ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬಡತನದಲ್ಲಿ ಕಷ್ಟಪಟ್ಟು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.92.83 ರಷ್ಟು ಅಂಕ ಪಡೆದು ಗ್ರಾಮೀಣ ಭಾಗದ ತಾಲ್ಲೂಕಿನ ಬಾಬಾನಗರ ಗ್ರಾಮದ ಶಿಲ್ಪಾ ಲಕ್ಕಣ್ಣ ತಳವಾರ ಎಂಬ ವಿಧ್ಯಾರ್ಥಿನಿ ಸಾಧನೆ ಮಾಡಿದ್ದಾರೆ.
ಐದನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೆಕುರುಬರ ವಸ್ತಿ ಬಾಬಾನಗರ, ಆರರಿಂದ ಹತ್ತನೆ ತರಗತಿಯನ್ನು ಆದರ್ಶ ವಿದ್ಯಾಲಯ ಕಗ್ಗೋಡ, ಪಿಯುಸಿ ವಿಜ್ಞಾನ ವಿಭಾಗ ವಿಜಯಪುರದ ಬೆನಕಟ್ಟಿ ಕಾಲೇಜಿನಲ್ಲಿ ಪೂರೈಸಿದ್ದಾರೆ.
ಕಡುಬಡತನದಲ್ಲಿ ಹಳ್ಳಿಯಲ್ಲಿಯೇ ಕಲಿತು ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಕುಟುಂಬಸ್ಥರು, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

