ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹೊಸ ೧೧೦ ಕೆವಿ ಭೈರುಣಗಿ ಲಿಲೋ ಮಾರ್ಗದ ಗೋಪುರ ನಿರ್ಮಾಣ ಹಾಗೂ ತಂತಿ ಎಳೆಯುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೨೨೦ ಕೆವಿ ಇಂಡಿಯಿಂದ ಹೊರಹೋಗುವ ೧೧೦ ಕೆವಿ ಝಳಕಿ ವಿದ್ಯುತ್, ೧೧೦ ಕೆವಿ ಚಡಚಣ, ೧೧೦ ಕೆವಿ ಇಂಚಗೇರಿ, ೧೧೦ ಕೆವಿ ಜಿಗಜೇವಣಿ, ೧೧೦ ಕೆವಿ ಕೆರೂರ, ೩೩ ಕೆವಿ ಹಲಸಂಗಿ, ೩೩ ಕೆವಿ ಹೊರ್ತಿ,೩೩ ಕೆವಿ ನಿವರಗಿ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ ೧೧ಕೆವಿ ಮಾರ್ಗಗಳಲ್ಲಿ ಹಾಗೂ ಐಪಿಪಿ ಸ್ಥಾವರಗಳಿಗೆ ಮಾ.೨೩ ರಂದು ಬೆಳಿಗ್ಗೆ ೫ ರಿಂದ ಸಂಜೆ ೫ರವರೆಗೆ ಹಾಗೂ ಮಾ.೨೪ರಂದು ಮಧ್ಯಾಹ್ನ ೧:೩೦ರಿಂದ ಸಂಜೆ ೫ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
