Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ

ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ

ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸುಕ್ಷೇತ್ರ ತುಬಚಿಯ ಪವಾಡ ಪುರುಷ ಶಿವಲಿಂಗೇಶ್ವರರು
(ರಾಜ್ಯ ) ಜಿಲ್ಲೆ

ಸುಕ್ಷೇತ್ರ ತುಬಚಿಯ ಪವಾಡ ಪುರುಷ ಶಿವಲಿಂಗೇಶ್ವರರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು ರಥೋತ್ಸವ | ನಾಳೆ ಪಲ್ಲಕ್ಕಿ ಉತ್ಸವ | ಹಿಂದು-ಮುಸ್ಲಿಂ ಸೌಹಾರ್ದದ ಪ್ರತಿಬಿಂಬ

ಉದಯರಶ್ಮಿ ದಿನಪತ್ರಿಕೆ

ವರದಿ: ಎಸ್.ಎಮ್.ಇಟ್ಟಿ
ಜಮಖಂಡಿ: ತಾಲೂಕಿನ ತುಬಚಿ ಗ್ರಾಮ ಹಿಂದು ಮುಸ್ಲಿಮರ ಸಮನ್ವಯತೆಗೆ ಖ್ಯಾತಿ ಹೊಂದಿದೆ. ಧಾರ್ಮಿಕವಾಗಿ ಗ್ರಾಮಕ್ಕೆ ಸುಕ್ಷೇತ್ರದ ಸ್ಥಾನಮಾನ ಕಲ್ಪಿಸಿದ ಪವಾಡ ಪುರುಷ ಶಿವಲಿಂಗೇಶ್ವರರ ರಥೋತ್ಸವ ಇಂದು ಸಂಜೆ 7 ಗಂಟೆಗೆ ನಡೆಯಲಿದೆ.
ಡಾ. ಅಲ್ಲಮ್ಮಪ್ರಭು ಸ್ವಾಮಿಗಳು ನಾಗನೂರಮಠ (ಸಾವಳಗೇಶ ದೇವರು ವಿರಕ್ತಮಠ ತುಬಚಿ ಇವರ ನೇತೄತ್ವದಲ್ಲಿ ಏ.13 ರಂದು ಬೆಳ್ಳಿಗ್ಗೆ 11 ಗಂಟೆಗೆ ಪಲ್ಲಕ್ಕಿ ಉತ್ಸವ ಸಕಲ ವೈಭವಗಳೊಂದಿಗೆ ನಡೆಯಲಿದೆ.
ಮಠದ ವಿಶೇಷ: ಮೂರು ಅಂತಸ್ತಿನ ಶಿವಲಿಂಗೇಶ್ವರ ಮಠ ಭಾವೈಕ್ಯ ಕೇಂದ್ರವಾಗಿದೆ. ಮಠದ ಕಟ್ಟಡ ಮೇಲಿರುವ ಗೋಪುರಕ್ಕೆ ಹೋಗಲು 12 ಮೆಟ್ಟಿಲುಗಳಿವೆ. ಮೂರನೇ ಅಂತಸ್ತು ಮುಸ್ಲಿಂ ದರ್ಗಾದ ಮಿನಾರ್ ರೂಪದಲ್ಲಿದೆ. ಮಧ್ಯದ ಅಂತಸ್ತಿನಲ್ಲಿ ಶಿವಲಿಂಗೇಶ್ವರರ ಅನುಷ್ಠಾನದ ಆಸನ ಸಹಿತ ಗದ್ದುಗೆ ಇದೆ. ಅದರ ಮೇಲೆ ಶ್ರೀಗಳ ಇಷ್ಟಲಿಂಗ ಇಡಲಾಗಿದೆ. ನೆಲಮನೆ ಅತ್ಯಂತ ಆಕರ್ಷಕವಾಗಿದೆ. ಗವಿ ರೂಪದಲ್ಲಿರುವ ನೆಲಮನೆಯ ಹದಿನಾಲ್ಕು ಮೆಟ್ಟಿಲುಗಳನ್ನು ಇಳಿದು ಒಳಗೆ ಪ್ರವೇಶಿಸಿ ನೋಡಿದರೆ ಮಜಾರ ಕಾಣುತ್ತದೆ. ಇದು ಹಿಂದು ಮುಸ್ಲಿಂ ಸೌಹಾರ್ದದ ಪ್ರತಿಬಿಂಬವಾಗಿದೆ.
ಕೃಷ್ಣಾ ನದಿ ದಡದ ಮೇಲಿರುವ ಶಿವಲಿಂಗೇಶ್ವರ ದೇವಸ್ಥಾನ ದೂರದಿಂದ ನೋಡಿದರೆ ಮುಸ್ಲಿಂ ದರ್ಗಾ ಎಂಬಂತೆ ಗೋಚರವಾಗುತ್ತದೆ. ಈ ಮಠದಿಂದ ಶ್ರೀಗಳು ತುಂಬಿ ಹರಿಯುವ ಕೃಷ್ಣಯ ಮಹಾಪೂರದ ಮೇಲೆ ನಡೆದುಕೊಂಡು ಬಂದರು ಎಂಬ ಪ್ರತೀತಿ ಕೂಡ ಇದೆ.

