Author: editor.udayarashmi@gmail.com

ಸಿಂದಗಿಯ ಜಮೀನುಗಳಲ್ಲಿ ಬಿಜೆಪಿ ಮುಖಂಡರಿಂದ ಬೆಳೆ ಸಮೀಕ್ಷೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ.೧ಲಕ್ಷ ಹಾಗೂ ಎಕರೆಗೆ ರೂ.೫೦ ಸಾವಿರ ಪರಿಹಾರ ನೀಡಬೇಕು. ಬಿತ್ತನೆ ಮಾಡದ ಖಾಲಿ ಜಮೀನುಗಳಿಗೆ ಬಿತ್ತನೆ ಮಾಡಲು ತತ್‌ಕ್ಷಣದಲ್ಲಿ ರೂ.೨೫ಸಾವಿರ ವಿಶೇಷ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ರಾ.ಪ್ರ.ಕಾರ್ಯದರ್ಶಿ, ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಆಗ್ರಹಿಸಿದರು.ಬಿಜೆಪಿಯ ರಾಜ್ಯ ವ್ಯಾಪಿ ಬೆಳೆ ಸಮೀಕ್ಷೆ ಅಭಿಯಾನದ ಅಂಗವಾಗಿ ಮುದ್ದೇಬಿಹಾಳದಿಂದ ಆರಂಭವಾಗಿ ಕುಂಟೋಜಿ, ಮಿಣಜಗಿ, ತಾಳಿಕೋಟೆ, ಬಿಬಿ.ಇಂಗಳಗಿ, ಕೆರುಟಗಿ, ಸಿಂದಗಿ ತಾಲೂಕಿನ ಹಂದಿಗನೂರ, ಬನ್ನೇಟ್ಟಿ ಪಿ.ಎ., ಬ್ಯಾಕೋಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇದುವರೆಗೆ ಬರಪೀಡಿತ ಪ್ರದೇಶವೆಂದು ಘೋಷಿಸದೇ ಇರುವುದನ್ನು ಟೀಕಿಸಿದ ಅವರು, ಮಳೆ ಕೊರತೆಯಿಂದ ರೈತರು ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ…

