ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪದ್ಮಶ್ರೀ ಪುರಸ್ಕೃತ ಹಿರಿಯ ಪೊಟೋ ಜರ್ನಲಿಸ್ಟ್ ರಘು ರಾಯ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಸಂತಾಪ
ವ್ಯಕ್ತಪಡಿಸುತ್ತದೆ. ಬಾಂಗ್ಲಾ ವಿಮೋಚನಾ ಯುದ್ಧ, ಭೋಪಾಲ್ ಅನಿಲ ದುರಂತದಂತಹ ಪ್ರಮುಖ ಘಟನೆಗಳನ್ನು ಅವರು ತಮ್ಮ ಕ್ಯಾಮರಾದಲ್ಲಿ ದಾಖಲಿಸಿರುವುದು ಇತಿಹಾಸ ಪುಟದಲ್ಲಿ ಅಚ್ಚಳಿಯದ ಉಳಿದಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಸೇವೆ ಸ್ಮರಿಸಿದ್ದಾರೆ.
ಮದರ್ ತೆರೇಸಾ ಸೇರಿದಂತೆ ಪ್ರಮುಖ ವ್ಯಕ್ತಿಗಳ ಶ್ರೇಷ್ಠ ಚಿತ್ರಗಳನ್ನು ಸೆರೆ ಹಿಡಿದಿರುವುದು ಅವರ ಹೆಗ್ಗಳಿಕೆ. ಪ್ರತಿಷ್ಠಿತ ಮ್ಯಾಗ್ನಮ್ ಸಂಸ್ಥೆಯ ಸದಸ್ಯರಾಗಿದ್ದ ಅವರ ಛಾಯಾ ಚಿತ್ರಗಳನ್ನು ಟೈಮ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ. ಎಂದು ಅವರು ನೆನಪಿಸಿದ್ದಾರೆ.

