ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನಮಠದಲ್ಲಿ ಮೇ.೦೨ ಶುಕ್ರವಾರದಂದು ಜಗದ್ಗುರು ಶಂಕರಾಚಾರ್ಯರ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಬೆಳಿಗ್ಗೆ ೦೯ಗಂಟೆಗೆ ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಶೋಭಾಯಾತ್ರೆ, ಬೆಳಿಗ್ಗೆ ೧೦ಗಂಟೆಗೆ ಶ್ರೀಮಠದಲ್ಲಿ ಜಗದ್ಗುರು ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ ಹಾಗೂ ಸಾಮೂಹಿಕ ನಮಃ ಶಂಕರಾಯ ಜಪ, ೧೧ಗಂಟೆಗೆ ವೇ.ಮೂ.ಶ್ರೀ ಆದಿತ್ಯ ವೈದ್ಯ ಅವರಿಂದ ಉಪನ್ಯಾಸ, ಮದ್ಯಾಹ್ನ ೧೨ಗಂಟೆಗೆ ಸದ್ಗುರು ದತ್ತಪ್ಪಯ್ಯ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಹಾಗೂ ೧೨:೪೦ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಜರುಗಲಿದೆ.
