Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬಸವನ ಹುಳು
ವಿಶೇಷ ಲೇಖನ

ಬಸವನ ಹುಳು

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಮಳೆಗಾಲದಲ್ಲಿ ತನ್ನ ಬಾಯಿಯಿಂದ ಸುರಿಸುವ ಲೋಳೆಯ ಮೇಲೆ ತೆವಳಿಕೊಂಡು ಸಾಗುವ ಹುಳುವು ಎಲ್ಲೆಡೆ ಕಂಡುಬರುತ್ತದೆ. ಅತ್ಯಂತ ನಿಧಾನವಾಗಿ ಚಲಿಸುವ ಈ ಹುಳುವೇ ಬಸವನಹುಳು.
ಬಸವನ ಹುಳುವು ‘ಚಿಪ್ಪಿನ ಮೃದ್ವಂಗಿ’ ಜಾತಿಗೆ ಸೇರಿದ್ದು, ತನ್ನ ಬೆನ್ನಿನ ಮೇಲೆ ಸುರುಳಿಯ ಆಕಾರದ ಚಿಪ್ಪನ್ನು ಹೊಂದಿರುತ್ತದೆ. ಬಸವನ ಹುಳುಗಳಲ್ಲಿ ಹಲವು ವಿಧಗಳಿದ್ದು, ಕೆಲವು ಕೇವಲ ಭೂಮಿಯಲ್ಲಿ ವಾಸಿಸಿದರೆ, ಕೆಲವು ಸಮುದ್ರದಲ್ಲಿ ಮತ್ತು ಕೆಲವು ಸಿಹಿನೀರಿನಲ್ಲಿ ವಾಸಿಸುತ್ತವೆ. ಬಸವನ ಹುಳು ಕೆಲವು ಸಣ್ಣ ಜೀವಿಗಳನ್ನು, ಗಿಡಗಳನ್ನು, ಎಲೆಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ ಈ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು ತೇವವಾಗಿ ಇಟ್ಟುಕೊಳ್ಳುತ್ತವೆ. ಗೊಂಡೆ ಹುಳುಗಳು ಹಾಗೂ ಬಸವನ ಹುಳುಗಳಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ ಗೊಂಡೆ ಹುಳುಗಳಿಗೆ ಯಾವುದೇ ಚಿಪ್ಪುಗಳು ಇರುವುದಿಲ್ಲ. ಬಸವನ ಹುಳುಗಳಿಗೆ ಬಲವಾದ ಹಲ್ಲುಗಳಿರುತ್ತವೆ. ನೀರಿನಲ್ಲಿ ಬದುಕುವ ಬಸವನ ಹುಳುವಿನ (ಟimಠಿeಣ) ಹಲ್ಲು ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗಟ್ಟಿಯಾದ ವಸ್ತುವೆಂದು ತಿಳಿದುಬಂದಿದೆ.
ಬಸವನ ಹುಳುವನ್ನು ಕೆಲವು ದೇಶಗಳಲ್ಲಿ ಆಹಾರ ಪದಾರ್ಥಗಳಾಗಿ ಬಳಸಿದರೆ, ಇವುಗಳ ಚಿಪ್ಪುಗಳನ್ನು ಅಲಂಕಾರಿಕ ವಸ್ತುವಾಗಿ ಬಳಸಲಾಗುವುದಲ್ಲದೇ, ಸಾಂಪ್ರದಾಯಿಕ ಆಭರಣಗಳಲ್ಲೂ ಜೋಡಿಸಲಾಗುತ್ತದೆ. ಬಸವನ ಹುಳುಗಳು ಶ್ವಾಸಕೋಶವನ್ನು ಬಳಸಿ ಉಸಿರಾಡುವ ‘ಪುಲ್ಮೊನಾಟಾ’ ಗುಂಪಿಗೆ ಸೇರಿದೆ. ಇವುಗಳು ಮೀನುಗಳಿಗೆ ಇರುವಂತಹ ಕಿವಿರುಗಳ ಮೂಲಕ ಗಾಳಿಯನ್ನು ಒಳಗೆ ತೆಗೆದುಕೊಂಡು ಶ್ವಾಸಕೋಶದ ಮೂಲಕ ಉಸಿರಾಡುತ್ತವೆ. ಈ ಕಾರಣದಿಂದ ಇವುಗಳು ಭೂಮಿ, ಸಿಹಿನೀರು ಮತ್ತು ಸಮುದ್ರದ ನೀರಿನಲ್ಲಿ ವಾಸಿಸುತ್ತವೆ. ಹಳ್ಳಗಳು, ಮರುಭೂಮಿಗಳು ಮತ್ತು ಆಳ ಸಮುದ್ರಗಳಲ್ಲಿ ಇವು ವ್ಯಾಪಕವಾಗಿ ಜೀವಿಸುತ್ತವೆ.
