Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಸಾಲೋಟಗಿಯ ಶ್ರೀ ಶಿವಯೋಗೀಶ್ವರರ ಜಾತ್ರೆ ಕುರಿತು ಗುರುವಾರ ರಾತ್ರಿ ನೀರಾಟ ನಡೆಯಿತು.ಹಿನ್ನೆಲೆ – ಶ್ರೀ ಶಿವಯೋಗೀಶ್ವರರ ಮಾತಾ ಪಿತ್ರಗಳ ಅಭಿಪ್ಸೆಯ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆನಡೆಯುವ ಸಂದರ್ಭದಲ್ಲಿ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ವಧು ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಅಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ. ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಿಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗಿಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರುಗೆ ನೀರು ಗಂಗಾಂಬಿಕೆಯ ಮೇಲೆಮಾತ್ರ ಬಿಳುತ್ತದೆ. ಈ ಸನ್ನಿವೇಶವೇ ನೀರಾಟದ ರೂಪದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿದೆ.ಗುರುವಾರ ಒಳಗಿನ ಗುಡಿಯಿಂದ ಶಿವಯೋಗೀಶ್ವರರ ಉತ್ಸವ ಮೂರ್ತಿಯನ್ನು ಭವ್ಯ ಮೆರವಣೆಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿ ಕೂಡಿಸಿದ ನಂತರ ಸರಿಯಾಗಿ ರಾತ್ರಿ ಒಂದು ಗಂಟೆಗೆ ನೀರಾಟ ಪ್ರಾರಂಭವಾಯಿತು. .ಗಂಗಾಂಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಒಳಿಯದಂತೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಬಂಗಾರ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವದು, ಸೇರಿದಂತೆ ಹಲವಾರು ಸಮಸ್ಯೆಯಲ್ಲಿ ಯುವಕರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರೆ ಕುಟುಂಬದ ಅರ್ಥ ವ್ಯವಸ್ಥೆ ಸರಿದೂಗಿಸುವಲ್ಲಿ ಮುಖ್ಯ ಪಾತ್ರ ವಹಿಸಿದಂತಾಗುತ್ತದೆ ಈ ದಿಶೆಯಲ್ಲಿ ವಿದ್ಯಾವಂತ ಯುವಕರು ಮುಂದಾಗಬೇಕು ಎಂದು ಯರನಾಳದ ಸಂಗನಬಸವ ಶ್ರೀಗಳು ಹೇಳಿದರು.ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವ ಮತ್ತು ಹನುಮಾನ ಗುಡಿಯ ಕಳಸಾರೋಹಣ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಲ ಶೂಲ ಮಾಡಿ ದುಂದು ವೆಚ್ಚ ಮಾಡದೇ ಯಾವದೇ ಜಾತಿ ಮತ ಪಂಥ ಎನ್ನದೇ ಹತ್ತಾರು ಪೂಜ್ಯರು ಸಾವಿರಾರು ಜನರು, ರಾಜಕೀಯ ಮುತ್ಸದ್ದಿಗಳು ಮತ್ತು ಸತ್ಪುರುಷರ ಬಂಧು ಬಳಗ ಮಧ್ಯೆ ನಡೆಯುವ ವಿವಾಹ ಶ್ರೇಷ್ಠ ಮದುವೆ ಎಂದರು.ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ, ಹಣಮಂತ ಕಾಗವಾಡ ಮಾತನಾಡಿದರು.