Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೂಡಗಿ ಎನ್‌ಟಿಪಿಸಿ ತನ್ನ ವ್ಯಾಪ್ತಿಯ ಐದು ಗ್ರಾಮಗಳ ಭೂ ಸ್ವಾಧೀನಕ್ಕೆ ಪ್ರತಿಯಾಗಿ ಆಯಾ ಗ್ರಾಮ ಪಂಚಾಯತಿಗಳಿಗೆ ನೀಡಬೇಕಿದ್ದ ತೆರಿಗೆ ಹಣವನ್ನು ಕಳೆದ ಮೂರು ವರ್ಷಗಳಿಂದ ನೀಡದೇ ಸತಾಯಿಸುತ್ತಿರುವ ಪರಿಣಾಮ ಐದೂ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಪಂ ಅಧ್ಯಕ್ಷರು ಆರೋಪಿಸಿದರು. ಈ ಕುರಿತು ಸಮೀಪದ ಮುತ್ತಗಿ ಕ್ರಾಸ್ ಬಳಿಯ ಖಾಸಗಿ ಹೊಟೇಲ್‌ವೊಂದರಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಗಿ ಗ್ರಾಪಂ ಅಧ್ಯಕ್ಷ ಅರವಿಂದ ಕೊಪ್ಪದ, ಎನ್‌ಟಿಪಿಸಿ ಪ್ರತಿ ವಾರ್ಷಿಕ ಕೂಡಗಿ ಗ್ರಾಪಂಗೆ ೨,೫೪,೯೦,೬೪೯ ರೂ., ಮಸೂತಿ ಗ್ರಾಪಂಗೆ ೯೯,೪೭,೦೦೦ ರೂ., ತೆಲಗಿ ಗ್ರಾಪಂಗೆ ೭೮,೩೩,೪೫೩ ರೂ., ಗೊಳಸಂಗಿ ಗ್ರಾಪಂಗೆ ೬೨,೧೫,೦೦೦ ರೂ., ಮುತ್ತಗಿ ಗ್ರಾಪಂಗೆ ೩,೧೬,೦೦೦ ರೂ., ಸೇರಿ ಒಟ್ಟು ವರ್ಷಕ್ಕೆ ೪,೯೮,೦೨,೧೦೨ ರೂ., ತೆರಿಗೆ ಪಾವತಿಸಬೇಕು. ಕಳೆದ ೨೦೨೨-೨೩, ೨೪ ಮತ್ತು ೨೫ ನೇ ಸಾಲಿನ ಮೂರು ವರ್ಷದ ಒಟ್ಟು ತೆರಿಗೆ ೧೪,೯೪,೦೬,೩೦೬…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರ್ವಜನಿಕರು ಹಾಗೂ ರೈತಸಮುದಾಯದ ಹಿತದೃಷ್ಟಿಯಿಂದ ಸರ್ಕಾರದ ವಿವಿಧ ಇಲಾಖೆಗಳನ್ನೊಳಗೊಂಡ ತಾಲ್ಲೂಕು ಆಡಳಿತ ಸೌಧವನ್ನು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಲಿ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಹೇಳಿದ್ದಾರೆ.ಪಟ್ಟಣದಲ್ಲಿ ಭಾನುವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ತಾಲ್ಲೂಕು ಆಡಳಿತ ಸೌಧಕ್ಕಾಗಿ ವಿಜಯಪುರ ರಸ್ತೆಯಲ್ಲಿಯ ಸರ್ವೆ ನಂ೫೧೨/*/೦೨ನ್ನು ಗುರುತಿಸಿ ಮಿಸಲಾಗಿಟ್ಟ ಜಾಗ ಎಂದು ನಾಮಫಲಕ ನಿಲ್ಲಿಸಲಾಗಿದೆ. ಆದರೆ ವಾಸ್ತವಿಕವಾಗಿ ಈ ಜಾಗ ಪಟ್ಟಣದಿಂದ ೨ ಕಿ.ಮೀ ದೂರದಲ್ಲಿದೆ. ಇಲ್ಲಿ ಎಲ್ಲ ಇಲಾಖೆಗಳ ಕಚೇರಿಗಳನ್ನೊಳಗೊಂಡ ಸೌಧ ನಿರ್ಮಾಣವಾದರೆ ರೈತರು, ಮಹಿಳೆಯರು ಸಹಿತ ಸಾರ್ವಜನಿಕರು ತೆರಳಿ ತಮ್ಮ ಅಗತ್ಯ ಕಾರ್ಯ ಮಾಡಿಕೊಳ್ಳಲು ಹಣ ಹಾಗೂ ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ಆಡಳಿತ ಸೌಧವನ್ನು ಅಂಬೇಡ್ಕರ್ ವೃತ್ತದಲ್ಲಿರುವ ಪಶು ಇಲಾಖೆಯ ಆವರಣದಲ್ಲಿ ನಿರ್ಮಿಸುವಂತಾಗಬೇಕು. ಇಗೀರುವ ಪಶುವೈದ್ಯಕೀಯ ಆಸ್ಪತ್ರೆ ವಿಶಾಲ ಜಾಗ ಹೊಂದಿದ್ದು ಪಟ್ಟಣದ ಮಧ್ಯೆ ಭಾಗದಲ್ಲಿದೆ. ಇದು ಆಡಳಿತಸೌಧಕ್ಕೆ ಎಲ್ಲ ರೀತಿಯಿಂದಲೂ ಸೂಕ್ತ ಜಾಗವಾಗಿದೆ.ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂಡಿ ರಸ್ತೆಯಲ್ಲಿ ಅತಿಕ್ರಮಣಗೊಂಡ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿದ್ದು, ಸುತ್ತ ಮುತ್ತಲಿನ ಕಲಬುರುಗಿ, ಯಾದಗಿರಿ, ರಾಯಚೂರ, ವಿಜಯಪೂರ ಜಿಲ್ಲೆಗಳ ಹೆಚ್ಚಿನ ಸಂಪರ್ಕ ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಹೇಳಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಂದಗಿ ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಬೋಧನೆ ಮಾಡುವದರೊಂದಿಗೆ ರಾಜ್ಯದಲ್ಲಿ ಹೆಸರುವಾಸಿಯಾಗಿ ಶೈಕ್ಷಣಿಕ ಕಾಶಿ ಎಂದನೆಸಿಕೊಂಡಿದೆ. ಹಾಗೂ ದಿನದ ೨೪ಗಂಟೆಯು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು, ಮುಂಬೈ, ಚೆನೈ ವಾಣಿಜ್ಯ ಕಾರಿಡಾರ ಚತುಷ್ಕೋನ ರಸ್ತೆ ಸಿಂದಗಿ ನಗರಕ್ಕೆ ಸಮೀಪದಲ್ಲಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.ರಾಷ್ಟ್ರೀಯ ಹೆದ್ದಾರಿ-೫೦ ಸಿಂದಗಿ ನಗರದೊಂದಿಗೆ ಸಂಪರ್ಕ ಬೆಸೆದಿದ್ದು, ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಶೇಡಬಾಳದಿಂದ ಶಾಹಾಬಾದ ರೇಲ್ವೇ ಮಾರ್ಗವು ಮುಂಬರುವ ದಿನಮಾನಗಳಲ್ಲಿ ನೂತನ…
ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಡಿ.ಕೆ.ಶಿವಕುಮಾರ ಅವರು ಸಂಘಟನಾ ಚತುರರಾಗಿದ್ದು ಮುಖ್ಯಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಹಾಗಾಗಿ ಕಾಂಗ್ರೇಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಬಲ ಸಮುದಾಯದವರೂ ಆಗಿದ್ದಾರೆ. ಅವರ ಬೆನ್ನಿಗೆ ಹಲವು ಶಾಸಕರೂ ಇದ್ದಾರೆ. ಅದನ್ನು ಮನಗಂಡು ಕಾಂಗ್ರೇಸ್ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.ಹಿಂದುಳಿದಿರುವ ಗಡಿ ತಾಲೂಕು ಅಭಿವೃಧ್ಧಿ ಮಾಡಲು ಇಂಡಿಗೆ ಸಚಿವ ಸ್ಥಾನದ ಅವಶ್ಯಕತೆ ಇದೆ. ಸ್ವಾತಂತ್ರಾö್ಯ ನಂತರ ಒಮ್ಮೆಯೂ ಇಂಡಿ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯಾದರೂ ಸಚಿವ ಸ್ಥಾನ ವಂಚಿತ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು. ನಂಜುಂಡಪ್ಪ ವರದಿಯಂತೆ ಗಡಿ ಬಾಗದ ಇಂಡಿ ತಾಲೂಕು ಅತೀ ಹಿಂದುಳಿದ ಪ್ರದೇಶವಾಗಿದೆ. ಹೆಚ್ಚಿನ ಅಭಿವೃಧ್ಧಿಗೆ ಸಚಿವ ಸ್ಥಾನದ ಅವಶ್ಯಕತೆ ಇದ್ದು ಇಂಡಿ ಕ್ಷೇತ್ರಕ್ಕೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಚಿತ್ರರಂಗದ ಮೇರು ಬಿ.