ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೀದರ ಮತ್ತು ಶಿವಮೊಗ್ಗ ಸಿ.ಈ.ಟೀ (CET )ಪರೀಕ್ಷೆ ಬರೆಯಲು ಕೊಠಡಿಗೆ ತೆರಳುತ್ತಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಯಜ್ಞೋಪವೀತವನ್ನು ಕತ್ತರಿಸಿ ತೆಗೆದ್ದಿದ್ದು ಖಂಡನೀಯ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಜಿಲ್ಲಾಧ್ಯಕ್ಷ ರೋಹನ್ ವಿನಯ ಆಪ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಈ ಕೃತ್ಯ ಮಾಡಿದ ಅಧಿಕಾರಿಗೆ ತಕ್ಷಣಕ್ಕೆ ವಜಾ ಗೊಳಿಸಿ ತನಿಖೆ ಮಾಡಬೇಕಾಗಿ ಆಗ್ರಹಿಸಿದರು.
ಬ್ರಾಹ್ಮಣನು ಜನಿವಾರವನ್ನು ಬದಲಿಸುವುದಕ್ಕೂ ಸಹ ಅದರದೇ ಆದಂತಹ ನಿಯಮಗಳು ಹಾಗೂ ಸಂದರ್ಭಗಳಿವೆ ಹಾಗಾಗಿ ಈ ಕೃತ್ಯ ಮಾಡಿದ್ದು ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ. ಇದು ಬ್ರಾಹ್ಮಣರ ಸಂವಿಧಾನ ಬದ್ಧ ಹಕ್ಕನ್ನು ಕಸಿದಂತೆ. ಬ್ರಾಹ್ಮಣರು ಶಾಂತಿಪ್ರಿಯರು , ಎಲ್ಲವು ಸಹಿಸಿಕೊಳ್ಳುತ್ತಾರೆ ಆದರೆ ಬ್ರಾಹ್ಮಣ ಸಮುದಾಯ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಹಾಗೂ ಜಿಲ್ಲಾಡಳಿತಗಳು ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

