ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ಗುರುವೀರಸಿದ್ದ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ದ್ವಾದಶ ಲಿಂತೋಭದ್ರ ದೇವತಾ ಮಂಡಲ ಹೋಮದ ಪೂರ್ಣಾಹುತಿ ವಿದ್ಯಾಸಾಗರ ಹಿರೇಮಠ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ವೈ.ಎಸ್.ಗಂಗಶೆಟ್ಟಿ ಇತರರು ಇದ್ದರು.
ಏ.೨೦ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಸಂಸ್ಕಾರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ನೆರವೇರುವದು. ನಂತರ ೯ ಗಂಟೆಗೆ ವೀರಸಿದ್ದ ಶಿವಯೋಗಿಗಳವರ ಪಲ್ಲಕ್ಕಿ ಉತ್ಸವ ವಿವಿಧ ಕಲಾತಂಡ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಧ್ಯಾನ್ಹ ೧ ಗಂಟೆಗ ಹೆಬ್ಬಾಳ ಗ್ರಾಮದ ಸದ್ಭಕ್ತರಿಂದ ಸಿದ್ದಪಡಿಸಿದ ಅಗ್ನಿಕುಂಡದ ಅಗ್ನಿಶಮನ ಮಠದ ಪೂಜ್ಯರಿಂದ, ಪುರವಂತರಿಂದ ನೆರವೇರುವದು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆಯಾಗುವದು. ಸಂಜೆ ೪ ಗಂಟೆಗೆ ಉತ್ಸವ ಮೂರ್ತಿ ಕೊಡೆ ಕಳಸ ಬರಮಾಡಿಕೊಂಡ ನಂತರ ೫ ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಬಸವನಬಾಗೇವಾಡಿಯ ಬಸವೇಶ್ವರ ಬಯಲಾಟ ಸಂಘದಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನವಾಗಲಿದೆ ಎಂದು ಶ್ರೀಮಠದ ವೀರಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.