ಸರೋಜಾದೇವಿ ನಿಧನಕ್ಕೆ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಂತಾಪ ಸಂದೇಶ ನೀಡಿರುವ ಸಚಿವರು, ಭಾರತೀಯ ಚಿತ್ರರಂಗದಲ್ಲಿ ಬಹುಭಾಷಾ ತಾರೆಯಾಗಿ ಕನ್ನಡದ ಕೀರ್ತಿ ಹೆಚ್ಚಿಸಿದ್ದ ಸರೋಜಾದೇವಿ ಅವರು, ಕನ್ನಡ ಚಿತ್ರರಂಗಕ್ಕೆ ಮಹೋನ್ನತ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.ಸರೋಜಾದೇವಿ ಅವರು ಮನೋಜ್ಞ ಅಭಿನಯ ನೀಡಿದ್ದ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಪಾತ್ರಕ್ಕೆ ಜೀವತುಂಬಿದ್ದನ್ನು ಕನ್ನಡಿಗರ ಹೃದಯ ಗೆದ್ದಿದ್ದರು ಎಂದು ಸ್ಮರಿಸಿದ್ದಾರೆ.ಸರೋಜಾದೇವಿ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದ್ದು, ಕನ್ನಡಿಗರ ಹೃದಯದಲ್ಲಿ ಅವರು ಸದಾ ಅಮರವಾಗಿದ್ದಾರೆ ಎಂದಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಂದು ಶ್ರೀಮಂತಿಕೆ, ಅಧಿಕಾರಕ್ಕಿಂತ ಹೆಚ್ಚಿನ ಶಕ್ತಿ ಜ್ಞಾನಕ್ಕೆ ಇದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ನಗರದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದಿಂದ ಇಂದು ನಡೆದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮುಸ್ಲಿಂ ಸಮಾಜದಲ್ಲಿ ಅತ್ಯಂತ ಹಿಂದುಳಿದ ನದಾಫ ಪಿಂಜಾರ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ ಪಾಲಕರು ತಮಗೆ ಎಷ್ಟೆ ಕಷ್ಟ ಬಂದರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸುವದರ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆಯಬೇಕು ಇದರಿಂದ ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದರು.ಕೃಷ್ಣ ಪಾರಿಜಾತ ಹೆಸರಾಂತ ಕಲಾವಿಧ ದಿ.ಅಪ್ಪಾಲಾಲ ನದಾಫ್ ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣ ಕುರಿತಂತೆ ಅಧಿಕಾರಿಗಳ ಜೊತೆ ಚರ್ಚಿಸುತ್ತೆನೆ ಎಂದರು.