Read More

ಸಿಂದಗಿ ಸಾರಂಗಮಠದಲ್ಲಿ ೩೫೭ನೇ ಸದ್ವಿಚಾರ ಗೋಷ್ಠಿ | ಯಾತ್ರಿಕರಿಗೆ ಸನ್ಮಾನ | ಗ್ರಂಥ ಬಿಡುಗಡೆ | ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಿಮಾಲಯದ ಶಾಂತ ವಾತಾವರಣದಲ್ಲಿ ದೇವರ ಸಾನ್ನಿಧ್ಯವನ್ನು ಅನುಭವಿಸುವ ಅವಕಾಶ ನೀಡುವ ಕೈಲಾಸ–ಮಾನಸಸರೋವರ ಯಾತ್ರೆ ಭಕ್ತರಿಗೆ ಕೇವಲ ಪ್ರವಾಸವಲ್ಲ, ಅದು ಜೀವನದಲ್ಲಿ ಮರೆಯಲಾಗದ ಆಧ್ಯಾತ್ಮಿಕ ಅನುಭವವಾಗಿದೆ. ಈ ಯಾತ್ರೆಯು ಅತ್ಯಂತ ಪ್ರಮುಖ ಹಂತವಾಗಿದೆ ಎಂದು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.ಸಿಂದಗಿ ನಗರದ ಸಾರಂಗಮಠದಲ್ಲಿ ಗುರುಪೂರ್ಣಿಮೆ (ಕಡ್ಲಿಗರ ಹುಣ್ಣಿಮೆ) ಅಂಗವಾಗಿ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ೩೫೭ನೇ ಸದ್ವಿಚಾರಗೋಷ್ಠಿ ಹಾಗೂ ನೇಪಾಳ, ಚೀನಾ ಹಾಗೂ ಟಿಬೆಟ್ ಗಡಿ ಭಾಗದಲ್ಲಿರುವ ಹಿಮಾಲಯದ ಕೈಲಾಸ ಮಾನಸ ಸರೋವರ ತೀರ್ಥಯಾತ್ರೆಯ ಅನುಭವ ಉದ್ದೇಶಿಸಿ ಮಾತನಾಡಿದ ಅವರು, ಕೈಲಾಸ ಮಾನಸ ಸರೋವರವು ವಿಶ್ವದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಅಲ್ಲಿನ ದೈವಿಕ ವಾತಾವರಣ, ಆಧ್ಯಾತ್ಮಿಕ ಅನುಭವ ಮತ್ತು ಪ್ರಕೃತಿಯ ಸೌಂದರ್ಯ ಮನಸ್ಸಿಗೆ ಅಪಾರ ಸಂತಸ ಹಾಗೂ ನೆಮ್ಮದಿಯನ್ನು ನೀಡುತ್ತದೆ. ಈ ಯಾತ್ರೆ ಜೀವನದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಹಯೋಗದಲ್ಲಿಪೂಜ್ಯ ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯನ್ನು ಆಗಸ್ಟ್ ೧ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಗಾಂಧಿ ಚೌಕ ಹತ್ತಿರ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಉದ್ಘಾಟಿಸುವರು. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಶಾಸಕರು, ಜನಪ್ರತಿನಿಧಿಗಲು ಭಾಗವಹಿಸಲಿದ್ದಾರೆ.ಡಾ. ಮಂಜುನಾಥ್ ಮಸಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ನಾಗಠಾಣ ವಿಧಾನಸಭಾ ಮತಕ್ಷೇತ್ರದ ವಿಜಯಪುರ ನಗರ ವ್ಯಾಪ್ತಿಯಲ್ಲಿ ಬರುವ ೪೪ ಮತಗಟ್ಟೆಗಳ ಮತಗಟ್ಟೆ ಅಧಿಕಾರಿಗಳು ಇಲ್ಲಿಯವರೆಗೆ ೪೩,೩೧೧ ಗಣತಿ ನಮೂನೆ ವಿತರಿಸಿ, ೩೧,೦೬೩ ಗಣತಿ ನಮೂನೆಗಳನ್ನು ಡಿಜಿಟೈಜೇಶನ್ ಮಾಡಿದ್ದಾರೆ ಎಂದು ವಿಜಯಪುರ ತಹಶೀಲ್ದಾರ್ ತಿಳಿಸಿದ್ದಾರೆ.ನಗರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ ೨೩೩ ರಿಂದ ೨೭೬ ರವರೆಗೆ ಒಟ್ಟು ೪೪ ಮತಗಟ್ಟೆಗಳಲ್ಲಿ ಜೂ. ೩೦ ರಿಂದ ಜು. ೨೯ರವರೆಗೆ ಈ ಸಾಧನೆ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ.ಇನ್ನು ೧೨೨೪೮ ಗಣತಿ ನಮೂನೆಗಳನ್ನು ಮತದಾರರು ಭರ್ತಿ ಮಾಡಿ ಮರಳಿ ನೀಡದೆ ಇರುವುದರಿಂದ ಈ ನಮೂನೆಗಳು ಡಿಜಿಟೈಜೇಶನ್ ಆಗಿಲ್ಲ. ಈ ಕುರಿತು ಮಹಾನಗರ ಪಾಲಿಕೆಯ ಘನತಾಜ್ಯ ಸಂಗ್ರಹಣಾ ವಾಹನದಲ್ಲಿ ಮತ್ತು ಆಟೋರಿಕ್ಷಾಗಳಲ್ಲಿ ಎಲ್ಲ ಮತದಾರರಿಗೆ ಅರಿವು ಮೂಡಿಸಲಾಗಿದೆ. ಆದ್ಯಾಗ್ಯೂ ಕೆಲ ಮತದಾರರು ಬಿ.ಎಲ್.ಓ ಗಳಿಗೆ ಮರಳಿ ನಮೂನೆಗಳನ್ನು ಹಿಂತಿರುಗಿಸಿಲ್ಲ. ಕಾರಣ ಈಗಾಗಲೇ ಗಣತಿ ನಮೂನೆಗಳನ್ನು ಪಡೆದುಕೊಂಡ ಮತದಾರರು ಆ. ೧ರೊಳಗಾಗಿ ಗಣತಿ ನಮೂನೆಗಳನ್ನು ಬಿಎಲ್ ಒ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿರುವ ಒಟ್ಟು ೨,೨೫,೭೭೯ ಮತದಾರರು ಪೈಕಿ, ೨,೧೪,೨೨೮ ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ತಿಳಿಸಿದ್ದಾರೆ.ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ೨,೨೫,೭೭೯ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಪೈಕಿ ೧,೯೩,೪೮೮ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.ಆನ್ ಲೈನ್ ನಲ್ಲಿ ೧೭೯ ಮತದಾರರು ನಮೂನೆ ಸಲ್ಲಿಸಿದ್ದಾರೆ. ೫೯೬ ಮತದಾರರು ಗೈರು ಉಳಿದಿದ್ದರೆ, ೧೦,೨೬೧ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ , ೪೬೧೫ ಮತದಾರರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ೧೮೦೩ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದರೆ.ಮತದಾರರು ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್ ಸೈಟ್:voಣeಡಿs.eಛಿi.gov.iಟಿ ಅಥವಾ ಛಿeoಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ಜಿಲ್ಲಾ ವೆಬ್ ಪೋರ್ಟಲ್ viರಿಚಿಥಿಚಿಠಿuಡಿಚಿ.ಟಿiಛಿ.iಟಿ/eಟಿ/ ಸಂಪರ್ಕಿಸಬಹುದಾಗಿದೆ.ಬಬಲೇಶ್ವರ ಮತ್ತು ತಿಕೋಟಾ ತಾಲೂಕು ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Read More

ವಿಜಯಪುರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರಾಗೃಹ ಬಂದಿಗಳಿಗೆ ಔದ್ಯೋಗಿಕ ತರಬೇತಿ ನೀಡುವುದು ತುಂಬಾ ಸಂತೋಷದ ವಿಷಯ. ಬಿಡುಗಡೆ ಹೊಂದಿದ ನಂತರ ಅವರ ಆರ್ಥಿಕ ಸದೃಡತೆಗೆ ಇದು ಸಹಾಯಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ ಹೇಳಿದರು.ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾರಾಗೃಹದ ಪುರುಷ ಬಂದಿಗಳಿಗೆ ಕಂಪ್ಯೂಟರ್ ಹಾಗೂ ತಾಂತ್ರಿಕ ಸೇವಾ ತರಬೇತಿ ಹಾಗೂ ಮಹಿಳಾ ಬಂದಿಗಳಿಗೆ ಸಾಂಪ್ರದಾಯಿಕ ಕೈಕಸೂತಿ ಮತ್ತು ಡಿಸೈನಿಂಗ್ ಔದ್ಯೋಗಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಅತೀ ಅಗತ್ಯವಾದ ತಂತ್ರಜ್ಞಾನವಾಗಿದೆ. ಹಾಗಾಗಿ ಈ ತರಬೇತಿಯನ್ನು ಸಮಯ ವ್ಯರ್ಥ ಮಾಡದೇ ದಕ್ಷತೆಯಿಂದ ಕಲಿತು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಕಾರಾಗೃಹ ಅಧೀಕ್ಷಕರಾದ ಮಲ್ಲಿಕಾರ್ಜುನ ಎಸ್ ಮಾಳಿ ಅಧ್ಯಕ್ಷತೆ ವಹಿಸಿ, ಇದು ಕೇವಲ ಕಾರಾಗೃಹ ಮಾತ್ರವಲ್ಲ. ಇದು ಸುಧಾರಣಾ ಕೇಂದ್ರ,…

Read More

ಅಧಿಕಾರಿಗಳು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಟ್ಟಂಗಿ ಭಟ್ಟಿ, ಹೊಟೇಲ್ ಸೇರಿದಂತೆ ಯಾವುದೇ ಉದ್ಯೋಗ ಕ್ಷೇತ್ರಗಳಲ್ಲಿ ಬಾಲಕಾರ್ಮಿಕರು ಕಾರ್ಯನಿರ್ವಹಿಸದಂತೆ ಜಿಲ್ಲೆಯ ಸಂಬಂಧಿಸಿದ ಅಧಿಕಾರಿಗಳು ತೀವ್ರ ನಿಗಾವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಸೂಚಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಕಲ್ಯಾಣ ವಿಭಾಗದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-೨೦೦೫, ಬಾಲ್ಯವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಪೋಕ್ಸೋ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಮಾಜದಿಂದ ಬಾಲ್ಯವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಂದು ಇಲಾಖೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಯಾವುದೇ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಕ್ಕಳ ರಕ್ಷಣೆಗಾಗಿ ಪ್ರತಿ ತಿಂಗಳು ಕನಿಷ್ಠ ಒಂದು ವಿಶೇಷ…

