ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಆರಾಧ್ಯ ದೈವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ (ರಾಚೋಟೇಶ್ವರ) ದೇವರ ಜಾತ್ರಾ ಮಹೋತ್ಸವ ಮಾರ್ಚ್ 30 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 30 ರವಿವಾರ ರಂದು ಮುಂಜಾನೆ 4 ಗಂಟೆಗೆ ಕೊಲ್ಹಾರ ಹಾಗೂ ಬೇಲೂರು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹುಲಗೇರಿ ಕಾಡಸಿದ್ದೇಶ್ವರ ಮಠದ ಗುರುದೇವ ಶಾಸ್ತ್ರೀಗಳು ಇವರ ನೇತೃತ್ವದಲ್ಲಿ ಹೋಮ, ಹವನ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಜರುಗುವವು. ಮುಂಜಾನೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಕಳಶದ ಮೆರವಣಿಗೆ ಮಧ್ಯಾಹ್ನ 1 ಗಂಟೆಗೆ ಪುರವಂತರ ಸೇವೆ, ಅಗ್ನಿ ಪ್ರವೇಶ, ಅನ್ನಸಂತರ್ಪಣೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

