Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸಮಿತಿ ಆದೇಶದ ಮೇರೆಗೆ ಮಾರ್ಚ ೭ ರಂದು ಅಂಗನವಾಡಿ ನೌಕರರ ಮುಷ್ಕರ ಹಮ್ಮಿಕೊಂಡಿದ್ದರಿಂದ ದಿನಾಂಕ ೦೬-೦೩-೨೦೨೫ ರಂದು ಸಾಯಂಕಾಲ ೫ ಘಂಟೆಗೆ ವಿಜಯಪುರದಿಂದ ಹೊರಡಲಿರುವ ಗೋಲಗುಂಬಜ್ ಎಕ್ಸ್ಪ್ರೆಸ್ ಟ್ರೇನ್ ಮೂಲಕ ಎಲ್ಲಾ ಅಂಗನವಾಡಿ ನೌಕರರು ಮಾರ್ಚ್ ೭ ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.ಅಂಗನವಾಡಿ ನೌಕರರ ವೇತನ ಹೆಚ್ಚಳ, ಗ್ರಾಚ್ಯುಟಿ, ಅಂಗನವಾಡಿ ಕೇಂದ್ರಗಳನ್ನು “ಅಂಗನವಾಡಿ ಮಾಂಟಿಸ್ಸರಿ” ಎಂದು ಘೋಷಿಸಿ ಮೇಲ್ದರ್ಜೆಗೇರಿಸಬೇಕು. IಅಆS ಪ್ರತ್ಯೇಕ ನಿರ್ದೇಶಾನಾಲಯ ಮಾಡಬೇಕು. ಗುಜರಾತ್ ಹೈಕೋರ್ಟ್ ತೀರ್ಪು ಜಾರಿ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಸಂಪೂರ್ಣ ಕೇಂದ್ರಗಳಾಗಿ ಪರಿವರ್ತಿಸಲು ಮತ್ತಿತರ ಬೇಡಿಕೆಗಳಿಗಾಗಿ ಒತ್ತಾಯಿಸಿ ಡಿಸೆಂಬರ್ ೧೭-೧೮ ರಂದು ಜಿಲ್ಲಾ ಮಟ್ಟದ ಮತ್ತು ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೂ ಕೇಂದ್ರ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಬೇಡಿಕೆಗಳನ್ನು ಈಡೇರಿಸದಿರುವುದನ್ನು ವಿರೋಧಿಸಿ ಮಾರ್ಚ ೭ ರಂದು ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಸ್ಥಗಿತಗೊಳಿಸಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸುಹಾಸಿನಿ ಆನಂದ ಅವರು ಸಲ್ಲಿಸಿದ್ದ “ರೋಲ್ ಆಫ್ ವುಮೆನ್ ಫಾರ್ಮರ್ಸ್ ಆ್ಯಂಡ ಅಗ್ರಿಕಲ್ಚರಲ್ ಲೇಬರ್ಸ್ ಇನ್ ಎಕನಾಮಿಕ ಡೆವಲಪಮೆಂಟ್ ಇನ್ ವಿಜಯಪುರ ಡಿಸ್ಟ್ರಿಕ್ಟ: ಎ ಸೋಷಿಯೋಲಾಜಿಕಲ್ ಸ್ಟಡಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸುಹಾಸಿನಿ ಆನಂದ ಅವರು ಸಮಾಜಶಾಸ್ತ್ರ ವಿಭಾಗದ ಪ್ರೊ. ಎಮ್.ಪಿ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.ಡಾಕ್ಟರೇಟ್ ಪದವಿ ಪಡೆದಿರುವ ಸುಹಾಸಿನಿ ಆನಂದ ಅವರನ್ನು ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.
ರಚನೆ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ದೂರ ಇರೋಣಕನಸು ತೊರೆದುಭಾವ ಮರೆತುವಾಸ್ತವ ಪ್ರಜ್ಞೆಯಗೂಡಿನಲ್ಲಿ ಮುಸ್ಸಂಜೆ ಹಕ್ಕಿಮಿನುಗುವ ಚುಕ್ಕಿಮರದ ಪೊದರಿನಧ್ವನಿ ಇಂಚರಮಧುರ ಕಿವಿಯಲ್ಲಿ ಬೆಳದಿಂಗಳು ಕಡಲದಡಿಹೆಜ್ಜೆ ಹಾಕಿ ನಡೆದಿದ್ದೆಪಾದಕ್ಕೆ ಅಪ್ಪಳಿಸಿದಸಮುದ್ರದ ಅಲೆಗಳುನನ್ನ ಭ್ರಮೆಗೆ ನಕ್ಕವು ಬೇಡ ನನಗೆ ಜನ ಜಂಗುಳಿಬೇಡ ಬೇಡ ಶಬ್ದ ಸೂತಕನನಗೆ ನಾನೆ ನೆರಳುನಡೆ ಕಾಣುವ ಬೆಳಕುನೆಮ್ಮದಿಯ ಬದುಕು
