ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳಿಗೆ ಸದಸ್ಯರ ಸಹಮತದ ಮೂಲಕ ಅಂಗಿಕಾರ ನೀಡಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿಯವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ. ಎಸ್. ತಳ್ಳಿ (ಘೂಳನ್ನವರ) ಮಾತನಾಡಿ, ಗ್ರಾಮದಲ್ಲಿ ಡೆಂಗ್ಯು, ಮಲೇರಿಯಾ ರೋಗಾಣುಗಳು ಹಲವರಲ್ಲಿ ಕಂಡುಬಂದಿದ್ದು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಸದಸ್ಯ ಮಹಾಲಿಂಗ ಮಾಯಣ್ಣವರ, ಬಾಳಪ್ಪಾ ಗಡೆಪ್ಪನವರ ಮಾತನಾಡಿ ಸಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಇಲಾಖೆ ಆಸ್ಪತ್ರೆಗಳಿಗೂ ಅನುದಾನ ನೀಡಲಾಗುತ್ತದೆ. ಆ ಹಣ ಯಾವ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಸದರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗಕ್ಕೆ ನಿಯೋಜನೆ ಗೊಂಡಿದ್ದು ಮಿಕ್ಕ ವಿಚಾರಗಳು ನನ್ನ ಸುಪರ್ದಿಗೆ ಬರುವುದಿಲ್ಲವೆಂದರು. ಆಶ್ರಯ ಯೋಜನೆಗಳ ಫಲಾನುಭವಿಗಳ ಮನೆ ನಿರ್ಮಾಣದ ಬಿಲ್ ಬಾಕಿ ಹಣ ಹಾಗೂ ವಯಕ್ತಿಕ ಶೌಚಾಯಲಗಳ ಸಹಾಯಧನ ಇನ್ನೂ ಬಂದಿಲ್ಲ ಈ ಕುರಿತು ಈ ಕುರಿತು ಮೇಲಾಧಿಕಾರಿಗಳ ಗಮಣಕ್ಕೆ ತರುವಂತೆ ಪೈಗಂಬರ ಯಾದವಾಡ, ಚನ್ನಪ್ಪ ಪೂಜಾರಿ, ಕೇಶವ ವಂದಾಲ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರುಕಿ ಹುದ್ದೆಯ ನೆಮಕಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಬೇಟಿಮಾಡಲು ಗ್ರಾ.ಪಂ. ಸದಸ್ಯರ ನಿಯೋಗ ಹೊಗಿ ಒತ್ತಾಯಿಸಬೇಕಾಗಿದ್ದು ಎಲ್ಲ ಸದಸ್ಯರು ಭಾಗವಹಿಸಬೇಕೆಂದು ಮಾಜಿ ಅಧ್ಯಕ್ಷ ಆನಂದ ಕವಟಿ, ಗುರಲಿಂಗಪ್ಪಾ ಪೂಜಾರಿ, ಪ್ರಕಾಶ ಪಾಟೀಲ ಮನವಿ ಮಾಡಿದರು. ಇದೇ ಸಂಧರ್ಬದಲ್ಲಿ ಕಳೆದ ಬಾರಿಯ ಎಸ್ಸಿ,ಎಸ್ಟಿ ೧.೯೫ ಲಕ್ಷ ಅನುದಾನದಲ್ಲಿ ೧೧೨ ಪರಿಷಿಷ್ಠ ರೈತರಿಗೆ ಕೃಷಿ ಸಾಮಗ್ರಿ ವಿತರಿಸಲಾಯಿತು.
ಉಪಾಧ್ಯಕ್ಷೆ ಪದ್ಮಾವತಿ ಬಜಂತ್ರಿ ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

