Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮೊಯ್ಲಿ, ಮತ್ಯಾರೋ ಹೇಳಿದ್ರೆ ಯಾರೂ ಸಿಎಂ ಅಗಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದ ಸಿಎಂ ಸಿದ್ದರಾಮಯ್ಯ ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.ಈ ಬಗ್ಗೆ ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ ಎಂದರು.ಮೊಯ್ಲಿ ಅಥವಾ ಮತ್ಯಾರೋ ಹೇಳೋದ್ರಿಂದ ಯಾರೂ ಮುಖ್ಯಮಂತ್ರಿ ಅಗಲ್ಲ, ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಇದೇ ವೇಳೆ ಗುತ್ತಿದಾರರ ಬಾಕಿ ಬಿಲ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.ಬಾಕಿಯಿರುವ ಮೊತ್ತಗಳ ಪಾವತಿಗೆ ಗುತ್ತಿಗೆದಾರರ ಸಂಘ ಮನವಿ ಮಾಡಿದ್ದು, ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ದತ್ತಿ ಉಪನ್ಯಾಸ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪ್ರಗತಿಪರ ಚಿಂತಕರಾದ ಚಿನ್ನಪ್ಪ ಗಿಡ್ಡಪ್ಪಗೋಳ ಮಾತನಾಡಿ ಇಂದಿನ ದಿನಗಳಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಈ ವಚನಗಳ ಸಾರ ಅರಿತು ಕೊಂಡರೆ ಬದುಕು ಬಂಗಾರ ಆಗುತ್ತದೆ ಮತ್ತು ವಚನಗಳು ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯ ಮಾಡುತ್ತವೆ ಎಂದು ಹೇಳಿದರು.ಸಾನಿಧ್ಯ ವಹಿಸಿ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಮಾತನಾಡಿ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಹಾಗೂ ಕಾಯಕದ ಮಹತ್ವವನ್ನು ಈ ವಚನಗಳು ತಿಳಿಸುತ್ತವೆ ಹಾಗೂ ಶರಣರ ತತ್ವ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಬದುಕಬೇಕು ಎಂದು ತಿಳಿಸಿದರುದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಿರ್ಮಲಾ ಶೀಲವಂತ ಶರಣರ ಬದುಕು ಮತ್ತು ವಚನ ಸಾಹಿತ್ಯ ಎರಡು ಅರಿತರೇ ಅರಿವು(ಜ್ಞಾನ) ಸಿಗುತ್ತದೆ ಎಂದು ಹೇಳಿದರು.ಪ್ರಗತಿಪರ ರೈತ ಸಿದ್ದು ಬಾಲಗೊಂಡ ಮಾತನಾಡಿ ನಾವು ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಸ್ಕಾರ ಮತ್ತು ಕಾಯಕದ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಕುಮಸಗಿ ಗ್ರಾಮದ ಕಲ್ಲಾಲಿಂಗೇಶ್ವರ ಜಾತ್ರಾ ಮಹೋತ್ಸವ ಇದೇ ದಿನಾಂಕ ಮಾರ್ಚ್ 5 ರಂದು ಜರುಗಲಿದೆ.ಮಠದ ಪೀಠಾಧಿಪತಿ ಶಿವಾನಂದ ಶಿವಾಚಾರ್ಯರ ಸಂಕಲ್ಪದ ಮೇರೆಗೆ ವಿವಿಧ ಕಾರ್ಯಕ್ರಮಗಳು ಜರುಗುವುದುಜಾತ್ರಾ ಮಹೋತ್ಸವದ ನಿಮಿತ್ಯ ಬೆಳಿಗ್ಗೆ 5:00 ಕರ್ತೃ ಗದ್ದೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸಹಸ್ರನಾಮಾವಳಿ, ಮಂಗಳಾರುತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುವುದುಸಾಯಂಕಾಲ ಕಳಸದ ಮೆರವಣಿಗೆ ಕುಂಭ ,ಕಳಸ, ಡೊಳ್ಳು ,ಬಾಜಿ, ಚಿಟ್ಟಹಲಗೆಮೇಳ, ಬ್ಯಾಂಜೋ,ಪಟಾಕಿ ಸುಡುವುದರೊಂದಿಗೆ ಪುರವಂತರ ಸೇವೆಯೊಂದಿಗೆ ಬಹಳ ಅದ್ದೂರಿಯಾಗಿ ರಥೋತ್ಸವ ಜರುಗುವುದು.