Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಭೂತನಾಳ ಕೆರೆ ಹತ್ತಿರದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಜುಲೈ೨೫ರಂದು ಕಟ್ಲಾ ಮತ್ತು ರೋಹು ಮೀನು ಮರಿಗಳನ್ನು ತಲಾ ೧ ರೂ. ನಂತೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೯೪೫೯೫೯೭೦೪, ೯೯೦೦೭೭೬೨೦೫, ೦೮೩೫೨-೨೬೪೫೧೬ ಹಾಗೂ ೯೪೮೦೫೧೮೬೭೯ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಜಿಲ್ಲಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಾಲಿ ಬಸವೇಶ್ವರ ಸರ್ಕಲ್ ಹತ್ತಿರವಿರುವ ಕಣಬೂರು ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಿಕೋಟಾದ ಉಪ ಖಜಾನೆ ಕಚೇರೆಯು ಜುಲೈ ೨೮ರಿಂದ ತಿಕೋಟಾದ ಪ್ರಜಾಸೌಧಕ್ಕೆ ಸ್ಥಳಾಂತರಗೊಳ್ಳಲಿದ್ದು, ಸಾರ್ವಜನಿಕರು ಇನ್ನು ಮುಂದೆ ಖಜಾನೆ ಸೇವೆಗಳನ್ನು ಸ್ಥಳಾಂತರಗೊAಡಿರುವ ನೂತನ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ವಿಜಯಪುರ ಜಿಲ್ಲಾ ಖಜಾನೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ ಸೌಲಭ್ಯ ಒದಗಿಸುವ ಮೂಲಕ ಡಿಜಿಟಲ್ ಟಚ್ ನೀಡಲಾಗುತ್ತಿದೆ ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ.ಗುರುವಾರ ತಿಕೋಟಾ ತಾಲೂಕಿನ ಅರಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಕಸ್ ಸಂಸ್ಥೆಯಿಂದ ಸಿ.ಎಸ್.ಆರ್ ಅನುದಾನದಡಿ ಮಂಜೂರಾಗಿರುವ ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಮತ್ತು ಧಾಸ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ಅರಕೇರಿ ಎಲ್.ಟಿ-3ರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾ ಸಲಕರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಮಹಾನಗರಗಳ ಖಾಸಗಿ ಶಾಲೆಗಳಲ್ಲಿ ಸಿಗುವ ಅತ್ಯಾಧುನಿಕ ಸೌಲಭ್ಯಗಳನ್ನು ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒದಗಿಸಲು ಸಚಿವ ಎಂ. ಬಿ. ಪಾಟೀಲ ಅವರು ಸಿ.ಎಸ್.ಆರ್ ಅನುದಾನವನ್ನು ಬಳಸಿ ಸ್ಮಾರ್ಡ್ ಬೋರ್ಡ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಈ ಅನುದಾನವನ್ನು ಬಳಸಿ ಬಬಲೇಶ್ವರ ಮತಕ್ಷೇತ್ರದ ಸರಕಾರಿ ಶಾಲೆಗಳಲ್ಲಿ ಕಳೆದ ವರ್ಷ 25 ಮತ್ತು ಈ ವರ್ಷ 25 ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ. ಇದರಿಂದಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆ ಕಟ್ಟಿ ಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ ದಿ.27 ರವಿವಾರ ಬೆ. 