ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ ೭೭.೯೯ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಅಕ್ಷತಾ ರಡ್ಡಿ( ಶೇ ೯೫.೧೬), ಅಕ್ಷತಾ ಕುಂಬಾರ(ಶೇ ೯೫), ಸೌಮ್ಯಾ ಗೌಂಡಿ(ಶೇ ೯೪.೮೩), ವಾಣಿಜ್ಯ ವಿಭಾಗದಲ್ಲಿ ರೋಹಿಣಿ ಪೂಜಾರಿ(ಶೇ ೯೬.೧೬), ಸುಪ್ರೀಯಾ ಜನಗೊಂಡ (ಶೇ ೯೫), ಲಕ್ಷ್ಮಿ ಹೊಕ್ಕೊಂಡಿ (ಶೇ ೯೪.೫) ಉತ್ತಮ ಫಲಿತಾಂಶದೊಂದಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನೀಯರ ಸಾಧನೆಗೆ ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.
