Author: editor.udayarashmi@gmail.com

ದಲಿತರಿಗೆ ನ್ಯಾಯ ಕೊಡಿಸುವ ಇಚ್ಛಾಶಕ್ತಿ ಸಿಎಂ ಗೆ ಇಲ್ಲ :ಜಿಗಜಿಣಗಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾ.ಸದಾಶಿವ ಆಯೋಗದ ವರದಿಯನ್ನು ಬದಿಗಿರಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಲಿತ ಬಾಂಧವರಿಗೆ ನ್ಯಾಯ ಕೊಡಿಸುವ ನೈಜ ಇಚ್ಛಾಶಕ್ತಿ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.ಶನಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಹಿಂದ ನಾಯಕ ಎಂದು ಹೇಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಹಿಂದ ಪರವಾದ ಯಾವ ಕಾಳಜಿಯೂ ಇಲ್ಲ. ತಾನು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಹಾಕಲು ಈಗ ಜಾತಿ ಜನಗಣತಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದಲಿತ ಬಾಂಧವರ ಮೇಲೆ ನೈಜವಾದ ಕಾಳಜಿ ಇದ್ದಿದ್ದರೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುತ್ತಿದ್ದರು, ೨೦೧೨-೧೩ ರಲ್ಲಿಯೇ ನ್ಯಾ.ಸದಾಶಿವ ಆಯೋಗ ವರದಿಯನ್ನು ಸರ್ಕಾರಕ್ಕೆ ನೀಡಿದೆ, ಇನ್ನು ಅನುಷ್ಠಾನಗೊಳಿಸಬೇಕಾದ ಸರ್ಕಾರ ನಂತರ ಅಂದರೆ ೨೦೧೫ ರಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸಲು ತರಾತುರಿ ಮಾಡುತ್ತಿದೆ, ಇದಕ್ಕಿಂತಲೂ ಎಷ್ಟೋ ವರ್ಷ ಪೂರ್ವ ಒಳಮೀಸಲಾತಿ ಶಿಫಾರಸ್ಸುಳ್ಳ ನ್ಯಾ.ಸದಾಶೀವ ಆಯೋಗದ ವರದಿಯನ್ನು ಏಕೆ…

Read More

ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಒತ್ತಾಯಿಸಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಮಡಸನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಜ್ವಲಂತ ಸಮಸ್ಯೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿ ಮಡಸನಾಳ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಕನ್ನೂರ ಗ್ರಾಮದ ರೈತ ಹೋರಾಟಗಾರ ಸತೀಶ ಪಾಟೀಲ ಮಾತನಾಡಿ, ಇಂದಿನ ದಿನದಲ್ಲಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಇದ್ದಾವೆ. ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ತವರೂರಲ್ಲಿ ನೀರಿನ ಜ್ವಲಂತ ಸಮಸ್ಯೆ ಉಂಟಾಗಿರುವುದು ನಾಚಿಗೇಡಿತನವಾಗಿದೆ. ಸಾಕಷ್ಟು ಭಾರಿ ನೀರಿನ ತೊಂದರೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಚಿವರಿಗೆ ವಿನಂತಿಸಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಕುಡಿಯೋದಕ್ಕೆ ನೀರು ಕೊಡಿ. ಇದು ನಮ್ಮ ದೌರ್ಬಾಗ್ಯವಾಗಿದೆ ಎಂದು ರೈತರು ತಮ್ಮ ಸಮಸ್ಯೆಯನ್ನು ಯಾರಿಗೂ ಹೇಳದ ಪರಿಸ್ಥಿತಿವುಂಟಾಗಿದೆ. ನಮ್ಮ ಸಚಿವರಾದ ಎಂ.ಬಿ. ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ ಇವರು ಕಾಣೆಯಾಗಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ನೀರಿನ ಭವಣೆ ನೀಗಿಸದ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳಿಗೆ ಸದಸ್ಯರ ಸಹಮತದ ಮೂಲಕ ಅಂಗಿಕಾರ ನೀಡಲಾಯಿತು.ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿಯವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ. ಎಸ್. ತಳ್ಳಿ (ಘೂಳನ್ನವರ) ಮಾತನಾಡಿ, ಗ್ರಾಮದಲ್ಲಿ ಡೆಂಗ್ಯು, ಮಲೇರಿಯಾ ರೋಗಾಣುಗಳು ಹಲವರಲ್ಲಿ ಕಂಡುಬಂದಿದ್ದು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ, ಬಾಳಪ್ಪಾ ಗಡೆಪ್ಪನವರ ಮಾತನಾಡಿ ಸಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಇಲಾಖೆ ಆಸ್ಪತ್ರೆಗಳಿಗೂ ಅನುದಾನ ನೀಡಲಾಗುತ್ತದೆ. ಆ ಹಣ ಯಾವ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಸದರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗಕ್ಕೆ ನಿಯೋಜನೆ ಗೊಂಡಿದ್ದು ಮಿಕ್ಕ ವಿಚಾರಗಳು ನನ್ನ ಸುಪರ್ದಿಗೆ ಬರುವುದಿಲ್ಲವೆಂದರು. ಆಶ್ರಯ ಯೋಜನೆಗಳ ಫಲಾನುಭವಿಗಳ ಮನೆ ನಿರ್ಮಾಣದ ಬಿಲ್ ಬಾಕಿ ಹಣ ಹಾಗೂ ವಯಕ್ತಿಕ ಶೌಚಾಯಲಗಳ ಸಹಾಯಧನ ಇನ್ನೂ ಬಂದಿಲ್ಲ ಈ ಕುರಿತು…

Read More

ಟೀಕಿಸುವ ಮುನ್ನ ಓದಿಕೊಳ್ಳಲು ಹಿಂದುಳಿದ ವರ್ಗಗಳ ಶಾಸಕರ ವೇದಿಕೆಯ ಸಂಚಾಲಕ ಎಚ್ ಎಂ ರೇವಣ್ಣ ಸಲಹೆ ಬೆಂಗಳೂರು: ಒಂದೊಮ್ಮೆ ಜಾತಿ ಗಣತಿ ವರದಿ ಜಾರಿಯಾದರೆ ಕರ್ನಾಟಕದಲ್ಲಿ ಐತಿಹಾಸಿಕ ಘಟ್ಟವಾಗಲಿದೆ, ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಗೇಮ್ ಚೇಂಜರ್ ಆಗಲಿದೆ ಎಂದು ರಾಜ್ಯ ಖಾತರಿ ಸಮಿತಿಯ ಅಧ್ಯಕ್ಷ ಮತ್ತು ಹಿಂದುಳಿದ ವರ್ಗಗಳ ಶಾಸಕರ ವೇದಿಕೆಯ ಸಂಚಾಲಕ ಎಚ್.ಎಂ. ರೇವಣ್ಣ ಹೇಳಿದ್ದಾರೆ.ರಾಜಕೀಯ ಪ್ರಾತಿನಿಧ್ಯದ ಕೊರತೆಯಿಂದ ದೀರ್ಘಕಾಲದಿಂದ ಅಸಮಾಧಾನಗೊಂಡಿದ್ದ ಹಿಂದುಳಿದ ವರ್ಗಗಳು ಅಂತಿಮವಾಗಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳು, ಮತ್ತು ಹೆಚ್ಚಿನ ಬಲವನ್ನು ಪಡೆಯುತ್ತಾರೆ, ಇದರಿಂದ ನೈಜ, ಸ್ಪಷ್ಟ ಬದಲಾವಣೆಗೆ ಎದುರು ನೋಡಬಹುದು, ತಮಿಳುನಾಡು ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಶೇಕಡಾ 50 ಕ್ಕಿಂತ ಹೆಚ್ಚು ಮೀಸಲಾತಿಯನ್ನು ಅನುಭವಿಸುತ್ತಿವೆ, ಹೀಗಿರುವಾಗ ಕರ್ನಾಟಕದಲ್ಲಿ ಏಕೆ ಮಾಡಬಾರದು ಎಂದು ರೇವಣ್ಣ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ ಸದಸ್ಯರು ಶೇಕಡಾ 52 ರಷ್ಟಿದ್ದಾರೆ, ಆದರೆ ಸಂದ್ಯ ಕೇವಲ ಶೇ. 32 ರಷ್ಚು ಮೀಸಲಾತಿಯನ್ನು ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.