ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಜ್ಯದಲ್ಲಿ ವಾಸಿಸುವ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಟ್ಟು ಉತ್ತಮ ಆಡಳಿತ ನೀಡಿದ ಮುಖ್ಯಮಂತ್ರಿಯಂದರೆ ಅದು ಬಿ.ಎಸ್. ಯಡಿಯೂರಪ್ಪನವರು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ೮೩ ನೇ ಹುಟ್ಟು ಹಬ್ಬವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಆಚರಣೆ ಮಾಡಿ ನಂತರ ಸರಕಾರಿ ದವಾಖಾನೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲ ಹಾಗೂ ಆಹಾರ ಪದಾರ್ಥ ಹಂಚಿ ಮಾತನಾಡಿದರು.
ಸಂಘ ಪರಿವಾರದ ವ್ಯಕ್ತಿ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಕೋಟ್ಯಾಂತರ ಕಾರ್ಯಕರ್ತರ ಬಲವನ್ನು ಸಂಘಟಿಸಿ ಮೊಟ್ಟ ಮೊದಲ ಬಾರಿಗೆ ದಕ್ಷೀಣ ಭಾರತದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣೆ ಹಿಡಿಯಲು ಕಾರಣಿಕರ್ತರಾದವರು ಎಂದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಅನೀಲಕುಮಾರ ಗಾಣಿಗೇರ, ಎಸ್.ಎಮ್. ಪಾಟೀಲ, ಇಸ್ಮಾಯಿಲಸಾಬ ತಹಶೀಲ್ದಾರ, ಚಿನ್ನಪ್ಪ ಗಿಡ್ಡಪ್ಪಗೋಳ, ಈರಯ್ಯ ಹಲಗಯ್ಯ ಮಠಪತಿ, ಮಳೆಪ್ಪ ಬರಗಿ, ಸಂಗಪ್ಪ ಅಥಣಿ, ಶೇಖರಯ್ಯ ಮಠಪತಿ, ರಮೇಶ ಗಣಿ, ಮಲ್ಲಪ್ಪ ಬಾಟಿ ಅನೇಕರು ಇದ್ದರು.