ಡಿವೈಎಸ್‌ಪಿ ಎಸ್. ರೋಷನ್ ಜಮೀರ್ ಮಾತನಾಡಿ, ಕನ್ನಡ ಮಾತೃಭಾಷೆಯಲ್ಲಿ ಕಲಿತವರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ, ಆ ನಿಟ್ಟಿನಲ್ಲಿ ಮಾತೃಭಾಷೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಇಂಡಿ ತಾಲೂಕು ಅವರು ಚಡಚಣ ವಲಯದ ಆಶ್ರಯ ಕಾಲೋನಿ ಕಾರ್ಯಕ್ಷೇತ್ರದ ಶ್ರೀ ಕಲ್ಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಸಂಸ್ಥಾಪಕಿ ಕಾಶಿಬಾಯಿ ವಾಲಿಕಾರ ಮತ್ತು ಮುಖ್ಯ ಗುರುಗಳಾದ ಡಿ ಎಸ್ ಅಜಮಾನಿ ಜಂಟಿಯಾಗಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಜೆ ಸಿ ಬಿರಾದಾರ ಸರ್, ಎಸ್ ಪಿ ಕೊಪ್ಪದ ಮೇಡಂ ಅವರು ಪರಿಸರದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಾಹಿತಿ ನೀಡಿ ಜನರಿಗೆ ಉಪಕಾರಿಯಾದಂಥ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಚಡಚಣ ವಲಯದ ಮೇಲ್ವಿಚಾರಕರು ಶಿವಯ್ಯ ಹಿರೇಮಠ ಅವರು ಯೋಜನೆಯ ಕಾರ್ಯಕ್ರಮ ಗಳ ಬಗ್ಗೆ ಮತ್ತು ಪರಿಸರ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ತಾಲೂಕಿನ ಕೃಷಿ ಮೇಲ್ವಿಚಾರಕರಾದ ಸುದೀಪ್ ಮತ್ತು…
ಲೇಖನ- ಯಶು..”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಕೈ ತುಂಬಾ ಹಣ ಮೈ ತುಂಬಾ ಒಡವೆ ಮನೆಗೆಲಸಕ್ಕೆ ಆಳು ಸುಖಸುಪತ್ತಿಗೆಯಲ್ಲೇ ವಿಜೃಂಭಿಸುತ್ತಿದ್ದವರು ರಾಘವ ರಾಗಿಣಿ. ಇವರಿಬ್ಬರೂ ಮಧುಸೂದನ್ ಗಾಯಿತ್ರಿಯ ಮಕ್ಕಳು. ಮುತ್ತಾತನ ಕಾಲದಿಂದಲೂ ಶ್ರೀಮಂತರಾಗಿದ್ದರು.ರಾಘವ ರಾಗಿಣಿ ಕಾಲೇಜಿನಲ್ಲಿ ಓದುವಾಗ ಓದಿನ ಕಡೆಗೆ ಗಮನ ಕೊಡದೆ ಫ್ರೆಂಡ್ಸ್ ಪಾರ್ಟಿ ಅಂತ ಕಾಲಕಳೆಯುತ್ತಿದ್ದರು. ಇವರ ಈ ವರ್ತನೆ ಕಂಡು ಮಧುಸೂದನ್ ಗೆ ತುಂಬಾ ಬೇಸರವಾಯಿತು. ಎಷ್ಟು ಬುದ್ಧಿಮಾತು ಹೇಳಿದರು ಕೇಳುತ್ತಿರಲಿಲ್ಲ. ಇದೇ ಚಿಂತೆಯಲ್ಲೇ ಮಧುಸೂದನ್ ಗೆ ಒಂದೆರಡು ಬಾರಿ ಹೃದಯಾಘಾತವಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಆದರೂ ಮಕ್ಕಳಿಗೆ ಬುದ್ಧಿ ಬರಲೇ ಇಲ್ಲ.ತನ್ನ ದುಃಖವನ್ನು ತನ್ನ ಬಾಲ್ಯದ ಗೆಳೆಯ ನಿರಂಜನ್ ಹತ್ತಿರ ಹೇಳಿಕೊಳ್ಳುತ್ತಿದ್ದರು.ನಿರಂಜನ್ ಅವರಿಗೆ ಒಬ್ಬಳು ಮಗಳಿದ್ದಳು.ಅವಳೇ ಮೃದುಲಾ.ಆಕೆ ಅಷ್ಟೊಂದು ನೋಡಲು ಸುಂದರವಾಗಿರಲಿಲ್ಲ, ಆದರೆ ಬುದ್ಧಿವಂತಿಕೆಯಲ್ಲಿ ಚುರುಕಾಗಿದ್ದಳು,ಗುಣವಂತೆಯಾಗಿದ್ದಳು. ಯಾವುದೆ ಕೆಲಸವಾದರೂ ಸರಿ ಕಷ್ಟಪಟ್ಟು ಮಾಡಿಯಾದರೂ ಅದರಲ್ಲಿ ಯಶಸ್ವಿಯಾಗುತ್ತಿದ್ದಳು. ಮೃದುಲಾಳನ್ನು ಕಂಡರೆ ಮಧುಸೂದನ್ ಗೆ ಅಚ್ಚುಮೆಚ್ಚು. ರಾಗಿಣಿಗೆ ಪ್ರೀತಿ ತೋರಿಸುವಾಗೆಯೇ ಮೃದುಲಳಿಗೂ ಪ್ರೀತಿ ತೋರಿಸುತ್ತಿದ್ದನು.ಮೃದುಲಾ ತನ್ನ ಬುದ್ಧಿವಂತಿಕೆಯಿಂದ ಯಾರ…