10.30 ಗಂ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಗ್ರಂಥಾಲಯ ಸಭಾಂಗಣದಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಚಿಂತನ-ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿಸಲಾಗಿದೆ.ಬೆಂಗಳೂರಿನ ಬೇಲಿಮಠ ಮಹಾಸಂಸ್ಥಾನ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಬಿ.ಎಲ್.ಡಿ.ಇ ಅಧ್ಯಕ್ಷ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಚಿಂತನ ಬಳಗ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

Read More

ಅ.೧ ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಲು ಬಳ್ಳೊಳ್ಳಿ ಗ್ರಾಮಸ್ಥರ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಚಡಚಣ: ಇತ್ತಿತ್ತಲಾಗಿ ಸರಕಾರಿ ಶಾಲೆಗಳ ಜಮೀನನ್ನೆ ಒತ್ತುವರಿ ಮಾಡುವದು ಸರ್ವೆಸಾಮಾನ್ಯವಾಗಿದೆ ಇದಕ್ಕೆಲ್ಲ ಮುಖ್ಯ ಕಾರಣ ಗ್ರಾ.ಪಂ. ಅಥವಾ ಪ.ಪಂ. ಅಧಿಕಾರಿಗಳೆ ನೇರ ಹೋಣೆ ಏಕೆಂದರೆ ಕಾನೂನು ಬಾಹೀರವಾಗಿ ಹಣದ ಆಮಿಷಕ್ಕೆ ಒಳಗಾಗಿ ನಕಲಿ ಜಾಗದ ಉತಾರೆ ತಯಾರಿಸಿ ಕೊಡುತ್ತಿರುವದು, ಮುಂದಿನ ದಿನಮಾನಗಳಲ್ಲಿ ತುಂಬಾ ಅಪಾಯಕಾರಿಯಾಗಿದೆ. ಇದಕ್ಕೆ ಗ್ರಾ.ಪಂ.ಸದಸ್ಯರ ಒಲವು ಇಲ್ಲದೆ ಇಂಥಹ ಒತ್ತುವರಿ ಕೆಲಸಕ್ಕೆ ಯಾವ ಗ್ರಾ.ಪಂ.ಅಧಿಕಾರಿ ಒಪ್ಪುವದಿಲ್ಲ ಇಂಥಹ ಪ್ರಕರಣಗಳು ಹಳ್ಳಿಗಳಲ್ಲಿ ಅಲ್ಲದೆ ಪಟ್ಟಣಗಳಲ್ಲಿಯೂ ಪ್ರಕರಣಗಳು ನಡೆದಿದ್ದರು ಸರಕಾರದ ಅಧಿಕಾರಿಗಳ ಗಮನಕ್ಕೆ ತಂದರು ಏನು ಕ್ರಮ ಕೈಗೋಳ್ಳದಿರುವದು ಹಲವು ಅನುಮಾನಗಳಿಗೆ ಕಾರಣವಾಗುತ್ತಿವೆ.ಇದಕ್ಕೆ ಪುಷ್ಟಿ ಎಂಬಂತೆ ಬಳ್ಳೊಳ್ಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಒತ್ತುವರಿ ಮಾಡಿದ್ದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಅ.೦೧ ರಿಂದ ಶಾಲೆಗೆ ಬೀಗ ಜಡಿಯುವುದಾಗಿ ಬಳ್ಳೊಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದಾರೆ.ಈ ಕುರಿತು…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಮೊಟ್ಟ ಮೊದಲ ಬಾರಿಗೆ ಹವ್ಯಾಸಿ ಹಾಡುಗಾರರಿಗೋಸ್ಕರ ‘ಸ್ನೇಹಸಂಗಮ ಮೆಲೊಡೀಸ್ ಹಾಗೂ ಸ್ನೇಹಸಂಗಮ ಕರೋಕೆ ಸ್ಟುಡಿಯೋ ಚಡಚಣ’ ಇವರ ನೇತೃತ್ವದಲ್ಲಿ ಈಗಾಗಲೇ ವೇದಿಕೆ ಮೇಲೆ ಕಾರ್ಯಕ್ರಮ ಕೊಡುತ್ತಿರುವ ಪ್ರೊಫೆಷನಲ್ ಗಾಯಕರನ್ನು ಹೊರತುಪಡಿಸಿ ‘ನಾವೇನು ಬಾತ್ರೂಮ್ ಸಿಂಗರ್’ ಅಂತ ಹೇಳ್ತೀವಿ ಅಂತಹ ಸಂಗೀತ ಆಸಕ್ತರನ್ನ ಒಗ್ಗೂಡಿಸಿ, ಅವರಲ್ಲಿನ ಸಿಂಗಿಂಗ್ ಟ್ಯಾಲೆಂಟ್ ಅನ್ನು ಗುರುತಿಸಿ, ಸಂಗೀತ ತಜ್ಞರ ಹಾಗೂ ಗಾಯಕರ ಮಾರ್ಗದರ್ಶನ ಕೊಡಿಸಿ, ಸಮಾಜಕ್ಕೆ ಪರಿಚಯಿಸಲು “ಕ್ರೇಜಿ ಸಿಂಗರ್ ಅವಾರ್ಡ್- 2025 ಇವೆಂಟ್” ಎಂಬ ಉತ್ತಮ ವೇದಿಕೆಯೊಂದು ಸಿದ್ಧಗೊಂಡಿದೆ.