ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಂಬೇಡ್ಕರ ಅವರು ಮಹಿಳೆಯರಿಗಾಗಿ ನೀಡಿದ ಸಂವಿಧಾನ ಬದ್ಧ ಹಕ್ಕು ಹಾಗೂ ಸ್ವಾತಂತ್ರ‍್ಯ ಶಿಕ್ಷಣ ಸಮಾನತೆ, ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಿದ್ದಾರೆ ಎಂದು ಡಾ.ಎಂ.ಆಯ್.ಮಿಂಚ ಹೇಳಿದರು.
ಸಿಂದಗಿ ಪಟ್ಟಣದ ಸಿ.ಎಮ್.ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಿಳಾ ಸಬಲೀಕರಣ ಎಂಬ ವಿಶೇಷ ಉಪನ್ಯಾಸ ನೀಡಿದ ಡಾ.ಎಂ.ವಾಯ್.ಮಿಂಚ ಮಾತನಾಡಿ, ಶತಮಾನಗಳಿಂದ ಅನುಭವಿಸಿದ ನೋವು ಸಂಕಟ ಇವುಗಳಿಂದ ಹೊರಬಂದು ಇಂದಿನ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯನ್ನು ಮಹಿಳೆಯರು ಸಾಧಿಸಿದ್ದಾರೆ. ಅದಕ್ಕೆ ಮುಖ್ಯ ಕಾರಣ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದರು.
ಈ ವೇಳೇ ಅಮಿತ ಈಳಗೇರ, ಗೀತಾ ಮುರಗಾನೂರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಿ.ಡಿ.ಮಾಸ್ತಿ ಎಸ್.ಕೆ.ಹೂಗಾರ ಡಾ.ಅಂಬರೀರ ಬಿರಾದಾರ, ಸತೀಶ ಬಿರಾದಾರ, ಎಂ.ಡಿ.ಸುಂಗಠಣ, ಸುರೇಖಾ ರಾಥೋಡ, ಸುಧಾ.ಮೈಶಾಳೆ, ರಾಹುಲ್ ಕಾಂಬಳೆ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.

