Author: editor.udayarashmi@gmail.com

ಹಾಸನದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರೀಡಾಕೂಟ | ಸಂಸದ ಶ್ರೇಯಸ್ ಪಟೇಲ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ಉದಯರಶ್ಮಿ ದಿನಪತ್ರಿಕೆ ಹಾಸನ: ನಗರದಲ್ಲಿ ಕೆಯುಡಬ್ಲ್ಯೂಜೆ ಏರ್ಪಡಿಸಿದ್ದ ಎರಡು ದಿನದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸಂಸದ ಶ್ರೇಯಸ್ ಪಟೇಲ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದಾ ಒತ್ತಡದಲ್ಲಿರುವ ಪತ್ರಕರ್ತರು ಒಂದೆಡೆ ಸೇರಿ ಕ್ರಿಕೇಟ್ ಆಡುವ ಮೂಲಕ ಒತ್ತಡ ನೀಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.ಕ್ರೀಡೆಯಲ್ಲಿ ಮಾತ್ರ ಯಾವುದೇ ಬೇದಭಾವ ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಕ್ರೀಡಾಮನೋಭಾವ ಗಳಿಸಿಕೊಳ್ಳುವ ಮೂಲಕ ಸೋಲು ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು ಎಂದು ಕರೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪ್ರತಿ ವರ್ಷವೂ ಪತ್ರಕರ್ತರಿಗಾಗಿಯೇ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ 24 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಶೇಷ ಎಂದರು.ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ಕೆಯುಡಬ್ಲ್ಯೂಜೆಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಅಜ್ಜಮಾಡ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಖಜಾಂಚಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಮದುಲಾ ಮಾರುತಿ ದೇವಾಲಯಕ್ಕೆ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.ಹನುಮಾನ ಜಯಂತಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಸಂಸದ ಜಿಗಜಿಣಗಿ, ಭಕ್ತಿಭಾವದಿಂದ ಶ್ರೀ ಹನುಮಂತನಿಗೆ ನಮಸ್ಕರಿಸಿ, ಸಕಲರಿಗೂ ಒಳಿತನ್ನು ಮಾಡುವಂತೆ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ವಿಜಯ್ ಜೋಶಿ ಮೌನೇಶ್ ಪತ್ತಾರ್, ದತ್ತಾತ್ರೇಯ ಜೋಶಿ ವ ಉಮೇಶ್ ದೇಸಾಯಿ, ವಿವೇಕ್ ದಾರೇಕರ್, ಏಕನಾಥ ಶಿಂದೆ, ಶಂಕರ ಗಣಿಯಾರ, ಹರೀಶ್ ಜೋಶಿ ರಾಕೇಶ್ ಕುಲಕರ್ಣಿ ಇದ್ದರು.

Read More

ಸಿಎಂ ಸಿದ್ದರಾಮಯ್ಯ ಸ್ಥಾನ ಜಾತಿ ಗಣತಿ ಮೂಲಕ ಭದ್ರ! ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಈ ವಿವಾದಾತ್ಮಕ ಸಮೀಕ್ಷೆ ಕುರಿತು ವಿಸ್ತೃತವಾಗಿ ಚರ್ಚಿಸಲು ಇದೇ ಏ.17 ರಂದು ವಿಶೇಷ ಸಂಪುಟ ಸಭೆಯನ್ನು ಕರೆಯಲಾಗಿದೆ.ಈ ಕ್ರಮವು ರಾಜಕೀಯ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಹಿಂದುಳಿದ ಜಾತಿ ನಾಯಕರು ರಾಜ್ಯದಲ್ಲಿ ಅಧಿಕಾರ ಬದಲಾಯಿಸಲು ಸಿದ್ಧವಾಗಿರುವವರಿಗೆ ಸಿದ್ದರಾಮಯ್ಯ ನೀಡಿರುವ “ಐತಿಹಾಸಿಕ ಮಾಸ್ಟರ್‌ಸ್ಟ್ರೋಕ್” ಎಂದು ಬಣ್ಣಿಸಿದ್ದಾರೆ. ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಎಚ್. ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಮೀಕ್ಷೆಯ ಹೊಣೆಯನ್ನು ವಹಿಸಿದ್ದರು. ಇದು ದೀನದಲಿತರು, ದಮನಿತರು ಮತ್ತು ಬಡವರನ್ನು ಸಬಲೀಕರಣಗೊಳಿಸಲು ಸರಿಯಾದ ದಿಕ್ಕಿನಲ್ಲಿ ಇಟ್ಟ ಹೆಜ್ಜೆಯಾಗಿದೆ ಎಂದು ಸಮೀಕ್ಷೆಯ ಹಿಂದಿನ ವ್ಯಕ್ತಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಹೇಳಿದ್ದಾರೆ.ಇದಲ್ಲದೆ, ಇನ್ನೇನು ಮಾಡಬಹುದು? ಎಂದು ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್.…