ಶ್ರೀಗಳ ಮಹಿಮೆ

17ನೇ ಶತಮಾನದ ಅಂತ್ಯದಲ್ಲಿ ಪವಾಡಗಳ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದ ತುಬಚಿ ಶಿವಲಿಂಗೇಶ್ವರರು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸಂಚಾರ ಕೈಗೊಂಡು ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ನೆಲೆಸಿದ್ದರು. ವಿಜಯಪುರದ ಶ್ರೀಗಳ ಪವಾಡ ಪ್ರಭಾವಕ್ಕೊಳಗಾಗಿದ್ದರು. ಶ್ರೀಗಳ ದರ್ಶನಕ್ಕೆ ಆದಿಲ್‌ಶಾಹಿ ಬರುತ್ತಿದ್ದರು ಎನ್ನುವುದಕ್ಕೆ ಗ್ರಾಮದಲ್ಲಿ ಇಂದಿಗೂ ಪುರಾವೆಗಳಿವೆ. ಗುರುಗಳಿಗೆ ಕಾಣಿಕೆಯಾಗಿ 37 ಹಳ್ಳಿಗಳನ್ನು ಹೊಂಬಳ (ಬಳುವಳಿ)ವಾಗಿ ಆದಿಲ್‌ಶಾಹಿ ನೀಡಿದ್ದರಂತೆ. ಶ್ರೀಗಳ ವಾಸದಿಂದಾಗಿ ಗ್ರಾಮ ಸಮೃದ್ಧಿಯಿಂದ ಕೂಡಿತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

“ಶಿವಲಿಂಗೇಶ್ವರರಲ್ಲಿ ಭಕ್ತಿಯಿಂದ ನಡೆದುಕೊಂಡರೆ ನಾವು ಅಂದುಕೊಂಡ ಕೆಲಸಗಳು ಯಶಸ್ವಿ ಹೊಂದುತ್ತವೆ. ಗ್ರಾಮದಲ್ಲಿ ನೂರಾರು ಯುವಕರಿಗೆ ಸರ್ಕಾರಿ ನೌಕರಿ ದೊರಕಿದ್ದು, ನಮ್ಮೂರಿನ ರೈತರು ಅಪಾರ ಸಾಧನೆ ಮಾಡಿದ್ದರ ಹಿಂದೆ ಶ್ರೀಗಳ ಮಹಿಮೆ ಅಡಗಿದೆ.”

– ಶಿವಲಿಂಗ ಮಿರ್ಜಿ
ತುಬಚಿ ಗ್ರಾಮಸ್ಥ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ

ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ

ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ

ಕುಡಿವ ನೀರಿಗಾಗಿ ಉಜನಿ ಜಲಾಶಯದಿಂದ ನೀರು ಬಿಡುಗಡೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೀದಿ ನಾಯಿ ಹಾವಳಿ ತಡೆಗೆ ಅಧಿಕಾರಿಗಳಿಗೆ ಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಗುಮ್ಮಟ ನಗರಿಯಲ್ಲಿ ಮಣ್ಣಿನ ಮಡಿಕೆಗೆ ಭರ್ಜರಿ ಬೇಡಿಕೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿಗಾಗಿ ಉಜನಿ ಜಲಾಶಯದಿಂದ ನೀರು ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ವಂದೇ ಭಾರತ ರೈಲು ಸಂಚಾರ ಕುರಿತು ಅಪಪ್ರಚಾರ ಬೇಡ :ಸಂಸದರು
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಗೆ ೧೬ ಸಾವಿರ ಕ್ಯೂಸೆಕ್ ನೀರು
    In (ರಾಜ್ಯ ) ಜಿಲ್ಲೆ
  • ಸಂತೆಯ ಜನರಿಗೆ ಉಚಿತ ಕುಡಿಯುವ ನೀರಿನ ಸೌಲಭ್ಯ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 07, 2026
    In ದಿನಪತ್ರಿಕೆ
  • ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ
    In (ರಾಜ್ಯ ) ಜಿಲ್ಲೆ
  • ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.