ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್ ಡಿ ಈ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಐ ಕ್ಯೂ ಎ ಸಿ ಮತ್ತು ಐ ಐ ಸಿ ಸಿ ಸಂಯುಕ್ತಾಶ್ರಯದಲ್ಲಿ ಮಹವಿದ್ಯಾಲಯದ ಪದವಿ ಮತ್ತು ಸ್ನಾತಕೊತ್ತರ ಪದವಿಯ ಇಂಗ್ಲಿಷ್ ವಿಭಾಗವು ಇಂಗ್ಲೀಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಹೇಗೆ ಮಾತನಾಡಬೇಕು ಎಂಬ ವಿಷಯದ ಮೇಲೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿ ಬಿ ರಜಪೂತ ಕಾರ್ಯ ಕ್ರಮವನ್ನುದ್ದೇಶಿಸಿ, ಇಂಗ್ಲೀಷ್ ಭಾಷೆ ಕಲಿಯುವುದು ಇಂದಿನ ದಿನಮಾನದಲ್ಲಿ ಅತ್ಯಗತ್ಯ .ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾ ಹೋದಂತೆ ಭಾಷೆ ಕಲಿಯುವುದು ಸುಲಭವಾಗುತ್ತದೆ ಎಂದು ಹೇಳಿದರು.
ಮತ್ತು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಮತ್ತು ಅದರ ಮಹತ್ವ , ಸ್ವಯಂ ವಿಕಸನ, ಏಕಾಗ್ರತೆ,ಕೇಳುವ ಕೌಶಲ್ಯಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು .
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ .ಆರ್ ಎಂ ಮಿರ್ದೇ,
ಪ್ರೊ ಅಮೀನ್ ಲೆನ್ , ಸ್ನಾತಕೋತ್ತರ ಪದವಿಯ ಮುಖ್ಯಸ್ತೆ ವಿ ಆರ್ ಪಾಟೀಲ್. ಮತ್ತು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