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ತುಸುಮಟ್ಟಿನ ಗೌಪ್ಯತೆ ನಮ್ಮ ಶಕ್ತಿಯಾಗಿ ಪರಿಣಮಿಸಬಲ್ಲದು, ಬೇರೆಯವರ ಮಾತಿಗೆ ದಾಳವಾಗುವ ರೀತಿಯಲ್ಲಿ ನಮ್ಮ ಬದುಕನ್ನು ತೆರೆದಿಡಬಾರದು ಎಂಬುದು ಅನಾದಿಕಾಲದಿಂದಲೂರುಜುವಾತು ಪಟ್ಟಿರುವ ಸತ್ಯ.ಬದುಕಿನ ಪಯಣದಲ್ಲಿ ನಮ್ಮಎಲ್ಲಾ ಅಂತರಂಗದ ಭಾವನೆಗಳನ್ನು ಬಹಿರಂಗವಾಗಿಸಬಾರದು. ಕೆಲವೊಮ್ಮೆ ಏಕಾಂಗಿತನವು ಕೂಡ ಸಂತಸವನ್ನು ಕೊಡುವುದು ನಮ್ಮೊಳಗಿನ ಭಾವಗಳನ್ನು ನಾವೇ ಅನುಭವಿಸುತ್ತಾ ಅದರಲ್ಲಿಯೇ ಸಮಾಧಾನ ಕಂಡುಕೊಳ್ಳಬಹುದು.ಈ ಜೀವನವೇ ಒಂದು ಆಶಾಶ್ವತವಾದ ತೂಗುಯ್ಯಾಲೆ ಹಿಂದೆ ಮುಂದೆ ತೂಗಿ ಮತ್ತೆ ತನ್ನ ಮೊದಲಿನ ಸ್ಥಿತಿಗೆ ಬಂದು ನಿಲ್ಲುತ್ತದೆ ಎಂದ ಮೇಲೆ ನಾವು ಕೂಡ ಅದೆಷ್ಟೇ ಸಿರಿತನ ಮತ್ತು ಬಡತನಗಳ ನಡುವೆ ತೂಗುಯ್ಯಾಲೆ ಆಡಿದರೂ ನಮ್ಮ ಕಾಲುಗಳು ದೃಢವಾಗಿ ನೆಲದ ಮೇಲೆ ಊರುವಂತಿರಬೇಕು.ನೀವು ಬದುಕಿನಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಬದುಕಿನ ಯುದ್ಧದಲ್ಲಿ ಹೋರಾಡುತ್ತಿರುತ್ತಾನೆ, ಆದ್ದರಿಂದ ಬೇರೆಯವರ ವಿಷಯದಲ್ಲಿ ಯೋಚಿಸುವಾಗ ತುಸು ಕರುಣೆ ತೋರಿ.. ಅದಕ್ಕೇನು ನೀವು ವಿಶೇಷ ಬೆಲೆ ತೆರ ಬೇಕಾಗಿಲ್ಲ. ನಿಮ್ಮ ಸಂಗಾತಿ ನಿಮ್ಮ ಪ್ರತಿಬಿಂಬವಾಗಿದ್ದು ಆಯ್ಕೆ ಮಾಡಿಕೊಳ್ಳುವಾಗ ತುಸು…
ಬಂಜಾರಾ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು. ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ವೈಜ್ಞಾನಿಕ ಪ್ರಗತಿಯಲ್ಲಿ ಆಸಕ್ತಿಯನ್ನು ಉತ್ತೇಜಿಸಲು ವಿಜ್ಞಾನ ವಸ್ತು ಪ್ರದರ್ಶನ ಚಟುವಟಿಕೆಯನ್ನು ಆಯೋಜಿಸಲಾಗಿದೆ ಎಂದರು.ನಗರದ ಬಂಜಾರಾ ಪ್ರೌಢ ಶಾಲೆಯಲ್ಲಿ ಶುಕ್ರವಾರದಂದು ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ವಿಜ್ಞಾನ ದಿನ’ದ ನಿಮಿತ್ತ ಹಮ್ಮಿಕೊಂಡಿದ್ದ ‘ವಿಜ್ಞಾನ ವಸ್ತು ಪ್ರದರ್ಶನ’ ಕಾರ್ಯಕ್ರಮಕ್ಕೆ ಸಸಿಗೆ ನೀರನ್ನು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಭಾರತದ ರಾಷ್ಟ್ರೀಯ ವಿಜ್ಞಾನ ದಿನ ಒಂದು ವಿಶೇಷ ದಿನವಾಗಿದ್ದು, ವಿಜ್ಞಾನದ ವಿಸ್ಮಯಗಳ ಅನ್ವೇಷಣೆಗಳನ್ನು ಉತ್ತಮ ಪಡಿಸುವಲ್ಲಿ ವಿಜ್ಞಾನದ ಪಾತ್ರವನ್ನು ಸ್ಮರಿಸುವ ದಿನವಾಗಿದೆ ಎಂದರು.ಈ ವೇಳೆ ಎಸ್.ಬಿ.ದ್ಯಾಬೇರಿಯವರು ಮಾತನಾಡುತ್ತ. ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಮೂಲಕ ಆರೋಗ್ಯ ರಕ್ಷಣೆ, ಬಾಹ್ಯಾಕಾಶ ಸಂಶೋಧನೆ, ತಂತ್ರಜ್ಞಾನ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪ್ರಗತಿ ಮತ್ತು ಅವಿಷ್ಕಾರದಿಂದ ನಡೆಸಲ್ಪಡುವ ಭವಿಷ್ಯವನ್ನು ಖಚಿತಪಡಿಸುತ್ತೇವೆ. ಈ ದಿನವು…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಅನಾದಿ ಕಾಲದಿಂದಲೂ ಸಮಾಜ ಸುಧಾರಣೆಯ ಕೆಲಸವನ್ನು ಮಠಮಾನ್ಯಗಳು, ಮಠಾಧೀಶರು ಮಾಡಿಕೊಂಡು ಬಂದಿದ್ದಾರೆ, ಸಮಾಜ ಸುಧಾರಣೆಯಲ್ಲಿ ಮಠ, ಮಠಾಧೀಶರ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.ಅಫಜಲಪುರ ತಾಲೂಕಿನ ಸುಕ್ಷೇತ್ರ ನಿಲೂರ ಗ್ರಾಮದ ಶ್ರೀಗುರು ರಾಚೋಟೇಶ್ವರ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸೊಲ್ಲಾಪುರದ ಸಿದ್ದರಾಮೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಮ್ಮ ತಾಲೂಕಿನಲ್ಲಿ ಅನೇಕ ಮಠಗಳು ಭಕ್ತರಿಗೆ ಅನ್ನ, ಅಕ್ಷರ ಆಧ್ಯಾತ್ಮಗಳನ್ನು ಕರುಣ ಸುವ ಮೂಲಕ ತ್ರಿವಿಧ ದಾಸೋಹಗಳನ್ನು ಮಾಡುತ್ತಿವೆ. ನಿಜಕ್ಕೂ ಮಠಗಳು, ಮಠಾಧೀಶರ ಸಮಾಜ ಸುಧಾರಣೆ ಕಾರ್ಯ ಶ್ಲಾಘನೀಯ ಎಂದರು.ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿಲ್ಲ, ಅಲ್ಲಿ ಬಡವರ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತಿದೆ, ಹಸಿದು ಬಂದವರಿಗೆ ಅನ್ನ ದಾಸೋಹ ನಡೆಯುತ್ತಿದೆ, ಕಷ್ಟವೆಂದು ಬರುವವರಿಗೆ ಕಷ್ಟ ನಿವಾರಿಸುವ ಕೆಲಸವನ್ನು ಮಠಾಧೀಶರು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಸರ್ಕಾರಗಳು ಮಾಡಬೇಕಾಗಿರುವ ಅನೇಕ ಕೆಲಸಗಳನ್ನು ಇಂದು ಯಾವುದೇ ಫಲಾಪೇಕ್ಷವಿಲ್ಲದೆ ಮಠಗಳು,…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಪೈಕಿ ನೇರ ನಿಷ್ಠುರ ವಚನಗಳಿಂದ ಹೆಸರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರದ್ದು ಸಮ ಸಮಾಜ ಕಟ್ಟುವಲ್ಲಿ ಬಹಳ ದೊಡ್ಡ ಪಾತ್ರವಿತ್ತು ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಅಫಜಲಪುರ ಪಟ್ಟಣದ ಅಂಬಿಗರ ಚೌಡಯ್ಯ ನಗರದಲ್ಲಿ ಕೋಲಿ ಸಮಾಜದ ವತಿಯಿಂದ ನಡೆದ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತಿ ಹಾಗೂ ಪುರಸಭೆ ಸದಸ್ಯೆ ಅಪರ್ಣ ದತ್ತು ದೇವರನಾವದಗಿ ಅವರ ಅನುದಾನದಲ್ಲಿ ನಿರ್ಮಿಸಿರುವ ಚೌಡಯ್ಯನವರ ಪುತ್ಥಳಿ ಅನಾವರಣ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು ಇದು ನನ್ನ ಕೊನೆಯ ಚುನಾವಣಾ ರಾಜಕಾರಣವಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಲಿದ್ದೇನೆ. ಆದರೆ ಬದುಕಿರುವಷ್ಟು ವರ್ಷವು ಜನಸೇವೆ ಮಾಡಲಿದ್ದೇನೆ ಎಂದ ಅವರು ಕೋಲಿ ಸಮಾಜದ ಸಂಘಟನೆ, ಏಳಿಗೆಗಾಗಿ ದಿ. ವಿಠ್ಠಲ್ ಹೇರೂರ ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಸಮಾಜ ಸಾಕಷ್ಟು ಅಭಿವೃದ್ದಿ ದಿಸೆಯಲ್ಲಿ ಸಾಗುತ್ತಿದೆ. ಆದರೂ ಪಟ್ಟಣದಲ್ಲಿ ಸಮಾಜಕ್ಕೆ ಅನುದಾನ ಕೇಳಿದ್ದೀರಿ, ಕಳೆದ ಬಾರಿ ೫೦…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯೇ ಶಿಕ್ಷಣ ಸಂಸ್ಥೆಗಳ ಗುರಿಯಾಗಿರಲಿ ಎಂದು ಆಫಜಲಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ಹೇಳಿದರು. ಅವರು ಅಪಜಲಪುರ ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ಶ್ರೀ ರೇವಣಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಕ್ಕಮಹಾದೇವಿ ನಗರ ಅಫಜಲಪುರದ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದು ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ, ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಸಂಸ್ಕಾರದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಪಾಲಕರಿಗೂ ಕೂಡ ಸಂಸ್ಥೆಯ ಬಗ್ಗೆ ಹೆಮ್ಮೆ ಬರುತ್ತದೆ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳು ಕೂಡ ಬೆಳಕಿಗೆ ಬರುತ್ತವೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.ಬ್ರಹ್ಮಾನಂದ ಮಹಾಸ್ವಾಮಿಗಳು ಮೂರು ಜಾವದೀಶ್ವರ ಮಠ ಅಪಜಲಪುರ ಇವರು ಮಾತನಾಡುತ್ತಾ ಇಂದಿನ ಮಕ್ಕಳೇ ನಾಳಿನ ನಾಗರಿಕರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುತ್ತದೆ, ಮಕ್ಕಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ನಿತ್ಯ, ಸತ್ಯ ಬದುಕಿನ ಶ್ರೇಷ್ಠತೆಯನ್ನು ಜಗತ್ತಿಗೆ ನೀಡಿದವರು. ಅಂತಹ ಶರಣರ ಸತ್ಸಂಗದಿಂದ ಅಂತರಂಗ ಪರಿಶುದ್ಧವಾಯಿತು. ಅಂತಹ ಶ್ರೇಷ್ಠ ಶರಣರಲ್ಲಿ ಡೋಹರ ಕಕ್ಕಯ್ಯ ಒಬ್ಬರು ಎಂದು ಪ್ರೊ. ಬಿ.ಎಸ್. ಬೆಳಗಲಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಲಿಂಗಾಯತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಡೋಹರ ಕಕ್ಕಯ್ಯನವರ ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತ ಅವರು ಕಾಯಕ, ದಾಸೋಹ, ಸಮಾನತೆ ಪರಿಶುದ್ಧತೆ ಎಲ್ಲವೂ ಡೋಹರ ಕಕ್ಕಯ್ಯನವರ ವಚನದಲ್ಲಿ ಅಡಕವಾಗಿದೆ. ಬಸವಣ್ಣನವರಿಗಿಂತ ಹಿರಿಯರಾದರೂ ಆಧ್ಯಾತ್ಮದ ಹಸಿವನ್ನು ನೀಗಿಸಲು ಪುಣೆಯ ಹಳ್ಳ್ಳಿಯಿಂದ ಕಲ್ಯಾಣಕ್ಕೆ ಬಂದು ಅನುಭಾವಿಗಳಾಗಿ ಅಭಿನವ ಚನ್ನಮಲ್ಲಿಕಾರ್ಜುನ ಅಂಕಿತನಾಮ ಇಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ. ಆರು ವಚನಗಳು ಲಭ್ಯವಾಗಿವೆ ಅವೆಲ್ಲವೂ ಸಮಾನತೆಗಾಗಿ ರಚಿಸಿದಂತಹವುಗಳು ಎಂದರು.ಡಾ. ಸಂಗಮೇಶ ಮೇತ್ರಿ ಮಾತನಾಡಿ ಡೋಹರ ಕಕ್ಕಯ್ಯ ಕೆಳಸ್ತರದ ವ್ಯಕ್ತಿ ಗುರು, ಲಿಂಗ, ಜಂಗಮ, ದಾಸೋಹ ಕಲ್ಪನೆ ಇತ್ತು. ಸಾಮಾಜಿಕ ಸಾಮರಸ್ಯ ಬರಬೇಕು…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಗ್ರಾಮೀಣರ ಮಕ್ಕಳ ಪಾಲನೆಯ ಹೊಣೆಯನ್ನು ಸರ್ಕಾರ ಹೊತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸಂತೋಷ ಹರಿಜನ ಹೇಳಿದರು.ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಕೂಸಿನ ಮನೆಯ ಗ್ರಾಮ ಪಂಚಾಯತಿ ಮಟ್ಟದ ಮೇಲ್ವೀಚಾರಣಾ ಸಮಿತಿ ಸದಸ್ಯರಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳು ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿವೆ. ಕೆಲಸ ಅರಿಸಿ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಅಥವಾ ಇನ್ನಿತ್ತರೇ ಕೆಲಸದಲ್ಲಿ ತೊಡಗಿಕೊಳ್ಳುವ ಗ್ರಾಮೀಣ ಭಾಗದ ಕೂಲಿಕಾರರ ಮಕ್ಕಳ ಪಾಲನೆ-ಪೋಷಣೆಯನ್ನು ಈ ಯೋಜನೆಯ ಮೂಲಕ ತನ್ನ ಮಡಿಲಿಗೆ ಹಾಕಿಕೊಂಡಿದೆ. ಇದರಿಂದ ಸಹಸ್ರಾರು ಪಾಲಕರು ಮಕ್ಕಳ ಆರೈಕೆಯ ಚಿಂತಿಯಿಲ್ಲದೆ ಕೆಲಸದಲ್ಲಿ ತೊಡಗಿದ್ದಾರೆ ಎಂದರು.ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಅವರು ಮಾತನಾಡಿ, ತಿಕೋಟಾ ತಾಲೂಕಿನಾದ್ಯಂತ ೧೦ ಕೂಸಿನ ಮನೆಗಳು ಮಂಜೂರಾಗಿದ್ದು ಸರಕಾರದ ನಿರ್ದೇಶನದಂತೆ ಎಲ್ಲಾ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. ಮತ್ತು ಕೇಂದ್ರದ…