Read More

ಎಕ್ಸಲೆಂಟ್ ಕಬ್ಸ್ ಶಾಲೆಯ ವಾರ್ಷಿಕ ಸಮ್ಮೇಳನದಲ್ಲಿ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್. (ಚಬನೂರ) ಅಭಿಮತ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವು ಬಹುಮುಖ್ಯವಾಗಿದೆ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಬಿ.ಎಲ್. (ಚಬನೂರ) ಹೇಳಿದರು.ಪಟ್ಟಣದ ಎಕ್ಸಲೆಂಟ್ ಕಬ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜರುಗಿದ ಪ್ರಥಮ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಮಗುವಿನ ಮನಸ್ಸು ಹದವಾದ ಮಣ್ಣಿನ ಮುದ್ದೆಯಂತೆ ಅದನ್ನು ತಿದ್ದಿ, ತಿಡಿ ಪ್ರತಿಮೆಯಾಗಿ ರೂಪಿಸುವ ಮೂಲಕ ಶಿಕ್ಷಕ ಹಾಗೂ ಪಾಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದರು.ಹಿರಿಯ ವೈದ್ಯ ಆರ್.ಆರ್.ನಾಯಿಕ್ ಮಾತನಾಡಿ, ಮಕ್ಕಳ ಅಭಿರುಚಿಗೆ ಅನುಗುಣವಾದ ಶಿಕ್ಷಣ ವ್ಯವಸ್ಥೆ ರೂಪಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಕಟ್ಟುವ ಜವಾಬ್ದಾರಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲಿದೆ ಎಂದರು .ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಮಾತನಾಡಿ, ಮಕ್ಕಳು ಶಾಲೆಯಿಂದ ಬಂದ ನಂತರ ಅವರೊಂದಿಗೆ ಪಾಲಕರು ಕನಿಷ್ಠ ಒಂದು ಗಂಟೆಯಾದರೂ ಕಾಲ…

Read More

ಕೇಂದ್ರ ಸರ್ಕಾರ ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಭಾನುವಾರ ಬೆಳಿಗ್ಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ಶಾಂತಿಯುತ ಪ್ರತಿಭಟನೆ ಹಾಗೂ ಬೃಹತ್ ರ‍್ಯಾಲಿ ಜರುಗಲಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ ಹೇಳಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.ಮೆರವಣಿಗೆ ಟಿಪ್ಪು ಸುಲ್ತಾನ ವೃತ್ತದಿಂದ ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಂಡು ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ೧೨ ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಕಮಿಟಿಯ ಉಪಾಧ್ಯಕ್ಷ ರಫೀಕ್ ಪಾನಪರೋಷ್, ಭೀಮ ಆರ್ಮಿ ರಾಜ್ಯ ಉಪಾಧ್ಯಕ್ಷ ಪ್ರಭು ಅಂಬಲಗಿ ಮಾತನಾಡಿದರು.ಗೋಷ್ಠಿಯಲ್ಲಿ ಹೈದರಸಾಬ್ ಮುಲ್ಲಾ, ಮುನೀರ್‌ಅಹ್ಮದ್ ಮಳಖೇಡ, ಬಾಬು ದೇವಣಗಾಂವ, ಭಾಸ್ಕರ್ ಗುಡಿಮನಿ, ಸುರೇಶ ಒಡೆಯರ್, ಸಮೀರ ಮಕಾಂದಾರ, ಇಮಾಮ್ ಮುಲ್ಲಾ, ಹಾಶೀಂ ಹಳ್ಳಿ, ಹಾಜೀಲಾಲ್ ಮಸಳಿ ಇದ್ದರು.

Read More

ನಾಳೆ (ಏಪ್ರಿಲ್ ೧೪ ಸೋಮವಾರ) ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಶೈಲಜಾ ಅಲಗೂರಉಪನ್ಯಾಸಕರುಶಿವಣಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಜಾತಿ ಎಂಬ ಅನಿಷ್ಠ ಪದ್ಧತಿಯಲ್ಲಿ ತೇಲಾಡುತಿದ್ದ ಜನಗಳು, ಸಹಪಾಠಿಗಳು ಭೀಮನ ಓದಿಗೆ ವಿರುದ್ಧವಾಗಿಯೇ ನಿಲ್ಲತೊಡಗಿದರು. ಅಸ್ಪೃಶ್ಯತೆ ಆಚರಣೆಯಲ್ಲಿ ಮಿಂದೆದ್ದ ಜನತೆಗೆ ಜ್ಞಾನದ ಅರಿವು ಇಲ್ಲದಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭೀಮರಾವ್ ಶಾಲೆ ಒಳಗಡೆ ಸೇರದೆ ಹೊರಗಡೆ ಕುಳಿತು ಪಾಠ ಕಲಿಯುವಂತಾಯಿತು. ಬಡತನ, ಜಾತೀಯತೆ ಇದರಿಂದ ನೊಂದ ಭೀಮರಾವ್ ಓದು ಇದಕೆಲ್ಲಾ ಮುಕ್ತಿ ಎಂದು ನಿರ್ಧರಿಸಿ ತಮ್ಮ ಹಠವನ್ನು ಪುಸ್ತಕದೆಡೆಗೆ ತಿರುಗಿಸಿದರು. ಅಸ್ಪೃಶ್ಯ ಎಂಬ ಕೀಳರಿಮೆಯಿಂದ ಶಿಕ್ಷಕರು, ಸಹಪಾಠಿಗಳು ಎಲ್ಲರೂ ಇವರನ್ನು ಕೀಳಾಗಿ ನೋಡುತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲ. ಶಿಕ್ಷಕರಲ್ಲಿ ಒಬ್ಬರಾದ ಪೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ, ಕಲಿಯುವ ಹಂಬಲ, ಸೂಕ್ಷ್ಮ ಬುದ್ಧಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಇದೆ ಪೆಂಡೆಸ್ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಭೀಮನ ಹೆಸರಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾಗತಿಕ ಮಹಿಳಾ ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತ ಅಕ್ಕಮಹಾದೇವಿ. ಅವರ ಜೀವನದ ಯಶೋಗಾಥೆಯು ಅಬಲೆಯರಿಗೆ ಶಕ್ತಿಯ ಮೈಲಿಗಲ್ಲಾಗಿದೆ.ಅವರು ಶರಣ ಚಳುವಳಿಯಲ್ಲಿ ಮೇರು ವ್ಯಕ್ತಿತ್ವದ ಚೇತನಶಕ್ತಿಯಾಗಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅಕ್ಕಮಹಾದೇವಿ ಗುಡಿಯಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಅಕ್ಕಮಹಾದೇವಿಯು ತನ್ನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ,ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಃಕರಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅಕ್ಕಳು ಹೇಳುವ ಮಾತು ಪಾಂಡಿತ್ಯದ ಪ್ರದರ್ಶನವಾಗಿರದೇ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯತ್ರಿ-ಅನುಭಾವಿ-ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ದೃವತಾರೆಯಾಗಿದ್ದಾಳೆ ಎಂದು ಹೇಳಿದರು.ಬಳಗದ ಸುನಂದಾ ತಾಯಿ ಮಾತನಾಡಿ, ಅಕ್ಕಳನ್ನು ಭಕ್ತಿ, ಜ್ಞಾನ. ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆದಕಾರಣ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣೆಯರಿಗೆ ಅಕ್ಕಮಹಾದೇವಿ ಆದರ್ಶರಾಗಿರುವರು ಎಂದರು.ಮಂಜುನಾಥ ಗಂಗನಳ್ಳಿ ಮಾತನಾಡಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ, ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ತಜ್ಞ ಡಾ. ಅರುಣ ಚಂ. ಇನಾಮದಾರ ಅವರಿಗೆ ಪ್ರತಿಷ್ಠಿತ ಪ್ರೊ. ಸುರೀಂದರ ಕೌರ ಭಾರತದ ಅತ್ಯುತ್ತಮ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ-2025 ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ದಕ್ಷಿಣ ಅಮೇರಿಕದ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್ ನಲ್ಲಿ ಏ. 7 ರಿಂದ 11ರ ವರೆಗೆ ನಡೆದ 15ನೇ ಅಂತಾಷ್ಟ್ರೀಯ ಮಕ್ಕಳ- ಚರ್ಮ ರೋಗ ತಜ್ಞ ವೈದ್ಯರ ಸಮ್ಮೇಳನದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.ಈ ಕಾರ್ಯಕ್ರಮದಲ್ಲಿ ಡಾ. ಅರುಣ ಚಂ. ಇನಾಮದಾರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಆಂತಾರಾಷ್ಟೀಯ ಚಿಕ್ಕ ಮಕ್ಕಳ ಚರ್ಮ ರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷೆ ಮತ್ತು ವಿಶ್ವದ ಅತ್ಯಂತ ಪ್ರಭಾವಿ ಚರ್ಮರೋಗ ವೈದ್ಯೆ ಅಮೇರಿಕದ ಪ್ರೊ. ಏಮಿ ಪ್ಯಾಲರ ಮಾತನಾಡಿ, ಡಾ. ಅರುಣ ಚಂ. ಇನಾಮದಾರ ಅವರ ಸೇವೆ ಭಾರತಕ್ಕಲ್ಲದೆ ವಿಶ್ವಕ್ಕೆಲ್ಲ ಹರಡಲಿ ಎಂದು ಶುಭ ಹಾರೈಸಿದರು.ಸಂಘಟನೆಯ ಸೆಕ್ರೆಟರಿ ಜನರಲ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲೆಯಲ್ಲಿ ದಿ.13 ಮತ್ತು ದಿ.14 ಎರಡು ದಿನಗಳವರೆಗೆ ಕೈಗೊಳ್ಳಲಿದ್ದಾರೆ.ದಿ.13 ರವಿವಾರ ಬೆ.10ಗಂ ಸಣ್ಣ ನೀರಾವರಿ ಇಲಾಖೆಯ 250 ಲಕ್ಷ ರೂ. ವೆಚ್ಚದಲ್ಲಿ ತಿಕೋಟಾ ತಾಲ್ಲೂಕಿನ ಮಲಕನದೇವರಹಟ್ಟಿ ಗ್ರಾಮದ ಹತ್ತಿರ ಜಿನುಗು ಕೆರೆ ನಿರ್ಮಾಣ ಸೈಟ್ ನಂ-02 ಕಾಮಗಾರಿ ಭೂಮಿ ಪೂಜೆ ಸಲ್ಲಿಸಲಿದ್ದಾರೆ. ಮ.12ಗಂ ಲೋಕೋಪಯೋಗಿ ಇಲಾಖೆಯ 400 ಲಕ್ಷ⁠ ರೂ. ವೆಚ್ಚದಲ್ಲಿ ಧನ್ನರ್ಗಿ ಗ್ರಾಮದಲ್ಲಿ ಇಟ್ಟಂಗಿಹಾಳ-ಲೋಹಗಾಂವ-ಧನರ್ಗಿ-ಸೋಮದೇವರಹಟ್ಟಿ-ತಿಕೋಟಾ ವರೆಗೆ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.ದಿ. 14 ಸೋಮವಾರ ಬೆ.10ಗಂ. ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ನಿಮಿತ್ತ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವರು ನಂತರ ಶಿಲೆಯಲ್ಲಿ ಕೆತ್ತಿದ ಸಂವಿಧಾನ ಪೀಠಿಕೆ ಉದ್ಘಾಟಿಸುವುದು, ಅಂಬೇಡ್ಕರ್ ಅವರ ಸಂದೇಶ ಸಾರುವ ಛಾಯಾಚಿತ್ರಗಳ ಅನಾವರಣ ಹಾಗೂ ಅಂಬೇಡ್ಕರ್ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಬೆ.11ಗಂ. ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ನಗರದ ಡಾ.ಬಿ ಆರ್.…

