ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಡ್ಲೇವಾಡ ಪಿಸಿಎಚ್ ಗ್ರಾಮದ ಚಿರಾಕಿ ನಸ್ರೂದ್ಧೀನ್ ದರ್ಗಾದ ೩ ದಿನಗಳ ಕಾಲದ ಉರುಸ್ ದಿ: ೨೭ ಗುರುವಾರದಂದು ಆರಂಭಗೊಳ್ಳಲಿದೆ.
ದಿ:೨೭ ರಂದು ಸಾಯಂಕಾಲ ಕುದುರೆ ಕುಣಿತ, ಗ್ರಾಮದ ಪ್ರಮುಖರು ಹಾಗೂ ಭಕ್ತಾಧಿಗಳಿಂದ ಗದ್ದುಗೆಗೆ ಗಂಧ ಏರಿಸುವುದು ನಂತರ ಲೆಕ್ಕಪತ್ರ ವಿವರಣೆ, ಭಕ್ತರಿಂದ ಕಾಣಿಕೆ ಸ್ವೀಕರಣೆ ತದನಂತರ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ.
ದಿ:೨೮ ಶುಕ್ರವಾರ ಬೆಳಿಗ್ಗೆ ನೈವಿಧ್ಯ, ದೇವರ ದರ್ಶನ ನಂತರ ಜಿದ್ದಾಜಿದ್ದಿನ ಗೀಗೀ ಪದಗಳು ಜರುಗುವವು.
ದಿ:೨೯ ಶನಿವಾರ ರಂದು ಮಧ್ಯಾನ್ಹ ಭಾರ ಎತ್ತುವುದು, ಸಾಯಂಕಾಲ ಜಂಗೀ ಕುಸ್ತಿ, ರಾತ್ರಿ ೧೦ ಘಂಟೆಗೆ ಜಮಖಂಡಿ ತಾಲ್ಲೂಕಿನ ಕುಲಹಳ್ಳಿ ಗ್ರಾಮದ ಶಿವಲಿಂಗೇಶ್ವರ ಪ್ರಸಾಧಿಕ ನಾಟ್ಯ ಸಂಘದಿಂದ ಸಾಮಾಜಿಕ ನಾಟಕ ಜರುಗುವುದು .
ಜಾತ್ರಾ ಪ್ರಯುಕ್ತ ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳಿಂದ ಬರುವಂತ ಭಕ್ತರಿಗೆ ದೇವರಹಿಪ್ಪರಗಿ ಹಾಗೂ ಇಂಡಿ ಪಟ್ಟಣಗಳ ಮೂಲಕ ಬಸ್‌ಗಳ ವ್ಯವಸ್ಥೆಯಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಸೋಮನಗೌಡ ಪಾಟೀಲ ಹಾಗೂ ಸಾಯಿಕುಮಾರ ಬಿಸನಾಳ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

