ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅಧಿಕೃತ ಆದೇಶವಿಲ್ಲದೇ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧಾರಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ಖಂಡನೀಯ. ಘಟನೆಗೆ ಕಾರಣರಾದವರು ಮತ್ತು ಘಟನೆಯ ಹಿಂದಿರುವವರ ಮೇಲೆ ಸರ್ಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಿವಾರ ಧಾರಿಗಳ ಸಮಾಜ ಬಾಂಧವರು ಆಗ್ರಹಿಸಿದರು.
ಈ ಕುರಿತು ಪಟ್ಟಣದ ರಾಘವೇಂದ್ರ ಮಠದ ಆವರಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಸಮಾಜದ ಪ್ರಮುಖರಾದ ವಾಸುದೇವ ಶಾಸ್ತಿç, ಬಿ.ಪಿ.ಕುಲಕರ್ಣಿ, ವಿ.ಜಿ.ಪಾಟೀಲ, ಪ್ರಕಾಶ ಕುಲಕರ್ಣಿ, ಅರವಿಂದ ಕುಲಕರ್ಣಿ, ಸಹನಾ ಬಡಿಗೇರ, ಉದಯಸಿಂಗ ರಾಯಚೂರ ಮತ್ತೀತರರು ಮಾತನಾಡಿ, ಜನಿವಾರ ಸಮಾಜ ಉತ್ಕಷ್ಟವಾದದ್ದು. ದೇಶದ ಒಟ್ಟು ಮತದಾರರಲ್ಲಿ ಅತೀ ಹೆಚ್ಚು ಮತದಾರರು ನಾವಾಗಿದ್ದೇವೆ. ನಾವು ಅತ್ಯಂತ ಸಂಸ್ಕಾರವAತರು, ಸದಾ ದೇಶದ ಹಿತ ಚಿಂತನೆ ಬಯಸಿ ದೇಶಕ್ಕೆ ಮಾದರಿಯಾದವರು, ಪೂಜೆ ಪಾಠ ಸೇರಿದಂತೆ ಅನೇಕ ಶುಭ ಕಾರ್ಯಗಳಿಗೆ ನಾವು ಬೇಕು. ಆದರೆ ನಮ್ಮ ಸಮಾಜಕ್ಕೆ ಮೇಲಿಂದ ಮೇಲೆ ಅಪಹಾಸ್ಯ ಮಾಡಲಾಗುತ್ತಿದೆ. ಪರೀಕ್ಷೆಗಳಲ್ಲಿ ನಮ್ಮ ಸಮಾಜ ಬಾಂಧವರ ಮೇಲೆ ಜಾತಿ ನಿಂದನೆ ಮಾಡಲಾಗಿದೆ. ಈ ಘಟನೆ ನಮ್ಮ ಎಲ್ಲ ಜನಿವಾರ ಧಾರಣೆ ಸಮಾಜ ಬಾಂಧವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಘಟನೆಯ ಕುರಿತು ಗೃಹ ಸಚಿವರು, ಮುಖ್ಯಮಂತ್ರಿಗಳು ಏನು ಮಾಡ್ತಿದ್ದಾರೆ ಎಂದು ಪ್ರಶ್ನಿದರು.
ಘಟನೆಗೆ ಸಂಬAಧಿಸಿದ ಆರೋಪಿತರನ್ನು ೨೪ ಘಂಟೆಯ ಒಳಗೆ ಬಂಧಿಸಬೇಕು. ಇಲ್ದಿದ್ರೆ ಈ ವರೆಗೂ ಬೀದಿಗೆ ಬಂದು ಹೋರಾಡದ ನಾವು ಈ ಘಟನೆಯಲ್ಲಿ ನ್ಯಾಯ ಸಿಗುವವರೆಗೂ ಉಗ್ರವಾಗಿ ಹೋರಾಡುತ್ತೇವೆ ಎಂದರು.
ಈ ವೇಳೆ ಶ್ರೀನಿವಾಸ ಇಲ್ಲೂರ, ಬಾಬುರಾವ ಚವ್ಹಾಣ, ನಾಗೇಶ ಲಾತೂರ್ಕರ, ಕುಬೇರ ಮಿರಜಕರ, ರೇಣುಕಾರಾಜ ಮಿರಜಕರ, ರಾಜೇಂದ್ರ ದಂಡಾವತಿ, ಮಾಣಿಕ ದಂಡಾವತಿ, ಆದಿನಾಥ ನಾಗಾವಿ, ರಾಮಚಂದ್ರ ಗಜೇಂದ್ರಗಡ, ಎ.ಕೆ.ಹುನಗುಂದ, ರಾಮಚಂದ್ರ ಹೆಗಡೆ, ರಾಘವೇಂದ್ರ ಆಲೂರ, ಚಂದ್ರು ಕಲಾಲ, ಗುರುರಾಜ ಕುಲಕರ್ಣಿ, ಎಚ್.ಎಸ್.ಕುಲಕರ್ಣಿ, ಶಂಕರಭಟ್ಟ ಜೋಶಿ ಸೇರಿದಂತೆ ಮತ್ತೀತರರು ಇದ್ದರು.
ಕಾನೂನು ಕ್ರಮಕ್ಕೆ ಆಗ್ರಹ
ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಎ೧೯ ರಂದು ಬೆಳಿಗ್ಗೆ ೯ಕ್ಕೆ ತಹಸೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ಸರಿಯಾದ ಸಮಯಕ್ಕೆ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಎಲ್ಲ ಜನಿವಾರಧಾರಿಗಳ ಸಮಾಜ ಬಾಂಧವರು ಸೇರುವಂತೆ ಪ್ರಮುಖರು ಕರೆ ನೀಡಿದರು.

