Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ, (ಜಮಖಂಡಿ): ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ 5E ಮಾದರಿಯ ಪಾಠ ಯೋಜನೆ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀರಾಮ್ ಭಟ್ ಮಾತನಾಡಿ, ಹಿಂದೆ ಪಂಚಸೋಪಾನ ಮಾದರಿಯ ಪಾಠ ಯೋಜನೆ ಜಾರಿಯಲ್ಲಿದ್ದು, ಪ್ರಸ್ತುತ 5E ಮಾದರಿಯ ಪಾಠ ಯೋಜನೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತವಾಗಿದೆ. ಶಿಕ್ಷಕರು ಈ ಮಾದರಿಯನ್ನು ಪರಿಣಾಮಕಾರಿಯಾಗಿ ಪಾಠದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಎಸ್. ಎಚ್. ಲಗಳಿ ಅವರು, 5E ಪಾಠ ಯೋಜನೆಯಲ್ಲಿ ತೊಡಗಿಸುವಿಕೆˌ ಅನ್ವೇಷಣೆ, ವಿವರಣೆˌ ವಿಸ್ತರಣೆ ಹಾಗೂ ಮೌಲ್ಯಮಾಪನ ಎಂಬ ಐದು ಪ್ರಮುಖ ಹಂತಗಳಿದ್ದು, ಶಿಕ್ಷಕರು ಬೋಧನೆಯ ಸಂದರ್ಭದಲ್ಲಿ ಇವುಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಜ್ಯ ಸಂಪನ್ಮೂಲ ವ್ಯಕ್ತಿ ಮಹಾಂತೇಶ ಅಂಗಡಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್. ಎಸ್. ಕಾಗವಾಡೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಂಶಯಾಸ್ಪದವಾಗಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ನಾಲ್ಕು ಗೋವುಗಳನ್ನು ಗ್ರಾಮಸ್ಥರ ಎಚ್ಚರಿಕೆಯಿಂದ ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಮರಗೂರ ಗ್ರಾಮದಿಂದ ದೇವರನಿಂಬರಗಿ ಗ್ರಾಮದ ಕಡೆಗೆ ಟಂ.ಟಂ. ವಾಹನದಲ್ಲಿ ನಾಲ್ಕು ಗೋವುಗಳನ್ನು ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಗ್ರಾಮಸ್ಥರಿಗೆ ವಾಹನದ ಮೇಲೆ ಸಂಶಯ ಮೂಡಿದ್ದು, ವಾಹನವನ್ನು ತಡೆದು ಪರಿಶೀಲಿಸಿದಾಗ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.ತಕ್ಷಣ ಗ್ರಾಮಸ್ಥರು ಝಳಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ನಾಲ್ಕು ಗೋವುಗಳು ಹಾಗೂ ಟಂ.ಟಂ. ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವುಗಳ ಸಾಗಣೆ ಕಾನೂನುಬದ್ಧವಾಗಿತ್ತೇ ಅಥವಾ ಅಕ್ರಮವಾಗಿತ್ತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಕುರಿತು ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, “ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ…

Read More

ಅಧಿಕಾರ ಮುಖ್ಯವಲ್ಲ, ಜನರ ಪ್ರೀತಿ ಮತ್ತು ನಿರ್ಧಾರವೇ ನನಗೆ ಶ್ರೇಷ್ಠ’ |ಇಂಡಿಯಲ್ಲಿ ಶಾಸಕರ ಭಾವನಾತ್ಮಕ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಚಡಚಣ: “ನನಗೆ ಅಧಿಕಾರ ಮುಖ್ಯವಲ್ಲ. ನನ್ನ ಜನರ ಪ್ರೀತಿ, ವಿಶ್ವಾಸ ಮತ್ತು ಅವರ ನಿರ್ಧಾರವೇ ಮುಖ್ಯ. ಜನರ ಅಭಿಪ್ರಾಯಕ್ಕೆ ಗೌರವ ನೀಡಿ ನನ್ನ ರಾಜೀನಾಮೆ ನಿರ್ಧಾರವನ್ನು ಹಿಂಪಡೆಯುತ್ತಿದ್ದೇನೆ” ಎಂದು ಇಂಡಿ ಶಾಸಕ ಯಶವಂತರಗೌಡ ಪಾಟೀಲ್ ಹೇಳಿದರು.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಇಂಡಿ ತಾಲೂಕಿನ ಜನ ಸಂಪರ್ಕ ಹಾಗೂ ಜನಾಭಿಪ್ರಾಯ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಆಲಿಸಿದ ಬಳಿಕ ಈ ಮಹತ್ವದ ಘೋಷಣೆ ಮಾಡಿದರು.”ನನ್ನ ರಾಜಕೀಯ ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಜನರು ನನಗೆ ಹೆಗಲಿಗೆ ಹೆಗಲು ನೀಡಿ ಬೆಂಬಲಿಸಿದ್ದಾರೆ. ನನ್ನ ಮೇಲಿನ ನಿಮ್ಮ ವಿಶ್ವಾಸ ಮತ್ತು ಪ್ರೀತಿಯೇ ನನಗೆ ದೊಡ್ಡ ಶಕ್ತಿ. ನಿಮ್ಮ ಆಶಿರ್ವಾದದಿಂದಲೇ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಆದ್ದರಿಂದ ಜನರ ಭಾವನೆಗಳಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ” ಎಂದು ಹೇಳಿದರು.ಅವರ ಈ ಘೋಷಣೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿಹಾಳ ಗ್ರಾಮದಲ್ಲಿ ಮಾದಿಗ ಸಮುದಾಯದ ಭೂಮಾನಂದ ಅವರ ಬರ್ಬರ ಹತ್ಯೆ ಪ್ರಕರಣವನ್ನು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ತೀವ್ರವಾಗಿ ಖಂಡಿಸಿದ್ದಾರೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ಹಾಗೂ ವೇಗದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅಪ್ಪುರಾಜ್ ಒತ್ತಾಯಿಸಿದ್ದಾರೆ.ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಭದ್ರತೆ ಹಾಗೂ ನ್ಯಾಯ ದೊರಕುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ದಲಿತ ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ನವೋದ್ಯಮ ಮೆರಾಕಿಫಿ ಕಂಪನಿ ಆಯೋಜಿಸಿರುವ ಕ್ರಿಯೋಸ್ಫಿಯರ್ ಶೃಂಗಸಭೆ ಆಗಷ್ಟ 8 ರಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ನಡೆಯಲಿರುವ ಈ ಶೃಂಗಸಭೆತಲ್ಲಿ ಸೃಜನಶೀಲರು, ಉದ್ಯಮಿಗಳು ಮತ್ತು ನಾವೀನ್ಯಕಾಋನ್ನು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ‌.ವೆರಿಡಿನ್ ಸಹಯೋಗದೊಂದಿಗೆ ಮೆರಾಕಿಫೈ ಆಯೋಜಿಸಿರುವ ಈ ಶೃಂಗಸಭೆ ಸೃಜನಶೀಲರು, ಉದ್ಯಮಿಗಳು, ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಉದ್ಯಮ ವೃತ್ತಿಪರರು, ಹೂಡಿಕೆದಾರರು ಹಾಗೂ ನಾವೀನ್ಯಕಾರರು ಪಾಲ್ಗೊಂಡು ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.ಅಲ್ಲದೇ, ಈ ಶೃಂಗಸಭೆ ನವೋದ್ಯಮಿಗಳು ಅರ್ಥಪೂರ್ಣ ಪರಸ್ಪರ ಸಹಕಾರ ಬೆಳೆಸಿಕೊಳ್ಳುವ ಮೂಲಕ ನಾವೀನ್ಯತೆಯ ಭವಿಷ್ಯವನ್ನು ರೂಪಿಸಲು ಒಗ್ಗೂಡುವ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದೆ.ದಿನವಿಡಿ ನಡೆಯುವ ಈ ಶೃಂಗಸಭೆಯಲ್ಲಿ ಖ್ಯಾತ ಉದ್ಯಮಿಗಳಿಂದ ಸ್ಪೂರ್ತಿದಾಯಕ ಗೋಷ್ಠಿಗಳು, ಚರ್ಚೆಗಳು, ಸ್ಟಾರ್ಟ್‌ಅಪ್ ಮತ್ತು ನವೋದ್ಯಮಿಗಳ ಪ್ರದರ್ಶನಗಳು, ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಮೆರಾಕಿಫೈನ AI-ಚಾಲಿತ ಸೃಜನಶೀಲ ವೇದಿಕೆಯ ವಿಶೇಷ ಅನುಭವ ವಿನಿಮಯ ನಡೆಯಲಿದೆ. ಈಗಾಗಲೇ ನೋಂದಣಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ನಿಡಗುಂದಿ ತಾಲ್ಲೂಕಿನ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ತಲಾ ೫ ರಂತೆ ಒಟ್ಟು ೧೫,೦೦೦ ನೋಟ್‌ಬುಕ್ ವಿತರಣೆ ಕಾರ್ಯ ನಡೆಯಲಿದೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರ ಬೆಂಗಳೂರಿನ ಗೆಳೆಯರ ಬಳಗದ ಸಹಕಾರದಿಂದ ಈ ನೋಟ್‌ಬುಕ್‌ಗಳ ವಿತರಣೆ ನಡೆಯಲಿದೆ.ಈಗಾಗಲೇ ೧೫,೦೦೦ ನೋಟ್‌ಪುಸ್ತಕಗಳು ಬಂದಿದ್ದು, ಇದೇ ಆ.೮ ಶನಿವಾರ ಸಾಂಕೇತಿಕವಾಗಿ ಕೆಲ ಶಾಲೆಗಳಿಗೆ ಚಂದ್ರಶೇಖರ ನುಗ್ಗಲಿ ಅವರೇ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ದಡೆದ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಎಸ್. ಯಳಮೇಲಿ ತಿಳಿಸಿದ್ದಾರೆ.ಸದ್ಯ ಆಯ್ದ ಶಾಲೆಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿಯೇ ಇನ್ನುಳಿದ ಶಾಲೆಗಳ ವಿದ್ಯಾರ್ಥಿಗಳಿಗೂ ನೋಟ್‌ಬುಕ್ ವಿತರಿಸಲಾಗುತ್ತದೆ. ಶಾಲೆಗಳಿಗೆ ಸಂಘದ ವತಿಯಿಂದಲೇ ಆಯಾ ಶಾಲೆಯ ಹಾಜರಾತಿಗೆ ಅನುಗುಣವಾಗಿ ನೋಟ್‌ಪುಸ್ತಕ ವಿತರಿಸಲಾಗುತ್ತದೆ.ಮುಂದಿನ ಹಂತದಲ್ಲಿ ನುಗ್ಗಲಿ ಗೆಳೆಯರ ಬಳಗದ ವತಿಯಿಂದ ಶಾಲಾ ಬ್ಯಾಗ್ ಕೂಡ ವಿತರಿಸಲಾಗುವುದು…

Read More

ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕು ಸಮಿತಿ ಇಂಡಿ ಹಾಗೂ ಸಿಐಟಿಯು ಸಂಘಟನೆಯಿಂದ ಮನವಿ ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಿರುವುದು ಮತ್ತು ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ವಿಷಯವು ಪ್ರಸ್ತುತ ಪ್ರಮುಖ ಚರ್ಚೆಯಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ಇಂಡಿ ಹಾಗೂ ಸಿಐಟಿಯು ಸಂಘಟನೆಯ ಇಂಡಿ ಘಟಕ ಅಧ್ಯಕ್ಷೆ ಭಾರತಿ ವಾಲಿ ಅವರ ನೇತೃತ್ವದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಪಿ, ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ವಾಲಿ ಅವರು ಅಂಗನವಾಡಿಗಳ ೩ ರಿಂದ ೬ ವರ್ಷದ ಮಕ್ಕಳು ನೇರವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವುದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.​ಅಂಗನವಾಡಿ ಕಾರ್ಯಕರ್ತೆಯರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾದರೆ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಡಬಹುದು ಅಥವಾ ತಮ್ಮ ಉದ್ಯೋಗಕ್ಕೆ ಭಂಗ ಬರಬಹುದು ಎಂಬ ಭಯ…