ಬಸವನ ಹುಳುಗಳು ‘ರಾಡುಲಾ’ ಎಂದು ಕರೆಯಲ್ಪಡುವ ಬ್ಯಾಂಡೆಡ್ ರಿಬ್ಬನ್ ರೀತಿಯ ನಾಲಿಗೆಯ ಮೇಲೆ ಸಾವಿರಾರು ಸೂಕ್ಷ್ಮ ಹಲ್ಲಿನಂತಹ ರಚನೆಗಳನ್ನು ಹೊಂದಿದೆ. ಇವುಗಳ ‘ರಾಡುಲಾ’ವು ಫೈಲ್‌ನಂತೆ ಕೆಲಸ ಮಾಡುತ್ತಾ ತಾನು ತಿನ್ನುವ ಆಹಾರವನ್ನು ಸಣ್ಣ ತುಂಡುಗಳಾಗಿ ಸೀಳುತ್ತದೆ. ಹೆಚ್ಚಿನ ಜಾತಿಯ ಬಸವನ ಹುಳುಗಳು ಸಸ್ಯಹಾರಿಗಳಾಗಿದ್ದು, ಇವುಗಳು ಸಸ್ಯಗಳು ಮತ್ತು ಪಾಚಿಗಳನ್ನು ತಿನ್ನುತ್ತವೆ. ಸಮುದ್ರದಲ್ಲಿ ವಾಸಿಸುವ ಕೆಲವು ಪ್ರಬೇಧದ ಹುಳುಗಳು ಉಭಯ ಭಕ್ಷಕ ಅಥವಾ ಮಾಂಸಾಹಾರಿಗಳಾಗಿವೆ. ಇವುಗಳು ಕಾಗದ ಅಥವಾ ಮರದ ಹಲಗೆಯಂತಹ ವಸ್ತುಗಳನ್ನು ತಿಂದಾಗ ಅದರಲ್ಲಿರುವ ಬಣ್ಣದ ವರ್ಣದ್ರವ್ಯಗಳನ್ನು ಇವುಗಳಿಗೆ ಹೀರಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇವುಗಳ ಮಲವೂ ಕೂಡ ಬಣ್ಣದಿಂದ ಕೂಡಿರುತ್ತದೆ.
‘ಅಚಟಿನಾ’ ಎಂಬ ಪ್ರಬೇಧಕ್ಕೆ ಸೇರಿದ ಆಫ್ರಿಕನ್ ಬಸವನ ಹುಳುಗಳು ದೈತ್ಯ ಗಾತ್ರ ಹೊಂದಿರುತ್ತವೆ. ಈ ಜಾತಿಯ ಹುಳುಗಳು ಮೂಗಿನಿಂದ ಬಾಲಕ್ಕೆ ೩೮ ಸೆಂ.ಮೀ ಉದ್ದ ಬೆಳೆಯುವುದಲ್ಲದೇ, ಒಂದು ಕೆ.ಜಿ ತೂಕ ಹೊಂದಿರುತ್ತವೆ. ಸಮುದ್ರದಲ್ಲಿ ವಾಸಿಸುವ ಬಸವನ ಹುಳುಗಳ ಪೈಕಿ ಅತಿದೊಡ್ಡ ಜೀವಂತ ಪ್ರಭೇದವೆಂದರೆ ‘ಸಿರಿಂಕ್ಸ್ ಅರುವಾನಸ್’. ಇದರ ಇದರ ಚಿಪ್ಪು ೯೦ ಸೆಂ.ಮೀ ಉದ್ದ ಬೆಳೆಯುತ್ತದೆ. ಚಿಪ್ಪನ್ನು ಹೊಂದಿರುವ ಸಿರಿಂಕ್ಸ್ ಅರುವಾನಸ್ ಪ್ರಬೇಧದ ಬಸವನ ಹುಳು ಬರೋಬ್ಬರಿ ೧೮ ಕೆ.