ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ಕಾರ್ಯಕರ್ತರ ಸಭೆ ಶುಕ್ರವಾರ ಜರುಗಿತು. ಸಭೆಯಲ್ಲಿ ತಾಲೂಕು ಸಂಚಾಲಕರನ್ನಾಗಿ ಬಸಲಿಂಗಪ್ಪ ಸಂಗಪ್ಪ ನಂದಿ ಅವರನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಆದೇಶ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅರವಿಂದ ಸಾಲವಾಡಗಿ ಮಾತನಾಡಿ, ರಾಜ್ಯದಲ್ಲಿ ೧೯೭೨ ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದರು. ಈ ಸಂಘಟನೆಯ ಮೂಲಕ ರಾಜ್ಯದಲ್ಲಿ ಶೋಷಣೆಗೊಳಗಾದ ಎಲ್ಲ ಸಮುದಾಯದ ಅಭಿವೃದ್ಧಿ ಶ್ರಮಿಸುವ ಮೂಲಕ ಈ ಸಮುದಾಯದ ಏಳ್ಗೆಗೆಗೆ ತೊಡಗಿಸಿಕೊಂಡು ಬರುತ್ತಿದೆ. ಡಾ.ಅಂಬೇಡ್ಕರ ಅವರು ಎಲ್ಲ ಸಮುದಾಯದ ಅನುಕೂಲಕ್ಕಾಗಿ ದೇಶದ ಸಂವಿಧಾನ ರಚಿಸಿದ್ದಾರೆ. ಇವರ ಆಶಯದಂತೆ ನಾವೆಲ್ಲರೂ ದೇಶದಲ್ಲಿ ಜೀವನ ಮಾಡಬೇಕೆಂದರು.
ನಮ್ಮ ಸಂಘಟನೆಯ ತಾಲೂಕು ಸಂಚಾಲಕರಾಗಿ ಆಯ್ಕೆಯಾದ ಬಸಲಿಂಗಪ್ಪ ನಂದಿ ಅವರು ನಮ್ಮ ಸಂಘಟನೆಯ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಸಮಿತಿಯ ನಿಯಮಾವಳಿಗೆ ಬದ್ಧವಾಗಿ ಶೋಷಿತ ಸಮುದಾಯಗಳ ಏಳ್ಗೆಗಾಗಿ, ಭಾರತ ಸಂವಿಧಾನದ ಆಶಯಗಳ ಅನುಷ್ಠಾನಕ್ಕಾಗಿ, ಅನ್ಯಾಯದ ವಿರುದ್ಧ ಸಾಮಾಜಿಕ ನ್ಯಾಯ, ನ್ಯಾಯ ನಿಷ್ಠೆ ಪ್ರಾಮಾಣಿಕತೆಯಿಂದ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮುಂಬರುವ ದಿನಗಳಲ್ಲಿ ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಂಘಟನೆಯನ್ನು ಬಲವರ್ಧನೆ ಮಾಡಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ಅಶೋಕ ಚಳಮರದ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೌನೇಶ ಹೆಬ್ಬಾಳ, ರಮೇಶ ಭಜಂತ್ರಿ, ಶಿವಾನಂದ ಜೋಗಿ, ಗೋಪಾಲ ಭಜಂತ್ರಿ, ಅಕ್ಷಯ ಹೊಸಮನಿ, ಗೋಪಾಲ ಭಜಂತ್ರಿ, ಹಣಮಂತ ಮ್ಯಾಗೇರಿ, ತಾಯಪ್ಪ ಮ್ಯಾಗೇರಿ, ಶಿವು ಭಜಂತ್ರಿ, ರಾಜು ಭಜಂತ್ರಿ, ಲಾಲು ಕೊರಬು, ಮಂಜುನಾಥ ಮ್ಯಾಗೇರಿ, ಧೂಳಪ್ಪ ಕಾರಜೋಳ ಇತರರು ಇದ್ದರು.