ಹಿಂದುಳಿದ ಸಮುದಾಯಗಳಲ್ಲಿ ಅತಿ ದೊಡ್ಡದಾದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಅಽಕೃತ ಅಧ್ಯಕ್ಷರ, ಉಪಾಧ್ಯಕ್ಷರ,ಪ್ರಧಾನ ಕಾರ್ಯದರ್ಶಿಗಳ, ಪದಾಽಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ನಿಯಮಾವಳಿಯಂತೆ ಚುನಾವಣಾಧಿಕಾರಿ, ವಕೀಲ ಜಿ.ಆರ್.ಬೀಳಗಿ ಅವರು ಜರುಗಿಸಿ ಎಲ್ಲ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ೨೦೧೩-೧೪, ೨೦೨೩-೨೫ ರ ಅವಽಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಕಳೆದ -.೨೧ ರಂದು ನನ್ನ ಅಧ್ಯಕ್ಷ ಅವಽ ಮುಕ್ತಾಯವಾಗಿದೆ. ಮುಂದೆ -.೧೦ ರಂದು ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಕೆಲ ಸದಸ್ಯರು ಸಹಕಾರ ಕೊಡಲಿಲ್ಲ. ಮುಂದೆ ಮಾ.೧೨ರಂದು ಮತ್ತೊಂದು ಸಭೆ ಕರೆದಾಗ ೧೫೧ ಸದಸ್ಯರ ಪೈಕಿ ೭೧ ಸದಸ್ಯರು ಹಾಜರಿದ್ದರು. ಆಗ ಚುನಾವಣಾಧಿಕಾರಿಯಾಗಿ ಜಿ.ಆರ್.ಬೀಳಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಚುನಾವಣಾಽಕಾರಿಗಳು ಸಂಘದ ೨೦೨೫-೨೭ ನೇ ಸಾಲಿನ ಅವಽಯ ಚುನಾವಣೆಯ ಪ್ರಕ್ರಿಯೆ ಆರಂಭಿಸಿ ಏ.೪…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಗುತ್ತಿಗೆದಾರರು ಪೂರ್ಣಗೊಳಿಸುವಂತೆ ಅಧಿಕಾರಿಗಳು ಕ್ರಮವಹಿಸಬೇಕೆಂದು ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಹೇಳಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರು ಅಭಿಪ್ರಾಯ ಮಂಡಿಸಿದ ಮೇರೆಗೆ ಈಗಾಗಲೇ ಕರೆದ ಟೆಂಡರ್ಗಳಿಗೆ ಅನುಮೋದನೆ ನೀಡದೇ ಮುಂದಿನ ವಾರ ಗುತ್ತಿಗೆದಾರರ ಸಭೆ ಕರೆದು ಹಿಂದಿನ ಕಾಮಗಾರಿಗಳ ಬಗ್ಗೆ ಚರ್ಚಿಸಿ ಹೊಸ ಟೆಂಡರ್ಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡ್ಗಳಲ್ಲಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸನ್ ೨೦೨೫-೨೬ ನೇ ಸಾಲಿನ ೧೫ನೇ ಹಣಕಾಸು ರೂ.೨೦೮.೦೦ ಲಕ್ಷಕ್ಕೆ ತಯಾರಿಸಿದ ಕ್ರಿಯಾಯೋಜನೆಯ ವಿವರ ತಿಳಿಸಿದ ಅವರು ಕುಡಿಯುವ ನೀರು, ಮಳೆ ನೀರು ಕೊಯ್ಲು,ಜಲಮೂಲಗಳ ಪುನಶ್ಚೇತನ ಮತ್ತು ನೀರಿನ ಮರು ಬಳಕೆ ಒಳಗೊಂಡಂತೆ ಶೇ.೩೦ ರಷ್ಟು ರೂ.೬೨.೪ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ 7 ಮತ್ತು 23 ನೇ ವಾರ್ಡ್ ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಶನಿವಾರ ಕ್ರಾಂತಿವೀರ ಬ್ರಿಗೇಡ ಜಿಲ್ಲಾ ಘಟಕದ ವತಿಯಿಂದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಪುರಸಭೆಗೆ ರಾಜ್ಯ ಸರ್ಕಾರದಿಂದ 2021-22 ರ ಸಾಲಿನಲ್ಲಿ ನಗರೋತ್ಥಾನ ಯೋಜನೆ ಅಡಿ ಕಾಮಗಾರಿ ಟೆಂಡರ ಕರೆಯಲಾಗಿದ್ದು. ನಗರೋತ್ಥಾನ ಯೋಜನೆ-4 ಕಾಮಗಾರಿಯನ್ನು ವಾರ್ಡ್ ಸಂಖ್ಯೆ 7 ಮತ್ತು 23 ರಲ್ಲಿ ಗುತ್ತಿಗೆದಾರರು ಪ್ರಾರಂಭಿಸಿರುವುದಿಲ್ಲ. ಆ ವಾರ್ಡಿನ ಸದಸ್ಯರು ನಮ್ಮ ಕ್ರಾಂತಿವೀರ ಬ್ರಿಗೆಡ್ ಸಂಘಟನೆಯ ಗಮನಕ್ಕೆ ತಂದಿದ್ದು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಬೇಕು. ವಿಳಂಬ ಮಾಡಿದರೆ ಏ.29 ರಂದು ನಮ್ಮ ಸಂಘಟನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ರಾಂತಿವೀರ ಬ್ರಿಗೇಡ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಮುದಕಣ್ಣ ಹೊರ್ತಿ, ತಾಲೂಕು ಘಟಕದ ಅಧ್ಯಕ್ಷ ಅಮರಯ್ಯ ಹಿರೇಮಠ, ಎಸ್.ಎಚ್.ಜೋತೆಪ್ಪಗೋಳ, ಮುತ್ತು ಹಾಲಿಹಾಳ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿಪ್ರ ಸಮಾಜ ಬಾಂಧವರು ಈಚೆಗೆ ಜರುಗಿದ ಸಿಇಟಿ ಪರೀಕ್ಷೆಯಲ್ಲಿ ಬೀದರ ಜಿಲ್ಲೆಯ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಯ ಜನಿವಾರ ತೆಗೆಯಲು ಒತ್ತಾಯಿಸಿದ್ದನ್ನು ಖಂಡಿಸಿ ತಪ್ಪಿಸ್ಥತರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಶನಿವಾರ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಸಿಇಟಿ ಗಣಿತ ಪರೀಕ್ಷೆಯ ವೇಳೆಯಲ್ಲಿ ಅನಾವಶ್ಯಕವಾಗಿ ಜನಿವಾರ ತೆಗೆಯಲು ಒತ್ತಾಯ ಮಾಡಿದ್ದು ಖಂಡನೀಯ. ಅಲ್ಲದೇ ಜನಿವಾರ ಧರಿಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಪರೀಕ್ಷಾ ಪ್ರಾಧಿಕಾರ ಮಾರ್ಗಸೂಚಿಯಲ್ಲಿ ಲೋಹದ ಸರ ಧರಿಸಬಾರದು ಎಂಬ ಉಲ್ಲೇಖವಿದೆ. ಜನೀವಾರ ಧರಿಸಬಾರದು ಎಂಬ ಯಾವುದೇ ಉಲ್ಲೇಖವು ಇಲ್ಲ. ಆದರೆ ಪರೀಕ್ಷಾ ಮೇಲ್ವಿಚಾರಕರು ಸುಚಿವೃತ ಕುಲಕರ್ಣಿ ವಿದ್ಯಾರ್ಥಿ ಜನಿವಾರ ಧರಿಸಿ ಕಾರಣಕ್ಕೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ. ಇದರಿಂದಾಗಿ ವಿದ್ಯಾರ್ಥಿಯ ಭವಿಷ್ಯಕ್ಕೆ ಅಡ್ಡಿ ಪಡಿಸಿದ್ದನ್ನು ಸಮಾಜ ಖಂಡಿಸುತ್ತದೆ. ಸರ್ಕಾರ ಕೂಡಲೇ ಪರೀಕ್ಷೆಗೆ ಅನುಮತಿ ನಿರಾಕರಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ವಿದ್ಯಾರ್ಥಿಗೆ ರ್ಯಾಂಕ್ ಕೊಡಬೇಕೆಂದು ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಶ್ವಗುರು, ಸಾಂಸ್ಕ್ರತಿಕ ನಾಯಕ ಬಸವೇಶ್ವರ ಜಯಂತಿಯಂಗವಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ವಚನ ಕಂಠಪಾಠ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕೊಡಲಾಗುವುದು, ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬಸವೇಶ್ವರ ದೇವಾಲಯದ ಆವರಣದಲ್ಲಿರುವ ಕಚೇರಿಯಲ್ಲಿ ಏ. 26 ನೇ ತಾರೀಖಿನ ಒಳಗಾಗಿ ತಮ್ಮ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬಸವರಾಜ ನಂದಿಹಾಳ ಮೊ- 9916402368 ಅಥವಾ ವೈ. ಎನ್. ಮಿಣಜಗಿ ಮೊ-9900762146 ಸಂಪರ್ಕಿಸಬೇಕೆಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More