ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀ ರವೀಂದ್ರನಾಥ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಶ್ರೀ ಗುರುದೇವ ಪಬ್ಲಿಕ್ ಅಂತರಾಷ್ಟ್ರೀಯ ವಸತಿ ಶಾಲೆಯ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮ ರೀತಿಯಲ್ಲಿ ಬಂದಿದೆ.
ಈ ಸಲದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದವರು ೮೨, ಡಿಸ್ಟಿಂಕ್ಷನ-೧೩, ಫಸ್ಟಕ್ಲಾಸ್-೪೦, ಸೆಕೆಂಡಕ್ಲಾಸ-೧೪, ಪಾಸಕ್ಲಾಸ-೯ ಫಲಿತಾಂಶ ಪಡೆದುಕೊಂಡಿದ್ದಾರೆ. ಅದರಲ್ಲಿ ಕುಮಾರಿ ದಿವ್ಯಾ ಮರೋಳ ೬೦೯ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾಳೆ. ಹಾಗೆಯೇ ಶಿವಲಿಂಗ ಕಿಣಗಿ ೫೮೦ ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದರೆ ಮೊಹಮ್ಮದ ಮುಜಾಹಿದ್ ಕಾಚೂರ೫೭೭ ಅಂಕಗಳನ್ನು ಪಡೆಯುವ ಮೂಲಕ ತೃತಿಯ ಸ್ಥಾನ ಗಳಿಸಿದ್ದಾನೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ|| ರವೀಂದ್ರ ಭೋಸಲೆ, ಶ್ರೀಮತಿ ಡಾ|| ಉಮಾ ಭೋಸಲೆ, ಸಂಸ್ಥಾಪಕರ ಕಾರ್ಯದರ್ಶಿ ರಾಮಚಂದ್ರ ಭೋಸಲೆ, ಸುಧೀರ ಭೋಸಲೆ ಮುಖ್ಯ ಗುರುಗಳು ಹಾಗೂ ಎಲ್ಲಾ ಸಿಬ್ಬಂಧಿ ಹರ್ಷ ವ್ಯಕ್ತ ಪಡಿಸಿದ್ದಾರೆ.