ರಚನೆ- ರಾಜು ಗಾರೆಮನೆ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ದುಂಬಿಯ ಸಮೂಹ ಪದವೇಳಿವೆ ರಾಗಗಳೊಂದಿಗೆ,ಚಿಗುರೆಲೆ ಮೆದ್ದ ಹಕ್ಕಿ ಉಲಿದಿವೆ ಚಿಲಿ ಪಿಲಿಯೊಟ್ಟಿಗೆ,ಹಸಿರು ಸೊಕಿ ತಂಪಾದ ತಂಗಾಳಿ ಬೀಸಿದ ಚಾಮರಕೆ,ಮತ್ತೆ ವಸಂತ ಬಂದನು ಧರಣಿಗೆ ಚೈತ್ರದ ಆಹ್ವಾನಕೆ. ಪವನ ಪಸರುತಿದೆ ಸುಮ ಸೌರಭದ ಸುಸ್ವರ ರವಳಿ,ಹಾಸಿ ಹೊದ್ದಿದೆ ನವ ಪ್ರಕೃತಿಯು ಗಿಳಿಹಸಿರ ಕಂಬಳಿ,ಸುತ್ತ ಮುತ್ತ ಸಸ್ಯ ಶ್ಯಾಮಲೆಯ ಸಹಸ್ರ ನಾಮವಳಿ,ಕಡು ಶಿಶಿರದ ಶೀತಲಕೆ ಉಗುರು ಬೆಚ್ಚಗಿನ ಬಳುವಳಿ. ಆಯಾ ಋತು ಧರ್ಮಕೆ ಅದರದ್ದೆ ಆದ ಪರಿಪಾಲನೆ,ಮಧುವೀರಲು ಪತಂಗಕೆ ಮಾವು ಬೇವಿನ ವಿಜ್ಞಾಪನೆ,ಕೂಗಳತೆಯ ದೂರದಲ್ಲಿ ಕೋಗಿಲೆಯ ಆಲಾಪನೆ,ಇಂತ ಚೆಲುವನು ಹೊತ್ತು ತಂದ ವಸಂತನಿಗೆ ವಂದನೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನಲ್ಲಿ ಮೇರು ವ್ಯಕ್ತಿತ್ವ ಹೊಂದಿದ ಡಾ.ಅಂಬೇಡ್ಕರ್ ಅವರು ಜನಹಿತಕ್ಕಾಗಿ ಶಾಂತಿದೂತನಾಗಿಬದುಕು ಸಾಗಿಸುತ್ತಾ, ಸರ್ವರಲ್ಲಿ ಸಮಾನತಾ ಭಾವ ಬಿತ್ತಿದ್ದಾರೆ. ಸಂವಿಧಾನ ಪೀಠಿಕೆಯ ಮೂಲಾಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಹೇಳಿದರು.ರವಿವಾರದಂದು ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ 134 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡಾ.ಅಂಬೇಡ್ಕರ್ ಅವರು ಎತ್ತಿಹಿಡಿದ ವಿಶ್ವ ಕುಟುಂಬದ ತತ್ವವನ್ನು ಅನುಪಾಲಿಸಿಕೊಂಡು, ಇಂದಿನ ಯುವಪೀಳಿಗೆ ಓದಿನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ನಮ್ಮ ದೇಶದ ಆಸ್ತಿ ಎಂದು ಹೇಳಿದರು.ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ರಾಜು ಆಲಗೂರ, ಡಾ ಬಿ ಆರ್ ಅಂಬೇಡ್ಕರ್ ಅವರು ಇಡೀ ಮಾನವಕುಲದ ವಿಕಾಸದತ್ತ ಚಿತ್ತಹರಿಸಿ, ಸಂವಿಧಾನ ರಚಿಸಿ ದೇಶದ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಇಂದಿನ ಮಕ್ಕಳು ಪುಸ್ತಕ ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು ಎಂದರು.ನೇತೃತ್ವ ವಹಿಸಿದ್ದ ನಾಗಠಾಣ ಗ್ರಾ ಪಂ…