Read More

ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಅಬಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಕ ಮಹಾದೇವಿಯವರು ರಾಜಪ್ರಭುತ್ವ ಮತ್ತು ಪುರುಷಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಹಕ್ಕುಗಳ ಪರವಾಗಿ ಧ್ವನಿಯೆತ್ತಿದ ಮೊದಲ ಸ್ತ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಿ ಅವರು ಮಾತನಾಡಿದರು.ಅಕ್ಕಮಹಾದೇವಿಯವರು ೧೨ನೇ ಶತಮಾನದ ಶರಣ ಚಿಂತಕಿಯಾಗಿ, ರಾಜಪ್ರಭುತ್ವ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯನ್ನು ತಿರಸ್ಕರಿಸಿ, ಮಹಿಳಾ ಪರವಾಗಿ ಧ್ವನಿ ಎತ್ತಿದ ಪ್ರಥಮ ಸ್ತ್ರೀವಾದಿ ಹಾಗೂ ಪ್ರಗತಿಪರ ಚಿಂತಕಿ ಎನಿಸಿಕೊಂಡವರು. ತಮ್ಮ ವಚನಗಳ ಮೂಲಕ ಮಹಿಳೆಯ ಆತ್ಮಸ್ವಾತಂತ್ರ‍್ಯ, ವ್ಯಕ್ತಿತ್ವ, ಹಾಗೂ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದರು ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಅಕ್ಕಮಹಾದೇವಿಯವರು ಹಲವು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಅವರು ಸ್ತ್ರೀ-ಪುರುಷ ಭೇದವೆನ್ನುವ…

Read More