Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಯಾಳವಾರ ಗ್ರಾಮದ ಶ್ರೀಸೋಮೇಶ್ವರ, ನವಕೋಟೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.ದಿ.೧೮ ರಂದು ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ ಹಾಗೂ ಶ್ರೀಸೋಮೇಶ್ವರನಿಗೆ ಪ್ರಜಾಪತಿ ಸುವರ್ಣ ಬಂಡಿಮಠ ಜಮಖಂಡಿ ಇವರಿಂದ ವಿಶೇಷ ಬುತ್ತಿ ಅಲಂಕಾರ ಪೂಜೆ. ನಂತರ ೧೦ ಗಂಟೆಗೆ ಪಲ್ಲಕ್ಕಿ ಉತ್ಸವದೊಂದಿಗೆ ಅಗ್ನಿಪ್ರವೇಶ. ಇದೇ ಸಂದರ್ಭದಲ್ಲಿ ೧೧ ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ರಕ್ತ ಭಂಡಾರನಿಧಿ ವಿಜಯಪುರ ಹಾಗೂ ಶರಣಮ್ಮಗೌಡತಿ ನಾಡಗೌಡ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಆರಂಭಗೊಳ್ಳಲಿದೆ. ನಂತರ ಮಹಾಪ್ರಸಾದ ಜರುಗಲಿದೆ.ಸಾಯಂಕಾಲ ೫.೦೦ ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ ಒಡಹುಟ್ಟಿದವರು ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.ದಿ.೧೯ ಶನಿವಾರದಂದು ಬೆಳಿಗ್ಗೆ ೧೦ ಗಂಟೆಗೆ ಸಂಗ್ರಾಣಿ, ಗುಂಡುಕಲ್ಲು, ಧಾನ್ಯದ ಚೀಲ ಭಾರ ಎತ್ತುವ ಸ್ಪರ್ಧೆಗಳು ಜರುಗಲಿದ್ದು ಪ್ರಥಮ ಸ್ಥಾನ ಪಡೆದವರಿಗೆ ೧೦ ತೊಲಿ ಬೆಳ್ಳಿ ಖಡೆ ಹಾಗೂ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮದಲ್ಲಿ ನಡೆದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವದಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಗ್ರಾಮದ ಅಂಜುಮನ್ ಇಸ್ಲಾಂ ಸಮೀತಿಯ ವತಿಯಿಂದ ಶರಬತ್ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಿ ಮುಸ್ಲಿಮ ಸಮುದಾಯದವರು ಸೌಹಾರ್ದತೆ ಮೆರೆದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರಾ ಮಹೋತ್ಸವದ ಅಂಗವಾಗಿ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಕೇಸರಿ ಶಾಲನ್ನು ಧರಿಸಿ ಜಾತ್ರಾ ಮಹೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಭಾವೈಕ್ಯತೆಗೆ ಹೆಸರಾದ ಮುಳಸಾವಳಗಿ ಗ್ರಾಮದಲ್ಲಿ ಹಜರತ್ ಮತಾಬ್ ಷಹೀದ ಜಾತ್ರಾ ಮಹೋತ್ಸವವನ್ನು ಗ್ರಾಮಸ್ಥರು ಎಲ್ಲರೂ ಸೇರಿ ಆಚರಿಸುವುದು ವಿಶೇಷ. ಜೊತೆಗೆ ಪ್ರತಿ ವರ್ಷ ರಮಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಹಿಂದು ಸಮುದಾಯದವರು ಉಪಾಹಾರ ಹಾಗೂ ತಂಪು ಪಾನೀಯ, ಹಣ್ಣುಗಳ ವ್ಯವಸ್ಥೆಯನ್ನು ಮಾಡುತ್ತಾರೆ.ಅಂಜುಮನ್ ಇಸ್ಲಾಂ ಸಮಿತಿಯ ರಜಾಕ ಮುಜಾವರ, ಕಲಶಾ ಮಕಾನದಾರ, ಸಾಹೇಬ ಹುಸೇನ ಮುಲ್ಲಾ, ಇಸ್ಮಾಯಿಲ್ ಪಠಾಣ, ದಾವುಲ್ ಇನಾಮದಾರ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಬಿರಾದಾರ, ಜಿ.ಪಿ.ಬಿರಾದಾರ, ಬಿ.ಎಸ್.ಪೊಲೇಶಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನಿರ್ವಹಣಾ ಕಾರ್ಯದ ನಿಮಿತ್ಯ ಪಟ್ಟಣದ ಕುಂಬಾರ ಓಣಿ ಮತ್ತು ಮಟನ್ ಮಾಕೇಟ್‌ನಲ್ಲಿ ಏ.