Author: editor.udayarashmi@gmail.com

ಇಟ್ಟಂಗಿಹಾಳ ಕೆರೆಗೆ ಸಚಿವ ಎಂ.ಬಿ.ಪಾಟೀಲ ಅವರಿಂದ ಬಾಗಿನ ಅರ್ಪಣೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತಿ ಎತ್ತರದ ಪ್ರದೇಶವಾಗಿರುವ ಇಟ್ಟಂಗಿಹಾಳಕ್ಕೆ ನೀರು ಹರಿಸುವುದು ಕಷ್ಟಕರ ಹಾಗೂ ಕಷ್ಟಸಾಧ್ಯವಾಗಿರುವುದನ್ನು ಛಲದಿಂದ, ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಸಾಕ್ಷಿಯಾಗಿ ಈ ಪ್ರದೇಶದಲ್ಲಿ ನೀರು ಹರಿಸಿ ಇಟ್ಟಂಗಿಹಾಳ ಕೆರೆ ತುಂಬಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಜಲಸಂಪನ್ಮೂಲ ಇಲಾಖೆಯ ವತಿಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಕೆರೆಗೆ ಶನಿವಾರ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ಅತಿ ಎತ್ತರದ ಪ್ರದೇಶವಾದ ಇಟ್ಟಂಗಿಹಾಳ ಹಾಗೂ ಜಾಲಗೇರಿ ಕೆರೆಗಳಿಗೆ ನೀರು ಬರುವುದು ಅತ್ಯಂತ ಕಷ್ಟಕರವಾಗಿತ್ತು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಇಟ್ಟಂಗಿಹಾಳ ಕೆರೆ ತುಂಬಿಸಲು ಯೋಜನೆ ರೂಪಿಸಿಕೊಂಡು, ಕಷ್ಟಕರವಾದ ಈ ಕಾರ್ಯವನ್ನು ೧,೧೫೦೦೦ ಎಚ್.ಪಿ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರ ಆಯ್ಕೆಯನ್ನು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ ಅಭಯ್ ಕುಮಾರ್ ಎಸ್. ನಾಂದ್ರೇಕರ ಇವರು ಘೋಷಿಸಿದ್ದಾರೆ.ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಎಸ್. ಲೋಣಿ, ಉಪಾಧ್ಯಕ್ಷರಾಗಿ ಬರತೇಶ ಜಮಖಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದಗೊಂಡ ಆರ್.ರುದ್ರಗೌಡರ ಇವರನ್ನು ಆಯ್ಕೆ ಮಾಡಿರುತ್ತಾರೆ. ಇನ್ನುಳಿದ ಸದಸ್ಯರನ್ನು ಆಯ್ಕೆ ಮಾಡಲು ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರಿಗೆ ಅಧಿಕಾರವನ್ನು ವಹಿಸಿರುತ್ತಾರೆ. ಅದರಂತೆ ಸದಸ್ಯರುಗಳಾಗಿ. ಭೀಮರಾವ ಸಿ.ಮಸಳಿ, ಯಾಕುಬ್ ಜತ್ತಿ, .ಪ್ರಕಾಶ ಎಸ್.