ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಪುರಸಭೆಯ 7 ಮತ್ತು 23 ನೇ ವಾರ್ಡ್ ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಶನಿವಾರ ಕ್ರಾಂತಿವೀರ ಬ್ರಿಗೇಡ ಜಿಲ್ಲಾ ಘಟಕದ ವತಿಯಿಂದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಪುರಸಭೆಗೆ ರಾಜ್ಯ ಸರ್ಕಾರದಿಂದ 2021-22 ರ ಸಾಲಿನಲ್ಲಿ ನಗರೋತ್ಥಾನ ಯೋಜನೆ ಅಡಿ ಕಾಮಗಾರಿ ಟೆಂಡರ ಕರೆಯಲಾಗಿದ್ದು. ನಗರೋತ್ಥಾನ ಯೋಜನೆ-4 ಕಾಮಗಾರಿಯನ್ನು ವಾರ್ಡ್ ಸಂಖ್ಯೆ 7 ಮತ್ತು 23 ರಲ್ಲಿ ಗುತ್ತಿಗೆದಾರರು ಪ್ರಾರಂಭಿಸಿರುವುದಿಲ್ಲ. ಆ ವಾರ್ಡಿನ ಸದಸ್ಯರು ನಮ್ಮ ಕ್ರಾಂತಿವೀರ ಬ್ರಿಗೆಡ್ ಸಂಘಟನೆಯ ಗಮನಕ್ಕೆ ತಂದಿದ್ದು. ಶೀಘ್ರದಲ್ಲೇ ಕಾಮಗಾರಿ ಆರಂಭಿಸಬೇಕು. ವಿಳಂಬ ಮಾಡಿದರೆ ಏ.29 ರಂದು ನಮ್ಮ ಸಂಘಟನೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರಾಂತಿವೀರ ಬ್ರಿಗೇಡ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಮುದಕಣ್ಣ ಹೊರ್ತಿ, ತಾಲೂಕು ಘಟಕದ ಅಧ್ಯಕ್ಷ ಅಮರಯ್ಯ ಹಿರೇಮಠ, ಎಸ್.ಎಚ್.ಜೋತೆಪ್ಪಗೋಳ, ಮುತ್ತು ಹಾಲಿಹಾಳ, ಶರಣಗೌಡ ಕೊಂಡಗೂಳಿ, ಬಸವರಾಜ ಬಿಜಾಪುರ, ದೇವರಾಜ ಗುಡದಿನ್ನಿ, ಸುರೇಶ ಗುಂಡಿ, ರಾಜು ಮುಳವಾಡ, ದುಂಡಪ್ಪ ಗೊಳಸಂಗಿ, ಆಕಾಶ ನರಸಲಗಿ, ಸಂಗಮೇಶ ಹಗ್ಗದ, ಮುತ್ತು ಹೆರಕಲ್ಲ, ಕರಿಸಿದ್ದ ಪೂಜಾರಿ, ಪರಶುರಾಮ ಹಡಪದ, ನಾಗೇಶ ಗಾಣಿಗೇರ, ಅಕ್ಷಯ ಪವಾರ, ಈರಣ್ಣ ಬಡಿಗೇರ, ಆನಂದ ಕೊಂಡಗೂಳಿ ಇತರರು ಇದ್ದರು.

