ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಪವಿತ್ರ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದವರಲ್ಲಿ ನೋವುಂಟು ಮಾಡಿದೆ, ಕೂಡಲೇ ಈ ರೀತಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬ್ರಾಹ್ಮಣ ಸಮಾಜದ ಯುವ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಧಾರ್ಮಿಕ ಆಚರಣೆಗಳನ್ನು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತೆಗೆಯಿಸಲು ಹೇಳಿರುವುದು ನೋವಿನ ಸಂಗತಿ, ಇದು ವಿದ್ಯಾರ್ಥಿಗಳ ಮನಸ್ಸಿಗೂ ಆಘಾತ ತಂದಿದೆ, ಹೀಗಾಗಿ ವಿದ್ಯಾರ್ಥಿ ಆಘಾತದಿಂದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲ, ಅವರ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೂ ಸಹ ಧಕ್ಕೆಯಾಗಲಿದೆ. ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ, ಆದರೆ ಜನಿವಾರ ಧರಿಸಬಾರದು ಎಂಬ ಯಾವ ಉಲ್ಲೇಖವೂ ಇಲ್ಲ, ಅಧಿಕಾರಿಗಳು ಕೇವಲ ಒಂದು ಸಮುದಾಯ ಧಾರ್ಮಿಕ ಸಂಕೇತವನ್ನು ತೆಗೆದುಹಾಕಲು ಹೇಳಿ ಧರ್ಮಕ್ಕೂ ಅವಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಎಂದು ಯುವ ಮುಖಂಡರಾದ
ಪ್ರಕಾಶ್ ಅಕ್ಕಲಕೋಟ, ವಿಜಯ ಜೋಶಿ, ಗೋವಿಂದ ಜೋಶಿ, ರಾಕೇಶ್ ಕುಲಕರ್ಣಿ, ವೆಂಕಟೇಶ್ ಜೋಶಿ, ವಿಕಾಸ್ ಪದಕಿ, ಸಂಜೀವ ದೀವಾಣಜಿ, ದತ್ತಾತ್ರಾಯ ಜೋಶಿ, ವೆಂಕಟೇಶ್ ಗುಡಿ ಸಂತೋಷ ಕುಲಕರ್ಣಿ ನಾಗರಾಜ್ ಜೋಶಿ ಗುರುರಾಜ್ ರಾವ್ ಪ್ರಶಾಂತ ರಾವ್ ವಲ್ಲಭ ಮೊದಲಾದವರು ಒತ್ತಾಯಿಸಿದ್ದಾರೆ.