ಜಿಯಷ್ಟು ತೂಕವನ್ನು ಹೊಂದಿರುತ್ತವೆ. ಭೂಮಿಯಲ್ಲಿ ವಾಸಿಸುವ ಅತ್ಯಂತ ಸಣ್ಣ ಗಾತ್ರದ ಬಸವನ ಹುಳುವಿನ ಪ್ರಬೇಧ ‘ಅಂಗುಸ್ಟೊಪಿಲಾ ಡೊಮಿನಿಕಿ’ಯು ಚೀನಾದಲ್ಲಿ ಕಂಡುಬಂದಿದ್ದು, ಇದರ ಒಟ್ಟು ಉದ್ದ ಕೇವಲ ೦.೮೬ ಮಿ.ಮೀ ಆಗಿದೆ. ಬಸವನ ಹುಳುಗಳಿಗೆ ಮೆದುಳು ಇಲ್ಲವಾಗಿದ್ದು, ಇವು ತಮ್ಮ ಎರಡು ಬಗೆಯ ನರಕೋಶಗಳನ್ನು ಬಳಸುವ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಒಂದು ನರಕೋಶವು ತನಗೆ ಹಸಿವಾಗಿದೆಯೇ ಎಂದು ನಿರ್ಧರಿಸಿದರೆ, ಇನ್ನೊಂದು ನರಕೋಶವು ತನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರ ಇದೆಯೇ ಎಂದು ಗುರುತಿಸುತ್ತದೆ.
ಇವುಗಳ ಚಿಪ್ಪುಗಳಲ್ಲಿ ‘ಕ್ಯಾಲ್ಸಿಯಂ ಲ್ಯಾಕ್ಟೇಟ್’ ಅಂಶವು ಹೇರಳವಾಗಿದೆ. ಸಾಮಾನ್ಯವಾಗಿ ಎಲ್ಲೆಡೆ ಕಾಣಸಿಗುವ ಬಸವನ ಹುಳುಗಳು ಹೆಚ್ಚು ಕುಶಲ ಮತ್ತು ಸಂಕುಚಿತವಾಗಿರುತ್ತವೆ. ಆದ್ದರಿಂದ ಇವುಗಳು ತೀರಾ ಕಡಿಮೆ ಜಾಗದಲ್ಲೂ ಸುಲಭವಾಗಿ ತೆವಳುತ್ತಾ ಸಾಗಬಲ್ಲವು. ಈ ಬಸವನ ಹುಳುಗಳು ಮರಗಳ ಮೇಲೆ ಸಡಿಲವಾದ ತೊಗಟೆಯ ಕೆಳಗೆ ಅಥವಾ ಕಲ್ಲಿನ ಚಪ್ಪಡಿಗಳು, ನೆಲದ ಮೇಲೆ ಬಿದ್ದ ಮರದ ಹಲಗೆಗಳಂತಹ ಸೀಮಿತ ಸ್ಥಳಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇಂತಹ ಸ್ಥಳಗಳಲ್ಲಿ ಇವುಗಳಿಗೆ ಸುಲಭವಾಗಿ ತೆವಳಿಕೊಂಡು ಸಾಗಲು ಸಾಧ್ಯವಾಗುವುದು ಅಲ್ಲದೇ ತಮ್ಮನ್ನು ಬೇಟೆಯಾಡುವ ಪ್ರಾಣಿಗಳಿಂದ ರಕ್ಷಣೆಯನ್ನು ಪಡೆಯಲು ಸಹಾಯವಾಗುತ್ತದೆ. ಇಂತಹ ಸ್ಥಳಗಳಲ್ಲೇ ಇವುಗಳು ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ.


