Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ನಮ್ಮ ದೇಶದಲ್ಲಿರುವ ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಬಹಳ ಶ್ರೇಷ್ಠವಾದುದ್ದು ಎಂದು ಮಹಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಮೇತ್ರಿ ಹೇಳಿದರು.ಅವರು ಪಟ್ಟಣದ ಪಟ್ಟಣದ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹತ್ತನೇ ತರಗತಿ ಅಗ್ರ ಶ್ರೇಣಿಯಲ್ಲಿ ತೇರ್ಗೆಡೆಯಾಗಿರುವ ವಿದ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತ ದೇಶ ಇಂದು ಏನೆಲ್ಲಾ ಸಾಧನೆ ಮಾಡಿದೆ ಅದಕ್ಕೆಲ್ಲಾ ಶಿಕ್ಷಕರು ಕಾರಣವಾಗಿದ್ದಾರೆ. ಮಾದರಿ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಬಹಳ ದೊಡ್ಡದಾಗಿದೆ. ಬಿಇಡಿ ವ್ಯಾಸಂಗ ಮಾಡುತ್ತಿರುವ ಭಾವಿ ಶಿಕ್ಷಕರು ನಿಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಬಹಳ ಶೃದ್ದೆಯಿಂದ ಓದಿ, ಶಿಕ್ಷಕ ವೃತ್ತಿಯ ಘನತೆ ಕಾಪಾಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಸಂಸ್ಥೆಯ ಕಾರ್ಯಧರ್ಶಿ ಮಂಜೂರ ಅಹ್ಮದ್ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಜಿ ಹಿರೇಮಠ…

