ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣ ಪಂಚಾಯಿತಿಯಲ್ಲಿ ೨೦೨೪-೨೫ನೇ ಸಾಲಿನ ಪ್ರಧಾನಮಂತ್ರಿ ಇಂಟರ್ನ್ಶಿಪ್ ಸ್ಕಿಮ್ ಇನ್ ಟಾಪ್ ಕಂಪನಿಸ್ ಯೋಜನೆಯಡಿ ತರಬೇತಿಗೆ ಆಸಕ್ತರನ್ನು ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಇಂಟರ್ನ್ಶಿಪ್ ಸ್ಕಿಮ್ ಇನ್ ಟಾಪ್ ಕಂಪನಿಸ್ ಈ ಯೋಜನೆಯಡಿ ಉನ್ನತ ಮಟ್ಟದ ೫೦೦ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್ಶಿಪ್ ಮೂಲಕ ಕೌಶಲ್ಯವನ್ನು ವೃದ್ಧಿಸಲು ಯುವಕ, ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಚಿಸುವವರು ಇದೇ ತಿಂಗಳ ದಿ: ೩೧ ರ ಒಳಗಾಗಿ ಪೋರ್ಟಲನಲ್ಲಿ ಅವಶ್ಯಕ ದಾಖಲೆಗಳೊಂದಿಗೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಅಸಕ್ತಿ ಇರುವವನ್ನು ಅರ್ಹತೆ ಆಧಾರದ ಮೇಲೆ ನೋಂದಾಯಿಸಿಕೊಳ್ಳಲಾಗುವುದು.
ಅಭ್ಯರ್ಥಿಗಳು ೨೧ರಿಂದ ೨೪ ವಯಸ್ಸಿನ ವಯೋಮಾನದವರಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ ಹಾಗೂ ಬಿಎ ಸಹಿತ ಇತ್ಯಾದಿ ಪದವಿ ಪೂರ್ಣಗೊಂಡಿರಬೇಕು. ಕುಟುಂಬದ ಆದಾಯ ವಾರ್ಷಿಕ ೮ ಲಕ್ಷ ಮೀತಿಗೆ ಒಳಪಟ್ಟಿರಬೇಕು. ಕುಟುಂಬದ ಯಾವುದೇ ಸದಸ್ಯ ಸರ್ಕಾರದ ಖಾಯಂ ನೌಕರರಾಗಿರಬಾರದು. ತರಬೇತಿ ಅವಧಿ ೧೨ ತಿಂಗಳಗಳಾಗಿದ್ದು, ಈ ಅವಧಿಯಲ್ಲಿ ಸರಿಯಾಗಿ ಹಾಜರಾದ ಅಭ್ಯರ್ಥಿಗೆ ಮಾಸಿಕ ೫ ಸಾವಿರ ರೂ.ಬ್ಯಾಂಕ್ ಖಾತೆಗೆ ಸಂದಾಯಿಸಲಾಗುತ್ತದೆ. ಇಂಟನ್‌ಶಿಪ್‌ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ಆಯೋಜಿಸಿದ ಸ್ಥಳದಲ್ಲಿ ತರಬೇತಿ ಪಡೆಯಬೇಕು. ಇಂಟರ್ನ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ ಆರು.ಸಾವಿರ ರೂ. ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುತ್ತದೆ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