ಅಪಾಯಕಾರಿ ಶಂಖಹುಳು
ಕೆಲವರಿಗೆ ಕಪ್ಪೆಚಿಪ್ಪು, ಶಂಖಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸವಿರುತ್ತದೆ. ಅಂಥವರಿಗೆ ಈ ಕೋನ್ ಎಂಬ ಶಂಖವು ಹಿಡಿಸದೇ ಇರದು. ಆದರೆ ಅದರ ಸೌಂದರ್ಯಕ್ಕೆ ಮರುಳಾಗಿ ಅದನ್ನು ಮುಟ್ಟಲು ಹೋದರೆ, ಈ ಪುಟ್ಟ ಶಂಖಹುಳು ಜೀವಕ್ಕೇ ಎರವಾಗುವಷ್ಟು ಶಕ್ತಿಶಾಲಿಯಾಗಿದೆ. ಸಾಗರದಾಳದಲ್ಲಿ ವಾಸಿಸುವ ಈ ಹುಳುವಿಗೆ ಈಟಿಯಂಥ ಕೊಕ್ಕೆಯಿದ್ದು, ಅದರ ಮೂಲಕ ಮಾರಣಾಂತಿಕ ವಿಷವನ್ನು ದೇಹಕ್ಕೆ ಚುಚ್ಚಬಲ್ಲದು. ಈ ಕೊಕ್ಕೆಯು ಮನುಷ್ಯರ ಚರ್ಮದ ಒಳಗೆ ಸಲೀಸಾಗಿ ಹೋಗಬಲ್ಲದು. ಗಟ್ಟಿಯಾದ ಕೈಗವಸನ್ನು ತೊಟ್ಟಿದ್ದರೂ ಅವುಗಳ ಒಳಗೂ ಹೊಕ್ಕಬಲ್ಲಷ್ಟು ಮೊನಚಿರುತ್ತದೆ.
ತನ್ನ ಈ ಮೊನಚಾದ ಕೊಕ್ಕೆಯಿಂದಲೇ ಮೀನುಗಳನ್ನು ಒಂದೆರಡು ಸೆಕೆಂಡುಗಳಲ್ಲೇ ದುರ್ಬಲಗೊಳಿಸಬಲ್ಲದು. ಕೊಕ್ಕೆಯನ್ನು ತನ್ನ ಬೇಟೆಗೆ ಚುಚ್ಚಿ ನಂತರ ವಿಷವನ್ನು ಬಿಡುಗಡೆ ಮಾಡಿ ಕೆಲವೇ ನಿಮಿಷಗಳಲ್ಲಿ ಅದನ್ನು ತಿಂದು ಹಾಕುತ್ತದೆ. ಮೀನಿಗಷ್ಟೇ ಅಲ್ಲ, ಮನುಷ್ಯರಿಗೂ ಇದು ಮಾರಣಾಂತಿಕ. ಈ ಶಂಖಹುಳುವಿನ ವಿಷದ ಒಂದು ಹನಿ ಇಪ್ಪತ್ತು ಮಂದಿಯನ್ನು ಕೊಲ್ಲಬಲ್ಲಷ್ಟು ಪ್ರಭಲವಾಗಿರುವುದರಿಂದ ಇದಕ್ಕೆ ‘ಸಾಗರದಲ್ಲಿನ ಅತಿ ಹೆಚ್ಚು ವಿಷಕಾರಿ ಪ್ರಭೇದ’ ಎಂದು ಕರೆಯಲಾಗಿದೆ. ‘ಕೋನೊಟಾಕ್ಸಿನ್’ ಎಂದು ಕರೆಸಿಕೊಳ್ಳುವ ಈ ವಿಷವು ಮನುಷ್ಯನ ನರವ್ಯೂಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನುಷ್ಯರಿಗೆ ಚುಚ್ಚಿದರೆ ಸಾಕು, ತೀವ್ರ ನೋವಿನೊಂದಿಗೆ ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ದೃಷ್ಟಿ ಮಸುಕಾಗುವುದು, ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದರೆ, ಚುಚ್ಚಿದ ಕೆಲವೇ ಗಂಟೆಗಳಲ್ಲಿ ಸಾವೂ ಸಂಭವಿಸಬಹುದು.