Read More

ಲೇಖನ-ಮಲ್ಲಪ್ಪ ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ “ಸಂಸ್ಕೃತ ಶ್ಲೋಕದಂತೆ, ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ” ಎನ್ನುವುದು ನಿಜವಾದ ಜ್ಞಾನವು ಮನುಷ್ಯನಲ್ಲಿ ಶಿಸ್ತನ್ನು ಕಲಿಸುತ್ತದೆ. ಆ ಶಿಸ್ತಿನಿಂದ ಯೋಗ್ಯತೆ ಬರುತ್ತದೆ ಎಂಬುದು ಸತ್ಯವಾದ ಮಾತು. ಸಾಕ್ಷರತೆ ಎಂದರೆ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯ ಬಗ್ಗೆ ಸೂಚಿಸುತ್ತದೆ. ಮಾನವನಲ್ಲಿ ಸ್ವಂತ ಬುದ್ದಿವಂತಿಕೆ, ಜ್ಞಾನ ಮತ್ತು ಸ್ವ-ಅರಿವು ಹೆಚ್ಚಿಸುವ ಶಕ್ತಿಯುತ ಸಾಧನವೆಂದರೆ ಅದುವೇ ಸಾಕ್ಷರತೆ ಮತ್ತು ಇದು ಶಿಕ್ಷಣದ ಭಾಗವೂ ಹೌದು. ಇದು ವ್ಯಕ್ತಿಗಳಿಗೆ ಶಿಕ್ಷಣ, ಜ್ಞಾನ, ಮಾಹಿತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಬಲಗೊಳಿಸುತ್ತದೆ. ಹೆಚ್ಚಿನ ಸಾಕ್ಷರತಾ ದರಗಳು ಆ ರಾಷ್ಟ್ರದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ, ಕಾರ್ಯಕ್ಷಮತೆ, ಕಡಿಮೆ ಅಸಮಾನತೆ ಮತ್ತು ಸಾಮಾಜಿಕ ಸಮಗ್ರತೆಯನ್ನು ಪ್ರತಿಬಿಂಬಿಸುತ್ತದೆ. ಜನರು ಸಾಕ್ಷರರಾಗುತ್ತಾ ತಮ್ಮ ವ್ಯಕ್ತಿಗತವಾದ ಸುಧಾರಣೆಯೊಂದಿಗೆ ಸಮುದಾಯಗಳ ಅಭ್ಯುದಯಕ್ಕಾಗಿ ಭಾಗವಹಿಸುವುದು, ಕೊಡುಗೆ ಸಲ್ಲಿಸುವುದು ಮತ್ತು ಬಡತನದಿಂದ ಪಾರಾಗಲು ಸಹಕಾರಿಯಾಗಿದೆ. ೨೦೧೧ ರ ಜನಗಣತಿಯ ಪ್ರಕಾರ, ಏಳು ವರ್ಷ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿ, ಯುವ ಸಮೂಹ ನಮ್ಮ ದೇಶ, ಸಂಸ್ಕೃತಿ, ನಮ್ಮ ಪರಂಪರೆಯ ನಿರ್ಮಾಪಕ ಕ್ರಮಗಳನ್ನು ಅಧ್ಯಯನ ಮಾಡಬೇಕು ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.ಸಿಂದಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶರಣರ, ದಾರ್ಶನಿಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡುವುದರ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ಈಡಿಗ ಸಮಾಜದ ಅಧ್ಯಕ್ಷ ತಮಣ್ಣ ವಿ.ಈಳಗೇರ, ಕಂದಾಯ ನಿರೀಕ್ಷಕ ಎ.ಆಯ್.ಮಕಾಂದರ, ಸಮಾಜ ಕಲ್ಯಾಣ ಇಲಾಖೆಯ ರಾಯಪ್ಪ ಎಸ್.ಬನ್ನೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಮಾಜದ ಮುಖಂಡರಾದ ಸಚಿನ್ ಈಳಗೇರ, ಅರವಿಂದ ಈಳಗೇರ, ಮಹೇಶ ಗುತ್ತೇದಾರ, ರುಕ್ಮಯ್ಯ ಈಳಗೇರ, ಬಸವರಾಜ ಈಳಗೇರ, ನರಸಯ್ಯ ಈಳಗೇರ, ಸದಾನಂದ ಈಳಗೇರ, ಕಪಿಲ ಈಳಗೇರ, ರಾಮಯ್ಯ ಗುತ್ತೇದಾರ, ಗುರುರಾಜ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳಿಯು ಆರ್‌ಎಸ್‌ಎಸ್ ೧೦೦ ಶತಾಬ್ದಿ ನಿಮಿತ್ಯ ಭಾರತ ಮಾತೆಯ ಪೂಜೆ ಮಾಡುವ ಮೂಲಕ ಗಣೇಶ ವಿಸರ್ಜನೆಗೆ ಚಾಲನೆ ನೀಡಿದರು.ಈ ವೇಳೆ ತಾಲೂಕು ಆರ್‌ಎಸ್‌ಎಸ್ ಶಾರೀರಿಕ ಪ್ರಮುಖ ಸುನೀಲ ಬಳುಂಡಗಿ, ಮಲ್ಲಿಕಾರ್ಜುನ ಶಿರಶ್ಯಾಡ, ದೇವಿಂದ್ರ ಬಳುಂಡಗಿ, ಸಾಹೇಬಗೌಡ ಅಡವಿ, ಶ್ರೀಶೈಲ ಶಿರಶ್ಯಾಡ, ಪ್ರಕಾಶ ಶಿರಶ್ಯಾಡ, ಬಸವರಾಜ ಅಡವಿ, ಈರಣ್ಣ ಬಡಿಗೇರ, ಸಾವಳಗಯ್ಯ ಹಿರೇಮಠ, ಗುರುಸ್ವಾಮಿ ಮಠ, ನಾಗರಾಜ ಮುಡಬಾಳ, ಬಸವರಾಜ ನಾಯ್ಕೋಡಿ, ರಮೇಶ ನಾಯ್ಕೋಡಿ, ಭಗವಂತ್ರಾಯ ಮಂದೇವಾಲಿ, ಶರಣಗೌಡ ಅಡವಿ, ಅಶೋಕ ಶಿರಶ್ಯಾಡ ಸೇರಿದಂತೆ ಗ್ರಾಮಸ್ಥರು, ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಯುವಕರು ಮೆರವಣಿಗೆಯಲ್ಲಿ ಭಾಗವಿಸಿದರು.

