Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಇಸ್ಲಾಮಿಕ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನೀಯರನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಉಪನಿರ್ದೇಶಕ(ಅಭಿವೃದ್ಧಿ) ಎಸ್.ಎಸ್.ಮುಜಾವರ್ ಸನ್ಮಾನಿಸಿದರು.ಸಿಂದಗಿ ಪಟ್ಟಣದ ಮೀರಜ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಅಗಸ್ಟ್ ೧ ರಂದು ಬಿಜಾಪೂರ ಮಹಮ್ಮದಿಯಾ ನಾತ ಕಮಿಟಿ ಇವರಿಂದ ಜರುಗಿದ ಇಸ್ಲಾಮಿಕ್ ರಸಪ್ರಶ್ನೆ ಮತ್ತು ನಾಥಖಾನಿ ಸ್ಪರ್ಧೆಯಲ್ಲಿ ಸತತ ಎರಡನೆಯ ಬಾರಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನೀಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಪರ್ಧೆಯಲ್ಲಿ ಸಿಂದಗಿ ತಾಲ್ಲೂಕಿನ ಒಟ್ಟು ೯ ಉರ್ದು ಪ್ರೌಢಶಾಲೆಗಳು ಭಾಗವಹಿಸಿದ್ದವು.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ರಾಷ್ಟ್ರಧ್ವಜ ನಮ್ಮ ಸ್ವಾತ್ಯಂತ್ರದ ಹೆಗ್ಗುರುತಾಗಿದೆ. ಇದು ನಾಡಿನ ತ್ಯಾಗ ಬಲಿದಾನ, ಸತ್ಯ ಶಾಂತಿ, ಸಂವೃದ್ದಿಗಳನ್ನು ಬಿಂಬಿಸುತ್ತದೆ. ಈ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವದೇ, ನಿಜವಾದ ದೇಶ ಸೇವೆ ಎಂದು ಪ್ರಾಧ್ಯಾಪಕ ದೊಡ್ಡಣ್ಣ ಬಜಂತ್ರಿ ಹೇಳಿದರು.ಪಟ್ಟಣದ ಬಿಎಲ್ಡಿಈ ಕಲಾ ಕಾಲೇಜದಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಭಾರತ ಸ್ಕೌಟ್ಸ್, ಗೈಡ್ಸ್ ಹಾಗೂ ಭಾರತ ಸೇವಾದಳ ಬುಧವಾರ ವತಿಯಿಂದ ನಡೆದ ರಾಷ್ಟ್ರ ಧ್ವಜದ ಪ್ರಾತ್ಯಕ್ಷಿಕೆಯ ಮೂಲಕ ರಾಷ್ಟ್ರ ಧ್ವಜದ ಬಲಕೆ ಕುರಿತಾಗಿರುವ ಸಂವಿಧಾನಾತ್ಮಕ ಕಟ್ಟುನಿಟ್ಟುಗಳನ್ನು ಪಾಲಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರದ್ವಜ ಬಹು ಮುಖ್ಯ ಗೌರವವಾಗಿರುವದರಿಂದ ಇದನ್ನು ದೇಶಕ್ಕಾಗಿ ಮಡಿದವರ ದೇಹದ ಮೇಲೆ ಮಾತ್ರ ಹಾಕಲಾಗುತ್ತದೆ ಎಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಎಸ್. ತೋಳನೂರ, ಬಿ. ಎಸ್. ಬೆಳಗಲಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯೋಜಕ ಎಸ್. ಎಲ್. ರಾಠೋಡ, ಸುಶಾಂತ ಜವನಾರ, ರವಿ ಕಿತ್ತೂರ, ಮೋಹನ ಕಟ್ಟಿಮನಿ, ನಾಗೇಶ ಡೊಣುರ, ಡಾ.ಸಂತೋಷ ನವಲಗುಂದ ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಕ್ಕಳಿಗೆ ಬಾಲ್ಯದಲ್ಲಿಯೇ ಕಾನೂನು ಅರಿವು, ರಸ್ತೆ ಸುರಕ್ಷತೆ ಹಾಗೂ ವೈಯಕ್ತಿಕ ಭದ್ರತೆ ಕುರಿತು ಶಿಕ್ಷಣ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಆಲಮೇಲ ಪೊಲೀಸ್ ಠಾಣೆಯ ಪಿಎಸ್‌ಐ ಅರವಿಂದ ಅಂಗಡಿ ಹೇಳಿದರು.ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ಪ್ರಜೆಗಳಾಗಲಿದ್ದು, ರಸ್ತೆ ಸಂಚಾರ ನಿಯಮಗಳು, ಮಕ್ಕಳ ಹಕ್ಕುಗಳು ಹಾಗೂ ವಿವಿಧ ಕಾನೂನುಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿವು ಹೊಂದಬೇಕು ಎಂದು ಹೇಳಿದರು. ಮನೆಯಿಂದ ಹೊರಗಡೆ ಬಂದಾಗ ಎಚ್ಚರಿಕೆಯಿಂದ ವರ್ತಿಸುವುದು, ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕುರಿತು ತಿಳಿದುಕೊಳ್ಳುವುದು ಅಗತ್ಯ. ಯಾವುದೇ ರೀತಿಯ ಅಹಿತಕರ ಅನುಭವ ಎದುರಾದರೆ ಅದನ್ನು ಪಾಲಕರು ಅಥವಾ ಶಿಕ್ಷಕರ ಗಮನಕ್ಕೆ ತಕ್ಷಣ ತರಬೇಕು ಎಂದು ಸಲಹೆ ನೀಡಿದರು.ಮೊಬೈಲ್ ಬಳಕೆಯಲ್ಲಿ ಮಕ್ಕಳು ಹೆಚ್ಚಿನ ಜಾಗರೂಕತೆ ವಹಿಸಬೇಕು. ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಮೊಬೈಲ್ ಬಳಸಬೇಕು. ಸೈಬರ್…
ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮೀನಾ ಚಂದಾವರಕರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸ್ತುತ ಯುಗದಲ್ಲಿ ನವೀನ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಮನ್ವಯಗೊಳಿಸುವುದು ಅನಿವಾರ್ಯ ಎಂದು ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮೀನಾ ಚಂದಾವರಕರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯವಹಾರ ಹಾಗೂ ವಾಣಿಜ್ಯ ಅಧ್ಯಯನ ವಿಭಾಗದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಸಿಎಸ್‌ಎಸ್‌ಆರ್ ಪ್ರಾಯೋಜಿತ ೧೦ ದಿನಗಳ ಸಂಶೋಧನಾ ವಿಧಾನಶಾಸ್ತ್ರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದಿಕ್ಸೂಚಿ ಭಾಷಣ ಮಾಡಿದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಪ್ರಕಾಶ್ ಎಸ್. ಕಾಂಬಳೆ ಮಾತನಾಡಿ, ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳಿಸುವಲ್ಲಿ ಎದುರಾಗುವ ಪ್ರಮುಖ ಸವಾಲುಗಳನ್ನು ವಿವರಿಸಿದರು. ಸಂಶೋಧಕರು ದತ್ತಾಂಶ ಆಧಾರಿತ ಹಾಗೂ ಅಂತರಶಿಸ್ತೀಯ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ಹತ್ತು ದಿನಗಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯದಿರುವುದು ಇಂಡಿ ಕ್ಷೇತ್ರದ ಜನತೆಯಲ್ಲಿ ತೀವ್ರ ನಿರಾಸೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆದಿಬಣಜಿಗ ಸಮಾಜದ ಯುವ ಮುಖಂಡ ಸಚಿನ್ ಗದ್ಯಾಳ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಇಂಡಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಇಂತಹ ಹಿರಿಯ ಹಾಗೂ ಅನುಭವಿಗಳಾದ ಜನಪ್ರತಿನಿಧಿಗೆ ಸಚಿವ ಸ್ಥಾನ ನೀಡದಿರುವುದು ಕ್ಷೇತ್ರದ ಜನರ ಆಶಯಗಳಿಗೆ ವಿರುದ್ಧವಾದ ನಿರ್ಧಾರವಾಗಿದೆ ಎಂದು ಹೇಳಿದರು.