Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ಗುರುವೀರಸಿದ್ದ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂತೋಭದ್ರ ದೇವತಾ ಮಂಡಲ ಹೋಮದ ಪೂರ್ಣಾಹುತಿ ವಿದ್ಯಾಸಾಗರ ಹಿರೇಮಠ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ಜರುಗಿತು.ಈ ಸಂದರ್ಭದಲ್ಲಿ ವೈ.ಎಸ್.ಗಂಗಶೆಟ್ಟಿ ಇತರರು ಇದ್ದರು.ಏ.೨೦ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಸಂಸ್ಕಾರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ನೆರವೇರುವದು. ನಂತರ ೯ ಗಂಟೆಗೆ ವೀರಸಿದ್ದ ಶಿವಯೋಗಿಗಳವರ ಪಲ್ಲಕ್ಕಿ ಉತ್ಸವ ವಿವಿಧ ಕಲಾತಂಡ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಧ್ಯಾನ್ಹ ೧ ಗಂಟೆಗ ಹೆಬ್ಬಾಳ ಗ್ರಾಮದ ಸದ್ಭಕ್ತರಿಂದ ಸಿದ್ದಪಡಿಸಿದ ಅಗ್ನಿಕುಂಡದ ಅಗ್ನಿಶಮನ ಮಠದ ಪೂಜ್ಯರಿಂದ, ಪುರವಂತರಿಂದ ನೆರವೇರುವದು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆಯಾಗುವದು. ಸಂಜೆ ೪ ಗಂಟೆಗೆ ಉತ್ಸವ ಮೂರ್ತಿ ಕೊಡೆ ಕಳಸ ಬರಮಾಡಿಕೊಂಡ ನಂತರ ೫ ಗಂಟೆಗೆ ರಥೋತ್ಸವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತಿ ಚಟುಚಟಿಕೆಯ(ADHD) ಕಾಯಿಲೆಗೆ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ಶಿಬಿರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಏ. 21 ರಿಂದ 26ರ ವರೆಗೆ ನಡೆಯಲಿದೆ.ಆಸ್ಪತ್ರೆಯ ಕೌಮಾರ ಭೃತ್ಯ ವಿಭಾಗದಿಂದ ಆರು ದಿನಗಳ ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಮಕ್ಕಳು ಒಂದೇ ಜಾಗದಲ್ಲಿ ಕುಳಿತು ಕೊಳ್ಳದಿರುವುದು, ಹೋಂ ವರ್ಕ್ ಅಥವಾ ಶಾಲೆಯ ಚಟುವಟಿಕೆಗಳು ಸೇರಿದಂತೆ ಕೆಲಸಗಳನ್ನು ಮಾಡಲು ಹಿಂಜರಿಯುವುದು, ದೈನಂದಿನ ಚಟುವಟಿಕೆಗಳಲ್ಲಿ ಬಲು ಬೇಗನೆ ಬೇಸರಗೊಳ್ಳುವುದು, ಅಭ್ಯಾಸದಲ್ಲಿ ಏಕಾಗ್ರತೆ ಕೊರತೆ ಮುಂತಾದ ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಉಚಿತ ಪಂಚಕರ್ಮ ಚಿಕಿತ್ಸೆ ನಡೆಯಲಿದೆ.ಪಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಮತ್ತು ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿಯನ್ನು ಸಾಧಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದ್ದಾರೆ.ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಕೆ.ಬಿ.ಜೆ.ಎನ್.