ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಅಭಿನಂದನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಶೋಕ ಸೋಮಲು ವಾಲಿಕಾರ ಅವರಿಗೆ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ 2024ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಮಾ.27 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಬೆಂಗಳೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರಿಗೆ 2024ನೇ ಸಾಲೀನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು
ಪ್ರಶಸ್ತಿಯನ್ನು ಪಡೆದ ಅಶೋಕ ಸೋಮಲು ವಾಲಿಕಾರರವರಿಗೆ ಎಸ್ ಅರ್ ನಾಯಕ್ ಬರಟಗಿ ಇವರು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಾಗೆಯೆ ಭೂತನಾಳ ತಾಂಡಾದ ಹಿರಿಯರಾದ ಕಾಸು ನಾಯಕ, ಸಂತೋಷ ದಾಮುಲು ಕಾರಬಾರಿ, ಮುನ್ನು ಲಚ್ಚು ಡಾವ , ಹುನ್ನು ಶಂಕರ ನಾಯಕ, ಭೀಮು ರಾಮು ಢಾವ, ಮೋಹನ್ ಖುಬ್ಬು ಕಾರಬಾರಿ ಮತ್ತು ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯರಾದ ಡಾ.ಸುರೇಖಾ ಜಿ ರಾಠೋಡ ಮತ್ತು ಆರ್ ಬಿ ನಾಯಕ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