ಆಯತವಾಡ. ಗುರುಲಿಂಗ ಮಾಳಿ, ಶರಣು ಅವಟಿ, ಜೆ. ಎಂ. ಕೊರಬು ಇವರನ್ನು ಆಯ್ಕೆ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಸ್. ರುದ್ರಗೌಡರ, ಎಸ್.ಎಚ್ . ನಾಡಗೌಡ, ಕೆ. ಎಚ್.ಮುಂಬಾರೆಡ್ಡಿ, ಎಚ್. ಆರ್. ಉಟಗಿ, ಭೀಮಸೇನ ಕೊಖರೆ, ಜಿ.ಎಂ. ಪಾಟೀಲ ಬಿಜ್ಜರಗಿ ಮತ್ತು ಅನೇಕ ರೈತರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮೀಣ ಪೋಲಿಸ್ ಠಾಣಾ ಪಿ.ಎಸ್.ಐ ಸೋಮೇಶ ಗೆಜ್ಜಿ ಹಾಗೂ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ನಡೆದಿದೆ.ಸಾತಲಗಾಂವ ಗ್ರಾಮದ ದುಂಡಪ್ಪ ಶರಣಪ್ಪ ಮುಳಸಾವಳಗಿ ಇವರು ಪೋಲಿಸ್ ಠಾಣೆಗೆ ಕರೆ ಮಾಡಿ, ನಮ್ಮ ಕುಟುಂಬದ ಮೇಲೆ ಹಲ್ಲೆ ಮತ್ತು ಕೊಲೆ ಮಾಡಲು ಒಂದು ಗುಂಪು ನಾಲ್ಕು ವಾಹನಗಳು ತೆಗೆದುಕೊಂಡು ಬಂದಿದ್ದು, ಬೆದರಿಗೆ ಹಾಕುತ್ತಿದ್ದಾರೆ‌ ಎಂದು ತಿಳಿಸಿದರು. ಆ ನಂತರ ಸ್ಥಳಕ್ಕೆ 112 ಪೋಲಿಸರು ಬೇಟಿ ನೀಡುತ್ತಿದ್ದಾಗ, ಆಗ ಅಲ್ಲಿ ಗ್ರಾಮದ ಜನರು ಸ್ವಿಪ್ಟ ಕಾರನ್ನು ನಿಲ್ಲಿಸಿ ಅವರ ಜೊತೆ ಬಾಯಿ ಮಾಡುತ್ತಿದ್ದರು. ಆಗ ಕಾರ ಹತ್ತಿರ ಹೋಗಿ ಅದರಲ್ಲಿದ್ದವರಿಗೆ ವಿಚಾರಿಸಲಾಗಿ ಅಫಜಲಪುರ ಗ್ರಾಮದವರಾಗಿದ್ದು ತಮ್ಮ ಹೆಸರು ರವಿ ಪೂಜಾರಿ, ಸಚೀನ ಸುತಾರ, ಈಶ್ವರ ಗಂಗಾವತಿ, ಪ್ರಕಾಶ ಸೀತನೂರ ಅಂತಾ ಹೇಳಿದ್ದಾರೆ.ಆಗ ಅವರಿಗೆ ಇನ್ನಷ್ಟು ವಿಚಾರಿಸಲು ಮಾತನಾಡುವಾಗ ಅಷ್ಟೊತ್ತಿಗೆ ಅಲ್ಲಿ ಒಂದು ಎರಟಿಗಾ ಕಾರು ಬಂದು,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಮತ್ತು ಹೈಟೆಕ್ ಆಯುರ್ವೇದ ಆಸ್ಪತ್ರೆ ಹಾಗೂ ಶೈಕ್ಷಣಿಕ ಭವನದ ಉದ್ಘಾಟನೆ ಸಮಾರಂಭ ಜುಲೈ 27 ರಂದು ರವಿವಾರ ನಗರದದಲ್ಲಿ ನಡೆಯಲಿದೆ.ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್.ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಆವರಣದಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಬೇಲಿಮಠ ಮಹಾಸಂಸ್ಥಾನದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಜಿ ಉದ್ಘಾಟನೆ ನೆರವೇರಿಸಲಿದ್ದಾರೆ.ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Read More