ಎಲ್ ಕಾನೂನು ಸಲಹೆಗಾರ್ತಿ ಡಾ. ರಂಜಿತಾ ಕೆ. ಆರ್. ಮಾತನಾಡಿ, ನರ್ಸಿಂಗ್ ಸೇವೆಯ ಮಾನವೀಯತೆಯನ್ನು ಜೀವಂತವಾಗಿಡುವ ಶ್ರೇಷ್ಟ ವೃತ್ತಿಯಾಗಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಬೆಂಗಳೂರಿನ ಎಂ. ಎಸ್. ರಾಮಯ್ಯ ನರ್ಸಿಂಗ್ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಡೀನ್ ಮತ್ತು ಪ್ರಾಚಾರ್ಯೆ ಡಾ. ಜಾದವ ಸೋನಾಲಿ ತಾರಾಚಂದ, ಬಾಪು ಖೋದ್ನಾಪುರ, ಡಾ. ಸುಚಿತ್ರಾ ರಾಟಿ, ಡಾ. ಕವಿತಾ ಕೆ. ಡಾ. ಬಸೀರ್ ಅಹ್ಮದ್, ಡಾ. ಶ್ವೇತಾ, ಡಾ. ಸಂಕಪ್ಪ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ನೋಂದಣಿಯಾದ ಫಲಾನುಭವಿಗಳಿಗೆ ಮೇಸನ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ ಫಲಾನುಭವಿಯ ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ ಕಾರ್ಡ್ ಮತ್ತು ಫಲಾನುಭವಿಯ ಭಾವಚಿತ್ರ, ಸದರಿ ದಾಖಲೆಗಳನ್ನು ಏ.೧೯ ರಿಂದ ಮೇ.೦೩ರ ಒಳಗಾಗಿ ಸಲ್ಲಿಸಬೇಕು ಎಂದು ತಾಲೂಕು ಕಾರ್ಮಿಕ ನಿರೀಕ್ಷರು ತಿಳಿಸಿದ್ದಾರೆ.ಕಟ್ಟಡ ಕಾರ್ಮಿಕರು ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರಬೇಕು. ಕಾರ್ಮಿಕ ಗುರುತಿನ ಚೀಟಿ ಚಾಲ್ತಿಯಲ್ಲಿರಬೇಕು. ಕಾರ್ಮಿಕ ಗುರುತಿನ ಚೀಟಿಯಲ್ಲಿ ನಮೂದಿಸಿದ ವೃತ್ತಿಯ ಕಿಟ್‌ಗಳನ್ನು ಮಾತ್ರ ವಿತರಿಸಲಾಗುವುದು. ಹಿಂದಿನ ಅವಧಿಯಲ್ಲಿ ಮೇಸನ್ ಕಿಟ್ ತೆಗೆದುಕೊಂಡವರಿಗೆ ಅವಕಾಶ ಇರುವುದಿಲ್ಲ. ಈ ಷರತ್ತುಗಳ ಅನ್ವಯ ಕಾರ್ಮಿಕ ನಿರೀಕ್ಷಕರ ಕಛೇರಿ, ಸಿಂದಗಿ ವೃತ್ತ, ಬಂದಾಳ ರಸ್ತೆ, ಬಮ್ಮಣ್ಣಿ ಬಿಲ್ಡಿಂಗ್ ಸಿಂದಗಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕಟ್ಟಡ ಕಾರ್ಮಿಕರಿಗೆ ತಿಳಿಸಲಾಗಿದೆ. ಸದರಿ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇರೆಗೆ ವಿತರಿಸಲಾಗುವುದು ಎಂದು ಕಾರ್ಮಿಕ ನಿರೀಕ್ಷಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಎಚ್‌ಜಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಶಾಂತಿಲಾಲ್ ಚವ್ಹಾಣ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೪ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋರವಾರ ಶಾಖೆವತಿಯಿಂದ ಏಪ್ರಿಲ್ ೨೬ರಂದು ಆಯೋಜಿಸಲಾಗಿದೆ. ಅಂದು ಉಪನ್ಯಾಸಕ ಡಾ.ಶಾಂತಿಲಾಲ ಚವ್ಹಾಣ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ರೂಪಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಇದನ್ನು ಗುರುತಿಸಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಅಶೋಕ ಮನಗೂಳಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು, ಹಿತೈಷಿಗಳು ಶುಭ ಕೋರಿದ್ದಾರೆ. ಇನ್ನಷ್ಟು ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು ಹಾರೈಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಂಬೇಡ್ಕರ ಅವರು ಮಹಿಳೆಯರಿಗಾಗಿ ನೀಡಿದ ಸಂವಿಧಾನ ಬದ್ಧ ಹಕ್ಕು ಹಾಗೂ ಸ್ವಾತಂತ್ರ‍್ಯ ಶಿಕ್ಷಣ ಸಮಾನತೆ, ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಿದ್ದಾರೆ ಎಂದು ಡಾ.