ಒಮ್ಮೆಗೇ ಹತ್ತು ಸಾವಿರ ಮೊಟ್ಟೆ ಇಡುತ್ತದೆ
ಒಂದು ಹುಳು ವರ್ಷಕ್ಕೆ ಬರೊಬ್ಬರಿ ಹತ್ತು ಸಾವಿರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟು ಸಂತತಿ ಬೆಳೆಸುತ್ತವೆ. ಮಳೆಗಾಲ ಪ್ರಾರಂಭವಾದಾಗ ಹುಲ್ಲು ಅಥವಾ ನೆಲದಲ್ಲಿ ಕಾಣಿಸುವ ಇದು ಬಿಸಿಲು ಬಂದಾಕ್ಷಣ ನೆರಳಿನ ಮೊರೆ ಹೋಗಿ ಜಮೀನಿನಲ್ಲಿ ಇರುವ ಪಂಪ್ ಶೆಡ್ಡು, ಮರದ ನೆರಳು, ಮನೆಗಳ ಗೋಡೆಗಳನ್ನು ಆಶ್ರಯಿಸುತ್ತದೆ. ರಾತ್ರಿ ವೇಳೆ ಹುಳುಗಳು ತನ್ನ ಕೆಲಸ ಪ್ರಾರಂಭಿಸಿ ಅಡಕೆ, ತೆಂಗಿನ ಮರಗಳನ್ನು ಏರಿ ತನಗಿಷ್ಟ ಬಂದಂತೆ ವರ್ತಿಸುತ್ತವೆ. ಇದರಿಂದ ಈ ಹುಳುಗಳು ಕೃಷಿಕನ ಬೆಳೆಗಳಿಗೆ ಒಂದು ರೀತಿಯಲ್ಲಿ ಮಾರಕವೆಂದೇ ಹೇಳಲಾಗಿದೆ. ಆದರೆ ಬಾಳೆ ತೋಟಗಳಲ್ಲಿ ಕತ್ತರಿಸಿ ಬಿಸಾಕಿರುವ ಎಲೆ, ಕಾಂಡ ಮುಂತಾದ ವ್ಯಾಪಕವಾದ ಕೃಷಿ ತ್ಯಾಜ್ಯಗಳನ್ನು ಭೂಮಿಯಲ್ಲಿ ವಾಸಿಸುವ ಬಸವನ ಹುಳುಗಳು ಆಹಾರವಾಗಿ ತಿನ್ನುವುದರಿಂದ ಇವುಗಳು ಒಂದು ರೀತಿಯಲ್ಲಿ ಕೃಷಿ ತ್ಯಾಜ್ಯ ನಿವಾರಕವೂ ಹೌದು ಎನ್ನುವ ಮಾತೂ ಇದೆ.
ಆಹಾರವಾಗಿ ಬಸವನ ಹುಳು
ಫ್ರೆಂಚ್ ಪಾಕಪದ್ಧತಿಯಲ್ಲಿ ಮತ್ತು ‘ಎಸ್ಕಾರ್ಗೋಟ್ ಲಾ ಬೌರ್ಗುಯಿಗ್ನೊನ್’ನಲ್ಲಿ ಬಸವನ ಹುಳುಗಳಿಂದ ತಯಾರಿಸಿದ ಖಾದ್ಯಗಳನ್ನು ನೀಡಲಾಗುತ್ತದೆ. ಆಹಾರಕ್ಕಾಗಿ ಬಸವನ ಹುಳುಗಳನ್ನು ಸಾಕುವ ಪದ್ಧತಿಯನ್ನು ‘ಹೆಲಿಕಲ್ಚರ್’ ಎಂದು ಕರೆಯಲಾಗುತ್ತದೆ. ಇವುಗಳನ್ನು ಸಾಕಲು ಒಣಹುಲ್ಲಿನ ಅಥವಾ ಒಣಮರದಿಂದ ತಯಾರಿಸಿದ ತಂತಿಯ ಪಂಜರದಲ್ಲಿ ಬಸವನ ಹುಳುಗಳನ್ನು ಕತ್ತಲೆಯ ಸ್ಥಳದಲ್ಲಿ ಇಡಲಾಗುತ್ತದೆ. ಕಾಪಿಸ್ಡ್ ವೈನ್, ದ್ರಾಕ್ಷಿ ಬಳ್ಳಿಗಳನ್ನು ಹೆಚ್ಚಾಗಿ ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ, ಬಸವನವು ಹೈಬರ್ನೇಶನ್‌ನಿಂದ ಹೊರಬಂದು ತಮ್ಮ ಲೋಳೆಯ ಹೆಚ್ಚಿನ ಭಾಗವನ್ನು ಒಣ ಮರ, ಒಣಹುಲ್ಲಿನ ಮೇಲೆ ಬಿಡುಗಡೆ ಮಾಡುತ್ತದೆ. ಈ ಹಂತದಲ್ಲಿ ಬಸವನ ಹುಳುಗಳನ್ನು ಅಡುಗೆಗೆ ಬಳಸಲಾಗುತ್ತದೆ. ಬೇಯಿಸಿದಾಗ ಅವುಗಳು ತುಸು ಅಂಟು ಅಂಟಾಗಿರುತ್ತದೆ. ಭೂಮಿಯಲ್ಲಿ ವಾಸಿಸುವ ಹಲವಾರು ಜಾತಿಯ ಬಸವನ ಹುಳುಗಳು ಜಗತ್ತಿನ ಬಡ ಸಮುದಾಯಗಳ ಜನರಿಗೆ ಸುಲಭವಾಗಿ ಪ್ರೋಟೀನ್ ಅಂಶ ಹೇರಳವಾಗಿರುವ ಆಹಾರದ ಮೂಲವಾಗಿದೆ. ಕೆಲವು ದೇಶಗಳಲ್ಲಿ, ದೈತ್ಯ ಆಫ್ರಿಕನ್ ಬಸವನ ಹುಳುಗಳನ್ನು ಆಹಾರಕ್ಕಾಗಿ ವಾಣಿಜ್ಯಿಕವಾಗಿ ಉತ್ಪಾದಿಸಲಾಗುತ್ತದೆ.
