಕ್ತರು ಪಡೆದುಕೊಂಡು ರಥೋತ್ಸವದಲ್ಲಿ ಪಾಲ್ಗೋಂಡರು ವಿವಿದ ಗ್ರಾಮಗಳಿಂದ ಆಗಮಿಸಿದ ಶ್ರಿಗಳ ಹಾಗೂ ಕೈಲಾಸನಾಥ ಮಹಾಸ್ವಾಮಿಗಳ ಅಮೃತ ವಾಣಿಯಿಂದ ವೇದ ಮಂತ್ರಗಳು ನುಡಿಯಲ್ಪಟ್ಟವು ಆಗಮಿಸಿದ ಮುತೈದೆಯರಿಗೆ ಉಡಿ ತುಂಬುವದು ಹಾಗೂ ನೆರೆದ ಭಕ್ತಾಧಿಗಳು ಬಾಳೆಹಣ್ಣು, ಖರ್ಜೂರ, ಶೇಂಗಾ, ದ್ರಾಕ್ಷಿ ಇನ್ನಿತರ ಉಪವಾಸ ಆಚರಣೆಯ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಮಾಡಿ ಭಕ್ತರು ಕೂಡಾ ಸೇವಿಸಿದರು.
ನಂತರ ಮಠದ ಆವರಣದಲ್ಲಿ ಜನ ಜಾಗೃತಿ ಧರ್ಮಸಭೆ ಜರುಗಿತು.
ಈ ಸಭೆಯಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಫಲವತ್ತತೆಯ ಫಲ ಕೊಡುವ ಪ್ರೀತಿಯಿಂದ ಭಕ್ತರ ಕಾಯುವ ಶಕ್ತಿಸ್ವರೂಪಿಣಿ ಪಾರ್ವತಿ ದೇವಿ ಹಾಗೂ ಶಿವನ ದೈವಿಕ ವಿವಾಹ ಗುರುತಿಸುವ ವಿಶೇಷ ದಿನವೇ ಮಹಾಶಿವರಾತ್ರಿಯಾಗಿದೆ ಎಂದರು.
ಕತ್ತಲೆ ತುಂಬಿದ ಅಜ್ಞಾನದ ಅಂದಕಾರವನ್ನು ಹೋಗಲಾಡಿಸಿ ಅಧ್ಯಾತ್ಮದ ಮೂಲಕ ಸುಜ್ಞಾನದ ದೀವಿಗೆ ಹಚ್ಚುವ ಶಿವನ ಮಹಾರಾತ್ರಿಯೇ ಮಹಾಶಿವರಾತ್ರಿ ಆಚರಣೆಯಾಗಿದ್ದು ಇಂತಹ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೋಳ್ಳುವದರಿಂದ ಸರ್ವರಿಗೂ ಶುಭ ಮಂಗಲವನ್ನು ಉಂಟು ಮಾಡುತ್ತದೆ ಎಂದರು.
ಭಕ್ತಿ ಶ್ರದ್ಧೇಯ ಪರಕಾಷ್ಠೇಯ ಮೂಲಕ ಜನರ ಭಕ್ತರ ಜೀವನ ಉಜ್ವಲಗೊಳಿಸುವ ಧಾರ್ಮೀಕ ಕೇಂದ್ರ ಕೊಲ್ಹಾರ ಶೀಲವಂತ ಹಿರೇಮಠವು ಕೈಲಾಸನಾಥ ಶ್ರಿಗಳ ನೇತ್ರತ್ವದಲ್ಲಿ ಯೋಗ, ಆತ್ಮಜ್ಞಾನ, ಧ್ಯಾನ ಮತ್ತು ಸಂಸ್ಕ್ರತ ಪಾಠಬೋದಿಸುವ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುವ ಧಾರ್ಮಿಕ ಮಠವಾಗಲಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಮಾಜಮುಖಿ ಕಾರ್ಯಗೈದ ಮಹನಿಯರನ್ನು ಸನ್ಮಾನಿಸಲಾಯಿತು.
ಸಾನಿಧ್ಯವನ್ನು ಕೈಲಾಸನಾಥ ಶ್ರೀಗಳು, ವೀರ ಸಂಗಮೇಶ್ವರ ಶಿವಾಚಾರ್ಯರು ಚರಂತಿಮಠ ಕುಂದರಗಿ ವಹಿಸಿದ್ದರು. ಪಟ್ಟಣ ಪಂಚಾಯತ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ತುಳಸಿಗೇರಿ ಹಗೇದಾಳ, ಶ್ರೀಶೈಲ ಪತಂಗಿ, ಶಂಕ್ರಪ್ಪ ದೇಸಾಯಿ, ಸಗರೆಪ್ಪ ಮುರನಾಳ, ಚಿನ್ನಪ್ಪ ಗಿಡ್ಡಪ್ಪಗೋಳ, ಬಿ.ಎಸ್. ಹಂಗರಗಿ, ಸಂಗಪ್ಪ ಹುಚ್ಚಪ್ಪಗೊಳ, ಹನೀಪ್ ಮಕಾನದಾರ, ದಸ್ತಗೀರ ಕಲಾದಗಿ ಅನೇಕ ಪ್ರಮುಖರು ಉಪಸ್ಥಿತರಿದ್ದರು.

