ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೪-೨೫ನೆಯ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ೧ರಲ್ಲಿ ಕಲ್ಪವೃಕ್ಷ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ವಿಷಯವಾರು ಹಿಂದಿ ವಿಷಯದಲ್ಲಿ ೪ ವಿದ್ಯಾರ್ಥಿಗಳು, ಗಣಿತದಲ್ಲಿ ಒರ್ವ ವಿದ್ಯಾರ್ಥಿ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಒರ್ವ ವಿದ್ಯಾರ್ಥಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಲತಾ ಕುಂಟೋಜಿಮಠ ೬೨೫ಕ್ಕೆ ೬೧೩ (ಶೇ.೯೮.೦೮) ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ, ಲಕ್ಷ್ಮಿ ಪಾಟೀಲ ೫೯೨ (ಶೇ.೯೪.೭೨) ದ್ವಿತೀಯ ಸ್ಥಾನ, ಶಿವಲಿಂಗಪ್ಪ ಕುನ್ನೂರ ೫೯೦ (ಶೇ.೯೪.೪೦) ತೃತೀಯ ಸ್ಥಾನ, ಆಲಿಯಾ ಕಣ್ಣಿ ೫೮೮ (ಶೇ.೯೪.೦೮), ಪ್ರಕೃತಿ ಬಡಿಗೇರ ೫೮೩ (ಶೇ.೯೩.೨೮), ಕೆಂಚಪ್ಪ ಗೊರಗುಂಡಗಿ ೫೭೯ (ಶೇ.೯೨.೬೪), ಸೌಮ್ಯ ಘಂಟಿ ೫೭೬ (ಶೇ.೯೨.೧೬), ಅಭಿಷೇಕ ಹೂಗಾರ ೫೭೫ (ಶೇ.೯೨), ಮಲ್ಲಿಕಾರ್ಜುನ ಹೂಗಾರ ೫೬೮ (ಶೇ.೯೦.೮೮), ಭೀಮಾಶಂಕರ ನಾಯ್ಕೋಡಿ ೫೬೩ (ಶೇ.೯೦.೦೮) ಅಂಕಗಳನ್ನು ಪಡೆದುಕೊಂಡ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗ ಶ್ರೀ ವ್ಹಿ.ಎಸ್.ಬಿ. ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು, ಆಡಳಿತಾಧಿಕಾರಿಗಳು, ಮುಖ್ಯ ಗುರುಗಳು, ಸಿಬ್ಬಂದಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