ಛಾಯಾಗ್ರಾಹಕರ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಛಾಯಾಗ್ರಾಹಕರ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ಼್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ನಗರದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜಿಲ್ಲಾ ಘಟಕ‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ‌ ತಂತ್ರಜ್ಞಾನ‌ ಯುಗದಲ್ಲಿ ಛಾಯಾಗ್ರಾಹಕರಿಗೂ ಅನೇಕ‌ ಸವಾಲುಗಳಿದ್ದು, ಆರ್ಟಿಫಿಶಿಯಲ್ ಇಂಟಲಿಜನ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾವಣೆಗೆ ತಕ್ಕಂತೆ ವೃತ್ತಿಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯ ಛಾಯಾಗ್ರಾಹಕರಿಗೆ ಹೋಲಿಸಿದರೆ ಇಂದಿನ ತಂತ್ರಜ್ಞಾನ ಅನುಕೂಲವಾಗಿದೆ. ಛಾಯಾಗ್ರಾಹಕರ ಬೇಡಿಕೆಯಾದ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು‌ ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ, ಮಾಜಿ‌ ಡಿಸಿಎಂ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್. ಎಸ್.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೊನ್ನುಟಗಿ ೩೩/೧೧ ಕೆವ್ಹಿ ಉಪ-ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೋಲಾರ ಕಾಮಗಾರಿ ಕೈಗೊಳ್ಳುವುದರಿಂದ ಜುಲೈ ೨೮ ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ೩೩/೧೧ ಕೆವ್ಹಿ ಹೊನ್ನುಟಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಬ್ಯಾಂಕ-೧ರ ಮೇಲೆ ಬರುವ ಎಫ್-೧ ಆಹೇರಿ ಐಪಿ, ಎಫ್ ೧ ಶಿವಣಗಿ ಐಪಿ, ಎಫ್-೩ ಕುಮಟಗಿ ಐಪಿ, ಎಫ್-೬ ಸಂಗನಬಸವ ಶಾಲೆ ಎಫ್-೭ ಶಿವಣಗಿ ನಿರಂತರ ಜ್ಯೋತಿ ಎಫ್-೧೦ ನೀರು ಸರಬರಾಜು ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಕ ಅಭಿಯಂತರರು ಕೋರಿದ್ದಾರೆ.