ರಾಜ್ಯ ಕಾಂಗ್ರೆಸ್ ನಾಯಕತ್ವವು ಇಂಡಿ ಕ್ಷೇತ್ರದ ಜನರ ಭಾವನೆಗಳನ್ನು ಗೌರವಿಸಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಗದ್ಯಾಳ ಒತ್ತಾಯಿಸಿದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮತಕ್ಷೇತ್ರದ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಸಚಿವ ಸ್ಥಾನ ಸಿಗದೇ ಹೋದರೆ ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ ಹಾಗೂ ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇವೆ ಎಂದ ಕಾಂಗ್ರೆಸ್ ಮುಖಂಡರು ಈಗ ರಾಜೀನಾಮೆ ಕೊಟ್ಟು ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕ ಮಂಜುನಾಥ್ ಛಲವಾದಿ ಅಗ್ರಹಿಸಿದ್ದಾರೆ.ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಶಾಸಕರಾಗಿದ್ದಾಗಲೇ ಏನು ಕೆಲಸ ಮಾಡದ ಶಾಸಕರು, ಮಂತ್ರಿಯಾಗಿ ಏನು ಮಾಡಲು ಸದ್ಯ ಎಂಬುದನ್ನು ಮನಗಂಡ ಹೈಕಮಾಂಡ್ ಈ ನಿರ್ಧಾರ ಮಾಡಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಅವರ ಹೈಕಮಾಂಡ್ ನಮ್ಮ ಮತಕ್ಷೇತ್ರಕ್ಕೆ ಅನ್ಯಾಯ ಮಾಡಿದೆ, ಈ ಅನ್ಯಾಯವನ್ನು ಖಂಡಿಸಿ ರಾಜ್ಯ, ಜಿಲ್ಲಾ ಮತ್ತು ತಾಲೂಕಿನ ಪದಾಧಿಕಾರಿಗಳು ರಾಜೀನಾಮೆ ಕೊಡಬೇಕು, ತಮ್ಮ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲಾಗದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮಾತಿನ ಮೇಲೆ ನಿಲ್ಲಬೇಕು ಹಾಗೂ ಮತಕ್ಷೇತ್ರದ ಜನತೆಗೆ ಚುನಾವಣೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಬಣಜಿಗ ಸಮೂದಾಯವು ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದೂಳಿದ ಸಮಾಜವಾಗಿದೆ ಕೂಡಲೇ ಬಣಜಿಗ ಸಮಾಜಕ್ಕೆ ೨ಎ ಮಿಸಲಾತಿ ನೀಡುವದರೊಂದಿಗೆ ಸಮಾಜವನ್ನು ಮುಖ್ಯವಾಹಿನಿ ಗುರುತಿಸಿಕೊಳ್ಳಲು ಸರ್ಕಾರವು ಕ್ರಮ ವಹಿಸಬೇಕೆಂದು ತಾಲೂಕಾ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ಮಂಗಳವಾರ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿ ಸಮಾಜ ಬಾಂದವರು ತಾಲೂಕಾ ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ ಅವರ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದ ಅವರು ಬಣಜಿಗ ಸಮಾಜವು ಶೈಕ್ಷಣಿಕವಾಗಿ ಅತ್ಯಂತ ಹಿಂದೂಳಿದಿದೆ ಸರ್ಕಾರಿ ನೇಮಕಾತಿಯಲ್ಲಿ ಅವಕಾಶದಿಂದ ವಂಚಿತರಾಗುತ್ತಾ ಸಾಗಿದ್ದಾರೆ ಇದು ಸಂವಿದಾನದ ಸದಾಶಯಕ್ಕೆ ವ್ಯತಿರಿಕ್ತವಾಗಿದೆ ನ್ಯಾಯಾಲಯದ ಆದೇಶದಂತೆ ಬಣಜಿಗ ಸಮಾಜಕ್ಕೆ ನ್ಯಾಯ ಒದಗಿಸಲು ಕೂಡಲೇ ಸರ್ಕಾರವು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.ಈ ಸಮಯದಲ್ಲಿ ಬಣಜಿಗ ಸಮಾಜದ ಮುಖಂಡರುಗಳಾದ ಎಂ.ಎಸ್.ಸರಶೆಟ್ಟಿ, ಮಲ್ಲಿಕಾರ್ಜುನ ಕತ್ತಿ, ಈರಣ್ಣ ಕಲ್ಬುರ್ಗಿ, ಚನಬಸ್ಸು ಸರಶೆಟ್ಟಿ, ಮಲ್ಲಿಕಾರ್ಜುನ ಸರಶೆಟ್ಟಿ, ರಮೇಶ ಸಾಲಂಕಿ, ಶಿವಲಿಂಗಪ್ಪ ಪಾಲ್ಕಿ,…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮಾನವನ ಮನಸ್ಸು ಒಂದು ಅದ್ಭುತ ಶಕ್ತಿ. ಆದರೆ ಅದೇ ಮನಸ್ಸು ನಿಯಂತ್ರಣ ತಪ್ಪಿ ಒಂದೇ ವಿಷಯವನ್ನು ಪದೇ ಪದೇ ಯೋಚಿಸಲು ಶುರುಮಾಡಿದಾಗ, ಅದು ‘ಅತಿಯಾದ ಆಲೋಚನೆ’ ಅಥವಾ ‘ಓವರ್‌ಥಿಂಕಿಂಗ್’ ಎಂಬ ಮಾನಸಿಕ ಸುಳಿಯಾಗುತ್ತದೆ. ಇದು ನಮ್ಮ ಇಂದಿನ ಶಾಂತಿ ಮತ್ತು ಉತ್ಪಾದಕತೆಯನ್ನು ನಾಶಪಡಿಸುತ್ತದೆ. ಅತಿಯಾದ ಯೋಚನೆ ತಲೆಗೊಂದು ಓವರ್ ಲೋಡ್ ವಿಲನ್ ಇದ್ದಂತೆ. ಸೈಲಂಟ್ ಕಿಲ್ಲರ್ ಇದ್ದಂತೆ ಆಲೋಚನೆಗಳ ಸುಳಿಯಿಂದ, ಮನಸ್ಸಿನೊಳಗಿನ ಮಾಯಾಜಾಲದಿಂದ ಹೊರ ಬರುವುದು ಹೇಗೆ ಎಂಬ ಪ್ರಶ್ನೆ ಬಹುತೇಕ ಬಹಳಷ್ಟು ಜನರನ್ನು ಕಾಡಿಸುತ್ತದೆ. ಇದನ್ನು ಒಂದು ಸುಂದರ ಕಥೆ ಮತ್ತು ಜಗತ್ತಿನ ಶ್ರೇಷ್ಠ ಸಾಧಕರ ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳೋಣ.ಪ್ರೇರಣಾದಾಯಿ ಕಥೆಒಂದಾನೊಂದು ಕಾಲದಲ್ಲಿ, ಪ್ರಯಾಣಿಕನೊಬ್ಬ ದೂರದ ಊರಿಗೆ ಕಾಲ್ನನಡಿಗೆಯಲ್ಲಿ ಹೊರಟಿದ್ದನು. ದಾರಿಯಲ್ಲಿ ಹೋಗುವಾಗ ಆತನಿಗೆ ಹಠಾತ್ ಒಂದು ಆಲೋಚನೆ ಬಂದಿತು: “ಮುಂದೆ ಸಿಗುವ ಕಾಡಿನ ನದಿಗೆ ಇರುವ ಏಕೈಕ ಹಳೆಯ ಮರದ ಸೇತುವೆ ಮುರಿದು ಬಿದ್ದಿದ್ದರೆ ನಾನು ಏನು ಮಾಡಲಿ? ನಾನು…
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹ ಉದಯರಶ್ಮಿ ದಿನಪತ್ರಿಕೆ ತುಮಕೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ತಕ್ಷಣ 10,000 ಕೋಟಿ ರೂ. ವಿಶೇಷ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಒತ್ತಾಯಿಸಿದ್ದಾರೆ.ಬರಗಾಲ ಪೀಡಿತ ಪ್ರದೇಶಗಳಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು, ರೈತರ ಬೆಳೆ ವಿಮಾ ಕಂತುಗಳನ್ನು ಸರ್ಕಾರವೇ ಪಾವತಿಸಬೇಕು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚುವರಿ ಹಣವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಗ್ರಹಿಸಿದ್ದಾರೆ.ತುಮಕೂರು ಜಿಲ್ಲೆಯ ಬರಗಾಲ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕೇಂದ್ರದ ಸಹಾಯಕ್ಕಾಗಿ ಕಾಯದೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.ಕರ್ನಾಟಕದಾದ್ಯಂತ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಪಕ್ಷದ ಮುಖಂಡರ ನೇತೃತ್ವದಲ್ಲಿ ಏಳು ತಂಡಗಳನ್ನು ಮಾಡಿ ರಾಜ್ಯದ ಬೇರೆ ಜಿಲ್ಲೆಗಳಿಗೆ ಬರ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳಲಾಗಿದೆ. ಬರದ ನೈಜ…
