ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಶೈಕ್ಷಣಿಕ, ಸಂಘಟನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ವರ್ಷದ ಕರ್ನಾಟಕ ರತ್ನ ಪುನಿತ್ ರಾಜಕುಮಾರ ಸ್ಪೂರ್ತಿ ಪ್ರಶಸ್ತಿಯನ್ನು ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ವಸುಂಧರಾ ರಾಷ್ಟ್ರೀಯ ಮಹಿಳಾ ಪ್ರಶಸ್ತಿ ಯನ್ನು ಶಿಕ್ಷಕಿ ಲಕ್ಷ್ಮೀಬಾಯಿ ಹಳೇಮನಿ ರವರಿಗೆ ಧಾರವಾಡದ ಸುವರ್ಣ ಸಮ್ಮುಚಾಯ ಭವನ ರಂಗಾಯಣದಲ್ಲಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸಮಾರಂಭವು ಕರ್ನಾಟಕ ಸೋಶಿಯಲ್ ಕ್ಲಬ್ ಧಾರವಾಡ ಹಾಗೂ ವಿಶ್ವಾಸ ಫೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಾಯಂಕಾಲ ಜರುಗಿತು.
ಪ್ರಶಸ್ತಿ ಪ್ರಧಾನವನ್ನು ಡಾ.ರಮೇಶ ಮಹದೇವಪ್ಪನವರ ಉದ್ಯಮಿಗಳು ಹುಬ್ಬಳ್ಳಿ, ಸಾಹಿತಿಗಳಾದ ಸುರೇಶ ಕೋರಕೊಪ್ಪ , ತೆರಿಗೆ ಅಧೀಕಾರಿಗಳು , ವೀಣಾ ಹೊಸಮನಿ , ಡಾ.ಶಿವಣ್ಣ ಜಿ,ಜಯಶ್ರೀ ಪಾಟೀಲ, ಮೃತ್ಯುಂಜಯ ಹಿರೇಮಠ, ಅನುಪಮಾ ಹಂಸಭಾವಿ, ಮಂಜುಳಾ ಬೆಣ್ಣಿ , ಪಂಡಿತ ಅವಜಿ ಹಾಗೂ ಡಾ.ಚಂದ್ರಶೇಖರ ಮಾಡಲಗೇರಿ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಮಂಡಳಿ ಬೆಂಗಳೂರು ರವರಿಂದ ಮಾಡಲಾಯಿತು.
ಪ್ರಶಸ್ತಿಗೆ ಆಯ್ಕೆ ಆಗಿದಕ್ಕೆ ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ, ಆಡಳಿತ ಮಂಡಳಿಯ ಸದಸ್ಯರು ಅರವಿಂದ ಕುಲಕರ್ಣಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಗಡದೆ, ಸುನಿತಾ ಗುಂಡದ,ವೀಣಾ ಗುಡಿಮಠ ಮುಂತಾದವರು ಹರ್ಷ ವ್ಯಕ್ತ ಪಡಿಸಿದ್ದಾರೆ