Read More

ಇಂಡಿಯಲ್ಲಿ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಚಿದಂಬರ ಬಂಡಗರ ಅಬಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: “ಪತ್ರಿಕೋದ್ಯಮವು ನಮ್ಮ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅತ್ಯಂತ ಪ್ರಬಲವಾದ ನಾಲ್ಕನೇ ಅಂಗವಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ, ತಪ್ಪುಗಳನ್ನು ತಿದ್ದುವಲ್ಲಿ ಮತ್ತು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಪತ್ರಕರ್ತರ ಜವಾಬ್ದಾರಿ ಹಾಗೂ ಕಠಿಣ ಶ್ರಮ ಹಿರಿದಾದುದು,” ಎಂದು ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿದಂಬರ ಬಂಡಗರ ಹೇಳಿದರು.ನಗರದ ಕ್ಷೇತ್ರಶಿಕ್ಷಣಾಧಿಜಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಚವಡಿಹಾಳ ಗ್ರಾಮದ ಭಾಗ್ಯವಂತಿ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹಾದೇವಪ್ಪ ಏವೂರ್ ಅವರು, “ಸಮಾಜದ ಮುನ್ನಡೆ ಹಾಗೂ ಅಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ದೊಡ್ಡದಾಗಿದೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪತ್ರಕರ್ತರು ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ,” ಎಂದರು.ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, “ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಪತ್ರಿಕೆಗಳು ಪ್ರಮುಖ ಕೊಂಡಿಯಾಗಿವೆ. ಪತ್ರಕರ್ತರು…

Read More

ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ೨೦೨೬ರ ಆಗಸ್ಟ್ ಮತ್ತು ಸೆಪ್ಟೆಂಬರ್ ಎರಡೂ ತಿಂಗಳುಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿ ಹಾಗೂ ಜೋಳ ಮತ್ತಿತರ ಧಾನ್ಯವನ್ನು ಇದೇ ಆಗಸ್ಟ್ ತಿಂಗಳಿನಲ್ಲೇ ವಿತರಿಸಲು ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ​ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಎರಡೂ ತಿಂಗಳ ಧಾನ್ಯವನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ​ಅಂತ್ಯೋದಯ ಅನ್ನ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ (ಎರಡೂ ತಿಂಗಳು ಸೇರಿ) ಒಟ್ಟು ೭೦ ಕೆಜಿ ಆಹಾರ ಧಾನ್ಯ ಸಿಗಲಿದೆ. ಇದರಲ್ಲಿ ೪೨ ಕೆಜಿ ಜೋಳ ಹಾಗೂ ೨೮ ಕೆಜಿ ಅಕ್ಕಿ ಇರಲಿದೆ ಎಂದವರು ತಿಳಿಸಿದ್ದಾರೆ.​ಆದ್ಯತಾ (ಬಿಪಿಎಲ್ ) ಕಾರ್ಡ್ದಾರರಿಗೆ ಪ್ರತಿ ಸದಸ್ಯರಿಗೆ ತಿಂಗಳಿಗೆ ೫ ಕೆಜಿಯಂತೆ, ಎರಡೂ ತಿಂಗಳಿಗೆ ಒಟ್ಟು ೧೦ ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ. ಇದರಲ್ಲಿ ೬ ಕೆಜಿ ಜೋಳ ಮತ್ತು ೪ ಕೆಜಿ ಅಕ್ಕಿ ಸೇರಿದೆ. ಪಡಿತರ ಪಡೆದುಕೊಳ್ಳಲು ಎರಡು ಪ್ರತ್ಯೇಕ ಬಯೋಮೆಟ್ರಿಕ್ (ಹೆಬ್ಬೆರಳ ಗುರುತು)…

Read More

ವಿವಿಧ ಇಲಾಖಾಧಿಕಾರಿಗಳ ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಜೂನ್ ೩೦ರಿಂದ ಅತ್ಯಂತ ಭರದಿಂದ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಕೈಗೊಂಡು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಸೇರ್ಪಡೆಯಾಗದಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕೇಸ್ವಾನ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖಾಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ​ಆಗಸ್ಟ್ ೪ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೬,೭೯,೪೯೫ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಆನ್‌ಲೈನ್ ಮೂಲಕ ೪,೦೬೯ ಮತದಾರರು ನಮೂನೆ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ೧,೫೨,೮೫೯ ಶಾಶ್ವತವಾಗಿ ಸ್ಥಳಾಂತರಗೊಂಡವರನ್ನು, ೫೪,೫೪೯ ಮೃತಪಟ್ಟವರನ್ನು ಹಾಗೂ ೬೩,೬೦೨ ಗೈರುಹಾಜರಾದ ಅಥವಾ ಸಂಗ್ರಹಿಸಲಾಗದ ಮತದಾರರನ್ನು ಗುರುತಿಸಲಾಗಿದ್ದು, ೨೯,೬೨೩ ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ,…

Read More