Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ

ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ

ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರಥದ ಎತ್ತರಿಗಿಂತ ಭಕ್ತಿಯ ಎತ್ತರ ಮುಖ್ಯ :ಸಂಗನಬಸವ ಶ್ರೀ
(ರಾಜ್ಯ ) ಜಿಲ್ಲೆ

ರಥದ ಎತ್ತರಿಗಿಂತ ಭಕ್ತಿಯ ಎತ್ತರ ಮುಖ್ಯ :ಸಂಗನಬಸವ ಶ್ರೀ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ: ಗ್ರಾಮದ ರಥ ಎಷ್ಟು ಎತ್ತರವಾಗಿದೆ ಎಂಬುದು ಮುಖ್ಯವಲ್ಲ, ಗ್ರಾಮಸ್ಥರಿಗೆ ದೇವರ ಮೇಲೆ ಎಷ್ಟು ಭಕ್ತಿ ಇದೆ ಎಂಬುದು ಮುಖ್ಯ ಎಂದು ಯರನಾಳದ ಸಂಗನಬಸವ ಶ್ರೀಗಳು ಹೇಳಿದರು.
ಶ್ರೀ ಶಂಕರಲಿಂಗ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತ್ರೆ ಅಥವಾ ರಥೋತ್ಸವ ಸಂದರ್ಭದಲ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ನಗರಗಳಲ್ಲಿ ವಾಸಿಸಿರುವ ಎಲ್ಲರೂ ಹುಟ್ಟುರಿಗೆ ಬರುತ್ತಾರೆ. ಅಷ್ಟೇ ಅಲ್ಲ, ಮದುವೆಯಾಗಿ ಬೇರೆ ಬೇರೆ ಭಾಗಗಳಲ್ಲಿ ಪತಿ ಕುಟುಂಬದವರೊಂದಿಗೆ ವಾಸವಿರುವ ಹೆಣ್ಣುಮಕ್ಕಳನ್ನು ತವರೂರಿಗೆ ಕರೆ ತರುವ ವಿಶೇಷ ಶಕ್ತಿ ಇರುವದು ಜಾತ್ರೆಗಳಿಗೆ ಮಾತ್ರ ಎಂದರು.
ಗ್ರಾಮದ ಎಲ್ಲರನ್ನು ಒಂದುಗೂಡಿಸುವ ಹಾಗೂ ಸಂಘಟಕರನ್ನಾಗಿ ಮಾಡುವ ಶಕ್ತಿ ರಥೋತ್ಸವಕ್ಕೆ ಇದೆ. ರೈತರು ಎಲ್ಲ ರಾಶಿಗಳನ್ನು ಮಾಡಿ ಸಂತೋಷ ಸಂಭ್ರಮದಿಂದ ಜಾತ್ರೆ ರಥೋತ್ಸವ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ವಿಜ್ರಂಭಣೆಯಿಂದ ಜರುಗಿದ ಅಗ್ನಿ ಶಮನ ಕಾರ್ಯಕ್ರಮ
ಬಂಥನಾಳ ಶೀಗಳ ಅಡ್ಡಪಲ್ಲಕ್ಕಿ, ನಂದಿಕೋಲು ಉತ್ಸವ ಹಾಗೂ ಅಗ್ನಿ ಶಮನ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.
ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪ್ರದಾಯದಂತೆ ಇಲ್ಲಿನ ಕಮರಿಮಠದ ಒಳ ಆವರಣದಿಂದ ವಾದ್ಯಮೇಳ, ಜಯಘೋಷಗಳೊಂದಿಗೆ ಕಮರಿಮಠದ ಒಳ ಆವರಣದಿಂದ ಆರಂಭವಾದ ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರ ಹೊತ್ತ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಈ ಮೆರವಣಿಗೆಯಲ್ಲಿ ವೀರಗಾಸೆ, ಸಂಬಾಳ, ಬ್ಯಾಂಕಡಸೆಟ್ ಕಲಾವಿದರು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದರು. ನಂತರ ಈ ಮೆರವಣಿಗೆಯು ಕಮರಿಮಠದ ಮುಂಭಾಗದ ಹೊರ ಆವರಣದ ಅಗ್ಗಿ ಕಟ್ಟೆಯತ್ತ ಸಾಗಿತು. ಈ ವೇಳೆ ಯುವಕರು ನಂದಿಕೋಲು ಎತ್ತಿ ಸೇವೆಸಲ್ಲಿಸಿದರೆ, ಮತ್ತೆ ಕೆಲವರು ಪಾಲಕಿ ಹೊತ್ತು ಭಕ್ತಿ ಸಮರ್ಪಿಸಿದರು.
ಈ ಮೆರವಣಿಗೆ ಅಗ್ಗಿ ಕಟ್ಟೆ ಸಮೀಪಿಸುತ್ತಿದ್ದಂತೆ ನೆರೆದ ಸಹಸ್ರಾರು ಭಕ್ತರ ಮನದಲ್ಲಿ ಸಂತಸದ ಭಾವ ಮೂಡಿತು. ಅಷ್ಟರಲ್ಲೆ ಬಂಥನಾಳ ಶ್ರೀಗಳ ಪಾಲಕಿ ಅಗ್ಗಿ ಪ್ರವೇಶ ಕಾರ್ಯಕ್ರಮ ವಿಜ್ರಂಭಣೆಯಿಂದ ನೆರವೇರಿತು.ಬಳಿಕ ವೀರಗಾಸೆ ಕಲಾವಿದರು, ಹರಕೆ ಹೊತ್ತ ಭಕ್ತರು ಕೆಂಡದಲ್ಲಿ ಭಕ್ತಿ ಭಾವದಿಂದ ಅಗ್ಗಿ ಹಾಯ್ದು ಭಕ್ತಿ ಸಮರ್ಪಿಸುವದರೊಂದಿಗೆ ಅಗ್ನಿ ಶಮನ ಕಾರ್ಯಕ್ರಮ ಯಶಸ್ವಿಯಾಯಿತು.
ದಕ್ಷಿಣ ಸೋಲಾಪುರ ತಾಲೂಕಿನ ಶಿರವಾಳದ ಸೋಮಲಿಂಗ ಮಹಾರಾಜರು, ರೇವಣಸಿದ್ದ ಮಹಾರಾಜರು, ಹೂವಿನ ಹಿಪ್ಪರಗಿಯ ಮಾತೋಶ್ರೀ ದ್ರಾಕ್ಷಾಯಣಿ ಅಮ್ಮನವರು ಈ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ

ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ

ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ

ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಬಬಲೇಶ್ವರ ಕ್ಷೇತ್ರ ರಾಜ್ಯದಲ್ಲಿಯೇ ಮೊದಲು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧ :ಸಿಎಂ
    In (ರಾಜ್ಯ ) ಜಿಲ್ಲೆ
  • ವ್ಯವಸ್ಥಿತ & ಅರ್ಥಪೂರ್ಣವಾಗಿ ನಡೆದ ಬೀದರ ಸಮ್ಮೇಳನ
    In (ರಾಜ್ಯ ) ಜಿಲ್ಲೆ
  • ಅನ್ನದಾತ ಅತಂತ್ರ, ಬೆಳೆಹಾನಿ ಪರಿಹಾರ ಹೆಚ್ಚಳಕ್ಕೆ ಒತ್ತಾಯ
    In (ರಾಜ್ಯ ) ಜಿಲ್ಲೆ
  • ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಬಬಲೇಶ್ವರ ಕ್ಷೇತ್ರ ರಾಜ್ಯದಲ್ಲಿಯೇ ಮೊದಲು
    In (ರಾಜ್ಯ ) ಜಿಲ್ಲೆ
  • ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಏರಿಕೆ ಖಂಡಿಸಿ ಆಪ್ ಮನವಿ
    In (ರಾಜ್ಯ ) ಜಿಲ್ಲೆ
  • ಮೇ ೧೧ ರಿಂದ ಅಲರ್ಜಿ, ಅಸ್ತಮಾ, ಕೆಮ್ಮು, ದಮ್ಮು ರೋಗಕ್ಕೆ ಉಚಿತ ತಪಾಸಣೆ
    In (ರಾಜ್ಯ ) ಜಿಲ್ಲೆ
  • ಸರ್ವ ಸಮುದಾಯದ ಜನರನ್ನು ಸಮಾನವಾಗಿ ಕಂಡ ಯಡಿಯೂರಪ್ಪ
    In (ರಾಜ್ಯ ) ಜಿಲ್ಲೆ
  • ಜಮಖಂಡಿಯ ಸ್ನಾತಕೋತ್ತರ ಕೇಂದ್ರದಲ್ಲಿ ಕ್ಯಾಂಪಸ್ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಅಫಜಲಪುರದಲ್ಲಿ ಕಸಾಪ ಸಂಸ್ಥಾಪನಾ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಶೂನ್ಯದಿಂದ ಶಿಖರದೆತ್ತರಕ್ಕೆ ಏರಬೇಕೆ?
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.