ಎಂ.ಆಯ್.ಮಿಂಚ ಹೇಳಿದರು.ಸಿಂದಗಿ ಪಟ್ಟಣದ ಸಿ.ಎಮ್.ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಿಳಾ ಸಬಲೀಕರಣ ಎಂಬ ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ವಾಯ್.ಮಿಂಚ ಮಾತನಾಡಿ, ಶತಮಾನಗಳಿಂದ ಅನುಭವಿಸಿದ ನೋವು ಸಂಕಟ ಇವುಗಳಿಂದ ಹೊರಬಂದು ಇಂದಿನ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯನ್ನು ಮಹಿಳೆಯರು ಸಾಧಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದರು.ಈ ವೇಳೇ ಅಮಿತ ಈಳಗೇರ, ಗೀತಾ ಮುರಗಾನೂರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಿ.ಡಿ.ಮಾಸ್ತಿ ಎಸ್.ಕೆ.ಹೂಗಾರ ಡಾ.ಅಂಬರೀರ ಬಿರಾದಾರ, ಸತೀಶ ಬಿರಾದಾರ, ಎಂ.ಡಿ.ಸುಂಗಠಣ, ಸುರೇಖಾ ರಾಥೋಡ, ಸುಧಾ.ಮೈಶಾಳೆ, ರಾಹುಲ್ ಕಾಂಬಳೆ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮ ಸಂಸ್ಕೃತಿ, ಸಂಸ್ಕಾರ ಬಹಳ ಶ್ರೇಷ್ಠವಾದದ್ದು. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮಲ್ಲರ ಮೇಲಿದೆ ಎಂದು ಜಾನಪದ ಪರಿಷತ್ತ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪುರ ಹೇಳಿದರು.ಸಿಂದಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾನಪದ ನಮಗೆ ಬಹಳ ಹಿಂದಿನ ಕಾಲದಿಂದ ಜನರ ಹೃದಯ ಭಾಷೆ. ನಮ್ಮ ಸಂಸ್ಕೃತಿ, ವಿವಾಹ, ಹಬ್ಬಗಳ ಆಚರಣೆ, ನೇಗಿಲು ಹೊಡೆಯುವಾಗ, ಬಿತ್ತುವಾಗ, ಚರಗ ಚೆಲ್ಲುವ ಸೀಮಂತದ ಸಂದರ್ಭದಲ್ಲಿ ಅನಾದಿಕಾಲದಿಂದಲೂ ಜಾನಪದ ಜನರ ಉಸಿರಾಗಿದೆ. ಆದರೆ ಇಂದಿನ ಯುವ ಪೀಳಿಗೆ ಮೊಬೈಲನ್ ಆನ್ಲೈನ್ ಗೇಮಿಂಗ್‌ನಂತಹ ಚಟಗಳಿಗೆ ದಾಸರಾಗುತ್ತಿದ್ದು ಇಂದು ಇಂತಹ ಜಾನಪದ ಉತ್ಸವದಂತಹ ಕಾರ್ಯಕ್ರಮಗಳನ್ನು ಸರಕಾರಿ ಶಾಲಾ-ಕಾಲೇಜುಗಳ ಹಂತಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಎಸ್.ಹಳೆಮನಿ ಮಾತನಾಡಿ, ಇಂದಿನ ಯುವಕರು ನಮ್ಮ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿಗೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮದ ರಥ ಎಷ್ಟು ಎತ್ತರವಾಗಿದೆ ಎಂಬುದು ಮುಖ್ಯವಲ್ಲ, ಗ್ರಾಮಸ್ಥರಿಗೆ ದೇವರ ಮೇಲೆ ಎಷ್ಟು ಭಕ್ತಿ ಇದೆ ಎಂಬುದು ಮುಖ್ಯ ಎಂದು ಯರನಾಳದ ಸಂಗನಬಸವ ಶ್ರೀಗಳು ಹೇಳಿದರು.ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಜಾತ್ರೆ ಅಥವಾ ರಥೋತ್ಸವ ಸಂದರ್ಭದಲ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ನಗರಗಳಲ್ಲಿ ವಾಸಿಸಿರುವ ಎಲ್ಲರೂ ಹುಟ್ಟುರಿಗೆ ಬರುತ್ತಾರೆ. ಅಷ್ಟೇ ಅಲ್ಲ, ಮದುವೆಯಾಗಿ ಬೇರೆ ಬೇರೆ ಭಾಗಗಳಲ್ಲಿ ಪತಿ ಕುಟುಂಬದವರೊಂದಿಗೆ ವಾಸವಿರುವ ಹೆಣ್ಣುಮಕ್ಕಳನ್ನು ತವರೂರಿಗೆ ಕರೆ ತರುವ ವಿಶೇಷ ಶಕ್ತಿ ಇರುವದು ಜಾತ್ರೆಗಳಿಗೆ ಮಾತ್ರ ಎಂದರು.ಗ್ರಾಮದ ಎಲ್ಲರನ್ನು ಒಂದುಗೂಡಿಸುವ ಹಾಗೂ ಸಂಘಟಕರನ್ನಾಗಿ ಮಾಡುವ ಶಕ್ತಿ ರಥೋತ್ಸವಕ್ಕೆ ಇದೆ. ರೈತರು ಎಲ್ಲ ರಾಶಿಗಳನ್ನು ಮಾಡಿ ಸಂತೋಷ ಸಂಭ್ರಮದಿಂದ ಜಾತ್ರೆ ರಥೋತ್ಸವ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.ವಿಜ್ರಂಭಣೆಯಿಂದ ಜರುಗಿದ ಅಗ್ನಿ ಶಮನ ಕಾರ್ಯಕ್ರಮಬಂಥನಾಳ ಶೀಗಳ ಅಡ್ಡಪಲ್ಲಕ್ಕಿ, ನಂದಿಕೋಲು ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪ್ರದಾಯದಂತೆ ಇಲ್ಲಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಏಪ್ರಿಲ್ ೩೦ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.ಶನಿವಾರ ಅಪರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವ ಜಯಂತಿ ಅಂಗವಾಗಿ ಏಪ್ರಿಲ್ ೩೦ರ ಬೆಳಿಗ್ಗೆ ೦೮ ಗಂಟೆಗೆ ನಗರದ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ, ಬೆಳಿಗ್ಗೆ ೦೯ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಬಸವೇಶ್ವರ ಅವರ ಭಾವಚಿತ್ರದ ಮೆರವಣಿಗೆ ಹಾಗೂ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು. ಅಂದು ನಗರದ ಎಲ್ಲ ಮಹನೀಯರ ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ವ್ಯಾಪಕವಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಾಮಧೇಯ ಅಂದಾಜು ೪೫ ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿರುವ ಕುರಿತ ವಿಜಯಪುರ ಗೋಲಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಆಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಮನವಿ ಮಾಡಿಕೊಂಡಿರುತ್ತಾರೆ.ಪತ್ತೆಯಾದ ವ್ಯಕ್ತಿಯು ೫.೬ ಪೂಟ್ ಎತ್ತರ, ಸಾಧಾರಣ ಮೈಕಟ್ಟು, ಸಾದಾ ಗೆಂಪು ಬಣ್ಣ, ದುಂಡು ಮುಖ, ನೆಟ್ಟನೆಯ ಮೂಗು, ಕಪ್ಪು-ಬಿಳಿ ಕೂದಲು, ದಾಡಿ ಮೀಸೆ ಹೊಂದಿದ್ದು, ಕೇಸರಿ ಬಣ್ಣದ ಬಿಳಿಗೆರೆಯುಳ್ಳ ಫುಲ್ ತೋಳಿನ ಶರ್ಟ್, ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಗೋಲಗುಮ್ಮಜ್ ಠಾಣೆಯ ದೂ.ನಂ ೦೮೩೫೨-೨೫೦೨೧೪, ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨ ಅಥವಾ ೦೮೩೧-೨೪೦೫೨೦೧ ಸಂಪರ್ಕಿಸಬಹುದು ಎಂದು ಗೋಲಗುಬಂಜ್ ಪೊಲೀಸ್ ಠಾಣೆ ಆಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More