ಚಡಚಣ ಪಟ್ಟಣದಲ್ಲಿ ಇದೇ ಜುಲೈ. 27 ರ ಭಾನುವಾರದಂದು ಬೆಳಿಗ್ಗೆ 09-00 ಗಂಟೆಗೆ ಚಡಚಣ ಪಟ್ಟಣದಲ್ಲಿರುವ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಲು ತಮ್ಮ ಹೆಸರು ಹಾಗೂ ಸ್ವವಿವರದೊಂದಿಗೆ ಸ್ನೇಹಸಂಗಮ ಕರೋಕೆ ಸಿಂಗಿಂಗ್ ಸ್ಟುಡಿಯೋ, ಕೃಷ್ಣಾ ಕಾಂಪ್ಲೆಕ್ಸ್, ಬಸ್ ನಿಲ್ದಾಣ ಚಡಚಣ ಅಥವಾ ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಗಜಾನಂದ ಸುತಾರ ಮೋ. 9964624624 ಇಲ್ಲಿಗೆ ಸಂಪರ್ಕಿಸಿ, ಜುಲೈ. 26…

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಬ್ಯಾಂಕ್ ಆಪ್ ಬರೋಡಾ ಶಾಖೆಯಲ್ಲಿ ೧೧೮ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಾಸ್ಥಾಪಕರಾದ ಅನೀಲಕುಮಾರ ಮಾತನಾಡಿ, ಸತತವಾಗಿ ೧೧೮ ವರ್ಷಗಳಿಂದ ಉತ್ತಮ ಗ್ರಾಹಕರ ಸ್ನೇಹಿ ಸೇವೆ ಸಲ್ಲಿಸುತ್ತಿರುವ ಬ್ಯಾಂಕ ಹತ್ತಾರು ಲಾಭದಾಯಕವಾದ ಉಳಿತಾಯ ಯೋಜನೆಗಳನ್ನು ತಂದಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದರು.ಈ ಸಂದರ್ಭದಲ್ಲಿ ಕಿರಿಯ ವ್ಯವಸ್ಥಾಪಕ ಚಂದ್ರಶೇಖರ ರಾಠೋಡ, ನಿಂಗಪ್ಪ ಭಜಂತ್ರಿ, ಬ್ಯಾಂಕ ಸಿಬ್ಬಂದಿಗಳಾದ ಗೂಳಪ್ಪ ವಡ್ಡೋಡಗಿ, ಗುರುರಾಜ ಅಡಕಿ, ಸಾಯಿ ನಾಯಕ್, ಮಹಾಂತೇಶ ಹಿಪ್ಪರಗಿ, ಪ್ರಜ್ವಲ್ ಅಡಕಿ, ಪ್ರಮೋದ ಬಿರಾದಾರ, ಯಲಗೂರಪ್ಪ ವಡ್ಡೋಡಗಿ, ಮೌನೇಶ ಅರಕೇರಿ ಉಪಸ್ಥಿತರಿದ್ದರು.

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಾಮಾನ್ಯ ಕಾನೂನಿನ ಅರಿವು ವ್ಯಾಪಕವಾಗಿ ಹದಿಹರೆಯದ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಕೆಯಾದಾಗ ಮಾತ್ರವೇ ದೇಶದ ಬದಲಾವಣೆ ಸಾಧ್ಯ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ್ವರ ಬಬಲೇಶ್ವರ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಕರ್ನಾಟಕ ವಿಜಯಪುರ ಜಿಲ್ಲಾ ಸಂಕುಲಗಳ ಶಾಲೆಗಳ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಹಮಿಲನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿದರು.ಸಂಸ್ಕಾರದ ಆಯ್ಕೆಯಲ್ಲಿ ಬದುಕಿನ ಉಸಿರು ಅಡಗಿರುತ್ತದೆ. ತಾಯಿ, ರೈತ, ಶಿಕ್ಷಕರುಗಳಿಗೆ ಯಾವುದೇ ಜಾತಿ, ಬೇಧ-ಭಾವ ಸಂಕೋಲೆಗಳ ಬಂಧನವಿಲ್ಲ. ಸಮಾಜದ ಅನಿಷ್ಠ ಪದ್ಧತಿ ದೂರವಾಗಬೇಕಾದರೆ ವಿದ್ಯಾರ್ಥಿ ದೆಸೆಯಲ್ಲಿಯೆ ವ್ಯಾಸಂಗ ಮಾಡಿರಬೇಕು ಎಂದರು.ಕೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ ವಿದ್ಯಾ ಭಾರತಿ ಸಂಕುಲಗಳು ಭಾರತೀಯ ಚಿಂತನೆಗಳನ್ನು ಎತ್ತರಿಸುವ ಪ್ರಯತ್ನ ಮಾಡುತ್ತಿದೆ. ನಮ್ಮೆಲ್ಲರಲ್ಲಿ ನಾವೆಲ್ಲ ಒಂದು ಎನ್ನುವ ಭಾವೆನೆ ಸದಾ ಇರಬೇಕು. ಶಿಕ್ಷಕರು ತಮ್ಮಲ್ಲಿ ವಿದ್ಯಾರ್ಥಿಗಳನ್ನ ವಿವಿಧ ಕ್ಷೇತ್ರದ ಬೆಳವಣಿಗೆಗೆ ಬೇಕಾದ ತ್ಯಾಗಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಕೃಷಿ ಮಾರುಕಟ್ಟೆಯಿಂದ ನಮ್ಮ ರೈತರಿಗೆ, ಕಾರ್ಯಕರ್ತರಿಗೆ ದೊರೆಯುವ ಪ್ರತಿಯೊಂದು ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡುತ್ತೆನೆಂದು ಎಪಿಎಂಸಿ ನಾಮನಿರ್ದೆಶಿತ ಸದಸ್ಯ ಉಮೇಶ ಪೂಜಾರಿ ಹೇಳಿದರು.ಗ್ರಾಮದ ಕಾಂಗ್ರೆಸ್ ಕಛೇರಿ, ಹಾಗೂ ಮನೆಯ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪಕ್ಷ ನನಗೆ ನೀಡಿರುವ ಈ ಅವಕಾಶವನ್ನು ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸುವ ಮೂಲಕ ಪಕ್ಷಕ್ಕೆ ಕೊಡುಗೆ ನೀಡುತ್ತೇನೆ, ಪ್ರತಿಯೊಬ್ಬ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು.ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯನ್ನವರ ಮಾತನಾಡಿ ಚಿಮ್ಮಡ ಗ್ರಾಮಸ್ಥರಿಗೆ ಸರಕಾರ ಎಪಿಎಂಸಿ ನಾಮನಿರ್ದೆಶಕ ಸ್ಥಾನವನ್ನು ನೀಡುವ ಮೂಲಕ ಉತ್ತಮ ಅವಕಾಶವನ್ನು ನೀಡಿದ್ದುಉ ಅದನ್ನು ಸದುಪಯೋಗ ಪಡೆದುಕೊಳ್ಳುತ್ತೇವೆ. ಅವಕಾಶ ನೀಡಿದ ಎಲ್ಲರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇವೆಂದರು. ಪ್ರಮುಖರಾದ ಅಶೋಕ ಮೋಟಗಿ, ಗ್ರಾ. ಪಂ ಸದಸ್ಯ ಚನ್ನಪ್ಪ ಪೂಜಾರಿ, ಅರುಣ ಗಾಣಿಗೇರ, ಶ್ರೀಶೈಲ ಮಠಪತಿ, ಮಹಾಲಿಂಗ ಬಳಗಾರ, ಪಿರಸಾಬ ನದಾಫ, ಅಶೋಕ ಚಿಮ್ಮಡ, ಮಹಾದೇವ ಕೋಳಿ,…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ತೇರದಾಳ ಶಾಸಕ ಸಿದ್ದು ಸವದಿಯವರ ೬೬ ನೇ ಜನ್ಮದಿನಾಚರಣೆಯ ನಿಮಿತ್ತ ಸ್ಥಳಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ, ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.ಜನ್ಮದಿನಾಚರಣೆಯ ನಿಮಿತ್ತ ಮಂಗಳವಾರ ಮುಂಜಾನೆ ಸ್ಥಳಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ ಶಾಸಕ ಸವದಿಯವರಿಗೆ ಗ್ರಾಮದ ಪ್ರಮುಖರಾದ ಶಾಸಕರ ಸೂಚನೆಯಂತೆ ಶಾಲು, ಹೂವಿನಹಾರ ತರದೆ ಬಡ ವಿದ್ಯಾರ್ಥಿಗಳಿಗೆ ಅಗತ್ಯವಾಗುವ ನೋಟ್‌ಬುಕ್ ನೀಡುವ ಮೂಲಕ ಶುಭಾಶಯ ಕೋರಿದರು. ಸ್ಥಳದಲ್ಲಿಯೇ ಬಡ ವಿದ್ಯಾರ್ಥಿಗಳನ್ನು ಕರೆಸಿ ಶಾಸಕರ ಕೈಯಿಂದಲೇ ಅವುಗಳನ್ನು ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ತಾ.ಪಂ.ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಕವಟಿ, ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಈಸಂಧರ್ಬದಲ್ಲಿ ಉಪಸ್ಥಿತರಿದ್ದರು.

Read More