ಇದೇ ವೇಳೆ ಸಾಮೂಹಿಕ ವಿವಾಹ ವಧು ವರರಿಗೆ ಬಟ್ಟೆ ಸೇವೆ ನೀಡಿದ ಶ್ರೀಮತಿ ಮಂಗಲಾಬಾಯಿ ಶ್ರೀ ಜೀವನದಾಸ ಶಹಾ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಬೆಳ್ಳಿಹಳ್ಳ ವಸ್ತಿಯ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಏ- 20 ಬೆಳಿಗ್ಗೆ 11 ಘಂಟೆಗೆ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಭಗೀರಥ ಮಹರ್ಷಿ (ಉಪ್ಪಾರ) ತಾಲ್ಲೂಕು ಸಂಘದ ಅಧ್ಯಕ್ಷ ಸುರೇಶ ಕರಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭಗೀರಥ ಮಹರ್ಷಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಭಾರತ ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಸಗರ ಚಕ್ರವರ್ತಿಯ ವಂಶದ ಭಗೀರಥ ಮಹರ್ಷಿಯು ತನ್ನ ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದ ಮಹಾನ್ ಶಕ್ತಿ. ಆ ಕಾರಣಕ್ಕಾಗಿ ಉಪ್ಪಾರ ಸಮಾಜದ‌ ರಾಜಕೀಯ ಮುಖಂಡರು, ಯುವ ನಾಯಕರು, ಸಮಾಜದ ಚಿಂತಕರು, ಮಹಿಳಾ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಭಾಗವಹಸಿ ತಮ್ಮ ಸಲಹೆ ಸೂಚನೆ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ‌ಮನವಿ ಮಾಡಿಕೊಂಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಇಂಡಿ, ಸಿಂದಗಿ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳದ ತಾಲೂಕು ಕಾನೂನು ಸೇವಾ ಸಮಿತಿಗೆ ಹೊಸದಾಗಿ ಪ್ಯಾನಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಪ್ಯಾನಲ್ ವಕೀಲರಾಗಿ ಕಾರ್ಯನಿರ್ವಹಿಸಲು ಆಸಕ್ತಿಯುಳ್ಳವರು hಣಣಠಿs://viರಿಚಿಥಿಚಿಠಿuಡಿಚಿ.ಜಛಿouಡಿಣs.gov.iಟಿ/ಜಟsಚಿ/ ವೆಬ್ಸೈಟ್ ಮೂಲಕ ಅರ್ಜಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮೇ೦೨ ರೊಳಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಚೇರಿಗೆ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಎಸ್.ಹಾಗರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅಧಿಕೃತ ಆದೇಶವಿಲ್ಲದೇ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧಾರಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಖಂಡನೀಯ. ಘಟನೆಗೆ ಕಾರಣರಾದವರು ಮತ್ತು ಘಟನೆಯ ಹಿಂದಿರುವವರ ಮೇಲೆ ಸರ್ಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಿವಾರ ಧಾರಿಗಳ ಸಮಾಜ ಬಾಂಧವರು ಆಗ್ರಹಿಸಿದರು.ಈ ಕುರಿತು ಪಟ್ಟಣದ ರಾಘವೇಂದ್ರ ಮಠದ ಆವರಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಸಮಾಜದ ಪ್ರಮುಖರಾದ ವಾಸುದೇವ ಶಾಸ್ತಿç, ಬಿ.ಪಿ.ಕುಲಕರ್ಣಿ, ವಿ.ಜಿ.ಪಾಟೀಲ, ಪ್ರಕಾಶ ಕುಲಕರ್ಣಿ, ಅರವಿಂದ ಕುಲಕರ್ಣಿ, ಸಹನಾ ಬಡಿಗೇರ, ಉದಯಸಿಂಗ ರಾಯಚೂರ ಮತ್ತೀತರರು ಮಾತನಾಡಿ, ಜನಿವಾರ ಸಮಾಜ ಉತ್ಕಷ್ಟವಾದದ್ದು. ದೇಶದ ಒಟ್ಟು ಮತದಾರರಲ್ಲಿ ಅತೀ ಹೆಚ್ಚು ಮತದಾರರು ನಾವಾಗಿದ್ದೇವೆ. ನಾವು ಅತ್ಯಂತ ಸಂಸ್ಕಾರವAತರು, ಸದಾ ದೇಶದ ಹಿತ ಚಿಂತನೆ ಬಯಸಿ ದೇಶಕ್ಕೆ ಮಾದರಿಯಾದವರು, ಪೂಜೆ ಪಾಠ ಸೇರಿದಂತೆ ಅನೇಕ ಶುಭ ಕಾರ್ಯಗಳಿಗೆ ನಾವು ಬೇಕು. ಆದರೆ ನಮ್ಮ ಸಮಾಜಕ್ಕೆ ಮೇಲಿಂದ ಮೇಲೆ ಅಪಹಾಸ್ಯ ಮಾಡಲಾಗುತ್ತಿದೆ. ಪರೀಕ್ಷೆಗಳಲ್ಲಿ ನಮ್ಮ ಸಮಾಜ ಬಾಂಧವರ ಮೇಲೆ ಜಾತಿ ನಿಂದನೆ ಮಾಡಲಾಗಿದೆ. ಈ ಘಟನೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ಬೆಸಿಗೆಯಲ್ಲಿ ಬಬಲೇಶ್ವರ, ಬೆನಕೊಟಗಿ, ಕಲಹಳ್ಳಿ, ರಾಂಪೂರ, ಮಂಗಳೂರ, ಆಹೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಬಲೇಶ್ವರ ಕೆರೆಗೆ ನೀರು ತುಂಬಿಸುವಂತೆ ಸಾಕಷ್ಟು ಬಾರಿ ಒತ್ತಾಯ ಮಾಡಿದಾಗ ಕಾಲುವೆಯನ್ನು ಅಗೆದು ನೀರು ತುಂಬಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಏನೇ ಮಾಡಿದರೂ ನೀರು ತುಂಬಿಸುವಲ್ಲಿ ಸಫಲತೆ ಸಿಗಲಿಲ್ಲ. ಆಗ ಸ್ಥಳ ಪರಿಶೀಲನೆ ಮಾಡಲಾಗಿ ಬೆನಕೊಟಗಿ ಹಳ್ಳದಿಂದ ಬಬಲೇಶ್ವರ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನೆಯನ್ನು ರೂಪಿಸಲಾಯಿತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ರಾಂಪುರ ರಸ್ತೆಯ ಕಾಲುವೆ ಬಳಿ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಆಯ್.ಬಿ.ಎಸ್ ವಿಭಾಗ ೦೨ ಇಂಡಿ ಏತ ನೀರಾವರಿ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ ೩೧ಎ ಮೂಲಕ ಬಬಲೇಶ್ವರ ಕೆರೆಗೆ ೧ಕೋಟಿ ೩೦ಲಕ್ಷ ರೂ. ಮೊತ್ತದ ನೀರು ತುಂಬುವ ಕಾಮಗಾರಿ ಪ್ರಾರಂಭದ ಪೂಜೆಯನ್ನು ನೇರವೇರಿಸ ಮಾತನಾಡಿದ ಅವರು, ಈ ಕಾರ್ಯಕ್ಕೆ ಸಿಎಂ, ಡಿಸಿಎಂ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಕರ್ನಾಟಕ ರಾಜ್ಯ ದಲಿತ ಸಮಿತಿ ಕೋರವಾರ ತಾ.ದೇವರ ಹಿಪ್ಪರಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿರುವ ಸಾಧಕರ ಸನ್ಮಾನ ಸಮಾರಂಭದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪ್ರಧಾನ ಸಮಿತಿಯ ಅಧ್ಯಕ್ಷರು ಅರುಣ ಕೋರವಾರ ತಿಳಿಸಿರುತ್ತಾರೆ.ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ 26 ಎಪ್ರಿಲ್ 2025 ರಂದು ಕೋರವಾರ ದಲ್ಲಿ ಜರುಗಲಿದೆ.ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರು ಎಸ್.ಆಯ್.ಜೋಗೂರ, ಕಾರ್ಯದರ್ಶಿ ಪ್ರಶಾಂತ ಬಡದಾಳ, ಸದಸ್ಯರಾದ ಅರವಿಂದ ಕುಲಕರ್ಣಿ, ಅಲೋಕ ಬಡದಾಳ, ಅಶೋಕ ವಾರದ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಗಡದೆ, ಸುನಿತಾ ಗುಂಡದ, ವೀಣಾ ಗುಡಿಮಠ ಮುಂತಾದವರು ಹರ್ಷ ವ್ಯಕ್ತ ಪಡಿಸಿದ್ದಾರೆ

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಮಾರುತಿ ದೇವರ ಓಕುಳಿ ಮಹೋತ್ಸವ ಇಂದು ಏ.19 ರಿಂದ 23 ರವರೆಗೆ ನಡೆಯಲಿದೆ.