Read More

ಸಿಂದಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆ ಸಂಭ್ರಮಾಚರಣೆಯಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಮತ್ತು ಮನಗೂಳಿ ಅವರ ಅಭಿಮಾನಿಗಳು ನಗರದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಅದ್ದೂರಿ ಮೆರವಣಿಗೆ ಮಾಡಿದರು.ಮೆರವಣಿಗೆಯ ಬಳಿಕ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ಬರುವ ೨೦೨೮ರ ಚುನಾವಣೆಯ ಒಳಗಾಗಿ ಸಿಂದಗಿ ನಗರಕ್ಕೆ ಸರ್ಕಾರದಿಂದ ರೂ.೧೦೦ಕೋಟಿ ವಿಶೇಷ ಅನುದಾನ ತೆಗೆದುಕೊಂಡು ಬರುವ ಮೂಲಕ ಪಟ್ಟಣದ ರಸ್ತೆಗಳನ್ನು ಸಿ.ಸಿ ರಸ್ತೆಗಳನ್ನಾಗಿ ಮಾಡುತ್ತೇನೆ. ನಗರಸಭೆಯಾದ ಮೇಲೆ ಸಿಂದಗಿಯ ವಾತಾವರಣ ಬದಲಾವಣೆ ಮಾಡಬೇಕೆನ್ನುವ ಕನಸನ್ನು ಹೊತ್ತಿದ್ದೇನೆ. ಎಸಿ ಕಛೇರಿ ಮತ್ತು ಕೆಇಬಿ ಇಇ ಕಛೇರಿ ತರುವ ಪ್ರಯತ್ನದಲ್ಲಿದ್ದೇನೆ. ಸಿಂದಗಿ ಸುಂದರ ನಗರವನ್ನಾಗಿ ಮಾಡುವೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಅಲಮೇಲ ಪಟ್ಟಣ ಪಂಚಾಯತ್ ಅಧ್ಯಕ್ಷ ಸಾಧಿಕ ಸುಂಬಡ ಅವರು ಮಾತನಾಡಿದರು.ಇದಕ್ಕೂ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಲಾಯನ್ಸ್ ಸಂಸ್ಥೆಯು ಯಾವುದೇ ಆಸೆ, ಆಮಿಷ, ಅಧಿಕಾರಕ್ಕೊಳಗಾಗದೇ ಸಮಾಜ ಸೇವೆಯನ್ನು ಮಾಡುತ್ತ ಬಂದಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ೩೧೭ ಬಿ ೫೦ನೇ ಸುವರ್ಣ ಮಹೋತ್ಸವ ಆಚರಿಸುತ್ತಿರುವುದರಿಂದ ವನಮಹೋತ್ಸವ, ಡ್ರಗ್ಸ್, ಕ್ಯಾನ್ಸ್ರ್ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಗೋವಾ & ಕರ್ನಾಟಕ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆ ಜಿಲ್ಲೆ ೩೧೭ ಬಿ ಗವರ್ನರ್ ಪಿ.ಎಂ.ಜೆ.ಎಫ್ ಲಾಯನ್ ಜೈಮೋಲ್ ಜೆ.ನಾಯಕ ಲಾಯನ್ಸ್ ಸದಸ್ಯರಿಗೆ ಸಲಹೆ ನೀಡಿದರು.ಸಿಂದಗಿ ಪಟ್ಟಣದ ಪಿಇಎಸ್ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಸಿಂದಗಿ ಲಾಯನ್ಸ್ ಕ್ಲಬ್ ಹಾಗೂ ಪಿಇಎಸ್ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಲಾಯನ್ಸ್ ಕ್ಲಬ್ ೩೧೭ ಬಿ ಜಿಲ್ಲಾ ಗವರ್ನರ ಸಂದರ್ಶನ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದ ಅವರು, ಘನ ಸರಕಾರಗಳು ನಾಡಿನ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಆದರೂ ಕೂಡಾ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆಯು ನೂರು ವರ್ಷಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರಿಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗದಿಂದ ೨೦೨೫-೨೬ನೇ ಸಾಲಿನಲ್ಲಿ ಗ್ರಾಮೀಣ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಉಪಕರಣ ಪಡೆಯಲು ಅರ್ಹ ಗ್ರಾಮೀಣ ಕುಶಲಕರ್ಮಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಗ್ರಾಮೀಣ ಕುಶಲಕರ್ಮಿಗಳು ದಿನಾಂಕ : ೦೮-೧೦-೨೦೨೫ರೊಳಗಾಗಿ ವೆಬ್‌ಸೈಟ್ www.vijayapura.nic.in ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ, ಸ್ಟೇಶನ್ ಬ್ಯಾಕ್ ರಸ್ತೆ, ಶಿಕಾರಖಾನೆ, ವಿಜಯಪುರ ಕಚೇರಿ ಖುದ್ದಾಗಿ ಅಥವಾ ಪೋಸ್ಟ್ ಮೂಲಕ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೯೭೨೧೬೨೨೨೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೃಹ ಬಳಕೆಯ ಸಿಲಿಂಡರ್‌ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿರುವ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ೩೧೯೨೦ ರೂ. ಮೌಲ್ಯದ ಒಟ್ಟು ೧೦ ಹೆಚ್‌ಪಿ ಕಂಪನಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ವಿಜಯಪುರ ನಗರದ ಇಬ್ರಾಹಿರಂ ರೋಜಾ ಹತ್ತಿರದಲ್ಲಿ ಪತ್ರಾಸ ಶೆಡ್‌ನಲ್ಲಿ ಹಾಗೂ ನಗರದ ಬಾಗಲಕೋಟ ಕ್ರಾಸ್ ಹತ್ತಿದ ಒಂದು ಪತ್ರಾಸ್ ಶೆಡ್‌ನಲ್ಲಿ ಅನಧಿಕೃತವಾಗಿ ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ ಸಂಗ್ರಹಣೆ ಮಾಡಿ ರಿಫಿಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಸಿಲಿಂಡರ್‌ಗಳು ಸೇರಿದಂತೆ ಒಂದು ತೂಕದ ಯಂತ್ರ ಹಾಗೂ ರಿಫಿಲಿಂಗ್ ಯಂತ್ರವನ್ನು ವಶಪಡಿಸಿಕೊಂಡು ಬಿಎನ್‌ಎಸ್ ಹಾಗೂ ಕಲಂ (೧)(ಎ)(ಬಿ)(ಸಿ) ಮತ್ತು ೪(೧)(ಎ) ಎಲ್‌ಪಿಜಿ ರೆಗ್ಯೂಲೇಷನ್ ಆರ್ಡರ್ ೨೦೦೦ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಕಲಂ ೩ ಸಹ ಕಲಂ ೦೭ರ ಮೆರೆಗೆ ಕ್ರಿಮಿನಲ್ ಮೊಕದ್ದಮೆಯನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ದಾಳಿಯಲ್ಲಿ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಗಾಂಧಿಚೌಕ್ ಪಿಎಸ್‌ಐ ರಾಜು ಮಮದಾಪುರ ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

