Author: editor.udayarashmi@gmail.com

ಸಿಂದಗಿಯಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ನೇತೃತ್ವದಲ್ಲಿ ಸಂಭ್ರಮಾಚರಣೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಶಾಸಕ ಅಶೋಕ ಮನಗೂಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ ಅವರಿಗೆ ಪಟ್ಟಣದ ಜನತೆ ಹಾಗೂ ಪುರಸಭೆಯಿಂದ ಅಭಿನಂದಿಸುವುದಾಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಮುಖ್ಯ ರಸ್ತೆಯ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆಯ ಸದಸ್ಯರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಮಾತನಾಡಿದ ಅವರು, ಈ ದಿನ ಸಿಂದಗಿ ಇತಿಹಾಸದಲ್ಲಿ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ದಿನವಾಗಿದೆ. ಶಾಸಕರ ಸತತ ಪರಿಶ್ರಮ, ಹಿತಾಸಕ್ತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಇದುವರೆಗೂ ಪಟ್ಟಣ ಎಂದು ಕರೆಯುತ್ತಿದ್ದ ನಾವು ಇಂದಿನಿಂದ ಸಿಂದಗಿ ನಗರವಾಗಿದೆ ಎಂದರು.ಈ ವೇಳೆ…

Read More

ಗಣೇಶ ವಿಸರ್ಜನೆಯಲ್ಲಿ ಸಾವಿಗೀಡಾದ ಶುಭಂ ಸಂಕಪಾಳ ಈತನ ಕುಟುಂಬಕ್ಕೆ ನ್ಯಾಯ ಹಾಗೂ ನೌಕರಿ ನೀಡುವಂತೆ ಜಾಗೃತ ಹಿಂದೂ ಮಂಚ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೭ನೇ ದಿನದ ಗಣೇಶೋತ್ಸವ ನಿಮಿತ್ಯವಾಗಿ ಗಣೇಶ ವಿಸರ್ಜನೆ ಸಮಯದಲ್ಲಿ ಆದಂತಹ ಅವಗಢ ಹಾಗೂ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯತನದಿಂದ ಆದ ಅನಾಹುತಕ್ಕೆ ಹಾಗೂ ಸಾವಿಗೀಡಾದ ಯುವಕನಾದ ಶುಭಂ ಸಂಕಪಾಳ ಇವರ ಕುಟುಂಬಕ್ಕೆ ಸರಕಾರಿ ನೌಕರಿ ನೀಡುವಂತೆ ಆಗ್ರಹಿಸಿ ಜಾಗೃತ ಹಿಂದೂ ಮಂಜ್, ವಿಜಯಪುರ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಾಗೃತ ಹಿಂದೂ ಮಂಜ್ ಅಧ್ಯಕ್ಷರಾದ ಶಿವಾನಂದ ಭುಯ್ಯಾರ ಮಾತನಾಡಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಿವಾನಂದ ತಿಳಿಸಿದರು ನಿನ್ನೆ ನಡೆದ ಗಣೇಶ್ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ವಿದ್ಯುತ್ಪರ್ಷದಿಂದ ೨೨ ವಯಸ್ಸಿನ ಹದಿ ಹರೆಯದ ಯುವಕ ಬಲಿಯಾಗಿದ್ದು ಹೆಸ್ಕಾಂ ನಿರ್ಲಕ್ಷತನದಿಂದ ಮನೆಯ ಬೆಳಗುವ ಹೆಸ್ಕಾಂ ಅಧಿಕಾರಿಗಳು ಇಡೀ ಜಿಲ್ಲೆ ಇಡೀ ನಗರದಲ್ಲಿ ನಿನ್ನೆ ಕತ್ತಲೆ ಕತ್ತಲೆ ಆವರಿಸಿ ದಂತಾಯಿತು ಮಗನ್ನ ಕಳೆದುಕೊಂಡ ಕುಟುಂಬಕ್ಕೆ ಬದುಕೆ ಕತ್ತಲಾಯಿತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ ಸೆಪ್ಟಂಬರ್ ೮ ರಿಂದ ೧೭ರವರೆಗೆ ನಗರದ ಇಂಡಿ ರಸ್ತೆಯಲ್ಲಿರುವ ಚಾಂದನಿ ಫಂಕ್ಷನ್ ಹಾಲ್‌ನಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.ವಸ್ತು ಪ್ರದರ್ಶನದಲ್ಲಿ ಖಾದಿ ಮಂಡಳಿಯಿಂದ ಧನಸಹಾಯ ಪಡೆದ ಫಲಾನುಭವಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದು, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ದಾವಣಗೆರೆ. ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬಳ್ಳಾರಿ, ಕೊಪ್ಪಳ, ಬೀದರ, ಮಂಡ್ಯ ಮೈಸೂರು, ಹಾಗೂ ಹೊರ ರಾಜ್ಯಗಳಿಂದ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ, ಶುದ್ಧ ಖಾದಿ ರೇಷ್ಮೆ ಸೀರೆಗಳು, ಕಸೂತಿ ಸೀರೆಗಳು, ಜಾಕೇಟ್, ಕರದಂಟು, ಸಿಹಿ ತಿಂಡಿಗಳು, ಡಿಜೈನ್ ಬ್ಯಾಗಗಳು, ಬಿದಿರು ಬೆತ್ತ, ರೆಡಿಮೇಡ್ ಶರ್ಟ್ಗಳು, ಪಾದರಕ್ಷೆಗಳಂತಹ ಖಾದಿ ಉತ್ಪನ್ನಗಳು ವಸ್ತು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.ವಿಜಯಪುರ ಜಿಲ್ಲೆಯ ನಾಗರಿಕರು ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ರೈತ-ರೈತ ಮಹಿಳೆಯರಿಗೆ ಸೆ೮ರಿಂದ ೧೩ರವರೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ, ಕುರಿ-ಆಡು ಹಾಗೂ ಕೋಳಿ ಸಾಕಾಣಿಕ ತರಬೇತಿ ಆಯೋಜಿಸಲಾಗಿದೆ.೬ ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ದಿನಾಂಕ : ೦೬-೦೯-೨೦೨೫ರೊಳಗೆ ನೊಂದಾಯಿಸಿಕೊಳ್ಳಬೇಕು. ನೊಂದಣಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಗೀತಾ ಭಜಂತ್ರಿ ಮೊ: ೯೯೮೬೦೫೪೭೫೦ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿಗೆ ಸುರಿದ ಮಳೆಯಿಂದಡೋಣಿ ನದಿ ಪ್ರವಾಹದಿಂದಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸಲು ಬಬಲೇಶ್ವರ ತಾಲೂಕಿನ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.ಪ್ರಕಟಿತ ಪಟ್ಟಿಗೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಬಬಲೇಶ್ವರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ಪೂಜಾರಿ ಮೊ:೭೨೫೯೮೫೬೮೯೦,ಬಬಲೇಶ್ವರದ ತೋಟಗಾರಿಕಾ ಅಧಿಕಾರಿ ಸುರೇಶ ಚವ್ಹಾಣ ಮೊ:೯೮೪೫೭೨೯೨೬೧ ಹಾಗೂ ಕಂದಾಯ ನಿರೀಕ್ಷಕರಾದ ವಿನಯ ಕುಲಕರ್ಣಿ ಮೊ: ೭೪೧೧೭೯೪೩೦೫ ಇವರಿಗೆ ದಿನಾಂಕ:೧೦-೦೯-೨೦೨೫ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಬಬಲೇಶ್ವರ ತಹಶಿಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಕಿಚಡಿ ಜಾತ್ರೆಯಲ್ಲಿ ಗ್ರಾಮದ ಯುವಕ ಪ್ರಭು ಕರಿಗಾರ ಸುಮಾರು ೧೨೦ ಕಿಲೋ ಭಾರದ ಜೋಳದ ಚೀಲ ಹೆಗಲ ಮೇಲೆ ಹೊತ್ತು ಮನೆಯಿಂದ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಧೀರ್ಗದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ತೀರಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ಉಮರಜ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರೌಢ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಜಗದೀಶ ವಾಘಮೋರೆ ಉದ್ದ ಜಿಗಿತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ಪ್ರಥಮ ಹಾಗೂ ೧೦೦ ಮೀ ಓಟದಲ್ಲಿ ಪ್ರಥಮ, ಸಮಿತ ಚೌಡಕಿ ೧೫೦೦ ಮೀ ಹಾಗೂ ೩೦೦೦ ಮೀ ಓಟದಲ್ಲಿ ದ್ವಿತೀಯ, ಕಿರಣ ಡೊಳ್ಳಿ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಬಾಲಕರ ೪*೧೦೦ ಮೀ ರೀಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಗುರುಗಳು, ಸಿಬ್ಬಂದಿ ವರ್ಗ, ಆಡಳಿತ ಮಂಡಳಿ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ರೇವತಗಾಂವ: ಉಮರಜ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಚಡಚಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಜಯ ಸಾಧಿಸುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಸಂಗಮೇಶ ಅಡಕೆ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಸಮರ್ಥ ಕುರಗಟಗಿ ೨೦೦ ಮೀ ಓಟದಲ್ಲಿ ಪ್ರಥಮ, ಸಂತೋಷ ಮೇತ್ರೆ ನಡಿಗೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಕಾವೇರಿ ಹಾವಿನಾಳ ೨೦೦ ಮೀ ಓಟದಲ್ಲಿ ಪ್ರಥಮ, ೪೦೦ ಮೀ ರೀಲೆಯಲ್ಲಿ ದ್ವಿತೀಯ, ೩೦೦೦ ಓಟದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ, ಶ್ರೇಯಾ ಸಾಲೋಟಗಿ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಅಡೆತಟೆ ಓಟದಲ್ಲಿ ದ್ವಿತೀಯ, ತೇಜಶ್ವಿನಿ ಮಾಳಿ ಗುಂಡು ಎಸೆತದಲ್ಲಿ ದ್ವಿತೀಯ, ವಿದ್ಯಾಶ್ರೀ ಹಕ್ಕೆ ಬಲ್ಲೆ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಯಾವ ವಿಜ್ಞಾನಯುಗ, ಗ್ಲೋಬಲ್‌ಯುಗ, ಕಂಪೂಟರ್, ಮೊಬೈಲ್‌ಯುಗ ಬಂದರೂ ಮನಸನ್ನು ಆದ್ಯಾತ್ಮ ಜ್ಞಾನದೆಡೆಗೆ ಪಸರಿಸಿದರೆ ಜೀವನದಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ನಿಡಸೋಸಿ ದುರದುಂಡೇಶ್ವರ ಮಠದ ಶ್ರೀ ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.ಉತ್ತರಕರ್ನಾಟಕದ ಸುಪ್ರಸಿದ್ಧ ಜಂಗಮಕ್ಷೇತ್ರ ಚಿಮ್ಮಡದ ಶ್ರೀಪ್ರಭುಲಿಂಗೇಶ್ವರ ಕಿಚಡಿ ಜಾತ್ರೆಯಂಗವಾಗಿ ಹಮ್ಮಿಕೊಂಡಿದ್ದ ವಚನ ಚಿಂತನ ಗೋಷ್ಠಿಯ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು ಇಂದು ಐ.ಎ.ಎಸ್, ಐ.ಪಿ.ಎಸ್, ಐಟಿಬಿಟಿ ಸೇರಿದಂತೆ ಉನ್ನತ ಹುದ್ದೆಗಳಲ್ಲಿರುವ ಬಹುತೇಕ ಅಧಿಕಾರಿಗಳು ಮಾನಸಿಕ ನೆಮ್ಮದಿ ಇಲ್ಲದೇ ಬಳಲುತಿದ್ದು ಇಂಥಹ ಜಾತರೆಗಳಲ್ಲಿ ಬಂದು ಪ್ರಸಾದ ಸೇವಿಸಿ ತಮ್ಮ ಮನಸನ್ನು ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ ಎಂದರು.ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ ಜಗತ್ತಿನಲ್ಲಿ ಯಾರೂ ಶಾಶ್ವತ ಅಲ್ಲ, ನಮ್ಮ ನಡೆ ನುಡಿಗಳನ್ನು ಕಾಯ್ದುಕೊಂಡು ಜೀವನದಲ್ಲಿ ಯಾರಿಗೂ ತೊಂದರೆಯಾಗದಂತೆ ಬದುಕಿ ಸಾರ್ಥಕತೆಯಿಂದ ಜನಮಾಸರಾಗಬೇಕು ಎಂದರು.ಸಿಂದಗಿ ಸಾರಂಗ ಮಠದ ಶ್ರೀ ಪ್ರಭು ಸಾರಂಗ ಶಿವಾಚಾರ್ಯರು ಮಾತನಾಡಿ ಇಂದಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಇಂತಹ ಜಾತ್ರೆ, ಉತ್ಸವಗಳಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಸಂಸ್ಕೃತಿಗೆ…

Read More

ಆಲಮಟ್ಟಿ ಅಂಗಳದಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ | ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೆ.೬ ಶನಿವಾರ ಮಧ್ಯಾಹ್ನ ೧೨ ಕ್ಕೆ ಕೃಷ್ಣಗೆ ಆಲಮಟ್ಟಿಯಲ್ಲಿ ಬಾಗಿನ ಅರ್ಪಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಲಾಲ್ ಬಹದ್ದೂರ್ ಜಲಾಶಯ ಸೇರಿದಂತೆ ಆಲಮಟ್ಟಿ ಸುತ್ತಲೂ ಪೋಲಿಸ್ ಬಿಗಿ ಬಂದೋಬಸ್ತ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲೆ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬಾಗಿನ ಅರ್ಪಣೆಯ ನಂತರ ಪ್ರವಾಸಿ ಮಂದಿರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದರು.ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ ಎಂದರು.ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು.ಮಧ್ಯಾಹ್ನ ೩ ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ…

Read More