ಜೈ ಹನುಮಾನ ಯುವ ಮಿತ್ರ ಮಂಡಳಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕಕಾರ್ಯಕ್ರಮ, ಕ್ರೀಡೆಗಳು ಜರುಗಲಿವೆ.19ರಂದು ಬೆಳಗ್ಗೆ 6ಕ್ಕೆ ಓಕುಳಿ ಕಂಬ ನಿಲ್ಲಿಸಿ ಕೃಷ್ಣಾ ನದಿ ದಡದಲ್ಲಿ ರಾಜು ಜೋಶಿ ಅವರಿಂದ ಮೂರ್ತಿಗೆ ಅಭಿಷೇಕ, ಸಂಜೆ 6ಕ್ಕೆ ಸಕಲವಾದ್ಯ ವೈಭವಗಳೊಂದಿಗೆ ಹನುಮಂತ ದೇವರ ಕಂಚಿನ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಸಲಾಗುವುದು. ನಂತರ ರಾತ್ರಿ 9ಕ್ಕೆಗಂಗಿ ಮನ್ಯಾಗ ಗೌರಿ ಹೊಲದಾಗ ನಾಟಕ ಪ್ರದರ್ಶನ ನಡೆಯಲಿದೆ.20ರಂದು ಮಧ್ಯಾಹ್ನ 3ಕ್ಕೆ ನೀರೋಕುಳಿ, ರಾತ್ರಿ 8ಕ್ಕೆ ಪರು ತರುವುದು, ಗ್ರಾಮದದೇವರುಗಳ ಆಗಮನ, ರಾತ್ರಿ 9ಕ್ಕೆ ಅತ್ತಿಗೆಗೆ ತಕ್ಕ ಮೈದುನರು ನಾಟಕ ಪ್ರದರ್ಶನನಡೆಯಲಿದೆ.21ರಂದು ಮಧ್ಯಾಹ್ನ 2ಕ್ಕೆ ಹಾಲೋಕುಳಿ, ಸಂಜೆ 4ಕ್ಕೆ ರಾಷ್ಟ್ರಮಟ್ಟದ ಜಂಗಿ ನಿಕಾಲಿಕುಸ್ತಿ ನಡೆಯಲಿವೆ. 23 ರಂದು ಧರ್ಮ ಜಾಗೃತಿ ಕಾರ್ಯಕ್ರಮ ಗ್ರಾಮದ ಮಾರುತಿ ದೇವರ ಓಕುಳಿ ಮಹೋತ್ಸವ ನಿಮಿತ್ತ 23ರಂದು ಬೆಳಗ್ಗೆ 9ಕ್ಕೆ ಧರ್ಮಜಾಗೃತಿ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಪವಿತ್ರ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದವರಲ್ಲಿ ನೋವುಂಟು ಮಾಡಿದೆ, ಕೂಡಲೇ ಈ ರೀತಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬ್ರಾಹ್ಮಣ ಸಮಾಜದ ಯುವ ಮುಖಂಡರು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತೆಗೆಯಿಸಲು ಹೇಳಿರುವುದು ನೋವಿನ ಸಂಗತಿ, ಇದು ವಿದ್ಯಾರ್ಥಿಗಳ ಮನಸ್ಸಿಗೂ ಆಘಾತ ತಂದಿದೆ, ಹೀಗಾಗಿ ವಿದ್ಯಾರ್ಥಿ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ಸಹ ಧಕ್ಕೆಯಾಗಲಿದೆ. ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ, ಆದರೆ ಜನಿವಾರ ಧರಿಸಬಾರದು ಎಂಬ ಯಾವ ಉಲ್ಲೇಖವೂ ಇಲ್ಲ, ಅಧಿಕಾರಿಗಳು ಕೇವಲ ಒಂದು ಸಮುದಾಯ ಧಾರ್ಮಿಕ ಸಂಕೇತವನ್ನು ತೆಗೆದುಹಾಕಲು ಹೇಳಿ ಧರ್ಮಕ್ಕೂ ಅವಮಾನ ಮಾಡಿದ್ದಾರೆ. ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೀದರ ಮತ್ತು ಶಿವಮೊಗ್ಗ ಸಿ.ಈ.ಟೀ (CET )ಪರೀಕ್ಷೆ ಬರೆಯಲು ಕೊಠಡಿಗೆ ತೆರಳುತ್ತಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಯಜ್ಞೋಪವೀತವನ್ನು ಕತ್ತರಿಸಿ ತೆಗೆದ್ದಿದ್ದು ಖಂಡನೀಯ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರೋಹನ್ ವಿನಯ ಆಪ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಈ ಕೃತ್ಯ ಮಾಡಿದ ಅಧಿಕಾರಿಗೆ ತಕ್ಷಣಕ್ಕೆ ವಜಾ ಗೊಳಿಸಿ ತನಿಖೆ ಮಾಡಬೇಕಾಗಿ ಆಗ್ರಹಿಸಿದರು‌.ಬ್ರಾಹ್ಮಣನು ಜನಿವಾರವನ್ನು ಬದಲಿಸುವುದಕ್ಕೂ ಸಹ ಅದರದೇ ಆದಂತಹ ನಿಯಮಗಳು ಹಾಗೂ ಸಂದರ್ಭಗಳಿವೆ ಹಾಗಾಗಿ ಈ ಕೃತ್ಯ ಮಾಡಿದ್ದು ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ. ಇದು ಬ್ರಾಹ್ಮಣರ ಸಂವಿಧಾನ ಬದ್ಧ ಹಕ್ಕನ್ನು ಕಸಿದಂತೆ. ಬ್ರಾಹ್ಮಣರು ಶಾಂತಿಪ್ರಿಯರು , ಎಲ್ಲವು ಸಹಿಸಿಕೊಳ್ಳುತ್ತಾರೆ ಆದರೆ ಬ್ರಾಹ್ಮಣ ಸಮುದಾಯ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಹಾಗೂ ಜಿಲ್ಲಾಡಳಿತಗಳು ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Read More