ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಲೋಟಗಿಯ ಶ್ರೀ ಶಿವಯೋಗೀಶ್ವರರ ಜಾತ್ರೆ ಕುರಿತು ಗುರುವಾರ ರಾತ್ರಿ ನೀರಾಟ ನಡೆಯಿತು.
ಹಿನ್ನೆಲೆ – ಶ್ರೀ ಶಿವಯೋಗೀಶ್ವರರ ಮಾತಾ ಪಿತ್ರಗಳ ಅಭಿಪ್ಸೆಯ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆನಡೆಯುವ ಸಂದರ್ಭದಲ್ಲಿ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ವಧು ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಅಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ. ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಿಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗಿಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರುಗೆ ನೀರು ಗಂಗಾಂಬಿಕೆಯ ಮೇಲೆಮಾತ್ರ ಬಿಳುತ್ತದೆ. ಈ ಸನ್ನಿವೇಶವೇ ನೀರಾಟದ ರೂಪದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿದೆ.
ಗುರುವಾರ ಒಳಗಿನ ಗುಡಿಯಿಂದ ಶಿವಯೋಗೀಶ್ವರರ ಉತ್ಸವ ಮೂರ್ತಿಯನ್ನು ಭವ್ಯ ಮೆರವಣೆಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿ ಕೂಡಿಸಿದ ನಂತರ ಸರಿಯಾಗಿ ರಾತ್ರಿ ಒಂದು ಗಂಟೆಗೆ ನೀರಾಟ ಪ್ರಾರಂಭವಾಯಿತು. .ಗಂಗಾಂಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಒಳಿಯದಂತೆ ಭದ್ರ ಪಡಿಸುತ್ತಾರೆ. ಹೊರಗಿನ ಗುಡಿಯ ಮುಂದೆಮತ್ತು ಹಿಂದೆಇರುವ ಎರಡು ಬಾವಿಗಳಿಂದ ಭಕ್ತರು ಬಿಂದಿಗೆಗಳಲ್ಲಿ ನೀರು ಹೊತ್ತುಓಡುತ್ತ ಶಿವಯೋಗೀಶ್ವರ ಎಂದು ಕೂಗುತ್ತ ಬಿಂದಿಗೆಯ ಮೇಲೆ ನೀರು ಸುರಿಸುತ್ತಾರೆ. ಶುಕ್ರವಾರ ನಸುಕಿನ ಐದು ಗಂಟೆಗೆ ನೀರಾಟ ಮುಕ್ತಾಯವಾಯಿತು. ಗಂಗಮ್ಮನ ಬಿಂದಿಗೆಯನ್ನು ಶಿವಯೋಗೀಶ್ವರರೆಡಕ್ಕೆ ತಂದು ಇಟ್ಟರು. ಶ್ರೀಗಂಧದಚಟುಕಗಳ ಮೂಲಕ ಬಿಂದಿಗೆಯಲ್ಲಿ ಸಂಗ್ರಹವಾದ ನೀರಿವ ಪ್ರಮಾಣದಷ್ಟು ಆ ವರ್ಷದಮಳೆಯಾಗುತ್ತದೆ ಮತ್ತು ಊರಲ್ಲಿ ಸಮೃದ್ಧಿ ತುಂಬುತ್ತದೆ ಎಂಬ ಘನವಾದ ನಂಬಿಕೆ.
ನೀರಾಟದ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸೋಮಯ್ಯ ಚಿಕ್ಕಪಟ, ಗಣ್ಯರಾದ ಶಿವಯೋಗಪ್ಪ ನೇದಲಗಿ, ಭೀಮರಾಯಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ಶಿವಯೋಗಪ್ಪ ಜೋತಗೊಂಡ, ಸಾಹಿತಿಗಳಾದ ಗೀತಯೋಗಿ, ದಯಾನಂದ ಸ್ವಾಮಿ, ಸೋಮನಾಥ ಶಿವೂರ, ಭೀಮರಾಯ ಪಾತರ ಮತ್ತಿತರಿದ್ದರು.

“ನೀರಾಟವು ಹೊರಗಿನ ಗುಡಿಯಲ್ಲಿ ನಡೆಯುವದರಿಂದ ಶಿವಯೋಗೀಶ್ವರರು ಬಹಿರಂಗ ಬದುಕನ್ನೇ ತೊರೆದು ಅಂತರಂಗ ತೋರಿಸಿದ ಆದ್ಯಾತ್ಮಿಕ ಮಾರ್ಗ ಹಿಡಿದು ದೈವದಲ್ಲಿ ಐಕ್ಯವಾಗಿದ್ದು ಧಾರ್ಮಿಕವಾಗಿ ಉತ್ತುಂಗ ಸಾಧನೆಯಾಗಿದೆ.”
– ಗೀತಯೋಗಿ ಸಾಹಿತಿ
ಸಾಲೋಟಗಿ