ಜಾತ್ರಾ ಮಹೋತ್ಸವದ ನಿಮಿತ್ಯ ಪುರಾಣಮಂಗಲ,ಧರ್ಮಸಭೆ, ಶ್ರೀಗಳ ತುಲಾಭಾರ, ಜಂಗಿ ಕುಸ್ತಿ, ಡೊಳ್ಳಿನ ಪದಗಳ ಸ್ಪರ್ಧೆ, ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ, ಸ್ವಾನಗಳ ಓಟದ ಸ್ಪರ್ಧೆ, ಸಂಗೀತ ರಸಮಂಜರಿ, ಸಾಮಾಜಿಕ ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಶಿಷ್ಟ ಜಾತಿಗಳ ವಿಶೇಷ ಘಟಕ (ಎಸ್.ಸಿ.ಪಿ) ಹಾಗೂ ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ (ಟಿ.ಎಸ್.ಪಿ)ಗಳ ಮೀಸಲು ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯದವರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ಧೋರಣೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಗಾಂಧಿ ಚೌಕ್ ದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಮೆರವಣಿಗೆಯುದ್ದಕ್ಕೂ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.ಕಲಬುರಗಿ ಮಾಜಿ ಸಂಸದ ಉಮೇಶ್ ಜಾದವ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿಸಲು, ದಲಿತ ಕೇರಿ, ಕಾಲೊನಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಅರ್ಹರಾದ ಎಲ್ಲ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ಪಟ್ಟಣದ ತಾಲ್ಲೂಕು ಪಂಚಾಯಿತ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ಯಾರಂಟಿಯೋಜನೆಯು ಕಟ್ಟ ಕಡೆಯ ಹಾಗೂ ಅರ್ಹ ವ್ಯಕ್ತಿಗಳಿಗೆ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳು ತಲುಪಿಸುವಲ್ಲಿ ಅಧಿಕಾರಗಳ ಜವಾಬ್ದಾರಿ ಮತ್ತು ಮಹತ್ವದ ಪಾತ್ರವಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯುವನಿಧಿ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಎಲ್ಲರಿಗೂ ತಲುಪಬೇಕು. ಅರ್ಹ ವ್ಯಕ್ತಿಗಳು ಸರಕಾರದ ಯೋಜನೆಯಿಂದ ಹೊರಗೆ ಉಳಿಯಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಂದೀಪ ರಾಠೋಡ, ಇಂಡಿ ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಚಡಚಣ ಹೆಸ್ಕಾಂ ಎಇಇ ವಿಜಯಕುಮಾರ್ ಹವಾಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಿಕಿ ಪುತಳಬಾಯಿ ಬಜಂತ್ರಿ, ಸನಾ ಶೇಖ, ಕೆಎಸ್‌ಆರ್‌ಟಿಸಿ ಘಟಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ರವಿವಾರರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.ನೂತನ ಆಡಳಿತ ಮಂಡಳಿ ನಿರ್ದೇಶಕರಾಗಿ ಸಾಲಗಾರರ ಸಾಮಾನ್ಯ ೫ ಸ್ಥಾನಕ್ಕಾಗಿ ಜರುಗಿದ ಚುನಾವಣೆಯಲ್ಲಿ ಪ್ರಭು ಹೊಸಮನಿ, ಪಾಂಡುರಂಗ ಜಾಧವ, ಧರ್ಮೇಂದ್ರ ಚಾಬುಕಸವಾರ, ಶ್ರೀಮಂತ ಗುಂದವಾನ, ಸಿದ್ದಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ.ಸಾಲಗಾರರ ಮಹಿಳಾ ಮಿಸಲು ೨ ಸ್ಥಾನಕ್ಕಾಗಿ ಜರುಗಿದ ಚುನಾವಣೆಯಲ್ಲಿ ಪುತಳಾಬಾಯಿ ಮುಚ್ಚಂಡಿ, ಶಿಲವಂತಿ ಪೂಜಾರಿ ಹಾಗೂ ಸಾಲಗಾರ ಹಿಂದುಳಿದ ಅ. ವರ್ಗದಿಂದ ಮೈಬೂಬ ಮಾದಾರ, ಸಾಲಗಾರ ಬ. ವರ್ಗದಿಂದ ಆನಂದ ಪವಾರ, ಪರಿಶಿಷ್ಟ ಜಾತಿ ಮಿಸಲು ಸ್ಥಾನದಿಂದ ವಿಠ್ಠಲ ಹರಿಜನ, ಬಿನ್ ಸಾಲಗಾರರ ಸ್ಥಾನದಿಂದ ಉಮೇಶ ಚವ್ಹಾಣ ಆಯ್ಕೆಯಾಗಿದ್ದಾರೆ.ಇನ್ನು ಪ.ಜಾ ಮಿಸಲು ಸ್ಥಾನಕ್ಕೆ ಪ್ರಭು ವಾಲಿಕಾರ ಒಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯರಾಮ ಚವ್ಹಾಣ ಘೋಷಣೆ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವಾತಂತ್ರ‍್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಿಕ್ಷಣ ಸಂಯೋಜಕ ಎ.ಸಿ.ಹುಣಸಗಿ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಇಂದು ಶೈಕ್ಷಣಿಕ ಸಂಸ್ಥೆಗಳೆಲ್ಲವೂ ಶಿಕ್ಷಣ ಸಂಸ್ಥೆಗಳನ್ನು ಉದ್ದಿಮೆಗಳನ್ನಾಗಿ ಮಾಡಿಕೊಂಡು ಹಣ ಗಳಿಸಲು ಮುಂದಾಗಿವೆ. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮ ಸಂಸ್ಥೆ ಬಡ ಜನರಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ, ಚೆನ್ನಮ್ಮ ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ಎಷ್ಟು ಕೊಡುತ್ತಾರೋ ಅಷ್ಟೇ ಹಣವನ್ನು ಸ್ವೀಕರಿಸುತ್ತಾ ಸಂಸ್ಥೆ ಮುನ್ನಡೆಸುತ್ತಿರುವುದು ಶ್ಲಾಘನೀಯ ಕೆಲಸ ಎಂದರು.ಜೆಡಿಎಸ್ ಮುಖಂಡ ಹಾಗೂ ವೈದ್ಯ ಡಾಕ್ಟರ್ ರಮೇಶ್ ಚವ್ಹಾಣ ಮಾತನಾಡಿ, ಈ ಶಿಕ್ಷಣ ಸಂಸ್ಥೆ ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಪ್ರಥಮ ಮಹಿಳಾ ಹೋರಾಟಗಾರ್ತಿಯ ಹೆಸರಿನಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಈ ಸಂಸ್ಥೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಮಿರಗಿ ಗ್ರಾ.ಪಂ ಗೆ ಕುಡಿಯುವ ನೀರಿಗಾಗಿ ಆಗ್ರಹಿಸಿ ಮಹಿಳೆಯರು ಸೋಮವಾರ ಬೀಗ ಹಾಕಿ ಪ್ರತಿಭಟನೆ ಮಾಡಿದರು.ತಾಲೂಕಿನ ಗೋಳಸಾರ ಗ್ರಾಮ ಮಿರಗಿ ಗ್ರಾ.ಪಂ ವ್ಯಾಪ್ತಿಗೆ ಬರುತ್ತಿದ್ದು ಗೋಳಸಾರದ ಗ್ರಾಮದ ವಸ್ತಿ ಪ್ರದೇಶಗಳಿಗೆ ಕುಡಿಯುವ ನೀರಿನ ತೊಂದರೆ ಇದೆ ಎಂದು ಆಗ್ರಹಿಸಿ ಇಂದು ಗೋಳಸಾರ ಗ್ರಾಮದ ವಸ್ತಿ ಪ್ರದೇಶದ ನಾಗರಿಕರು ಮಿರಗಿ ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸಿದರು.ಗೋಳಸಾರದ ವಸ್ತಿ ಪ್ರದೇಶದಲ್ಲಿ ೧೦೦ ಕ್ಕೂ ಹೆಚ್ಚು ಮನೆಗಳಿದ್ದು, ಕಳೆದ ಅನೇಕ ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಇದೆ. ಹೀಗಾಗಿ ಗ್ರಾ.ಪಂ ಗೆ ಕೀಲಿ ಹಾಕುವದು ಅನಿವಾರ್ಯ. ಬರುವ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸದಿದ್ದರೆ ಇಂಡಿ ತಾ.ಪಂ ಮತ್ತು ವಿಜಯಪುರ ಜಿ.ಪಂ ಗೆ ಬೀಗ ಹಾಕಿ ಪ್ರತಿಭಟನೆ ಮಾಡುವದಾಗಿ ತಿಳಿಸಿದರು.ಈ ಕುರಿತು ಮಿರಗಿ ಪಿಡಿಒ ಸಾಹೇಬರಿಗೆ ಮತ್ತು ಇಂಡಿ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳಿಗೆ ಅಲೆದಾಡಿ ಸಾಕಾಗಿದೆ ಎಂದರು..