Read More

ಡಿಜಿಟೈಜ್ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನದವರೆಗೆ ೨,೯೦,೧೮೪ ಗಣತಿ ನಮೂನೆ ವಿತರಿಸಲಾಗಿದ್ದು, ೨,೦೦,೧೦೯ ನಮೂನೆಗಳನ್ನು ಡಿಜಿಟೈಜ್ ಮಾಡಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಯೂ ಆಗಿರುವ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ ಹೇಳಿದರು.ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ​ಆನ್‌ಲೈನ್‌ನಲ್ಲಿ ೨,೪೬೦ ನಮೂನೆಗಳು ಸಲ್ಲಿಕೆಯಾಗಿವೆ.೩೨,೮೫೧ ಗೈರು ಹಾಜರಾದ ಮತದಾರರು, ೨೧,೧೫೮ ​ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದವರು ವಿವರಿಸಿದರು.೭,೫೨೩ ಮತದಾರರು: ​ಮರಣ ಹೊಂದಿದ್ದಾರೆ. ​ಈಗಾಗಲೇ ೭,೨೬೪ ಮತದಾರರು ಹಾಗೂ ೩೧೫ ನೋಂದಾಯಿಸಿಕೊಂಡಿದ್ದಾರೆ ಎಂದವರು ತಿಳಿಸಿದರು.ಈ ಪ್ರಕ್ರಿಯೆಗೆ ​ಆಗಸ್ಟ್ ೦೮ ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು. ​ಬಿಎಲ್‌ಒಗಳು ಮತದಾರರ ಮನೆ ಮನೆಗೆ ತೆರಳಿ ೨-೩ ಬಾರಿ ಭೇಟಿ ನೀಡಿದರೂ ಸಹ ಇನ್ನು ಸುಮಾರು ೨೧,೨೫೯ ಮತದಾರರ ಗಣತಿ ನಮೂನೆಗಳು ಮರಳಿ ಸಿಗದೆ ಬಾಕಿ ಉಳಿದಿವೆ ಎಂದರು.​ಸಾರ್ವಜನಿಕರು ಹಾಗೂ…

Read More

ಶಾಲಾವರಣದಲ್ಲಿ ತಂಬಾಕು ಉತ್ಪನ್ನ ನಿಷೇಧ | ದಿಢೀರ್ ದಾಳಿ ನಡೆಸಿ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತಿ ಶಾಲಾ ಆವರಣದಿಂದ ಒಂದು ನೂರು ಮೀಟರ್ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಹಾಗಾಗಿ ಶಾಲಾ ಶಿಕ್ಷಣ ಇಲಾಖೆ ಕೋಟ್ಪ ಕಾಯ್ದೆ ಪರಿಣಾಮಕಾರಿ ಜಾರಿಗೆ ಕ್ರಮವಹಿಸಬೇಕು. ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಮಿತಿ ಕಾಲ-ಕಾಲಕ್ಕೆ ದಿಢೀರ್ ದಾಳಿ ನಡೆಸಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಾದಕ ವಸ್ತು ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಶಾಲಾ ಆವರಣದ ತಾಲೂಕು ಸಮಿತಿಗೆ ದೂರು ಬಂದ ತಕ್ಷಣ ಕ್ರಮವಹಿಸಿ,ಶಾಲಾ ಅಭಿವೃದ್ಧಿ ಸಮಿತಿ ಒಳಗೊಂಡಂತೆ ಶಾಲಾ ಶಿಕ್ಷಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಈ ಮಾಹಿತಿ ನೀಡಬೇಕು. ಸಾಧ್ಯವಿದ್ದರೆ ಪೊಲೀಸ್…

Read More

ವಿಜಯಪುರ ದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವ ಬಹು ಅಮೂಲ್ಯವಾಗಿದ್ದು, ವಾಹನ ಚಾಲಕರು ನಿರ್ಲಕ್ಷ್ಯ ವಹಿಸದೇ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಹಾಗೂ ರಸ್ತೆ ನಿಯಮ ಪಾಲಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ರಸ್ತೆ ಅಪಘಾತ ತಡೆಗೆ ಕ್ರಮ ವಹಿಸಬೇಕು ಎಂದರು.ಜೊತೆಗೆ ನಿಯಮಿತವಾಗಿ ಸಭೆ ನಡೆಸುವ ಮೂಲಕ ಅಪಘಾತ ತಡೆಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗುರುತಿಸಲಾದ ಅಪಘಾತ ವಲಯದಲ್ಲಿ ಅಂಬುಲೆನ್ಸ್ ಇರಬೇಕು. ರಸ್ತೆ ಫಲಕ ಅಳವಡಿಸಿ, ತುರ್ತು ಸಂದರ್ಭದ ಅಗತ್ಯ ಮಾಹಿತಿ ವಿವರ ಹೊಂದಿರಬೇಕು ಎಂದರು.ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ‘ಸೇವ್ ಲೈಫ್…

Read More