೧೮ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೬ಗಂಟೆಯವರೆಗೆ ವಿದ್ಯುತ್ ಪೂರೈಕೆ ನಿಲ್ಲಿಸುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ಬ್ರಾಹ್ಮಣ ಸಮಾಜದಲ್ಲಿ ಒಳಪಂಗಡಗಳನ್ನು ಬ್ರಾಹ್ಮಣ ಸಮಾಜದಲ್ಲಿ ಒಳಪಂಗಡಗಳನ್ನು ಬೇರ್ಪಡಿಸಿ ಜನಗಣತಿ ಮಾಡಿಸಿದೆಯೆಂದು ರಾಜ್ಯ ಸರ್ಕಾರದ ವಿರುದ್ಧ ಬ್ರಾಹ್ಮಣ ಅರ್ಗನೈಜೇಷನ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಗುಂಡು ಕುಲಕರ್ಣಿ ಹೇಳಿದರು.ಈ ವೇಳೆ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಬ್ರಾಹ್ಮಣ ಸಮಾಜ ಕಡಿಮೆಯಿದೆ. ಆದರೆ ಅದರಲ್ಲೇ ಒಳ ಪಂಗಡಗಳನ್ನು ವಿಂಗಡಿಸಿದ್ದು ಯಾವ ನ್ಯಾಯ. ಎಲ್ಲ ಸಮಾಜದಲ್ಲೂ ಒಳ ಪಂಗಡಗಳಿವೆ. ಅದನ್ನು ಬಿಟ್ಟು ಕೆಲವು ಸಮಾಜಗಳಲ್ಲಿ ಮಾತ್ರ ಒಳ ಪಂಗಡಗಳು ತೋರಿಸಿದ್ದಾರೆ ಮತ್ತು ಹಿಂದೆ ಮಾಡಿಸಿದ ಜಾತಿ ಗಣತಿಯನ್ನು ಈಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಜಾತಿ ಗಣತಿಯನ್ನು ಕೈ ಬಿಡಬೇಕು. ನಿಮಗೆ ಬೇಕಾದಂತೆ ಜಾತಿ ಗಣತಿ ಮಾಡಿಸಿದ್ದೇರೆಂದು ಆಕ್ರೋಶ ಹೊರಹಾಕಿದರು.ಕೂಡಲೇ ಜಾತಿ ಗಣತಿಯನ್ನು ಕೈ ಬಿಡದೆ ಹೋದರೆ ಬ್ರಾಹ್ಮಣ ಸಮುದಾಯ ಕೂಡ ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ ಈ ಜಾತಿ ಗಣತಿ ಪ್ರಕಾರ ೧೫,೬೪,೭೪೧ ಎಂದು ತೋರಿಸಿದ್ದಾರೆ. ಮತ್ತೆ ಅದರಲ್ಲೇ ಹವ್ಯಕ…
ವಿಜಯಪುರ ಜಿಲ್ಲಾ ದಸಂಸ ಸಂಚಾಲಕ ವಾಯ್.ಸಿ.ಮಯೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣ ಕ್ರಾಂತಿಗೆ ಛಲತೊಟ್ಟ ಮಹಾನ್ ಚೇತನ ಡಾ.ಬಾಬಾಸಾಹೇಬ್ ಅಂಬೇಡ್ಕರ್. ಅವರ ಜೀವನ ಚರಿತ್ರೆ ಇಡೀ ವಿಶ್ವಕ್ಕೆ ಮಾದರಿ ಎಂದು ಜಿಲ್ಲಾ ದಸಂಸ ಸಂಚಾಲಕ ವಾಯ್.ಸಿ.ಮಯೂರ ಹೇಳಿದರು.ಮೋರಟಗಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡ ೧೩೪ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಕೊಲೆ, ಸುಲಿಗೆ, ಅನ್ಯಾಯ, ಅತ್ಯಾಚಾರ ಕಣ್ಣಾರೆ ಕಂಡ ಬಾಬಾಸಾಹೇಬರು ಪುಸ್ತಕವನ್ನೇ ದೇವರೆಂದು ನಂಬಿ ಕಡು ಬಡತನದಲ್ಲಿ ಬೀದಿ ದೀಪದಲ್ಲಿ ಓದುವ ಮೂಲಕ ಸಂವಿಧಾನವನ್ನು ರಚಿಸಿ ತುಳಿತಕ್ಕೆ ಒಳಗಾದ ಸಮಾಜವನ್ನು ಎತ್ತಿ ಹಿಡಿದ ಅವರ ಸಾಧನೆ ಸೂರ್ಯ ಚಂದ್ರ ಇರುವರೆಗೂ ಅಜರಾಮರ. ಅವರ ತತ್ವ ಸಿದ್ಧಾಂತಗಳನ್ನು ನಮ್ಮ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಅಸ್ತಿ ಅಂತಸ್ತು ಗಳಿಸುವ ಬದಲು ನಿಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ…
ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಜನಾಕ್ರೋಶ ಯಾತ್ರೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಬೆಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಹಾದಿ ತಪ್ಪಿಸುತ್ತಿದ್ದು, ಇದೀಗ ಇದೇ ಯೋಜನೆಗಳು ಹೊರೆಯಾಗಿ ಮಾರ್ಪಟ್ಟಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿತು.ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಜನಕ್ರೋಶ ಯಾತ್ರೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ದೇಶದಲ್ಲಿ ಯಾವುದೇ ಉದ್ಯಮಿ ಮಾಡದಷ್ಟು ದೊಡ್ಡ ಸಾಧನೆಯನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಯಂಗ್ ಇಂಡಿಯಾ ಟ್ರಸ್ಟ್ ಮೂಲಕ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ದೊಡ್ಡ ಹಗರಣ ಮಾಡುವುದೇ ಕಾಂಗ್ರೆಸ್‌ನ ಅಭಿವೃದ್ಧಿ ಮಾದರಿಯಾಗಿದೆ ಎಂದು ವ್ಯಂಗ್ಯವಾಡಿದರು.ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ವರ್ಷಕ್ಕೆ 30 ಲಕ್ಷ ರೂ ನೆರವು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನಿಲುವು ಹೊಂದಿದೆ.…
ವಿಜಯಪುರದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳ ಸುರಿಮಳೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸೋಣ.. ಬೆಲೆ ಏರಿಕೆ ವಿರುದ್ದ ಧಿಕ್ಕಾರ..ಎಂಬ ಘೋಷಣೆಗಳು ಬಿಜೆಪಿ ಸಾವಿರಾರು ಕಾರ್ಯಕರ್ತರಿಂದ ಗುರುವಾರ ನಗರದಲ್ಲಿ ಮೊಳಗಿದವು.ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ, ದಲಿತರ ಶ್ರೇಯೋಭಿವೃದ್ದಿ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯದಾದ್ಯಂತ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆ ಗುರುವಾರ ವಿಜಯಪುರಕ್ಕೆ ತಲುಪಿತು. ಈ ವೇಳೆ ಸಹಸ್ರಾರು ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ ಮೊದಲಾದ ನಾಯಕರು ಸಾಥ್ ನೀಡಿದರು.ತೆರೆದ ವಾಹನದಲ್ಲಿ ನಾಯಕರು ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾದರು.ಸಾವಿರಾರು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾದರು. ನಗರದ ಶ್ರೀ ಶಿವಾಜಿ…
ಆದ್ಯಾಳ ಸಹೋದರಿಗೆ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವಿನ ಭರವಸೆ ನೀಡಿದ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಹುಬ್ಬಳ್ಳಿ: ಇಲ್ಲಿಯ 5 ವರ್ಷದ ಮಗು ಆದ್ಯಾಳ ಮೇಲೆ ನಡೆದ ಅತ್ಯಾಚಾರ ಯತ್ನ ಹಾಗೂ ಕೊಲೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದ್ದು, ಆದ್ಯಾಳಿಗೆ ಆದ ಅನ್ಯಾಯ ಎಂದೂ ಯಾರಿಗೂ ಆಗದಿರಲಿ. ಇಂತಹ ಹೇಯ ಕೃತ್ಯಗಳು ಮತ್ತೆಂದೂ ಮರುಕಳಿಸದಿರಲಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ಗುರುವಾರ ಹುಬ್ಬಳ್ಳಿಯಲ್ಲಿ ಆದ್ಯ ಕುರಿ ಪಾಲಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.