Read More

ಜಿಲ್ಲಾ ಪಂಚಾಯತ್ ಸಿಇಓ ರಿಷಿ ಆನಂದ ಅವರಿಂದ ಸಿಂದಗಿ, ಆಲಮೇಲ ಮತ್ತು ಇಂಡಿ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಸಿಂದಗಿ, ಆಲಮೇಲ ಮತ್ತು ಇಂಡಿ ತಾಲೂಕುಗಳಿಗೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಪ್ರತಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಸಿಂದಗಿ ತಾಲೂಕಿನ ರಾಂಪುರ ಪಿ.ಎ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಪಿ.ಎ ಮತ್ತು ಗಣಿಹಾರ ಗ್ರಾಮ ಹಾಗೂ ಆಲಮೇಲ ತಾಲೂಕಿನ ಕೋರಹಳ್ಳಿ, ಹೂವಿನಹಳ್ಳಿ ಹಾಗೂ ವಿಬೂತಿಹಳ್ಳಿ ಗ್ರಾಮ ಮತ್ತು ಇಂಡಿ ತಾಲೂಕಿನ ಮರಸನಹಳ್ಳಿ, ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರ, ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ ಮತ್ತು ಹಲಗುಣಕಿ ಮತ್ತು ಹೊರ್ತಿ ಗ್ರಾಮಗಳಲ್ಲಿ ಸಂಚರಿಸಿ, ಪ್ರತಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಡಿ ಅನುಷ್ಠಾನಗೊಂಡ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಸಂಸತ್ ಗೆ ಚುನಾವಣೆ ಜರುಗಿತು.ಶಿಕ್ಷಕರು ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಲು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಚುನಾವಣೆಯನ್ನು ನಡೆಸಿದರು. ಚುನಾವಣೆ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆ, ಹಿಂದಕ್ಕೆ ತೆಗೆದುಕೊಳ್ಳುವುದು, ಚಿಹ್ನೆ ವಿತರಣೆ, ಪ್ರಚಾರ ಕಾರ್ಯ ಭರದಿಂದ ಜರುಗಿತು. ನಂತರ ಶಿಕ್ಷಕರು ಮೊಬೈಲ್ ನಲ್ಲಿ ಇಲೆಕ್ಟ್ರಾನಿಕ ವೋಟಿಂಗ್ ಮಷಿನ್ ಅಪ್ ದೌನ್ಲೋಡ್ ಮಾಡಿ ಅದರಲ್ಲಿ ಮಕ್ಕಳಿ ನೀಡಿದ ಚಿಹ್ನೆಯನ್ನು ಅಳವಡಿಸಿ ತರಗತಿವಾರು ಮತದಾನ ನಡೆಸಿದರು.ಈ ವೇಳೆ 5,6 ಹಾಗೂ 7ನೇ ತರಗತಿಯ ನೂರಾರು ಮಕ್ಕಳು ಆಧಾರ ಕಾರ್ಡ್ಗಳನ್ನು ತೋರಿಸಿ ಸಂಭ್ರಮದಿಂದ ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರು.ಈ ವೇಳೆ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಚುನಾವಣೆ ಸಿಬ್ಬಂದಿಗಳಾಗಿ ಗಂಡು ಮಕ್ಕಳು ಪೊಲೀಸ್, ಸೈನಿಕನ ವೇಷ ಧರಿಸಿದರೆ, ಹೆಣ್ಣು ಮಕ್ಕಳು ನರ್ಸ್, ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರ ವೇಷ ಧರಿಸಿ ಕರ್ತವ್ಯ ನಿರ್ವಹಿಸಿದರು. ಗಂಡು ಮಕ್ಕಳು ಹಳ್ಳಿ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಬಳೂತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಣಮಾಪುರ ಪಂಚಾಯಿತಿ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ ಮಾತನಾಡಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಸಹಕಾರಿಯಾಗಿದೆ ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.ಅತಿಥಿಗಳಾಗಿ ದೈಹಿಕ ಶಿಕ್ಷಣಾಧಿಕಾರಿ ಎಸ್ ಎಸ್ ಅವಟಿ ಮಾತನಾಡಿ, ಮಕ್ಕಳ ಆರೋಗ್ಯ ಮತ್ತು ಜ್ಞಾನ ಸಂಪಾದನೆಗೆ ಕ್ರೀಡೆ ಅಡಿಪಾಯ ಇದ್ದಂತೆ ಮತ್ತು ಪಾಲಕರು ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.ಸಾನಿಧ್ಯ ಶೆಂಕ್ರೆಯ್ಯ ಚಿಕ್ಕಮಠ, ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ಬನಾಗೊಂಡ, ಸಿಆರ್ಪಿ ಸಂಗಮೇಶ ಜಂಗಮಶೆಟ್ಟಿ, ಮುಖ್ಯ ಶಿಕ್ಷಕ ವ್ಹಿ.ಬಿ. ಬಡಿಗೇರ, ದುಂಡಪ್ಪ ಬನಾಗೊಂಡ, ಶ್ರೀಶೈಲ ಗಾಮನ್ನವರ, ಬಸವರಾಜ ಮಾಳೆದ, ಶೇಕಪ್ಪ ಔರಸಂಗ, ಜಗದೀಶ ಸುನಗದ, ಬಸವರಾಜ ಚೌಧರಿ, ಅಭಿಷೇಕ ಹೆಬ್ಬಾಳ, ನವೀನ್ ಕೋರಿ, ಶಿವಾನಂದ ಪಡಶೆಟ್ಟಿ , ಸುರೇಶ ಬಿರಾದಾರ ಉಪಸ್ಥಿತರಿದ್ದರು.

Read More

ಕಂದಕ ಹೂಳು ತೆಗೆಯುವುದು-ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಶನಿವಾರ ನಗರದ ಜಾಮೀಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.೨೦೦ಲಕ್ಷ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೋನಿವರೆಗೆ ಹಾಗೂ ರೂ.೧೦೦ ಲಕ್ಷ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಹಾಗೂ ಇಂಡಿ ರಸ್ತೆ ಶಹಾಪೇಟ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.೨೦೦ ಲಕ್ಷ ವೆಚ್ಚದಲ್ಲಿ ಶಹಾಪೇಟೆ, ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್ ವರೆಗೆ ಮಳೆ ನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡಿದರು.ಈ ಹಿಂದೆ ಸೆಪ್ಟಂಬರ್ ೨೦೨೪ ರಂದು ವಿಜಯಪುರ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಹಾಪೇಟೆ, ಸುಣಗಾರ…

Read More