ಪ್ರತಿಭಟನೆಯಲ್ಲಿ ಕಾಂತಮ್ಮ ತೆಗ್ಗೆಳ್ಳಿ, ಮಲ್ಲಮ್ಮ ಭೂಸೆಟ್ಟಿ, ಶಾರದಾ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕು ನಿವೃತ್ತ ನೌಕರರ ಸಂಘದ ಯಾವದೇ ಸದಸ್ಯ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದಿಷ್ಟು ಧನ ಸಹಾಯ ನೀಡುವ ಬಗ್ಗೆ ಸೋಮವಾರ ನಡೆದ ಸಂಘದ ಸಭೆಯಲ್ಲಿ ನಿರ್ಣಯಿಸಲಾಯಿತು. ಆ ಧನ ಎಷ್ಟು ಎನ್ನುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಪೋಲ ಹೇಳಿದರು.ಸೋಮವಾರ ಆಯೋಜಿಸಿದ್ದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದಿನ ಸಭೆಗೆ ಸನ್ಮಾನಿತರಾದ ಎಸ್.ಆರ್.ರುದ್ರವಾಡಿ ಮಾತನಾಡಿ, ಸಂಘದ ಸದಸ್ಯನಾಗಿ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತೇನೆ. ನಿವೃತ್ತಿ ಜೀವನ ಸುಖಮಯವಾಗಿರುವ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಪಾಲಿಸುತ್ತೇನೆ ಎಂದು ಹೇಳಿದ ಅವರು ನಿವೃತ್ತ ನೌಕರರ ಸಂಘದ ಏಳಿಗೆಗಾಗಿ ೨೫೦೦೦ ರೂ, ಧನ ಸಹಾಯ ಮಾಡುವದಾಗಿ ಭರವಸೆ ನೀಡಿದರು. ಬಿ.ವೈ.ಬಿರಾದಾರ, ಬಿ.ಎಂ.ಹೊಟಗಾರ ಮಾತನಾಡಿದರು.ಹೊಸದಾಗಿ ನಿವೃತ್ತಿ ಹೊಂದಿ ಸಂಘದ ಸದಸ್ಯತ್ವ ಪಡೆದುಕೊಂಡಿರುವ ಎಇಇ ಬಿ.ವೈ.ಬಿರಾದಾರ, ಎಇಇ ಎಸ್.ಆರ್.ರುದ್ರವಾಡಿ, ಎಇಇ ಬಿ.ಎಂ.ಹೊಟಗಾರ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಎಇಇ ಯಾಗಿ ಪದೋನ್ನತಿ ಹೊಂದಿರುವ ಪಿ.ಬಿ.ತಳವಾರ ಅವರನ್ನೂ ಕೂಡಾ ಸನ್ಮಾನಿಸಲಾಯಿತು.ಸಂಘದ…
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಆಕ್ರೋಶ | ಅಧಿಕಾರಿಗಳ ನಿರ್ಲಕ್ಷ್ಯ | ಸಾರ್ವಜನಿಕರ ಹಿಡಿಶಾಪ ಉದಯರಶ್ಮಿ ದಿನಪತ್ರಿಕೆ ವರದಿ: ಶಂಕರ್ ಎಸ್ ಜೆಇಂಡಿ: ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಗಡಿಯನ್ನು ಸೇರಿಸುವ 548 (ಬಿ) ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಚ್ಚುಕಟ್ಟಾಗಿ ನಡೆಯದಕ್ಕೆ ಸ್ಥಳೀಯರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಗಡಿಭಾಗದಲ್ಲಿ ನಡೆಯುತ್ತಿದೆ.ಹೌದು, ಭವಿಷ್ಯದ ಜಿಲ್ಲಾ ಕೇಂದ್ರದ ಕನಸ್ಸು ಕಾಣುತ್ತೀರುವ ಇಂಡಿ ತಾಲ್ಲೂಕಿನ ಜನರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಅತ್ಯಂತ ಕೆಟ್ಟ ಅನುಭವವನ್ನು ಅನುಭವಿಸುತ್ತಿದ್ದಾರೆ. ಕಾರಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲವು ಕಡೆ ನಿಧಾನಗತಿಯಲ್ಲಿ ಸಾಗಿದರೆ, ಕೆಲವು ಕಡೆ ಚುರಕಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಯೋಜಿತ ರೂಪದಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಿಂದ ಪ್ರಾರಂಭಗೊಂಡ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇಂಡಿ ತಾಲೂಕಿನ ಅಗರಖೇಡ ಕ್ರಾಸವರೆಗೆ ನಡೆಯುತ್ತಿದ್ದು, ರೂಗಿ ಗ್ರಾಮದಿಂದ ಮತ್ತು ಇಂಡಿ ಪಟ್ಟಣಕ್ಕೆ…
