ಕೇಂದ್ರ ಸರ್ಕಾರ ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಕ್ಫ್ ಮಸೂದೆ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಭಾನುವಾರ ಬೆಳಿಗ್ಗೆ ಅಂಜುಮನ್ ಇಸ್ಲಾಂ ಕಮಿಟಿಯಿಂದ ಶಾಂತಿಯುತ ಪ್ರತಿಭಟನೆ ಹಾಗೂ ಬೃಹತ್ ರ‍್ಯಾಲಿ ಜರುಗಲಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಮಹಿಬೂಬ್ ಹುಂಡೇಕಾರ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೆರವಣಿಗೆ ಟಿಪ್ಪು ಸುಲ್ತಾನ ವೃತ್ತದಿಂದ ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಂಡು ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ೧೨ ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ, ಕಮಿಟಿಯ ಉಪಾಧ್ಯಕ್ಷ ರಫೀಕ್ ಪಾನಪರೋಷ್, ಭೀಮ ಆರ್ಮಿ ರಾಜ್ಯ ಉಪಾಧ್ಯಕ್ಷ ಪ್ರಭು ಅಂಬಲಗಿ ಮಾತನಾಡಿದರು.
ಗೋಷ್ಠಿಯಲ್ಲಿ ಹೈದರಸಾಬ್ ಮುಲ್ಲಾ, ಮುನೀರ್‌ಅಹ್ಮದ್ ಮಳಖೇಡ, ಬಾಬು ದೇವಣಗಾಂವ, ಭಾಸ್ಕರ್ ಗುಡಿಮನಿ, ಸುರೇಶ ಒಡೆಯರ್, ಸಮೀರ ಮಕಾಂದಾರ, ಇಮಾಮ್ ಮುಲ್ಲಾ, ಹಾಶೀಂ ಹಳ್ಳಿ, ಹಾಜೀಲಾಲ್ ಮಸಳಿ ಇದ್ದರು.