Read More

ಸುಪ್ರೀಂ ಕೋರ್ಟ್ ಟಿಇಟಿ ಕಡ್ಡಾಯ ತೀಪು೯ | ಲಕ್ಷಾಂತರ ಶಿಕ್ಷಕರಿಗೆ ದಿಗಿಲು | ಆದೇಶ ಮರುಪರಿಶೀಲನೆಗೆ ಮನವಿ | ಸಚಿವ ಸಂಪುಟದಲ್ಲಿ ಧೃಡ ನಿಧಾ೯ರಕ್ಕೆ ನುಗ್ಗಲಿ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಿಕ್ಷಕರು ಬಡ್ತಿಗಾಗಿ ಹಾಗೂ ಸೇವೆಯಲ್ಲಿ ಮುಂದುವರೆಯಲು ಕಡ್ಡಾಯ ಅರ್ಹತಾ ಟಿಇಟಿ ಪರೀಕ್ಷೆ ಪಾಸಾಗಬೇಕೆಂದು ಸುಪ್ರೀಂ ಕೋರ್ಟ್ ಈಚೆಗೆ ತೀಪು೯ ನೀಡಿದ್ದು ಇದು ಶಿಕ್ಷಕ ಸಮೂಹದ ಹಿತಾಸಕ್ತಿಗೆ ತೀವ್ರ ವಿರುದ್ಧವಾಗಿದೆಲ್ಲದೇ ಮುಂದಿನ ದಿನಮಾನದಲ್ಲಿ ಶಿಕ್ಷಣ ರಂಗಕ್ಕೆ ಕಠಿಣಾತೀತ ರೀತಿಯಲ್ಲಿ ಮಾರಕವಾಗಿ ಕಾಡಲಿದೆ. ಇದು ಶಾಲಾ ಶಿಕ್ಷಣ ವ್ಯವಸ್ಥೆಗೆ ಅನ್ವಯಗೊಂಡರೆ ಇಡೀ ಶಿಕ್ಷಣ ವ್ಯವಸ್ಥೆಯೇ ಬುಡಮೇಲಾಗಿ ಭಾಗಶಃ ಕುಸಿಯುತ್ತದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಆತಂಕ ವ್ಯಕ್ತಪಡಿಸಿದೆ.ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಪ್ರಧಾನ ಕಾರ್ಯದರ್ಶಿ ಚೇತನ್.ಹೆಚ್.ಎಸ್ ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿ, ಶಿಕ್ಷಕರ ಕುಟುಂಬಗಳು ಮತ್ತು ಶಿಕ್ಷಕ ಸಮುದಾಯದ ವಿಶಾಲ ಹಿತಾಸಕ್ತಿಯ ದೃಷ್ಟಿಯಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಮರುಪರಿಶೀಲಿಸಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೈಸೂರು ಪತ್ರಿಕಾ ಛಾಯಾಗ್ರಾಹಕರ ಸಂಘ ದಸರಾ ಹಬ್ಬದ ನಿಮಿತ್ಯ ಹಿರಿಯ ಛಾಯಾಗ್ರಾಹಕ ನೇತ್ರರಾಜು ಸ್ಮರಣಾರ್ಥ ರಾಜ್ಯಮಟ್ಟದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗೆ ವಿಜಯಪುರ ವಿಜಯ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕ ಸುಧೀಂದ್ರ ಕುಲಕರ್ಣಿ ಸೆರೆ ಹಿಡಿದ ಕಾರುಣ್ಣಿಮೆ ಕರಿ ಹರಿಯುವ ಚಿತ್ರ ಆಯ್ಕೆಯಾಗಿದೆ.ಸುಧೀಂದ್ರ ಕುಲಕರ್ಣಿ ಅವರ ಸಾಧನೆಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಭಿನಂದಿಸಿದೆ.

Read More