ಆದ್ಯಾಳ ತಾಯಿ-ತಂದೆ ಹಾಗೂ ಬಂಧುಗಳ ಕಣ್ಣೀರು ಕಂಡು ಭಾವುಕರಾಗಿ ಕಂಬನಿ ಮಿಡಿದ ಸಂಗಮೇಶ ಬಬಲೇಶ್ವರ, ಆದ್ಯಾಳ ಸಹೋದರಿಯ ಶಿಕ್ಷಣಕ್ಕೆ ತಮ್ಮ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವು ನೀಡುವುದಾಗಿ ಭರವಸೆ ನೀಡಿದರು.ನತದೃಷ್ಟೆ ಆದ್ಯ ಕುಟುಂಬಕ್ಕೆ ಸರಕಾರದಿಂದ ದೊರಕಬಹುದಾದ ಎಲ್ಲ ರೀತಿಯ ನೆರವನ್ನು ಉಸ್ತುವಾರಿ ಸಚಿವರು ಒದಗಿಸಿಕೊಡಲಿದ್ದು, ಸರಕಾರ ಮತ್ತು ನಾವೆಲ್ಲರೂ ಸದಾ ನಿಮ್ಮೊಂದಿಗೆ ಇದ್ದೇವೆ ಎಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ 2024-25 ಶೈಕ್ಣಣಿಕ ವರ್ಷದ ಮೊದಲನೇ ವರ್ಷದ ಜಿ.ಏನ್.ಎಂ ಮತ್ತು ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಬುಧವಾರ ಕಾಲೇಜಿನಲ್ಲಿ ನಡೆಯಿತು.ಈ ಕಾರ್ಯಕ್ರಮದಕ್ಕೆ ಚಾಲನೆ ನೀಡಿದ ಬೆಂಗಳೂರಿನ ಎಂ. ಎಸ್. ರಾಮಯ್ಯ ಇನಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಡೀನ್ ಮತ್ತು ಪ್ರಿನ್ಸಿಪಾಲ ಡಾ. ಸೋನಾಲಿ ಜಾಧವ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಜೀವನ ಮತ್ತು ವೃತ್ತಿಯಲ್ಲಿ ವಹಿಸಬೇಕಾದ ಶಿಸ್ತು ಮತ್ತು ಇತರ ವೃತ್ತಿಗಳಿಗೆ ಇರುವ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಮತ್ತು ರೇಡಿಯಾಲಾಜಿಸ್ಟ್ ಡಾ. ವೀರೇಶ ಹಂಚಿನಾಳ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಸರ್ಚ್ ಮತ್ತು ಡೆವಲೆಪಮೆಂಟ್ ಸೆಲ್ ನಿರ್ದೇಶಕ ಡಾ. ಎಂ. ಎಂ. ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಿ. ಎಸ್. ಬಗಲಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.…
ಕ್ರೀಡಾಪಟು ಎಂ.ಡಿ.ಪೈಗಂಬರ್ ಗೌಂಡಿ ಗೆ ಎಂಎಲ್ಸಿ ಸುನೀಲಗೌಡ ಪಾಟೀಲ ಚೆಕ್ ವಿತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಷಿಯನ್ ಗೇಮ್ಸ್- 2026ಕ್ಕೆ ತಯಾರಿ ನಡೆಸುತ್ತಿರುವ ಬಡ ಪ್ರತಿಭಾವಂತ ಕ್ರೀಡಾಪಟುವಿಗೆ ಹೆಚ್ಚಿನ ತರಬೇತಿಗಾಗಿ ಬಿ.ಎಲ್.ಡಿ.ಇ ಸಂಸ್ಥೆಯಿಂದ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರು ಆರ್ಥಿಕ ನೆರವು ನೀಡುವ ಮೂಲಕ ಓಟಗಾರರ ಕನಸು ನನಸಾಗಲು ಸಹಾಯ ಹಸ್ತ ಚಾಚಿದ್ಧಾರೆ.ಸಂಸ್ಥೆಯ ಅಧ್ಯಕ್ಷರ ಆಶಯದಂತೆ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಗುರುವಾರ ನಗರದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ಯುವ ಕ್ರೀಡಾಪಟು ಎಂ. ಡಿ. ಪೈಗಂಬರ್ ಗೌಂಡಿ ಅವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದರು.ಈ ಕ್ರೀಡಾಪಟು ಏಷಿಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿದ್ದು, ಹೆಚ್ಚಿನ ತರಬೇತಿಗಾಗಿ ಕೇರಳದಲ್ಲಿರುವ ಅಂತಾರಾಷ್ಟ್ರೀಯ ಸಲೀಂ ಶೇಕ ಅಕಾಡೆಮಿ ತರಬೇತಿಗೆ ಸೇರಿದ್ದಾರೆ. ಇವರಿಗೆ ಅಥ್ಲೇಟಿಕ್ ತರಬೇತಿಗೆ ಅಗತ್ಯವಾಗಿರುವ ಕ್ರೀಡಾ ಸಲಕರಣೆ, ವಸತಿ ಮತ್ತೀತರ ಶುಲ್ಕಕ್ಕೆ ಒಟ್ಟು ರೂ. 4.60 ಅಗತ್ಯವಿದ್ದು, ಇದರ ಮೊದಲ ಕಂತಾದ…