ಪರಾವಲಂಬಿ ರೋಗ ಪ್ರಸಾರಕ
ಬಸವನ ಹುಳುಗಳು ಪರಾವಲಂಬಿ ಕಾಯಿಲೆಗಳಾದ ಸ್ಕಿಸ್ಟೊಸೋಮಿಯಾಸಿಸ್, ಆಂಜಿಯೋಸ್ಟಾçAಗ್ಲಿಯಾಸಿಸ್, ಫ್ಯಾಸಿಯೊಲೊಪ್ಸಿಯಾಸಿಸ್, ಒಪಿಸ್ಟೋರ್ಚಿಯಾಸಿಸ್, ಫ್ಯಾಸಿಯೋಲಿಯಾಸಿಸ್, ಪ್ಯಾರಾಗೋನಿಮಿಯಾಸಿಸ್ ಮತ್ತು ಕ್ಲೋನೋರ್ಚಿಯಾಸಿಸ್‌ನೊಂದಿಗೆ ಸಂಬಂಧವನ್ನು ಹೊಂದಿದ್ದು, ಇವುಗಳು ಈ ರೋಗಗಳನ್ನು ಮನುಷ್ಯರಿಗೆ ಹರಡಬಹುದು.
ಸೌಂದರ್ಯವರ್ಧಕವಾಗಿ
‘ಕಾರ್ನು ಆಸ್ಪರ್ಸಮ್’ ತಳಿಯ ಬಸವನ ಹುಳುಗಳಿಂದ ಪಡೆದ ಕ್ರೀಮ್‌ಗಳನ್ನು ಸುಕ್ಕುಗಳು, ಒಣ ಚರ್ಮ ಮತ್ತು ಮೊಡವೆಗಳ ನಿವಾರಣೆಗಾಗಿ ಬಳಸಲಾಗುತ್ತದೆ. ಈ ಪ್ರಬೇಧದ ಬಸವನ ಹುಳುಗಳು ಒತ್ತಡಕ್ಕೆ ಒಳಗಾದಾಗ ಬಿಡುಗಡೆ ಮಾಡುವ ಸ್ರವಿಸುವಿಕೆಯು ಮನುಷ್ಯನ ಗಾಯಗೊಂಡ ಅಂಗಾಂಶಗಳ ಪುನರುತ್ಪಾದನೆಗೆ ಅನುಕೂಲವಾಗಬಹುದು ಎಂದು ಸಂಶೋಧನಾ ಅಧ್ಯಯನವು ತಿಳಿಸಿದೆ. ಬಸವನ ಹುಳುವಿನ ಚಲನೆಯ ವೇಗವನ್ನು ಮನುಷ್ಯನ ನಿಧಾನವಾದ ಕೆಲಸದ ಗತಿಯನ್ನು ವಿವರಿಸಲು ‘ಬಸವನ ಹುಳುವಿನ ಗತಿ’ ಎಂಬ ಅಭಿವ್ಯಕ್ತಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯ ಸೃಷ್ಟಿಗೂ ಅದರದ್ದೇ ಆದ ಒಂದೊಂದು ನಿರ್ದಿಷ್ಟ ಉದ್ದೇಶಗಳು ಇದ್ದೇ ಇರುತ್ತವೆ. ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರತಿಯೊಂದು ಜಿವಿಗಳ ಕೊಡುಗೆಯೂ ಅತ್ಯಮೂಲ್ಯ ಆಗಿರುತ್ತದೆ. ಅದೇ ರೀತಿ ಬಸವನ ಹುಳುವೂ ಪ್ರಾಕೃತಿಯು ತನ್ನ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.